Athree Book Center

ರಣಘೋಷ – ಹೀಗೊಂದು ಯಕ್ಷಗಾನ!
ಶಿವರಾಮಕಾರಂತ ಪೀಠ, ಮಂವಿವಿನಿಲಯ ಈಚೆಗೆ ‘ಕಾರಂತರು ಮತ್ತು ಯಕ್ಷಗಾನ’ ಎಂಬೊಂದು ದಿನದುದ್ದದ ವಿಚಾರ ವಿಚಾರಗೋಷ್ಠಿ ಹಮ್ಮಿಕೊಳ್ಳಲಿದ್ದ ಸುದ್ಧಿ ನನಗೆ ಸಿಕ್ಕಿತು. ಸಹಜವಾಗಿ ನಾನು ವಿಚಾರಿಸಿದೆ, “ಕಾರಂತ ಪ್ರಯೋಗದ ಸಮರ್ಥ ಪ್ರದರ್ಶನ ಅಥವಾ ಪ್ರಾತ್ಯಕ್ಷಿಕೆಯನ್ನು ಕೊಡಬಹುದಾದ ಏಕೈಕ ತಂಡ ಉಡುಪಿಯ ಎಂಜಿಎಂ ಕಾಲೇಜಿನ ಯಕ್ಷಗಾನ ಕೇಂದ್ರ. ಸಹಜವಾಗಿ ದಿನಪೂರ್ತಿ ಪ್ರಬಂಧ, ಚರ್ಚೆಗಳಿಗೆ ಕಲಶಪ್ರಾಯವಾಗಿ ಅವರ ಪ್ರದರ್ಶನ ಇರಲೇಬೇಕು. ಪ್ರಸಂಗ ಯಾವುದು?” ನನ್ನದು ಉದ್ದೇಶವಿಲ್ಲದ ಅಧಿಕ ಪ್ರಸಂಗವಾಗಿತ್ತು! ಕಾರಂತ ಪ್ರಯೋಗಗಳ ಉತ್ತರಾಧಿಕಾರದ ಕಾನೂನು ಹೋರಾಟ ಅತ್ಯುಚ್ಛ ನ್ಯಾಯಾಲಯದವರೆಗೂ ಏರಿದ್ದು, ಯಕ್ಷಗಾನ ಕೇಂದ್ರಕ್ಕೆ ಆಂಶಿಕ ಸೋಲಾದದ್ದು ನನಗೆ ತಿಳಿಯದ್ದೇನೂ ಅಲ್ಲ. (ಆ ಪ್ರಸಂಗದಲ್ಲಿ ಯಕ್ಷಗಾನ ಕೇಂದ್ರ ನನಗೆ ಹತ್ತಿರವಿದ್ದಷ್ಟೇ ಎದುರು ಪಕ್ಷದ ವಕೀಲ, ಎ.ಪಿ. ಗೌರೀಶಂಕರ – ನನ್ನ ಸೋದರಮಾವ, ಆತ್ಮೀಯರು!) ನ್ಯಾಯಾಲಯವೇ ಒಪ್ಪಿಗೆ ಕೊಟ್ಟ ಮಿತಿಗಳ ಒಳಗೆ ಆ ಗೋಷ್ಠಿಗೆ ಏನಾದರೂ ದಕ್ಕೀತು ಎಂಬ ನಿರೀಕ್ಷೆ ನಾನು ಇಟ್ಟುಕೊಂಡದ್ದು ತಪ್ಪಾಗಿತ್ತು. ಕಾರಂತ ಪೀಠ ಅವಶ್ಯ ಕೇಳಿದ್ದರು ಕೂಡಾ. ಆದರೆ ಉಡುಪಿಯ ಯಕ್ಷಗಾನ ಕೇಂದ್ರ ಕಾನೂನಿನ ಹೊಸ ‘ರಣಘೋಷ’ ಕೇಳಿಸಿಕೊಳ್ಳಲಿಚ್ಛಿಸದೆ, ವಿವಿನಿಲಯದ ಕರೆಯನ್ನು ಒಪ್ಪಿಕೊಂಡಿರಲಿಲ್ಲ. ಕಾರಂತ ಯಕ್ಷಗಾನ ಗೋಷ್ಠಿ ಶುಷ್ಕ ಗದ್ಯವೇ ಆಗಿ ನಡೆದುಹೋಯಿತು.

ಸಾಂಪ್ರದಾಯಿಕ ಕಲೆ ಮತ್ತು ವಸ್ತುನಿಷ್ಠ ವಿಮರ್ಶೆಯನ್ನು ಸಮನ್ವಯ ಮಾಡುವಂತೆ (ಬಡಗು ತಿಟ್ಟಿನ) ಕಲಾವಿದರನ್ನೇ ಗುಡ್ಡೆ ಹಾಕಿಕೊಂಡು, ೧೯೬೯ರಷ್ಟು ಹಿಂದೆ ಶಿವರಾಮ ಕಾರಂತರು ಮೂರೋ ಐದೋ ದಿನದುದ್ದಕ್ಕೆ ಉಡುಪಿಯಲ್ಲಿ ನಡೆಸಿದ ಒಂದು ಬಹುವ್ಯಾಪೀ ಕಮ್ಮಟವನ್ನು ನಾನು ಕಂಡಿದ್ದೆ. (ಕ್ಷಮಿಸಿ, ಅದರ ವಿವರಗಳು ನನ್ನ ನೆನಪಿನಿಂದ ಹಾರಿವೆ) ಅಲ್ಲಿ ವೃತ್ತಿಪರ ಕಲಾವಿದರ ಬಲು ದೊಡ್ಡ ಸಂದೋಹವೇ ಸಕ್ರಿಯವಾಗಿ ಪಾಲುಗೊಂಡದ್ದು, ಮತ್ತದು ಒಟ್ಟು ಯಕ್ಷಪರಿಸರವನ್ನು ಗಾಢವಾಗಿ ಪ್ರಭಾವಿಸಿದ್ದು ತಿಳಿಯದವರಿಲ್ಲ. ಜೊತೆಗೆ ಅಂಥ ಕಮ್ಮಟಗಳ ಫಲವಾಗಿ ಕಾರಂತರು ತಮ್ಮ ಯಕ್ಷಗಾನ ಬ್ಯಾಲೆಯನ್ನು ರೂಪಿಸಿಕೊಂಡದ್ದು ಮತ್ತು ಯಕ್ಷಗಾನ ಶಿಕ್ಷಣವನ್ನು ಸಾಂಸ್ಥಿಕವಾಗಿ ವ್ಯವಸ್ಥೆ ಮಾಡಿದ್ದು ಸಾರ್ವಕಾಲಿಕ ಸ್ಮರಣೀಯ ಸಂಗತಿಗಳು. ಆದರೆ ಇದೆಲ್ಲಾ ನಡೆದದ್ದು ಬಡಗುತಿಟ್ಟಿನಲ್ಲಿ.

ತೆಂಕು ತಿಟ್ಟಿಗೂ ಹಾಗೇ ಸಂಸ್ಕಾರ ಕೊಡಲು ಮುಳಿಯ ಮಹಾಬಲ ಭಟ್ಟ, ಅಮೃತ ಸೋಮೇಶ್ವರ, ಚಂದ್ರಶೇಖರ ದಾಮ್ಲೆಯವರ ಮಿತ್ರ ಬಳಗ, ರಾಘವ ನಂಬಿಯಾರ್‌ರಂಥ ಹಲವು ಸಮರ್ಥರು ಅಲ್ಲೊಂದು ಇಲ್ಲೊಂದು ಸಂಘ, ಸಂಸ್ಥೆ ಪ್ರಯತ್ನವನ್ನೇನೋ ಮಾಡಿದ್ದು ತಿಳಿದು ಬರುತ್ತದೆ. ಆದರೆ ಅವರಿಗೆಲ್ಲಾ ಕಾರಂತ ಮಟ್ಟದ ಪ್ರಭಾವಳಿ ಇಲ್ಲದೆ, ಅವರ ಕಲಾಪಗಳು ಅರ್ಥಪೂರ್ಣ ಗೊಣಗಾಟದಂತೆ ಉಳಿದದ್ದೇ ಹೆಚ್ಚು. ಅದನ್ನು ನೀಗುವಂತೆ ಈಚೆಗೆ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಬಜ್ಪೆಯಲ್ಲೊಂದು ಕಮ್ಮಟ ನಡೆಸಿದ್ದು ನಿಜಕ್ಕೂ ಉಲ್ಲೇಖನಾರ್ಹ.

ಯಕ್ಷ-ಪ್ರಸಂಗಗಳಲ್ಲಿ ಸಾರ್ವಕಾಲಿಕವಾಗಿ ಅತಿ ಹೆಚ್ಚಿನ ಪ್ರದರ್ಶನ ಭಾಗ್ಯವನ್ನೇ ಪಡೆಯುತ್ತಿರುವುದು ಶ್ರೀದೇವಿ ಮಹಾತ್ಮ್ಯೆ. ಹಾಗೇ ಇದರ ಪ್ರದರ್ಶನದಲ್ಲಾಗುವ ಅಧ್ವಾನಗಳನ್ನು ಎಲ್ಲ ಯಕ್ಷ-ಪ್ರಿಯರೂ ಸಾಕಷ್ಟು ಕಂಡವರೇ. ಆ ಕುರಿತು ಅಲ್ಲಿ ಇಲ್ಲಿ ಲೇಖನಗಳಲ್ಲಿ, ಪತ್ರಿಕೆಗಳ ಓದುಗರ ಓಲೆಗಳಲ್ಲಿ ಮತ್ತು ಸಾಕಷ್ಟು ಭಾಷಣಗಳಲ್ಲೂ ಚದುರಿದಂತೆ, ಎಷ್ಟೋ ಬಾರಿ ವೈಯಕ್ತಿಕ ಖಯಾಲಿಗಳಂತೆ ಅಭಿಪ್ರಾಯಗಳು ಸಾರ್ವಜನಿಕವಾದದ್ದೂ ಇವೆ. ಆದರೆ ಇದರ ಕುರಿತೇ ಕೋಟೆಕಾರಿನ ಕಲಾಗಂಗೋತ್ರಿಯ ಸಂಯೋಜನೆಯಲ್ಲಿ, ಅಮೃತ ಸೋಮೇಶ್ವರರ ಅಧ್ಯಕ್ಷತೆಯಲ್ಲಿ ನಡೆದ ಒಂದು ಗೋಷ್ಠಿ ಬಹುಶಃ ಪ್ರಥಮ ಬಾರಿಗೆ ಎಂಬಂತೆ ಒಂದು ಸಮಗ್ರ ನೀತಿಸಂಹಿತೆಯನ್ನೇ ರೂಪಿಸಿ, ಮೇಳಗಳಿಗೂ ಕಲಾವಿದರಿಗೂ ಮುಟ್ಟಿಸುವ ಕೆಲಸ ಮಾಡಿತು. ಅದರಲ್ಲಿ ಪಾಲ್ಗೊಳ್ಳಲು ಸಾರ್ವಜನಿಕ ಕರೆ ಮತ್ತು ಚರ್ಚೆಯಲ್ಲಿ ಭಾಗವಹಿಸಲು ಮುಕ್ತ ಅವಕಾಶಗಳನ್ನು ಕಲಾಗಂಗೋತ್ರಿ ಕೊಟ್ಟಿತ್ತಾದರೂ ಭಾಗವಹಿಸಿದ ಮೇಳದ ಸಂಚಾಲಕ ಮತ್ತು ಕಲಾವಿದರು ಗಣನೀಯವಾಗಿ ಕಡಿಮೆಯೇ. ಇಂಥ ಪ್ರಯತ್ನಗಳ ಒಟ್ಟು ಸೋಲನ್ನು ಧ್ವನಿಸುವಂತೆಯೇ ಪ್ರಭಾಕರ ಜೋಶಿಯವರು ತಮ್ಮ ಯಕ್ಷ-ಸಂಶೋಧನಾ ಮತ್ತು ವಿಮರ್ಶಾ ಪುಸ್ತಕಗಳ ಕುರಿತು ತಮ್ಮ ಎಂದಿನ ಹಾಸ್ಯದಲ್ಲೂ ಅರೆ ವಿಷಾದದಲ್ಲೂ ಆಡುವ ಮಾತು ನೆನಪಿಗೆ ಬರುತ್ತದೆ. “ಸಾಮಾನ್ಯರು ‘ಓ ಇದು ಮೇಳದವರಿಗೆ’ ಎಂದೂ ಯಕ್ಷ-ಕಲಾವಿದರು ‘ನಮ್ಮದನ್ನೇ ನಾವೆಂತ ಓದುವುದು, ಅದು ಪ್ರೇಕ್ಷಕರಿಗೆ!”

ಮೂರು ದಿನಗಳ ಬಜ್ಪೆ ಕಮ್ಮಟ ಸ್ಪಷ್ಟವಾಗಿ ದೇವೀ ಮಹಾತ್ಮ್ಯೆ ಪ್ರದರ್ಶನದ ಪ್ರಾಯೋಗಿಕ ವಿಮರ್ಶೆ ಮತ್ತು ಪರಿಷ್ಕರಣಕ್ಕೇ ಮೀಸಲಾಗಿ ನಡೆಯಿತು. ಇಲ್ಲಿ ಯಕ್ಷ-ವ್ಯವಸಾಯಿಗಳು ಮತ್ತು ವಿಮರ್ಶಕ ವಿದ್ವಾಂಸರು ತೆಂಕು ತಿಟ್ಟಿನಲ್ಲಿ ಪ್ರಥಮ ಬಾರಿಗೆ ಎನ್ನುವಂತೆ ಬಹು ದೊಡ್ಡ ಸಂಖ್ಯೆಯಲ್ಲಿ ಹೇಳುವ, ಕೇಳುವ ಕೆಲಸ ನಡೆಸಿದರು. ದೇವಿಮಹತ್ಮ್ಯೆ ಪ್ರಸಂಗದ ಬಹುದೊಡ್ಡ ಪ್ರದರ್ಶಕ ತಂಡಗಳಾದ ಕಟೀಲಿನ ಐದೂ ಮೇಳಗಳ ಯಜಮಾನರುಗಳ (ಕಟೀಲಿನ ಆಸ್ರಣ್ಣರ ಮತ್ತು ಗುತ್ತಿಗೆದಾರ ಶೆಟ್ಟರ) ಪೂರ್ಣ ಬೆಂಬಲ ಕಮ್ಮಟಕ್ಕಿತ್ತು. ಇನ್ನೂ ಸ್ಪಷ್ಟವಾಗಿ ಹೇಳುವುದಿದ್ದರೆ ಅಷ್ಟೂ ಮೇಳದ ಎಲ್ಲಾ ಕಲಾವಿದರು ಮೂರೂ ದಿನ ಸಕ್ರಿಯವಾಗಿ ಭಾಗವಹಿಸಿದರು. ಹರಕೆ ಮೇಳಗಳೆಂದೇ ಖ್ಯಾತವಾದ ಇವಕ್ಕೆ ಕನಿಷ್ಠ ಹದಿನಾಲ್ಕು ತಿರುಗಾಟದ ವರ್ಷಗಳಿಗೆ ಸಾಕಾಗುವಷ್ಟು (ಹರಕೆ) ವೀಳ್ಯ ಬಾಕಿಯಿದೆಯಂತೆ. ಹೀಗೆ ಸಾಮಾನ್ಯ ವ್ಯಾವಸಾಯಿಕ ಮೇಳಗಳ ‘ಗಂಜಿ ಸಮಸ್ಯೆ’ ಇವರಿಕ್ಕಿಲ್ಲ. ಇವರಾದರೂ ಯಕ್ಷಗಾನೀಯತೆಯನ್ನು ಉಳಿಸಿ ಬೆಳೆಸುವಂತಾಗಲಿ ಎಂಬ ಆಶಯಕ್ಕೆ ತಕ್ಕಂತೆ ಬಜ್ಪೆ ಕಮ್ಮಟ ವಿಕಸಿಸಿತು. ಚಾಲ್ತಿಯಲ್ಲಿರುವ ಪ್ರದರ್ಶನದ ಪ್ರಾತಿನಿಧಿಕ ಒಂದು ಮಾದರಿಯನ್ನು ಮೂರು ದಿನಗಳಿಗೆ ಹಂಚಿ ಹಾಕಿಕೊಂಡು, ಸಾಧ್ಯವಾದಷ್ಟು ಇತರ ಹಿರಿಯ ಕಲಾವಿದರೂ ವಿದ್ವಾಂಸರೂ ವಿಮರ್ಷೆಯಲ್ಲಿ ಪೂರ್ಣ ಭಾಗಿಗಳಾಗುವಂತೆ ಮಾಡಿತು. ಕೊನೆಯಲ್ಲಿ ಪೂರ್ವರಂಗದ ಒಂದು ತುಣುಕಿನೊಡನೆ, ಕಮ್ಮಟದಲ್ಲಿ ಪರಿಷ್ಕೃತಗೊಂಡಂತೇ ಸಂಪೂರ್ಣ ದೇವಿಮಹಾತ್ಮ್ಯೆಯನ್ನು ಪ್ರದರ್ಶಿಸಿ ಸಾರ್ವಜನಿಕ ಮೆಚ್ಚುಗೆಯನ್ನೂ ಗಳಿಸಿತು. ಇಲ್ಲಿ ಯಕ್ಷ-ಚಿನ್ನಕ್ಕೆ ಕಾಲಕ್ಕೆ ತಕ್ಕ ವಿನ್ಯಾಸ ಮತ್ತು ವಿವೇಚನೆಯ ಪುಟ ದಕ್ಕಿತ್ತು!

ಅರ್ಧ ಶತಮಾನದ ಹಿಂದೆಯೇ ಕಾರಂತರು ಬಡಗು ತಿಟ್ಟಿನ ಯಕ್ಷಗಾನದಲ್ಲಿ ತೊಡಗಿಕೊಂಡದ್ದಾದರೂ ಇದೇ ಹುಚ್ಚಿನಿಂದ; ಕಚ್ಚಾ ವಜ್ರಕ್ಕೆ ಮುಖ ಕೊಡುವ ಪ್ರಯತ್ನ. ಪರಿಷ್ಕರಣದಲ್ಲಿ ಅವರದೇ ಆಭರಣ (ಯಕ್ಷಗಾನವೇ ಅಲ್ಲ, ಬ್ಯಾಲೆ ಎಂದರೂ) ರೂಪುಗೊಂಡದ್ದಕ್ಕೆ ಕೆಳ ಧ್ವನಿಗಳ ಟೀಕೆ ಏನೇ ಇರಲಿ, ಅದರ ಪ್ರಭಾವ ಒಟ್ಟಾರೆ ಯಕ್ಷಗಾನದ ಮೇಲೆ ಇಂದಿಗೂ ಅಸಾಧಾರಣ. ಕಾರಂತರ ಗರಡಿಯಲ್ಲೂ ಹುರುಡಿದ ಬನ್ನಂಜೆ ಸಂಜೀವ ಸುವರ್ಣರ ಗುರುತ್ವದ ಬಲದಲ್ಲಿ ಇಂದು ಎಂಜಿಎಂ ಕಾಲೇಜಿನ ‘ಯಕ್ಷಗಾನ ಕೇಂದ್ರ’ ನಡೆಸಿರುವ ಕಲಾ ಕೈಂಕರ್ಯ ನಿಸ್ಸಂದೇಹವಾಗಿ ಅದ್ವಿತೀಯ. ‘ಸಾಂಪ್ರದಾಯಿಕ ಆಟ’ದ ಹೆಸರಿನಲ್ಲಿ ವೃತ್ತಿಪರ ಮೇಳಗಳು ತಮ್ಮ ಕೊರತೆಗಳಿಗೆ ಹಾಕುತ್ತಿದ್ದ ತೇಪೆಯನ್ನು ಈ ಕೇಂದ್ರ ತನ್ನ ಹಿರಿಯ ಮತ್ತು ವಿದ್ಯಾರ್ಥಿ ಕಲಾವಿದರಿಂದ ಮೊದಲು ಜೀರ್ಣೋದ್ಧಾರ ಮಾಡಿ ತೋರಿಸಿತು. ಹೊಸಕಾಲದ ಸವಾಲಿಗೆ ಯಕ್ಷಗಾನ ವಿಕಸಿಸಬೇಕಾದ ಪಥವನ್ನೂ ಬಲು ಎಚ್ಚರದಿಂದ ಹಾಕುತ್ತಲೂ ಇದೆ.

ಯಕ್ಷಗಾನ ಒಬ್ಬ ವ್ಯಕ್ತಿಯ (ಸ್ಟಾರ್ಗಿರಿ), ಒಂದು ಸನ್ನಿವೇಶದ ಬಲದಲ್ಲಿ ನಡೆಯುವುದಲ್ಲ; ಇದು ಮೇಳಕ್ರಿಯೆ. ಇಲ್ಲಿ ಎಲ್ಲಾ ಪಾತ್ರ ಹಾಗೂ ಸನ್ನಿವೇಶಗಳಿಗೆ ನ್ಯಾಯ ಕೊಡುವ ಕ್ರಿಯೆಗೆ ಸ್ವತಃ ಮಹಾಗುರು ಸಂಜೀವರೇ ಆದರ್ಶ ರೂಪಿಸುವಂತೆ ಕೆಲಸ ಮಾಡುತ್ತಾರೆ. ಇವರು ಅಭಿಮನ್ಯು ಕಾಳಗದ ಕಥಾನಾಯಕನಾಗಿಯೂ ಮಿಂಚಬಲ್ಲರು, ಪೂರ್ವರಂಗದಲ್ಲಿ ದೀಪಧಾರಿಯಾಗಿ ಬಂದು ನಾಲ್ಕೇ ಹೆಜ್ಜೆ ಹಾಕಿ ನೇಪಥ್ಯದಲ್ಲಿ ಇರಬಲ್ಲರು. ಕೋಡಂಗಿಯಾಗಿ ಪೌರಾಣಿಕಕ್ಕೆ ಹೋಗಲಿರುವ ರಂಗವನ್ನು ವರ್ತಮಾನಕ್ಕೆ ಔಚಿತ್ಯಪೂರ್ಣವಾಗಿ ಗಂಟು ಹಾಕುವುದನ್ನು ಕಂಡಿದ್ದೇನೆ, ಕಿರಾತಪಡೆಯ ಮುದಿಯಪ್ಪಣ್ಣನಾಗಿ ಪರಿಣಾಮಕಾರಿಯಾಗಿ ನಗಿಸುವುದನ್ನು ಅನುಭವಿಸಿದ್ದೇನೆ. ಇವರ ತಂಡ ಪುನರುಜ್ಜೀವಿಸಿದ ಪೂರ್ವರಂಗದ ಪ್ರದರ್ಶನಕ್ಕೆ ಮಾರುಗೊಂಡು ಡಾ| ಮನೋಹರ ಉಪಾಧ್ಯರ ಜೊತೆ ನಾನೂ (ನನ್ಮಗ) ಅಭಯಸಿಂಹನೂ ವಿಡಿಯೋ ದಾಖಲಾತಿ ನಡೆಸಿದ್ದು ನಿಮಗೆಲ್ಲಾ ತಿಳಿದೇ ಇದೆ. (ಐದು ಡೀವೀಡಿಗಳ ಕಟ್ಟಾಗಿ ಅವನ್ನು ಯಕ್ಷಗಾನ ಕೇಂದ್ರ, ಇಂದ್ರಾಳಿ, ಉಡುಪಿ ಇವರಿಂದ ಕೊಳ್ಳಬಹುದು.) ನಮ್ಮೂವರ (ಮನೋಹರ್, ನಾನು ಮತ್ತು ಅಭಯ) ಯಕ್ಷ-ದಾಖಲೀಕರಣದ ಹುಚ್ಚು ಹೆಚ್ಚಿದಾಗ ದೀವಟಿಗೆ ಆಟಕ್ಕಿಳಿದದ್ದು, ಈ ಹಿಂದೆ ಇಲ್ಲೆ ನೀವು ಓದಿದ್ದೀರಿ. (ಇಲ್ಲವಾದರೆ ಇಲ್ಲೇ ಹಳೆ ಕಡತ ಬಿಚ್ಚಿ ಈಗಲೂ ನೋಡಬಹುದು) ಅದರಲ್ಲಿ ಸಂಜೀವರು ಕೇವಲ ದೀಪಧಾರಿಯಾಗಿ ಒಮ್ಮೆ ರಂಗಕ್ಕೆ ಬಂದದ್ದು ಬಿಟ್ಟರೆ ಉಳಿದಂತೆ ಪೂರ್ಣ ನೇಪಥ್ಯದ ಕೆಲಸ ನಡೆಸಿದ್ದಕ್ಕೇ ‘ಅರಗಿನ ಮನೆ’ ಆಟ ಅಪೂರ್ವ, ಅದ್ಭುತ ಎನ್ನುವಂತೆ ಮೂಡಿಬಂತು. (ಈ ಡೀವೀಡಿಯೂ ಯಕ್ಷಗಾನ ಕೇಂದ್ರದಲ್ಲಿ ಮಾರಾಟಕ್ಕಿದೆ)

ಬನ್ನಂಜೆ ಸಂಜೀವ ಸುವರ್ಣರ ಬಳಗದ ಯಕ್ಷಗಾನೀಯ ಚೌಕಟ್ಟು ಬಹಳ ಬಿಗಿಯಿದೆ. ಹಾಗೆಂದು ಅದಕ್ಕೆ ಕಲೌಚಿತ್ಯ ಮೀರದ ಮಡಿವಂತಿಕೆ ಖಂಡಿತಾ ಇಲ್ಲ. ಯಕ್ಷಗಾನದ ಕುರಿತಂತೆ ನಡೆಯುವ ವಿಚಾರ ಸಂಕಿರಣ, ಕಮ್ಮಟ, ಪ್ರಾತ್ಯಕ್ಷಿಕೆ, ಪ್ರಯೋಗಾದಿಗಳಿಗೆ ಯಕ್ಷಗಾನ ಕೇಂದ್ರದ ಬಾಗಿಲು ಸದಾ ತೆರೆದೇ ಇದೆ. ಎಲ್ಲಕ್ಕೂ ಮಿಗಿಲಾಗಿ ಯಾವುದೇ ವಿಮರ್ಶೆಯನ್ನು ಉತ್ತಮಿಕೆಗೆ ಮೆಟ್ಟಿಲಾಗಿ ಬಳಸುವ ವಿನಯ ಮತ್ತು ಆಸಕ್ತರು ಯಾರೇ ಇರಲಿ ನಿರ್ವಂಚನೆಯಿಂದ ಹಂಚಿಕೊಳ್ಳುವ ಔದಾರ್ಯ, ಪುರಾಣೋಕ್ತ ನಿಜ ಗುರುಕುಲಕ್ಕೆ ಸಾಟಿಯಾಗುವಂತೇ ಇದೆ. ಏಕವ್ಯಕ್ತಿ ಪ್ರದರ್ಶನ ಪಟು ಅಥವಾ ‘ಭಾಮಿನಿ’ ಖ್ಯಾತಿಯ ಮಂಟಪ ಪ್ರಭಾಕರ ಉಪಾಧ್ಯ ತನ್ನ ಪ್ರತಿಭೆಗೆ ಸಾಣೆ ಹಿಡಿಸಿಕೊಂಡದ್ದು ಇಲ್ಲೇ. ಸಂಸ್ಕಾರ ಮತ್ತು ಭಾಷೆಗಳಲ್ಲೂ ಜರ್ಮನಿಯವಳೇ ಆದ ಕ್ಯಾಥರೀನ್ ಈ ಗುರುಕುಲದಲ್ಲಿ ಕೇವಲ ಸಮರ್ಥ ಯಕ್ಷಗಾನ ಪಟುವಾದದ್ದು ಮಾತ್ರವಲ್ಲ. ಆಕೆ ತನ್ನ ಜರ್ಮನ್ ಪ್ರಿಯಕರನನ್ನು ಕರೆಸಿಕೊಂಡು ‘ಭಾರತೀಯ ವಿವಾಹ’ ಏರ್ಪಡಿಸಿಕೊಂಡಾಗ, ಯಕ್ಷಗಾನ ಕೇಂದ್ರ ಕಣ್ವಾಶ್ರಮವೂ ಆಗಿತ್ತು! ಅಭಯ ಅವನ ಕಲಿಕೆಯ ಅಂಗವಾಗಿ ಸಂಜೀವರ ತಂಡವನ್ನು ಪುಣೆಗೆ ಕರೆಸಿಕೊಂಡು ಬಳಸಿದಾಗ ಬಂದ ಕಿರು ಸಿನಿಮಾ (ಕಥಾಚಿತ್ರ) ‘ಯಕ್ಷೋತ್ತಮ’ (ನೋಡಿ: www.abhayatalkies.comನ ಒಳಗೆ ವಿಡಿಯೋ ವಿಭಾಗ), ಬಾಗಲೋಡಿ ದೇವರಾಯರ ಸ್ಮರಣ ಕಾರ್ಯಕ್ರಮದಂದು ನಡೆಸಿಕೊಟ್ಟ ಯಕ್ಷ-ರೂಪಕ ‘ಅಂಗುಲಿಮಾಲಾ’, ಹಿರಿಯ ಪ್ರಾಯದವರನ್ನು ಗಟ್ಟಿ ಹವ್ಯಾಸಿ ಕಲಾವಿದರನ್ನಾಗಿಸಿ ಕೊಟ್ಟ ಆಟ ‘ಜಾಂಬವತಿ ಕಲ್ಯಾಣ’, ಕಲಾಗಂಗೋತ್ರಿ ಆಯೋಜಿಸಿದ್ದ ಮಕ್ಕಳಿಗಾಗಿ ಯಕ್ಷಗಾನ ಕಮ್ಮಟದಲ್ಲಿ ಇವರಲ್ಲಿನ ಬಾಲಶಕ್ತಿಯೇ ರೂಪಿಸಿ ಪ್ರದರ್ಶಿಸಿದ ಏಕಲವ್ಯ, ಸಂಜೀವರ ನಿರ್ದೇಶನದಲ್ಲೇ ತಯಾರಾದ ಬಾಲಕರ ತಾಮ್ರಧ್ವಜ ಒಂದಕ್ಕಿಂತ ಒಂದು ಭಿನ್ನ, ಚೊಕ್ಕ ಮತ್ತು ಸುಂದರ.

ಈಚೆಗೆ ‘ವೀರಪ್ಪ ಮೊಯಿಲಿ ಸಾಹಿತ್ಯಾವಲೋಕನ’ – ದಿನಪೂರ್ತಿ ಮಂಗಳೂರು ಪುರಭವನದಲ್ಲಿ, ಘಟಾನುಘಟಿಗಳ ಸಮಕ್ಷಮದಲ್ಲಿ ಭರ್ಜರಿಯಾಗಿ ನಡೆಯಿತು. ನನ್ನ ಲೆಕ್ಕಕ್ಕದು ಅಸಾಹಿತ್ಯಕ ಮತ್ತು ಅನಾಕರ್ಷಕ ಕಾರ್ಯಕ್ರಮ. ನನ್ನ ಗಮನವೇನಿದ್ದರೂ ಕೊನೆಯಲ್ಲಿ, (ಸಮಾರೋಪ ಕಲಾಪವೂ ಮುಗಿದ ಮೇಲೆ) ಅಂದರೆ ಸಂಜೆ ಆರಕ್ಕೆ ಉಡುಪಿ ಯಕ್ಷಗಾನ ಕೇಂದ್ರ ಕೊಡಲಿದ್ದ ಯಕ್ಷಗಾನ ರೂಪಕದ ಮೇಲೆ. ದಿನದ ಕಾರ್ಯಕ್ರಮಕ್ಕೆ ಪೂರಕವಾಗುವಂತೆ ಮೊಯಿಲಿಯವರ ಶ್ರೀರಾಮಾಯಣ ಮಹಾನ್ವೇಷಣೆ ಕಾವ್ಯದ ಯಕ್ಷಗಾನೀಯ ಪ್ರಸ್ತುತಿ! ಯಕ್ಷಪ್ರಸಂಗಗಳಂತೆ ಛಂದೋಬದ್ಧತೆ ಇಲ್ಲದ (ಅವರು ಯಕ್ಷಗಾನಕ್ಕಾಗಿ ಬರೆದದ್ದೂ ಅಲ್ಲ), ಸಹಜವಾಗಿ ರಾಗ ತಾಳಗಳಿಗೆ ಒಗ್ಗದ ಸಾಲುಗಳಲ್ಲಿ ಸಂಜೀವ ಸುವರ್ಣರ ಬಳಗ ಆರಿಸಿಕೊಂಡದ್ದು ಪಂಚವಟಿ ಕಥಾನಕದ ಒಂದು ಸನ್ನಿವೇಶ. ಅದಕ್ಕೆ ಪೂರ್ವಾರ್ಧವಾಗಿ ವಾಲ್ಮೀಕಿಗೆ ಮಹಾಕಾವ್ಯ ರಚನೆಗೊದಗಿದ ಪ್ರೇರಣೆಯೂ ಪ್ರದರ್ಶನಗೊಂಡಿತು. ಕ್ರೌಂಚ ಮಿಥುನದ ನಷ್ಟ, ಕಾವ್ಯ ಪ್ರಪಂಚದ ಲಾಭ ಮತ್ತು ಶೂರ್ಪನಖಾ ಮಾನಭಂಗ ಅಂದಿನ ಪ್ರಸಂಗಗಳು.

ಭಾಗವತ ಸತೀಶ ಕೆದ್ಲಾಯರ ಅಮೋಘ ಕಂಠಸಿರಿ ಮತ್ತು ರಸಭಾವಗಳಿಗೆ ಅದ್ವಿತೀಯವಾಗಿ ಸ್ಪಂದಿಸುವ ಪರಿಗೆ, ಪಕ್ಕವಾದ್ಯಗಳ ಯಥೋಚಿತ ಅಲಂಕಾರ ಸಂದು ಸಭೆ ಬೆಕ್ಕಸ ಬೆರಗಾಗಿಹೋಯ್ತು. ಯಕ್ಷಗಾನಕ್ಕೆ ಅನಿವಾರ್ಯವಾದ ಪೌರಾಣಿಕ ವಾತಾವರಣಕ್ಕೆ ವ್ಯತಿರಿ

ಕ್ತವಾಗಿ ಕಾಣುವಂತೆ (ಕಾವ್ಯದಲ್ಲಿ) ಬಲವತ್ತರವಾಗಿ ಸೇರಿಸಿದ ವರ್ತಮಾನದ ಸಾಮಾಜಿಕ ಮೌಲ್ಯಸೂಚೀ ಪದಗಳನ್ನೂ (ಕಾವ್ಯಕ್ಕೆ ಪ್ರಾಮಾಣಿಕವಾಗಿ) ಎಂದಿನ ಸ್ಪಷ್ಟೋಚ್ಚಾರದಲ್ಲೇ ಭಾಗವತರು ನಿರ್ವಹಿಸಿದರು! ಆಯ್ಕೆಯಲ್ಲಿ ವಂಚಿಸದೆ (ಸಾಂಪ್ರದಾಯಿಕ ಮೇಳಗಳಲ್ಲಿ ಕೆಲವೊಮ್ಮೆ ಸನ್ನಿವೇಶಕ್ಕೆ ತಕ್ಕಂತೆ ಭಾಗವತರು ಕಿಸೆಯಿಂದ ಬರಿಯ ಶಬ್ದಗಳೇನು, ಇಡಿಯ ಪದ್ಯಗಳನ್ನೇ ಸೇರಿಸುವುದು ಧಾರಾಳ ಕೇಳಿದ್ದೇವೆ), ರಾಗತಾಳಗಳಲ್ಲಿ ಬರುವ ಕೊರತೆಯನ್ನು ಕೇವಲ ಆಲಾಪಗಳ ಬಲದಲ್ಲಿ ಎತ್ತಿಕೊಟ್ಟು ಪ್ರದರ್ಶನವನ್ನು ಕೆದ್ಲಾಯರು ಅದ್ವಿತೀಯವಾಗಿ ಗೆಲ್ಲಿಸಿದರು. ಕೊನೆಯಲ್ಲಿ ಮೊಯಿಲಿಯವರು ಭಾಗವತರನ್ನು ವಿಶೇಷವಾಗಿ ಮಾತಾಡಿಸುತ್ತಿದ್ದಾಗ (ಸಭೆಗೆ ಕೇಳುತ್ತಿರಲಿಲ್ಲ) “ನಿಜಕ್ಕೂ ಇದು ನಾನೇ ಬರೆದದ್ದೋ” ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದರೆ, ಯಾರೂ ತಪ್ಪು ತಿಳಿಯಬೇಕಿಲ್ಲ.

ಯಾಂತ್ರಿಕ ಕಲೆ ಮತ್ತು ಭಾವಹೀನವಾದ ಸಿದ್ಧ ಮುಖವಾಡಗಳನ್ನು ನಿರಾಕರಿಸಿ, ಯಕ್ಷಗಾನಕ್ಕೆ ಸಹಜವಾದ ಬಣ್ಣಗಾರಿಕೆ ಮತ್ತು ವೇಷಭೂಷಣಗಳಲ್ಲಿ ಈಗಾಗಲೇ ಸಾಕಷ್ಟು ಪಕ್ಷಿ ಮತ್ತು ಪ್ರಾಣಿ ಪ್ರಪಂಚ ಯಕ್ಷಗಾನಗಳಲ್ಲಿ ಬಂದದ್ದಿದೆ. ಅದರಲ್ಲೂ ಯಕ್ಷಗಾನ ಕೇಂದ್ರದ ಪ್ರಯೋಗಗಳು ಮತ್ತು ಅದು ಪ್ರದರ್ಶನದಿಂದ ಪ್ರದರ್ಶನಕ್ಕೆ ಕೊರತೆಗಳನ್ನು ಮೆಟ್ಟಿ ಬೆಳೆಯುವ ಚಂದ ನೋಡಿಯೇ ಅನುಭವಿಸಬೇಕು (ಸಾಂಪ್ರದಾಯಿಕ ಪಂಚವಟಿ ಪ್ರಸಂಗದಲ್ಲಿ ಸುವರ್ಣರ ಚಿನ್ನದ ಜಿಂಕೆ ವಿಕಾಸಗೊಂಡ ಮೂರು ಹಂತಗಳನ್ನು ನಾನು ನೋಡಿದ್ದೇನೆ). ಇಲ್ಲಿ ಕ್ರೌಂಚ ಜೋಡಿಯ ಬೇಟ ಮತ್ತು ಬಲಿಯ ಸಂದರ್ಭಗಳ ಕುಣಿತ ಮಣಿತಗಳು, ಪ್ರೀತಿ, ವಿರಹ ಮತ್ತು ತಾಪದ ಭಾವಗಳು ಅ-ಮಾನವೀಯವಾಗಿಯೇ ಮೂಡಿದ್ದು ಅತಿ ಸುಂದರ ಅನುಭವ. ಸಾಂಪ್ರದಾಯಿಕ ಪ್ರದರ್ಶನಗಳಲ್ಲಿ ಮಾನವೇತರ ಜೀವಿಗಳು ಎಲ್ಲೋ ಪ್ರವೇಶದಲ್ಲೊಮ್ಮೆ ಮತ್ತೆ ಎಡೆಯಲ್ಲಿ ತಪ್ಪಿ ನೆನಪಾದಂತೆ ಪಾತ್ರಭಾವವನ್ನು ತಳೆಯುವುದುಂಟು. ಆದರೆ ಇಲ್ಲಿನ ಕ್ರೌಂಚ ಪಾತ್ರಗಳ ತೇಲು ನಡೆಯಲ್ಲಿ ಕಂಡ ಹಾರಾಟದ ಲಯ, ಪರಸ್ಪರ ಕೊಕ್ಕಿನ ಮಿದುಕುಕ್ಕಿನಲ್ಲಿ ದೇಹ ತಡವುವ ಭಾವ, ಬಾಣಹತಿಯಲ್ಲಿ ಒಂದು ದೊಪ್ಪನುರುಳುವ ಅಭಿನಯ, ವಿರಹದುರಿಯಲ್ಲಿ ಇನ್ನೊಂದು (ಮನುಷ್ಯ ಮೊಣಕಾಲೂರಿ) ಅಭಿವ್ಯಕ್ತಿಸುವ ವಿಹ್ವಲ ನಡೆ, ಕೊನೆಯಲ್ಲಿ ಕೆರಳಿ ಬೇಡನ ಮೇಲೆ ಆಕ್ರಮಿಕವಾಗಿ ಎರಗುವ ಪರಿ, ನನ್ನನ್ನು ನಾಟಕ ವಾಸ್ತವಗಳ ಅಂತರ ಕಳೆದುಕೊಳ್ಳುವಷ್ಟು ಪ್ರಭಾವಿಸಿತು. ಈ ತೀವ್ರ ಭಾವಗಳಲ್ಲಿ ಭಾಗವತರ ಹಾಡಿಕೆಯ ಕಂಪನ ಸೇರಿದಂತೆ ಹಿಮ್ಮೇಳದ ಕೊಡುಗೆಯೂ ಮಹತ್ವದ ಪಾತ್ರವಹಿಸಿತ್ತು.

ಕಾವ್ಯ ನಿಷ್ಠೆಯ ಕಟ್ಟುಪಾಡು ಎಂದರೂ ಸರಿ, ರೂಪಕದ ಸ್ವಾತಂತ್ರ್ಯ ಎಂದರೂ ನಡೆಯುತ್ತದೆ, ಪ್ರದರ್ಶನದಲ್ಲಿ ಮಾತಿರಲಿಲ್ಲ; ಬೇಕೂ ಆಗಲಿಲ್ಲ. ಶೋಕವನ್ನು ಕಾವ್ಯವಾಗಿಸಿದ ವಾಲ್ಮೀಕಿ, ಶಾಂತಮೂರ್ತಿ ರಾಮ, ಶೀಘ್ರಕೋಪಿ ಲಕ್ಷ್ಮಣ, ಕ್ರೌರ್ಯರೂಪೀ ರಕ್ಕಸಿ, ಮೋಹಕ ಮಾಯಾ ಶೂರ್ಪನಖಾ, ಸ್ವಾಮಿ ಸೇವಾಪರಾಯಣ ಜಟಾಯು ಮುಂತಾದ ವಿವರಗಳ ಸಮಪಾಕದ ಅದ್ಭುತವನ್ನು, ನಾನು ಮಾತಿನಾಡಂಬರದಲ್ಲಿ ಬಿಡಿಸಿಡಲು ಹೋಗಿ ನಿಮ್ಮ ರುಚಿಗೆಡಿಸಲಾರೆ. ಎಷ್ಟೂ ಪಂಚವಟಿ ಪ್ರಸಂಗಗಳನ್ನು ನಿರ್ವಹಿಸಿದ ಬಲದ ಮುನ್ನೆಲೆಯಲ್ಲಿ, ಶ್ರೀರಾಮಾಯಣಮಹಾನ್ವೇಷಣೆ ಕಾವ್ಯದ ನೆಪದಲ್ಲಿ, ಮೂಡಿದ ಈ ಪ್ರದರ್ಶನ ಯಕ್ಷಗಾನ ಕೇಂದ್ರದ ದೊಡ್ಡ ಸಾಧನೆಯೇ ಸರಿ. ಪ್ರದರ್ಶನದ ಕೊನೆಯಲ್ಲಿ ಅಂಗಚ್ಛೇದಕ್ಕೊಳಗಾದ ರಕ್ಕಸಿ, ತನ್ನ ನಿಜರೂಪದಲ್ಲಿ, ತನ್ನ ಪರಿಚಯವನ್ನೂ ಘೋಷಿಸಿಕೊಂಡು ಬರಲಿರುವ ರಾಮ-ರಾವಣ ಯುದ್ಧದ ರಣಘೋಷವನ್ನೇ ಮಾಡುವುದರೊಡನೆ ಪ್ರದರ್ಶನ ಸುಂದರ ನಾಟಕೀಯತೆಯೊಡನೆ ಮುಗಿಯಿತು.

ಇದೇ ಸಂದರ್ಭದಲ್ಲಿ ಇಂಥ ಪ್ರಯೋಗಗಳ ಪ್ರಭಾವ ಹೆಚ್ಚಳಕ್ಕೆ ನನ್ನೊಂದೆರಡು ಅಭಿಪ್ರಾಯಗಳನ್ನೂ (ವಿವೇಚನೆ, ನಿರ್ಧಾರ ಕಲಾವಿದರದೇ ಎಂಬ ಅರಿವಿನೊಡನೆ) ನಿವೇದಿಸಿಕೊಳ್ಳುತ್ತೇನೆ.

ಸಾಂಪ್ರದಾಯಿಕ ತೆರೆ ಹಿಡಿಯುವವರು ಪಾತ್ರಗಳ ಪ್ರವೇಶ ನಿರ್ಗಮನಗಳ ಆವಶ್ಯಕತೆಗನುಗುಣವಾಗಿ ತೆರೆಯನ್ನು ರಥದೆತ್ತರದಲ್ಲಿ ನಿಂತ ಪಾತ್ರದ ಅನುಕೂಲಕ್ಕಾಗಿ (ಬಿಲ್ಲಿನ ಕೊನೆಗೆ ಕಟ್ಟಿ) ಎತ್ತಿಯೋ ಮರಣಿಸಿದವರ ನಿರ್ಗಮನಕ್ಕಾಗಿ ತಗ್ಗಿಸಿಯೋ ಹಿಡಿಯುತ್ತಿದ್ದದ್ದು ಅಚ್ಚುಕಟ್ಟಾಗಿತ್ತು. ಆದರೆ ಕಲಾಪ್ರಸ್ತುತಿಗೆ ನೇರ ಸಂಬಂಧಿಸದ ಒಟ್ಟಾರೆ ರಂಗದ ಹಿನ್ನೆಲೆಗೂ ಒಂದು ಪೂರ್ಣ ತೆರೆಯನ್ನು ಯಾಕೆ ಯೋಚಿಸಲಿಲ್ಲ? ವೇದಿಕೆ ದಿನಪೂರ್ತಿ ನಡೆದ ಸಭಾಕಾರ್ಯಕ್ಕೆ ಅದ್ದೂರಿಯಲ್ಲಿ ಸಜ್ಜುಗೊಂಡದ್ದು ಸರಿ. ಆದರೆ ಕಲಾ ಪ್ರಸ್ತುತಿಗಾಗುವಾಗ ಕ್ಷಣಾರ್ಧದಲ್ಲಿ ಅವನ್ನೆಲ್ಲ ಕಳಚುವುದು ಕಷ್ಟಸಾಧ್ಯವೇ ಸರಿ. ಬದಲು (ಆಳೆತ್ತರದ ದೀಪ ಮತ್ತು ವಾತಾಯನದ ಯಂತ್ರಗಳನ್ನು ಒಳಗೆ ನೂಕಿದಂತೆ) ಹಿನ್ನೆಲೆಯ ಸ್ಥಿರ ಅಲಂಕಾರಗಳ ಮುಂದೊಂದು ಏಕವರ್ಣದ ಪರದೆ ಎಳೆಯಬಹುದಿತ್ತು. ವಿಶೇಷ ದೀಪವ್ಯವಸ್ಥೆಯೊಡನಿದ್ದ ಭಾರೀ ಗಾತ್ರದ ಸರಸ್ವತಿಯ (?) ಮೂರ್ತಿ, ಜಗಮಗಿಸುವ ಢಾಳಾದ ಅಕ್ಷರಗಳ ಬ್ಯಾನರ್ ಒಟ್ಟು ಪ್ರದರ್ಶನದ ಪರಿಣಾಮವನ್ನು ಅವಮಾನಿಸುತ್ತಿತ್ತು. ಇಲ್ಲೊಂದು ಪೂರ್ವಾಚಾರವನ್ನು ನೆನಪಿಸಿಕೊಳ್ಳುವುದು ಅಪ್ರಸ್ತುತವಾಗದು. ಹಿಂದೆ ರಾಮಕೃಷ್ಣಾಶ್ರಮದ ವೇದಿಕೆಯಲ್ಲಿ ಆಟದ ಸರಣಿಯೊಂದನ್ನು ಮಾಲಿಂಗ ಭಟ್ಟ, ಸತ್ಯನಾರಾಯಣ ಭಟ್ಟರಾದಿ ನನ್ನ ಗೆಳೆಯರ ಕೂಟವೊಂದು ಯೋಜಿಸಿತ್ತು. ಮೊದಲ ಪ್ರದರ್ಶನ ನಡೆದಾಗ ಇಂಥದ್ದೇ ಒಂದು ಸಮಸ್ಯೆ ಅವರನ್ನು ಕಾಡಿತ್ತು. ಅಲ್ಲಿ ಹಿನ್ನೆಲೆಯಲ್ಲಿ ಪೂರ್ತಿ ರಂಗ ತುಂಬಿ ಬರುವಂತೆ ಮತ್ತು ಖಾಯಂ ವ್ಯವಸ್ಥೆಯಾಗಿ ರಾಮಕೃಷ್ಣ ಪರಮಹಂಸ, ವಿವೇಕಾನಂದ ಮತ್ತು ಶಾರದಾದೇವಿಯವರ ಭಾವಚಿತ್ರಗಳಿವೆ. ಅವೂ ಕಲಾಪ್ರಸ್ತುತಿಗೆ ಅನುಚಿತ ಹಿನ್ನೆಲೆ ಕಲ್ಪಿಸುತ್ತಿತ್ತು. ಸಮಸ್ಯೆಯನ್ನು ಕೇಳಿಸಿಕೊಂಡ ಆಶ್ರಮದ ಸ್ವಾಮಿಗಳು ತುಂಬಾ ಉದಾರವಾಗಿಯೇ ಆ ಚಿತ್ರಗಳೆದುರು ಪರದೆ ಎಳೆಯಲು ಅನುಮತಿಸಿದ್ದರು. ಬಹುಶಃ ಪುರಭವನದಲ್ಲೂ ಇದು ಸಾಧ್ಯವಾಗುತ್ತಿತ್ತು.

ಪ್ರದರ್ಶನ ಮುಗಿದ ಮೇಲೆ ಕಲಾವಿದರನ್ನು ಗೌರವಿಸಲು ಮೊಯ್ಲಿಯವರು ವೇದಿಕೆಗೆ ಬಂದಿದ್ದರು. ಆಗ ಗುರು ಸಂಜೀವರು ಸಾರ್ವಜನಿಕವಾಗಿ ಈ ಪ್ರಸಂಗವನ್ನು ಬಹುವ್ಯಾಪಿಯಾಗಿ ಪ್ರದರ್ಶಿಸಲು ಯಕ್ಷಗಾನ ಕೇಂದ್ರಕ್ಕೆ ಅವಕಾಶ ಕಲ್ಪಿಸಿಕೊಡುವಂತೆ ಮೊಯ್ಲಿಯವರಲ್ಲಿ ಸ್ಪಷ್ಟ ಬೇಡಿಕೆಯಿಟ್ಟರು. ವಿಶೇಷ ಅಗತ್ಯಕ್ಕೆ ಮತ್ತು ಸಭೆಗೆ ಮಾತ್ರ ಸಜ್ಜುಗೊಂಡ ಪ್ರದರ್ಶನವಿದು. ಅದೆಷ್ಟು ಒಳ್ಳೆಯದಾಗಿದ್ದರೂ ಸಾರ್ವತ್ರಿಕ ಪ್ರದರ್ಶನಕ್ಕೆ ಅದಕ್ಕೂ ಮಿಗಿಲಾಗಿ ಯಕ್ಷಗಾನ ಕೇಂದ್ರದ ಪ್ರಾತಿನಿಧಿಕ ಪ್ರಯೋಗವಾಗಿ ಇಂಥವು ಚಲಾವಣೆಗೆ ಬರುವುದು ಉಚಿತವಲ್ಲ.

ಪ್ರದರ್ಶನಕ್ಕೂ ಮೊದಲು ನಾನು ಚೌಕಿಗೆ ಹೋಗಿದ್ದೆ. ಆಗ ಸಂಜೀವರು ಗಂಡು ಕ್ರೌಂಚದ ವೇಷದಲ್ಲಿದ್ದುದನ್ನು ಕಂಡಿದ್ದೆ. ಅದಲ್ಲವಾದರೆ ಪ್ರದರ್ಶನದ ಯಶಸ್ಸಿನಲ್ಲಿ ಬೊಟ್ಟಿಟ್ಟು ಹೇಳಲು ಹೊರಟಿದ್ದರೆ ನನಗೆ ಸೋಲು ಖಂಡಿತ. ಯಾವ ಪಾತ್ರವೂ ಪಾತ್ರಧಾರಿಯ ಹಿರಿತನ, ಕಿರಿತನದಿಂದ ಅತಿಬೆಳಗಿದ್ದೂ ಇಲ್ಲ, ಸೊರಗಿದ್ದಂತೂ ಇಲ್ಲವೇ ಇಲ್ಲ! ಭಾಗವತರ ಒಂದೆರಡು ಹಾಡುಗಳಲ್ಲಂತೂ ಸಾಂಪ್ರದಾಯಿಕ ಪ್ರೇಕ್ಷಕರು ನಿಜಕ್ಕೂ ಭಾವಪರವಶರಾಗಿ ಉದ್ಗಾರ ತೆಗೆಯಲೋ, ಚಪ್ಪಾಳೆಗೆಳಸುವುದೋ ಕಾಣುತ್ತಿತ್ತು. ರಂಗಪ್ರಸ್ತುತಿ ಸತ್ತರೂ ಸರಿ, ನನ್ನ ರಾಗಕ್ಕೆ ಚಪ್ಪಾಳೆ ಬೀಳಬೇಕು ಎಂದೊರಲುವ ಭಾಗವತರು, ಒಟ್ಟಾರೆ ಪರಿಣಾಮಕ್ಕೆ ಭಾರವಾದರೂ ಸರಿ ನನ್ನ ವೈಶಿಷ್ಟ್ಯಕ್ಕೆ ಸೀಟಿ ಬರಲೇಬೇಕು ಎಂದು ಸಿದ್ಧ ಸರ್ಕಸ್ ತಂತ್ರಗಳನ್ನೆಲ್ಲಾ ಯಕ್ಷ-ವೇದಿಕೆಗೆ ಹೇರುವ ಪಾತ್ರಧಾರಿಗಳ ವಿರುದ್ಧ ಈ ಪ್ರದರ್ಶನವೇ ಒಂದು ರಣಘೋಷ. ಮೇಳಕಲೆಯ ಸತ್ವದ ವಿಜಯಕ್ಕೆ ಪ್ರದರ್ಶನದ ಕೊನೆಯಲ್ಲಷ್ಟೇ ಕರತಾಡನ ಮಹಾಪೂರ ಹರಿಯಿತು.

ಚೋಕ್ರೀ ಬೆಳಗಾಂವೀ! (ದಿಬ್ಬಣದ ಎರಡನೇ ಹೆಜ್ಜೆ)
ಪ್ರಿಯ ನಾರಾಯಣಾ,

ಧರ್ಮಸ್ಥಳದಲ್ಲಿ ಪ್ರತಿ ವರ್ಷವೂ ತಾಳಿ, ಸೀರೆ, ಪಂಚೆ ಕೊಟ್ಟು ಉಚಿತ ವಿವಾಹಯೋಗ ಕಲ್ಪಿಸುವುದು ಯಾರಿಗೆ ಗೊತ್ತಿಲ್ಲ. ಮತ್ತೆ ಯಾವುದೇ ನೋಂದಣಿ ಇಲಾಖೆಯಲ್ಲಿ ಧರ್ಮನಿರಪೇಕ್ಷವಾಗಿ, ಕಾನೂನು ಪ್ರಕಾರ ದಾಂಪತ್ಯ ಸಂಬಂಧ ಕುದುರಿಸುವುದು ನಮಗೆ ತಿಳಿಯದ್ದೂ ಅಲ್ಲ, ತಿರಸ್ಕಾರವೂ ಇಲ್ಲ. (ಇಂಥವೇ ಆಶಯಗಳ ಒಂದು ಪರಿಷ್ಕೃತ ರೂಪ – ಕುವೆಂಪು ಪ್ರಣೀತ ‘ಮಂತ್ರ ಮಾಂಗಲ್ಯ.’ ಇದು ಮಾತ್ರ ನನಗೆ ಇಲಾಖಾ ನೋಂದಣಿಯ ಒಣಕುಂಟೆಗೆ ಸಾಂಪ್ರದಾಯಿಕತೆಯ ಚಿಗುರು, ಹೂ ಅಂಟಿಸುವ ಪ್ರಯತ್ನದ ಹಾಗೇ ಕಂಡದ್ದರಿಂದ ಅಷ್ಟು ಒಲವು ಮೂಡಲಿಲ್ಲ.) ಆದರೆ ಮದುವೆ ಹೇಗಾಗಬೇಕೆಂಬ ಸ್ವಾತಂತ್ರ್ಯ ಗಂಡು ಹೆತ್ತವರದೊಂದೇ ಅಲ್ಲವಲ್ಲಾ. ತೋರಿಕೆಗೆ ಒಂದು ಗಂಡಿಗೆ ಒಂದು ಹೆಣ್ಣು ಅಂದರೆ ಮದುವೆ. ಸ್ವಲ್ಪ ಯೋಚಿಸಿದರೆ ನಮ್ಮಲ್ಲೊಂದು ಸಮೂಹ ಚಿಂತನೆಯಿದ್ದಷ್ಟೇ ಬಲವಾಗಿ ಹೆಣ್ಣಿನ ಹಿಂದೆಯೂ ಇರಲೇಬೇಕು. ಮದುವೆ ಎರಡರ ಸಮಪಾಕಕ್ಕೆ ಕೇವಲ ನಾಂದಿ.

ಏ ಇದೆಲ್ಲಾ ನಿನಗೆ ಹೇಳುತ್ತಿಲ್ಲ. ಸುಮಾರು ಎರಡು ವರ್ಷದ ಹಿಂದೆ ಅಭಯನ ಮದುವೆಯ ಕಾಲದಲ್ಲಿ, ಸಮಾಜ ಗಂಡಿನ ಕಡೆಯವರಿಗೆ ಎತ್ತರದ ಮಣೆ ಹಾಕಿದ್ದನ್ನು ಬಿಡಲಾಗದೇ ನಮ್ಮೊಳಗೆ ನಡೆದ ವಿಚಾರಕ್ಕೆ ಅಕ್ಷರ ರೂಪ ಕೊಡುತ್ತಿದ್ದೇನಷ್ಟೆ. ಆಗ ನಾವು ನನ್ನಪ್ಪನ ಆತ್ಮೀಯ ಗೆಳೆಯರು, ಪ್ರಾಪಂಚಿಕ ಓದು ಮತ್ತು ವೃತ್ತಿಯಲ್ಲಿ ಅಸಾಧಾರಣ ಲೋಹಶಾಸ್ತ್ರಜ್ಞರಾಗಿ ಕಾರ್ಖಾನೆಯಲ್ಲೂ ವಿದ್ಯಾ ಸಂಸ್ಥೆಗಳಲ್ಲೂ ಬೆಳಗಿದ ಪ್ರೊ| ಶ್ರೀಕಂಠಕುಮಾರಸ್ವಾಮಿಯವರು ಬರೆದು ಪ್ರಕಟಿಸಿದ ‘ಸರಳ ವಿವಾಹ’ ಪುಸ್ತಕಕ್ಕೆ ಶರಣಾದೆವು. ನಿನಗೆ ಆಶ್ಚರ್ಯವಾದೀತು, ಪ್ರೊ| ಸ್ವಾಮಿಯವರು ವೈದಿಕ ಶಾಸ್ತ್ರಗಳನ್ನು ಸಮದಂಡಿಯಾಗಿ ಅಧ್ಯಯನ ಮಾಡಿದ್ದು ಮಾತ್ರವಲ್ಲ, ಒಪ್ಪಿ ಸ್ವಂತ ಆಚಾರದಲ್ಲಿ ರೂಢಿಸಿಕೊಂಡು, ಕುರಿತು ಕೇಳಿದವರಿಗೆ ದ್ವಂದ್ವಗಳಿಲ್ಲದಂತೆ ಹೇಳುವಲ್ಲೂ ಪರಿಣತರಿದ್ದಾರೆ. ನಿನ್ನ ನೆನಪಿಗೆ ಹೇಳುತ್ತೇನೆ – ನನ್ನಪ್ಪನ ವೈಜ್ಞಾನಿಕ ನಿಲುವು ೧. ನಾನು ಗತಿಸಿದ ಮೇಲೆ ದೇಹದಾನ ಆಗಬೇಕು. ೨. ಉತ್ತರಕ್ರಿಯೆ ಹೆಸರಿನಲ್ಲಿ ಏನೂ ನಡೆಯಕೂಡದು. ಇವನ್ನು ರೂಢಿಸುವ ಹಂತದಲ್ಲಿ ನಮಗೆ ಪೂರ್ಣ ಅನುಮೋದನೆ ಕೊಟ್ಟವರು ಈ ಸ್ವಾಮಿಯಲ್ಲದ ಸ್ವಾಮಿಯವರು. ಆ ಸ್ವಾಮಿಯವರ ವಿವಾಹದ ಕುರಿತ ಪುಸ್ತಕವನ್ನು ಮನನ ಮಾಡಿ, ಹುಡುಗಿಯ ಕಡೆಯವರ ಮನನೋಯದಂತೆ, ನಾನೂ ಎರಡು ದಿಬ್ಬಣ (ಮೊದಲು ಬದ್ಧಕ್ಕೆ ಮಂಗಳೂರು – ಅಡ್ಯನಡ್ಕ, ಮತ್ತೆ ಮದುವೆಗೆ ಮಂಗಳೂರು – ಪೆರ್ಲ) ನಡೆಸಿದವನೇ ಎಂದು ನೆನಪಿಸಿಕೊಂಡೇ ನಿಮ್ಮೊಡನೆ ಸೇರಿದ್ದೆ. ಅಭಯನದ್ದಾದರೋ ಕೇವಲ ಮೂವತ್ತು ನಲವತ್ತು ಕಿಮೀ ಅಂತರದ್ದು, ಅಬ್ಬಾ ಎಂದರೂ ಒಂದೂವರೆ ಗಂಟೆಯ ದಾರಿ. ಆದರೆ ಸುಮಾರು ಅರ್ಧ ಶತಮಾನದ ಹಿಂದೆ (೧೯೬೦ರ ದಶಕ), ದಿನ ಮುಂಚಿತವಾಗಿಯೇ ತಲಪಬೇಕಾದ ಅನಿವಾರ್ಯತೆಯಲ್ಲಿ, ನಾನು (ಸುಮಾರು ಎಂಟು-ಹತ್ತರ ಪೋರ) ಅನುಭವಿಸಿದ ಇನ್ನೊಂದೇ ದಿಬ್ಬಣದಿಂದ ಇಂದಿಗೂ ಉಳಿದ ಕೆಲವು ದಟ್ಟ ಚಿತ್ರಗಳನ್ನು ಇಲ್ಲಿ ಚುಟುಕಾಗಿಯಾದರೂ ಹೇಳದುಳಿಯಲಾರೆ!

ಪುತ್ತೂರಿನ ಎ.ಪಿ. ಸುಬ್ಬಯ್ಯನವರ (ನನ್ನ ಅಮ್ಮನ ಕಡೆಯ ಅಜ್ಜ, ೧೯೦೧-೭೭) ದ್ವಿತೀಯ ಪುತ್ರ ಚಿ| ಗೋವಿಂದ (ಅಲಿಯಾಸ್ ಎ.ಪಿ. ಗೋವಿಂದ ಭಟ್) ಎಂಬ ವರನು, ಹೊನ್ನಾವರ ಕರ್ಕಿಯ ಗಣೇಶಕೃಷ್ಣಭಟ್ಟರ (ಇಂದು ದಿವಂಗತರು. ಕ್ಷಮಿಸು, ಇಸವಿಯ ವಿವರಗಳು ನನ್ನಲ್ಲಿಲ್ಲ) ಹಿರಿಯ ಮಗಳು ಸೌ| ಮೋಹಿನಿ ಎಂಬ ವಧುವನ್ನು (ಅಲಿಯಾಸ್ ಇಂದಿನ ಎ.ಪಿ ಮಾಲತಿ) ವರಿಸುವುದೆಂದು ನಿಶ್ಚಯವಾಗಿತ್ತು. ಅಂದರೆ ದಿಬ್ಬಣದ ದಾರಿ, ಪುತ್ತೂರು-ಮಂಗಳೂರು-ಹೊನ್ನಾವರ ಎಂದು ಯಾವುದೇ ಭೂಪಠ ಹೇಳುತ್ತದೆ. ಸುಮಾರು ೨೩೦ ಕಿಮೀ, ಆರಾಮವಾಗಿ ಐದಾರು ಗಂಟೆಯ ಪಯಣ. ಪುತ್ತೂರಿನಲ್ಲಿ ಕಾಫಿಯಾದರೆ ಹೊನ್ನಾವರದಲ್ಲಿ ಮಧ್ಯಾಹ್ನದ ಊಠ! ತಡಿ ತಡಿ, ನೆನಪಿಸಿಕೋ, ಇದು ಅರ್ಧ ಶತಮಾನ ಹಿಂದಿನ ಕಥೆ. ಕರಾವಳಿಯಲ್ಲಿ ಚತುಷ್ಪಥದ ಯೋಚನೆ ಬಿಟ್ಟು, ಹೆದ್ದಾರಿಯೂ ಇಲ್ಲದ ಕಾಲ. ಬರಿಯ ಮಂಗಳೂರು – ಉಡುಪಿ ಪ್ರಯಾಣಿಸಲೂ ಕೆಲವು ದೋಣಿ ಸವಾರಿಗಳನ್ನು ಪೋಣಿಸಲೇ ಬೇಕಾಗುತ್ತಿತ್ತು (ನೇಪಥ್ಯದಿಂದ ಕುಹಕಮತಿ ಬೊಬ್ಬಿಡುತ್ತಿದೆ, ಕಾಲಚಕ್ರ ತಿರುಗಿ ಅಲ್ಲಿಗೇ ಬಂದಿದೆ. ಹೆಸರು ಮಾತ್ರ ಹೆದ್ದಾರಿ, ಮಳೆಗಾಲದಲ್ಲಿ ಇಂದೂ ದೋಣಿಸವಾರಿಯೇ ಸರಿ!). ಇಂದಿನಂತೆ ಪ್ರಯಾಣಾವಧಿಯನ್ನು ಮಿನಿಟುಗಳಲ್ಲಿ ಹೆಚ್ಚು ಕಮ್ಮಿ ಎನ್ನುವಂತಿರಲಿಲ್ಲ; ಗಂಟೆಗಟ್ಟಳೆ, ಮಳೆಗಾಲದಲ್ಲಿ ದಿನಗಟ್ಟಳೆ ಆದರೂ ಆಶ್ಚರ್ಯಪಡುವವರಿರಲಿಲ್ಲ. ಹಾಗಾಗಿ ಹಿರಿಯರು ದಿನ ಮುಂಚಿತವಾಗಿಯೇ ಹೊನ್ನಾವರಕ್ಕೆ ದಿಬ್ಬಣ ಹೊರಡಿಸಿದರು. ಎಲ್ಲೋ ಒಳನಾಡುಗಳಲ್ಲಿ ಸುತ್ತಿ, ತೀರಾ ಅನಿವಾರ್ಯವಾದಲ್ಲಿ ಮಾತ್ರ ಜಲಯಾನ ಸಂಯೋಜಿಸಿ ನಕ್ಷೆ ಮಾಡಿಕೊಂಡಿದ್ದರು. ಆ ಕಾಲದ ಅತ್ಯುತ್ತಮ ವ್ಯಾನ್, ಮೂರು ಸಾಲು ಸೀಟರ್ ನಮ್ಮ ರಥ!

ಎದುರು ಸಾಲಿನಲ್ಲಿ ಚಾಲಕನಲ್ಲದೆ, ಅಜ್ಜ, ಅಜ್ಜನ ಖಾಸಾ ವೈದ್ಯ ಸುಂದರರಾವ್ ಮತ್ತು ನಮ್ಮ ಕಡೆಯ ಪುರೋಹಿತರು. ಉಳಿದಂತೆ ವ್ಯಾನೊಂದು ಉಪ್ಪಿನಕಾಯಿ ಭರಣಿ; ಅಜ್ಜಿ, ವರಮಹಾಶಯ, ವರನ ಸೋದರರು, ಅತ್ತಿಗೆ, ಸೋದರಿಯರು (ಆರು ಮಂದಿ), ಕೆಲವು ಭಾವಂದಿರು, ಮತ್ತು ನನ್ನಂಥ ಚಿಳ್ಳೆಪಿಳ್ಳೆಗಳು ಅದರೊಳಗಿನ ಜೀವವೈವಿಧ್ಯ. ಮೂರೋ ನಾಲ್ಕೋ ದಿನದ ಎಲ್ಲರ ಅಗತ್ಯದ ಮತ್ತು ಮದುವೆಯ ವಿಶೇಷ ಗಂಟುಗದಡಿಗಳನ್ನು ಸ್ಥಳ ಇದ್ದಷ್ಟು ಸೀಟುಗಳಡಿಯಲ್ಲಿ ಇರುಕಿಸಿಯೂ ಉಳಿದವನ್ನು ಎಲ್ಲರ ತೊಡೆಗೆ ಹಂಚಿಕೊಟ್ಟು, ಒತ್ತಿ ಬಾಗಿಲು ಬಡಕೊಂಡು, ಅದಕ್ಕೇ ನೇತುಬಿದ್ದೊಬ್ಬ ವ್ಯಾನ್ ಸಹಾಯಕ – ಬಹುಮುಖೀ ಉಪಯುಕ್ತ ಕೊಸರು! ದಾರಿಯೋ ಅಂಕುಡೊಂಕು ಶುನಕಬಾಲ. ಎತ್ತಿನ ಗಾಡಿಗಾಗಿ ರೂಪುಗೊಂಡ ಜಲ್ಲಿ ಮಾರ್ಗಕ್ಕೆ ದಾಸ್ತಾನು ಒದಗಿದಂತೆಲ್ಲಾ ತುಸು ತುಸು ಡಾಮರು ಕಾಣಿಸಿದ್ದರು. ಹೊಗೆ, ದೂಳು, ಸೆಕೆ, ವಾಂತಿ ಸಾರೋದ್ಧಾರ. ಏರು ಕಡಿದಾಗಿ ವ್ಯಾನ್ ಗದ್ಗದಿಸುವಾಗ ಸಹಾಯಕ ಕೈಯಲ್ಲೊಂದು ಮರದ ಕಟ್ಟೆ ಹಿಡಿದು ಹೊರ ಧುಮುಕುತ್ತಿದ್ದ. ಗೇರು ಸಹಜವಾಗಿ ಎರಡರಿಂದ ಒಂದಕ್ಕಿಳಿಯದಿದ್ದರೆ ವಿಧಿವತ್ತಾಗಿ ‘ಕಟ್ಟೆಪೂಜೆಗೆ’ ಪುರೋಹಿತ ಇವನೇ. ಮತ್ತೆ ವ್ಯಾನ್ ಹೊಸ ಹುಮ್ಮಸ್ಸಿನಲ್ಲಿ ಏರಿದರೆ ಬಚಾವ್. ಇಲ್ಲಾ ನಾಲ್ಕು ಗಂಡಸರು ಇಳಿದು (ಲೋಡ್ ಶೆಡ್ಡಿಂಗ್), ದೂಳೋ ವಾಂತಿಯೋ ಎಣಿಸದೆ ವ್ಯಾನಿಗೆ ಕೈಯೋ ತಲೆಯೋ ಕೊಟ್ಟು ಹೆಚ್ಚಿನ ಬಲ (ಪವರ್ ಡ್ರೈವ್) ಊಡುವಾಗ ಈತ ಸಮರ್ಥ ನಿರ್ದೇಶಕ, “ಲೇಲೇ ಲಂಬಾಆಆ ಐಸಾಆಆ.” ಚಾಲಕ ಕುಳ್ಳ; ಇಳಿದಾರಿಯ ಆತಂಕಕಾರಿ ಸನ್ನಿವೇಶಗಳಲ್ಲಿ ಕತ್ತು ಚಾಚಿ ದಾರಿ ನೋಡಿಕೊಳ್ಳಬೇಕು ಮತ್ತೆ ಪರಿಸ್ಥಿತಿಗನುಗುಣವಾಗಿ, ಕೆಳಜಾರಿ ಕ್ಲಚ್ಚೋ ಬ್ರೇಕೋ ತುಳಿಯಬೇಕು! ಆ ಕಾಲದಲ್ಲಿ ವೇಗವರ್ಧನೆ ಎಂಬ ಶಬ್ದವೇ ಹುಟ್ಟಿರಲಿಲ್ಲ. ಹಾಗಾಗಿ ಆಕ್ಸಿಲರೇಟರ್ ವಿಚಾರಿಸಬೇಡ. ಒಟ್ಟಾರೆ ಆ ಸವಾರಿ ಸುಖವನ್ನು ನಿರೂಪಿಸುವಲ್ಲಿ ಸಾವಿರ ನಾಲಗೆಯ ರೇಡಿಯೋ ಜಾಕಿಯೂ ಸೋಲುವುದು ಖಾತ್ರಿ ಎಂದ ಮೇಲೆ ನಾನ್ಯಾಕೆ ಮುಂದುವರಿಲಿ! (ಈ ಕಾಲದಲ್ಲೂ ಅದರ ಕಿಂಚಿತ್ ಅನುಭವಕ್ಕೆ ಹೀಗೊಂದು ವಿಡಿಯೋ ತುಣುಕು ಲಗತ್ತಿಸಿದ್ದೇನೆ, ನೋಡಬಹುದು: ‘ಬಿಸಿಲೆ ಘಾಟಿಯಲ್ಲಿ ಕೆಸರಟ್ಟಿಸಿ ಸವಾರಿ’)

ಅಷ್ಟೆಲ್ಲಾ ಸಾಲದೆಂಬಂತೆ ಅಂದು ನಮ್ಮ ವ್ಯಾನ್ ದಾರಿ ತಪ್ಪಿತ್ತಂತೆ. ಮಧ್ಯಾಹ್ನದ ಊಟಕ್ಕೆ ತೀರಾ ತಡವಾಗಿ ತೀರ್ಥಳ್ಳಿಗೆ ನುಗ್ಗಿದ್ದೂ ಅಲ್ಲಿ ಬ್ರಾಹ್ಮಣರ ಹೊಟೆಲ್ (ವಿಷಮಕಾಲದಲ್ಲಿ ಮಹಾಬ್ರಾಹ್ಮಣ ವಿಶ್ವಾಮಿತ್ರ ಏನೇ ತಿಂದಿರಲಿ, ಅಂದು ನಮ್ಮ ತಂಡ ತದ್ವಿರುದ್ಧವಾದ ಮಿಲಿಟರಿ ಹೊಟೆಲ್ ಯೋಚಿಸುವುದೂ ಅಸಾಧ್ಯವಿತ್ತು) ಹುಡುಕಿದ್ದೂ ಅಲ್ಲಿ ಬಿಸಿ ಮಂತ್ರಾಕ್ಷತೆಯಂಥ ಅನ್ನಕ್ಕೆ ಒಂದು ಗಂಟೆ ಕಾದದ್ದೂ ಕೊನೆಗೆ ಊಟ ಬಡಿಸಲಿದ್ದಾಗ ಸಹ್ಯವಿದ್ದ ಲಡಕಾಸಿ ಮೇಜನ್ನು ತೆಗೆಸಿ, ಪುರೋಹಿತರ ಮಡಿಗಾಗಿ ಕಪ್ಪುಕೊಳೆತ ನೆಲದಮೇಲೆ ಕೂರುವಂತಾದದ್ದೂ ನನ್ನ ಜೀರ್ಣಗೊಂಡ ನೆನಪಿನ ಭಿತ್ತಿಯಲ್ಲಿ ಚಿರಸ್ಥಾಯಿ! ರಾತ್ರಿಯಲ್ಲಿ ಆಗುಂಬೆ ಘಾಟಿ ಇಳಿಯುವಾಗ ಮರಿಯೊಂದಿಗೆ ತಾಯಿ ಹುಲಿಯೊಂದು ನಮ್ಮ ವ್ಯಾನ್ ಬೆಳಕಿಗೆ ಕಣ್ಣು ಕೊಟ್ಟು ದಾರಿ ದಾಟಿದಾಗ ದಕ್ಕಿದ ರೋಮಾಂಚನ, ಯಾವ್ಯಾವುದೋ ನದಿ ಕಡವಿನಲ್ಲಿ ಖಾಲಿ ವ್ಯಾನನ್ನು ಜೋಡುದೋಣಿಗಳ ಮೇಲಿನ ಹಲಿಗೆಗೇರಿಸಿ ನಾವು – ಪ್ರಯಾಣಿಕರೆಲ್ಲಾ ಸುತ್ತುವರಿದು ನಿಂತಾಗ ಗಳು ಹಿಡಿದು ದೋಣಿ ನೂಕುವವರು “ಓ ಬಾಲೇ” ಹಾಕಿದ್ದು, ಹೊಳೆಗಂಚುಗಟ್ಟಿದ ಗಿಡಮರಗಳ ಕರಿಛಾಯೆ ತಲೆದೂಗಿದ್ದು, ನೀರಿಗೆ ಉಕ್ಕು ತರಿಸಿದ (ಭರತ) ಚಂದ್ರಹಾಸ ದ್ವಿಪಾತ್ರದಲ್ಲಿ (-ಬಾನಲ್ಲೂ ಹೊಳೆಯಲ್ಲೂ) ಎಲ್ಲ ಬೆಳಗಿದ್ದೂ ವಿವರಿಸುತ್ತಾ ಕುಳಿತರೆ ನಾನಲ್ಲ, ಭಾಷೆಯೇ ಸೋಲುತ್ತದೆ. ಅಲ್ಲದೇ ನನ್ನ ಇಂದಿನ ದಿಕ್ಚ್ಯುತಿಯೂ ವಿಪರೀತವಾದೀತು. ಹಾಂ, ಎಲ್ಲಿ ಬಿಟ್ಟಿದ್ದೇ, ಕುಶಾಲನಗರ. ಮತ್ತೆ ಬಂತು ಬೈಲುಕುಪ್ಪೆ – ಟಿಬೆಟಿಯನ್ನರ ಕಾಲೊನಿ. ಇಲ್ಲ, ಅದರ ವಿವರಗಳಿಗೂ ಮನದ ಕದ ಹಾಕಿ ಜಪಿಸುತ್ತೇನೆ. . . . “ಆಹಾ ರಾಮೂಗೆ ಮದ್ವೆಯಂತೇ ಹುಡ್ಗೀ ಬೆಳ್ಗಾವಿಯಂತೇ”

ಬೈಲುಕುಪ್ಪೆಯಿಂದ ಮುಂದಿನ ದಾರಿ ಅಂದರೆ ವಾಹನಗಳ ಸಂಭ್ರಮ; ನೇರ, ನುಣ್ಣಗೆ ಮತ್ತು ವಿಸ್ತಾರ. ಕಾಲಧರ್ಮಕ್ಕೆ ಸರಿಯಾದ ಈ ಪರಿಷ್ಕಾರ ಅನಿವಾರ್ಯ. ಹಿಂದಿನ ಕಾಲದಲ್ಲಾದರೋ ನಡಿಗೆ, ಎತ್ತಿನ ಗಾಡಿ, ಸೈಕಲ್ ಸವಾರಿಗಳ ಕೊನೆಯಲ್ಲಿ ಬರುತ್ತಿದ್ದ ಮೋಟಾರು ಗಾಡಿಗಳ ತಾಕತ್ತಿಗೆ ಅನುಗುಣವಾಗಿಯೇ ಮಾರ್ಗಗಳು ರೂಪುಗೊಳ್ಳುತ್ತಿದ್ದವು. ಏರು ಕಡಿಮೆ ಮಾಡಲು ಅಂಕಾಡೊಂಕು, ನೆರಳು ಕೊಡಲು ಸಾಲುಮರ ಬೇಕೇಬೇಕು. ಕ್ಷಣಾರ್ಧದಲ್ಲಿ ಗುಡ್ಡೆ ಕದಲಿಸಿ, ಕಣಿವೆ ಹುಗಿಯುವ ರಕ್ಕಸ-ಯಂತ್ರಗಳಿರಲಿಲ್ಲ. ವುಡುವೊತ್ತು ಮೊಟ್ಟೆಯ (ಜ್ಯೋತಿ ಎಸ್ಟೇಟಿನ ದಾರಿಯ ಒಂದು ಘಾಟಿ) ಮಳೆಗಾಲದ ಸಣ್ಣ ಭೂ ಕುಸಿತಕ್ಕೂ ಹತ್ತಿಪ್ಪತ್ತು ಮಂದಿಯ ಸೈನ್ಯ ಬಿಲ ತೋಡುವ ಇರುವೆಗಳಂತೇ ದಿನಗಟ್ಟಳೆ ದುಡಿದದ್ದನ್ನು ನೀನೇ ಎಷ್ಟು ಕಂಡಿದ್ದಿಯೋ ಏನೋ! ಇಂಥಲ್ಲಿ ಕೇವಲ ಕೆಲವು ಸವಾರರು ಹುಚ್ಚುಗಟ್ಟುವ ಕಥೆಗಳು, ಅಪಘಾತಗಳು ಮರಣಾಂತಿಕವೇ ಆಗುವುದು ಸುಳ್ಳಲ್ಲ. “ಇಕೋ ಇದೇ ಮರಕ್ಕೆ ಅವತ್ತು ರಾತ್ರಿ ನಾವು ರೋಟರಿ ಮೀಟಿಂಗ್ ಮುಗಿಸಿ ಬರುತ್ತಿದ್ದಾಗ ಒಂದು ಕಾರು ಢಿಕ್ಕಿ ಹೊಡೆದು, ಪ್ರಯಾಣಿಕರು ಚಿಂತಾಜನಕವಾಗಿ ಸಿಕ್ಕಿಬಿದ್ದದ್ದು ಕಂಡದ್ದು. . . .” ಎಂದು ಬೇರೇ ಸದಾಶಿವ ಸ್ಮರಿಸಿಕೊಂಡ. ಆದರೆ ತತ್ಪೂರ್ವಕಾಲದಲ್ಲಿ ಹೊಂಡ ತಪ್ಪಿಸಲು ಹೋಗಿ ಪರಸ್ಪರ ಕುಟ್ಟಿಕೊಂಡವರು, ಜಲ್ಲಿಕಿತ್ತ ದಾರಿಯಲ್ಲಿ ಜಾರಿ ಜಖಂಗೊಂಡವರು, ಕಿಷ್ಕಿಂಧೆ ಹಾರಹೋಗಿ ಮರಣಕ್ಕೇ ಸಂದವರ ಲೆಕ್ಕ ಮರೆತು ಬಿಡಬಾರದು. ವಿವೇಚನೆ ಉಳಿಸಿಕೊಂಡೇ ಪ್ರಯಾಣಿಸುವ ಬಹುಸಂಖ್ಯಾತರ ಆರೋಗ್ಯಕ್ಕಾಗಿ, ವಾಹನಗಳ ಸುಸ್ಥಿತಿಗಾಗಿ ಇಂಥ ದಾರಿಗಳು ಅವಶ್ಯವೇ ಸರಿ. ಇದರ ಮೇಲೆ ಜನಪ್ರಿಯತೆಯ ತಪ್ಪು ನಡೆಯಾಗಿ ಅಶಿಕ್ಷಿತ ಕೂಲಿಯ ವಿವೇಚನೆಯಂತೆ ಹೆಜ್ಜೆಗೆ ನಾಲ್ಕು ದಿಬ್ಬ ಮೊಳೆಯಿಸುವುದೋ (humps, rumblers) ಅತ್ಯಾಧುನಿಕ ಇಂಜಿನಿನ ಗಂಟಲು ಕಟ್ಟುವುದೋ (speed governers) ಆಗಬಾರದು. ಎಲ್ಲೋ ಸಂತ್ರಸ್ತ ಹಳ್ಳಿಗರು ಇಂಥಾ ದಾರಿಯನ್ನು ಅಗೆದು ಹಾಕಿದ್ದನ್ನಾಗಲಿ, ವೃತ್ತಿಪರ ಆಟದಲ್ಲಿ ಮತ್ತು ಕೌಟುಂಬಿಕವಾಗಿ ಆದರ್ಶಗಳನ್ನೇನೂ ಉಳಿಸಿಕೊಡದ ಮಾಜೀ ಕಿರಿಕೆಟ್ಟು ಕ್ಯಾಟ್ ಪ್ಯಾನ್ ಅಜರುದ್ದೀನ್ ಅಂತವರು ಮಗನನ್ನು ಕಳೆದುಕೊಂಡ ನೋವಿನಲ್ಲಿ “ಸೂಪರ್ ಬೈಕ್‌ಗಳನ್ನೇ ಬ್ಯಾನ್ ಮಾಡಬೇಕು” ಎಂಬ ಆಂದೋಳನಕ್ಕೆ ಧುಮುಕುವುದನ್ನಾಗಲಿ ಕೇವಲ ಕನಿಕರಿಸಬಹುದು, ಅನುಮೋದಿಸಲಾಗದು.

ಪೆಲತಡ್ಕ ಶಿವ (-ಸುಬ್ರಹ್ಮಣ್ಯ, ನನ್ನ ಸೋದರತ್ತೆಯ ಮಗ) ಮತ್ತು ರವಿ ಸುಮಾರು ಚರವಾಣಿ ಸರ್ಕಸ್ ವಿನಿಮಯ ಮಾಡಿಕೊಂಡರು. ಬಿಡುವಿನ ಸಮಯದಲ್ಲಿ ಶಿವ ಅದ್ಯಾವುದೋ ಮುದ್ರಾವಿಜ್ಞಾನದ ಭಂಗಿಯಲ್ಲಿ ಬೆರಳು ಗಂಟು ಹಾಕಿಕೊಂಡು ನನ್ನ ತಮಾಷೆಗೆ ಸಿಕ್ಕಿಕೊಳ್ತಿದ್ದ. ನನ್ನಂಗಡಿಯಲ್ಲಿ ಇರುವ ಮತ್ತು ಬರುವ ನೂರೊಂದು ಪರ್ಯಾಯ ಚಿಕಿತ್ಸೆ, ಮತ್ತವುಗಳ ಅನುಯಾಯಿಗಳನ್ನು ಕಂಡು, ಕೇಳಿ ಹುಟ್ಟಿದ ರೇಜಿಗೆಯ ಫಲವಿರಬೇಕು. ನನ್ನ ಪ್ರಾಯದ ಹಿರಿತನಕ್ಕೆ ಅವನು ಗೌರವ ಕೊಟ್ಟದ್ದಕ್ಕೆ ಅಲ್ಲಿ ‘ಮತೀಯ ಗಲಭೆ’ ಏನೂ ಆಗಲಿಲ್ಲ! ವಾಸ್ತವದಲ್ಲಿ ಪ್ರತಿ ವ್ಯಕ್ತಿಯೂ (ಜೀವಿಯೂ) ಎಷ್ಟೇ ಸಂಬಂಧಿಕ, ಆತ್ಮೀಯ ಹಾಗೇ ಹೀಗೇ ಅಂತ ಹೇಳಿದರೂ ಹಲವು ವಿಚಾರಗಳಲ್ಲಿ ಒಳಗಿಂದೊಳಗೆ ಅನ್ಯಮತ ಅಸಹಿಷ್ಣುವೇ ಇರುತ್ತಾನೆ. ಬಹಿರಂಗಪಡಿಸುವಲ್ಲಿ ದೇಶ, ಕಾಲ ಮತ್ತು ಸ್ವಂತದ ರಕ್ಷಣೆಗೆ ಒಗ್ಗುವ ಗುಂಪುಗಳನ್ನು ಆರಿಸಿಕೊಳ್ಳುವುದರಲ್ಲಿ ಸಮಾಜಜೀವಿಯಾಗಿ ಮುಂದುವರಿದಿರುತ್ತಾನೆ! ಇಲ್ಲವಾದರೆ ನಾನು ಶಿವನ ಮುದ್ರಾಪ್ರೀತಿಯನ್ನು ಗೇಲಿ ಮಾಡುವುದೂ ಹಿಂದೂವಾದಿಗಳು ಮುಸ್ಲಿಂ ಮಹಿಳೆಯರು ಗೋಷಾ ಹಾಕಿದ್ದನ್ನು ಕೆಟ್ಟದಾಗಿ ಹೆಸರಿಸುವುದೂ ಒಂದೇ.

ಕಾಸರಗೋಡು ತೇಜಸ್ವಿ ಶ್ರೀಹರಿಯ (ಪರ್ಯಾಯವಾಗಿ ರಾಮು ಬಂದಾಗ ಅವನ) ಕಿವಿಕಚ್ಚಿಕೊಂಡಿದ್ದ. ಮಹಿಳಾಮಣಿಗಳು ಉದ್ದಕ್ಕೂ ಶಿಸ್ತಾಗಿ ಬಲಪಂಥದ ಮೂರು ಸಾಲು ಸೀಟನ್ನಷ್ಟೇ ಬಿಸಿಮಾಡಿದರು. ಕೋಟೆ ಶಿವ ಮೌನದ ಕೋಟೆ ಹರಿಯಲೇ ಇಲ್ಲ. ಎಲ್ಲರೂ ಪರಿಚಿತರೇ ಆದರೂ ಇಂದಿನ ಜೀವನ ಕ್ರಮಕ್ಕನುಸಾರವಾಗಿ ಈ ಸನ್ನಿವೇಶಕ್ಕೆ ಮಾತ್ರ ಒಟ್ಟು ಸೇರಿದ್ದರಿಂದಲೋ ಏನೋ ಹೆಚ್ಚು ಸಮೂಹ-ಲಹರಿಗಳು ತೇಲಲಿಲ್ಲ. ಕಿಸ್ಬಾಯಿ ಕಿವಿಮುಟ್ಟುವ ಹಾಸ್ಯ ಚಟಾಕಿಗಳು ಸಿಡಿಯಲಿಲ್ಲ, ಬಸ್ಸಿನ ಸೂರು ಹಾರಿಹೋಗುವ ನಗೆಬಾಂಬುಗಳು ಸ್ಫೋಟಿಸಲಿಲ್ಲ. ‘ಅನಿಸುತಿದೆ’ಯಿಂದ ತೊಡಗಿ ‘ತೇರೇ ಅಂಗನೆ’ಯವರೆಗಿನ ಸಿನಿ-ಜ್ಞಾನ ಪರೀಕ್ಷೆ ಮಾಡುವ ಪದಬಂಡಿಗಳು ಹೊರಡಲೇ ಇಲ್ಲ. ಬಸ್ಸಿನ ಬಯಲು ಸೀಮೆಯ ಏಕತಾನತೆಯ ಓಟ ನನಗೆ ಶ್ರುತಿ ಕೊಟ್ಟಂತೆ ಆಗಿ ಅಯಾಚಿತವಾಗಿ ಸಿಳ್ಳೆಯಲ್ಲಿ ‘ವಿರಹಾಆಆ ನೂರು ನೂರು ತರಹಾಆಆ’ ತೇಲಿತು. ನನ್ನ ಮೀಸೆಯ ಬಿಗುನೋಡಿ ಮೌನವಾಗಿದ್ದವರು ಯಾರೋ ‘ಅಶೋಕಣ್ಣಂಗೆ ದೇವಕಿಯಕ್ಕನ ನೆನಪೂ’ಂತ ಕಾಲೆಳೆದರು. ನನ್ನ ರಾಗಮಾಲಿಕೆ ‘ಕಥನಕುತೂಹಲ’ದ ಘಾಟೀ ದಾರಿಗೋಡಿತು, ಪುರಾನೀ ಗೀತ್ಮಾಲಾದಲ್ಲಿ ವಿಹರಿಸಿತು, ಅಶ್ವತ್ಥರ ಧಾಟಿಯಲ್ಲಿ ಭಟ್ಟರ ‘ಎಂಥಾ ಮರುಳು’ ಸಾರಿತು. ಆಗೀಗ ನನ್ನ ಲಹರಿ ಹಿಡಿದವರಿದ್ದರು, ಸಣ್ಣಪುಟ್ಟ ಶಭಾಸ್ ಹೇಳಿದವರೂ ಇದ್ದರು. ಪುಣ್ಯಕ್ಕೆ ಅವರು ಯಾರಿಗೂ ಗೊತ್ತಿದ್ದಂತಿರಲಿಲ್ಲ – ನನ್ನ ಹಾಡುಗಳ ಸ್ಟಾಕೆಲ್ಲಾ ಗುಜರಿ ಮಾಲುಗಳು! ಆದರೂ ‘ದಾರಿ ಕಾಣದಾಗಿದೆ ರಾಘವೇಂದ್ರನೇ’ ಬರುವಾಗ ದಾರಿ ಬದಿಯಲ್ಲಿ ಜಿಟಿ ರಾಘವೇಂದ್ರನೇ ಕಾರಿಳಿದು ನಿಂತದ್ದು ನಿಜಕ್ಕೂ ತಮಾಷೆಯಾಗಿತ್ತು. ಅಲ್ಲೇ ನಮ್ಮ ಬಸ್ಸೂ ನಿಲುಗಡೆಗೆ ಬಂತು. ಹೀಗೆ ಪಿರಿಯಾಪಟ್ಟಣ, ಹುಣಸೂರು, ಬಿಳಿಕೆರೆಗಾಗಿ ಬಂದವರು ಎಡದ ಕವಲು ಹಿಡಿದು ಹೊಳೇನರಸಿಪುರದ ದಾರಿಯಲ್ಲಿ ಎಲ್ಲೂ ಅಲ್ಲದ ಒಂದು ತಾಣದಲ್ಲಿ ಬೆಳಗ್ಗಿನ ತಿಂಡಿಗೆ ನಿಲ್ಲುವಾಗ ಗಂಟೆ ಹತ್ತಾಗಿತ್ತು.

ಕಾರಿನ ಡಿಕ್ಕಿ ಮೊಬೈಲ್ ಕ್ಯಾಂಟೀನಿನಂತೇ ತೆರೆದುಕೊಂಡಿತು. ಒಂದೇ ವ್ಯತ್ಯಾಸ – ಬಿಲ್ ಯಾರು ಕೊಡುವುದೆಂಬ ಸಂಕಟವಿಲ್ಲ! ಬಿರಿಯಾನಿ ಸಲಾಡ್ ಭರ್ಜರಿಯಿತ್ತು. ಬಿಸಿಯಂಡೆಯಿಂದ ಜಗತ್ಪ್ರಸಿದ್ಧ ಜ್ಯೋತಿ ಕಾಫಿಯ ಹೊಳೆ ಹರಿದಿತ್ತು. ಆರೋಗ್ಯ ಪಂಥದವರಿಗೆ ರುಚಿಕಟ್ಟಾದ ಮಸಾಲೆ ಮಜ್ಜಿಗೆ, ಅದೂ ಬೇಡ ಎನ್ನುವವರಿಗೆ ಐವತ್ತು ಲೀಟರ್ ನೀರಿನ ಡ್ರಂ ಮುಕ್ತವಿತ್ತು. (ಈಶ್ವರ ಇದ್ದಿದ್ದರೆ ನಾಲಿಗೆ ಚಪಲಕ್ಕೆ ಕಾಫಿ ಚಪ್ಪರಿಸಿ, ದೇಹ ಪುಷ್ಟಿಗಾಗಿ ಎರಡು ಗೊಟ್ಟ ಮಜ್ಜಿಗೆ ಗಂಟಲಿಗೆರೆದು, ಮತ್ತೂ ಕೊರತೆಬಿದ್ದಲ್ಲಿಗೆ ನೀರು ತುಂಬಿಕೊಳ್ತಿದ್ದ!) ಮುಂದಿನ ಅಜೆಂಡಾ ಬಾಳೆ ಹಣ್ಣು, ತೆಂಗಿನಕಾಯಿ ಬರ್ಫಿ. ಸ್ವಂತ ಸಂಬಳ, ಭತ್ತೆಗಳ ಬಡ್ತಿ ಎಷ್ಟೇ ಅತಾರ್ಕಿಕವಾಗಿ ಮಂಡನೆಯಾದರೂ ಚರ್ಚೆಯಿಲ್ಲದೆ ಪಾಸು ಮಾಡುವ ನಮ್ಮ ಗೌರವಾನ್ವಿತ (ಬೇರೆ ಶಬ್ದ ಬಳಸಿದರೆ ನಾಳೆ ವಿಧಾನಸೌಧಕ್ಕೆ ಕರೆಸಿ ಸಮ್ಮಾನ ಮಾಡಿಯಾರು!) ಜನಪ್ರತಿನಿಧಿಗಳಂತೆ ನಾವು ಉಸುರಿಗಷ್ಟೇ ಜಾಗ ಉಳಿಸಿಕೊಂಡು ಎಲ್ಲವನ್ನೂ ಅನುಮೋದಿಸಿದೆವು. (ಯಥಾ ರಾಜ ತಥ್ ಈ ಪ್ರಜೆ) ಶ್ರೀಹರಿ ಎಲ್ಲರೂ ಬಳಸಿದ ಹಾಳೆ ಬಟ್ಟಲು ಮತ್ತು ಕಾಗದದ ಲೋಟಗಳನ್ನು ಒಟ್ಟು ಮಾಡಿ ದಾರಿಯಾಚಿನ ಪೊದರ ಸಂದಿಗೆ ಗಿಡಿದದ್ದು, ಪ್ಲ್ಯಾಸ್ಟಿಕ್ ಚಮಚಗಳನ್ನು ಪ್ರತ್ಯೇಕಿಸಿ ನಗರಕ್ಕೆ ಮರಳಿಸಲು ಇಟ್ಟುಕೊಂಡದ್ದು ಪ್ರಕೃತಿಪಾಠದ ಒಳ್ಳೆಯ ಅನುಷ್ಠಾನ. ಇಲ್ಲದಿದ್ದರೂ ಪುರಾಣೋಕ್ತ ಶ್ರೀಹರಿ (ಕೃಷ್ಣ) ಪರಿಸರಪ್ರಿಯನೇ. ಪುರಾಣಿಕರು ಆತನನ್ನು ಸುಮ್ಮನೇ ಗೋವರ್ಧಗಿರಿಧಾರಿ ಮತ್ತು ಕಾಳಿಂಗಮರ್ದನ (ಗಮನಿಸು ವಧೆಯಲ್ಲ) ಎನ್ನಲಿಲ್ಲ!

ಕೃಷ್ಣರಾಜ ನಗರ ದಾಟುವಾಗ ನಾನು ಕಾಲೇಜಿನಲ್ಲಿದ್ದಾಗ ಇಲ್ಲಿ ಭಾಗವಹಿಸಿದ ಹತ್ತು ದಿನಗಳ ವಾರ್ಷಿಕ ಎನ್ಸಿಸಿ ಶಿಬಿರ ನೆನಪಿಗೆ ಬಂತು. ಭೇರ್ಯ ಕಳೆದು ಹೊಳೆನರಸೀಪುರ ದಾಟುವಾಗ ದೇಶಕ್ಕೆ ಕರ್ನಾಟಕ ಕೊಟ್ಟ ಏಕೈಕ ಪ್ರಧಾನಿಯ ಸ್ಮರಣೆ ಬಾರದಿರಲಿಲ್ಲ. ಅದು ದೇವರೋ ದೆವ್ವವೋ ಅಥವಾ ಒಟ್ಟು ನಮ್ಮನ್ನು ನಾವೇ ಆಳಿಕೊಳ್ಳುವ ವ್ಯವಸ್ಥೆಯ ಅಸಾಮರ್ಥ್ಯದ ಪ್ರತಿನಿಧಿಯೋ ಯೋಚಿಸಿದರೆ ವೃಥಾ ಮಂಡೆಬೆಚ್ಚ. ಅಲ್ಲಿ ಊರಿನಾಚೆಯ ಗುಡ್ಡೆ, ಮೇಲಕ್ಕೂ ಹರಿದ ದಾರಿ ಸಣ್ಣ ಕುತೂಹಲ ಮೂಡಿಸಿತು. ಮುಂದೆ ಅರಸೀಕೆರೆಯಲ್ಲಿ ಇದನ್ನೂ ಮೀರಿಸಿದ ಇನ್ನೊಂದೇ ಗುಡ್ಡೆ, ಗುಡಿ ಎಲ್ಲಾ ಕಾಣಿಸಿ ಈ ಗುಡ್ಡೇ ಹಿತ್ತಲಿನವನ ಗುಡ್ಡೆ ಏರುವ ಪ್ರಜ್ಞೆಯೇ ತಪ್ಪಿಹೋಯ್ತು. ಇಂಥದ್ದೇ ಬೆಟ್ಟದಪುರದ ಬೆಟ್ಟ (ಸ್ವಲ್ಪ ಆಚೆ, ರಾಮನಾಥಪುರದ ದಾರಿಯಲ್ಲಿದೆ) ಕೆಲವು ವರ್ಷಗಳ ಹಿಂದೆ ನಾನೂ ದೇವಕಿಯೂ ಹತ್ತಿದ್ದೆವು. ನಗರಗಳ ಹಿತ್ತಿಲಿನಂತೇ ಇರುವ ಈ ಪ್ರಾಕೃತಿಕ ತಾಣಗಳು ಗಾದೆ ಮಾತಿನಂತೆ ದೂರಕ್ಕಷ್ಟೇ (ನುಣ್ಣಗೆ ಮತ್ತು) ಆಕರ್ಷಕ. ಅಲ್ಲಿಗೆ ಹೋದರೆ ಅವುಗಳ ಮೇಲಾದ ನಾಗರಿಕ ಅವಹೇಳನವೇ ನಮ್ಮ ಗಮನ ಸೆಳೆದು ಸೋಲಿಸಿಬಿಡುತ್ತವೆ. [ಇದೇ ಅರಸೀಕೆರೆ ಸದಾಶಿವನಿಗೆ ಮೋಟಾರ್ ಸೈಕಲ್ ಕಲಿಕೆ ಕೇಂದ್ರವಾಗಿತ್ತು. ಆ ಕಥೆಯನ್ನು ಅವನ ಬಾಯಲ್ಲೇ ದಿಬ್ಬಣದ ಮೊದಲ ಹೆಜ್ಜೆಯೊಡನೆ ಲಗತ್ತಿಸಿದ ವಿಡಿಯೋದಲ್ಲಿ ಪೇಟೆಯ ದೃಶ್ಯದೊಡನೆ ಕೇಳಬಹುದು]

‘ಗಂಡಸಿ’ (ಊರಿನ ಹೆಸರು) ಇದ್ದಂತೆ ಹೆಂಗಸಿ ಇರಬಹುದೇ ಎನ್ನುವ ಜಿಜ್ಞಾಸೆ, ವರದರಾಜ ‘ಬಾಣಾವರ’ (ಊರಿನ ಹೆಸರು) ಹೋಗಿ ವಾರದ ರಜಾ ಭಾನುವಾರ ಆದ ಕಥೆ, ತರೀಕೆರೆ ಏರಿಮೇಲೆ ಹೋಗುತ್ತಿದ್ದಂತೆ ಬಸ್ಸಿನೊಳಗೆದ್ದ ಕಂಯ್ ಕುಂಯ್ (ಮೂರು-ಕರಿ-ಕುರಿ-ಮರಿ) ಹಾಡು, ಯಾರದೋ ಮಾಯಾಚೀಲದಿಂದ ಬಸ್ಸಿನೊಳಗೆ ವಿತರಣೆಗೊಂಡ ಹುಣಸೇಹಣ್ಣಿನ ಮಿಠಾಯಿಯಂತೆ “ಸಾಕು, ಬೇಡ” ಎನ್ನುತ್ತಲೇ ಮತ್ತೆ ಮತ್ತೆ ಚಪ್ಪರಿಸಿದೆವು!

ಕಡೂರು ವಲಯದಲ್ಲಿ ಸಾಗುವಾಗ ಎಡಕ್ಕೆ ಕಾಣಿಸಿದ ಬಾಬಾ ಬುಡನ್ ಗಿರಿ ಬೆಟ್ಟ ಸಾಲಿನ ನೆತ್ತಿಯುದ್ದಕ್ಕೆ ಗಾಳಿಗಿರಣಿಗಳು ನಿಯತ ಅಂತರದಲ್ಲಿ ಸಾಲುಗಟ್ಟಿದ್ದವು. ಅವುಗಳ ಒಂದು ಸುಂದರನೋಟವನ್ನು ನನ್ನ ಪುಟ್ಟ ಕ್ಯಾಮರಾದಲ್ಲಿ ಹಿಡಿಯೋಣವೆಂದರೆ ಬಸ್ಸಿನೋಟದ ದಡಬಡ, ಮಾರ್ಗದ ಬದಿಯ ಮರ ವಿದ್ಯುತ್ ಸಂಪರ್ಕಗಳು ಮತ್ತು ಕಟ್ಟಡಗಳ ಮರೆ, ಕೆಟ್ಟ ಬೆಳಕು ಮತ್ತು ಚೌಕಟ್ಟು. ಅನಿವಾರ್ಯವಾಗಿ ಒಂದೇ ಒಂದು ಮಿನಿಟು ಬಸ್ಸನ್ನು ನಿಲ್ಲಿಸಿ ಒಂದು ದೃಶ್ಯವನ್ನೇನೋ ಹಿಡಿದುಕೊಂಡೆ. ಆದರೆ ಸ್ವಲ್ಪವೇ ಮುಂದೆ ಕುರುಚಲು ಕಾಡಿನ ಪ್ರದೇಶವನ್ನೇ ಸಪಾಯಿ ಮಾಡಿತ್ತು. ಅಲ್ಲಿ ಹತ್ತೆಂಟು ಗಾಳಿಗಿರಣಿಯ ಭಾರೀ ಕಂಬಗಳ ದಾಸ್ತಾನೂ ಅವನ್ನು ಸೂಕ್ತ ನೆಲೆಗಳಿಗೆ ಸಾಗಿಸಲು ಸಹಸ್ರಪದಿಯಂಥ ಒಂದೆರಡು ಲಾರಿಗಳೂ ನಿಂತಿದ್ದವು. ಆ ವಠಾರವನ್ನು ಕಳೆದು ನಾವು ಮುಂದುವರಿದಂತೆ, ಬೆಟ್ಟ ಸಾಲಿನ ಹಿಮ್ಮೈ ಉದ್ದಕ್ಕೂ ಈ ಕಂಬ ಸಾಗಣೆಗೆ ಹೊಸದಾಗಿ ಕಡಿದ ಮಣ್ಣ ದಾರಿ ಕಂಡು ನನ್ನ ಹೃದಯ ತಲ್ಲಣಿಸಿತು. ಒಂದೊಂದು ‘ಪರಿಸರ ಸ್ನೇಹೀ’ ಕಂಬ ನಿಲ್ಲ ಬೇಕಾದರೂ ಮುಂದೆ ಎಲ್ಲ ಋತುಮಾನಗಳ ಪ್ರಾಕೃತಿಕ ಆಘಾತಗಳ ನಡುವೆ ಊರ್ಜಿತದಲ್ಲಿರಬೇಕಾದರೂ ಈ ವ್ಯವಸ್ಥೆ ಉಳಿದೇ ಉಳಿಯಬೇಕು. (ನೆನಪಿರಲಿ, ಇಲ್ಲಿ ತಯಾರಾದ ವಿದ್ಯುಚ್ಛಕ್ತಿ ಸಾಗಿಸುವ ವ್ಯವಸ್ಥೆ ಬೇರೆಯೇ ಮತ್ತು ಇನ್ನಷ್ಟು ಸಮರ್ಥವಿರಲೇ ಬೇಕು) ಅಂದರೆ ಅಷ್ಟೂ ವಲಯದ ಪ್ರಾಕೃತಿಕ ಹುಲ್ಲುಗಾವಲಿನಲ್ಲಿ ಆಳ ಗಾಯ, ಕಣಿವೆಯ ಝರಿ, ತೊರೆಗಳಲ್ಲಿ ಹೂಳು ಒಂದು ಕಾಲಕ್ಕಷ್ಟೇ ಇದ್ದು ಹೋಗುವ ಸಂಗತಿಯಲ್ಲ. ಇನ್ನು ಇಲ್ಲಿ ವನ್ಯ ಜೀವಿಗಳ ನೈಜ ಊಟ, ಕೂಟಗಳಿಗಾಗುವ ನಷ್ಟ, ಭಂಗ, ದೈತ್ಯ ಗಿರಿಗಿಟಿಗಳಿಗೆ ಬಡಿದು ಸಾಯುವ ಬಾನಾಡಿಗಳ ಲೆಕ್ಕ ಹಿಡಿದವರುಂಟೇ? ಮೀಟರ್ ಓಡಿದ್ದಕ್ಕೆ ಪ್ರಾಮಾಣಿಕ ದುಡ್ಡು ಕೊಡುವ ತಾಕತ್ತು ಉಂಟೆಂದು ಇಂದು ನೈಜ ಗಾಳಿಬೆಳಕಿಗೆ ತತ್ವಾರವಿಲ್ಲದ ಹಳ್ಳಿಮೂಲೆಯಲ್ಲೂ ಕತ್ತಲಕೊತ್ತಲಗಳನ್ನು ಕಟ್ಟಿ, ಸೂರ್ಯನನ್ನು ನಾಚಿಸುವ ದೀಪ, ಹಿಮಾಲಯದ ತುಣುಕು ತಂದಿಟ್ಟಂತೆ ಹವಾನಿಯಂತ್ರಣ ಹೆಚ್ಚಿಸುತ್ತಿರುವ ನಮ್ಮ ನಗರ ಸಂಸ್ಕೃತಿ ನಾಗರಿಕತೆಯೇ ಇರಬಹುದೇ? [ಇದಕ್ಕೆ ಉತ್ತರ ತಿಳಿದೂ ಹೇಳದಿದ್ದರೆ ಅನಂತಪದ್ಮನಾಭನ ಬಿ ಕೊಠಡಿಯ ಬಾಗಿಲು ತೆರೆದವನ ಪಾಪ, ಜನಾರ್ದನ ರೆಡ್ಡಿಯ ಗುಪ್ತ ಕೋಠಿಗಳ (/ಕೋಟಿಗಳ) ಲೆಕ್ಕ ಹಿಡಿಯಲು ಹೊರಟವನ ಸಂಕಟ ನಿನ್ನನ್ನು ಅಡರಲಿ]

ಮಧ್ಯಾಹ್ನ ಒಂದೂ ಮುಕ್ಕಾಲಕ್ಕೆ ಭದ್ರಾವತಿ. ಹೆದ್ದಾರಿ ಬರಲಿದೆ, ಮಧ್ಯಾಹ್ನದ ಊಟಕ್ಕಲ್ಲದಿದ್ದರೂ ಸಂಜೆಯ ಕಾಫಿಗೆ ಬೆಳಗಾವಿ ಗ್ಯಾರಂಟಿ ಎನ್ನುವ ನಮ್ಮ ಆಶಯ ನೆಲಕಚ್ಚಿತ್ತು. ಬೆಳಿಗ್ಗೆ ಬಿರಿಯಾನಿ ಜಡಿದ ಹೊಸತರಲ್ಲಿ ಪೆಲತಡ್ಕ ಶಿವ “ಶಿವಪ್ಪಾ ಕಾಯೋ ತಂದೇ . . .” ಹಾಡಲು ತೊಡಗಿ ಇತರರ ತಮಾಷೆಗೆರವಾಗಿದ್ದ. ಆದರೀಗ ಅದರದೇ ಚರಣವನ್ನು ಕುಕವಿ ಪರಿಷ್ಕರಣದಲ್ಲಿ “ಗಂಟೆ ಕಳೀತು ಒಂದೂ ಎರಡೂ ಹೆದ್ದಾರಿ ಬರಲಿಲ್ಲಾಆಆಆ ಹಸಿವೆಯನ್ನು ತಾಳಲಾರೆ, ಶಿವನೇ ಕಾಡುಪಾಪಯ್ಯಾ” ಅಂತ ಎಲ್ಲರೂ ಹಾಡುವುದು ಬಾಕಿ. ಎರಡೂ ಕಾಲಕ್ಕೆ ನಮ್ಮನ್ನು ಕಾಪಾಡಿದ್ದು ಶಿವಮೊಗ್ಗದ ಹೋಟೆಲ್! ಕೂಳುಧ್ವಂಸ ಮುಗಿಯುತ್ತಿದ್ದಂತೆ ಹೊರಗೆ ಭರ್ಜರಿ ಮಳೆ. ಯಡ್ಯೂರಪ್ಪನ ಖಾಸಾ ಕ್ಷೇತ್ರವಿದು. ಮತ್ತೆ ತೋರಿಕೆಗೆ ‘ನಮ್ಮದೇ ಪಕ್ಷದ’ ಅಧ್ಯಕ್ಷ ಈಶ್ವರಪ್ಪನಿಗೂ ಶಿವಮೊಗ್ಗವೇ ತವರುನೆಲ. ವರ್ಷದ ಹಿಂದೊಮ್ಮೆ ಇಲ್ಲಿಗೆ ಭೇಟಿ ಕೊಟ್ಟು ದಿನವೆರಡು ಕಳೆದ ನೆನಪೂ ಸೇರಿಸಿಕೊಂಡು ಹೇಳುತ್ತೇನೆ (ಇಲ್ಲೇ ಹಳೆ ಕಡತ – ತೀರ್ಥಯಾತ್ರೆ ನೋಡಬಹುದು) ಇಲ್ಲಿ ಅಭಿವೃದ್ಧಿಯ ಅಲೆ ಸುನಾಮಿ ಗಾತ್ರದಲ್ಲೇ ಅಪ್ಪಳಿಸಿದೆ. ದೇಶಪ್ರೀತಿ, ದೇವಭಕ್ತಿ, ಗುರುವೃಂದದ ಗೌರವ, ಭಾಷಾಭಿಮಾನ, ಸಂಸ್ಕೃತಿ ರಕ್ಷಣೆ ಮತ್ತು ಪೋಷಣೆ, ಪ್ರಾಮಾಣಿಕತೆ, ಪಾರದರ್ಶಕತೆ ಇತ್ಯಾದಿ ಇತ್ಯಾದಿ ಅತ್ಯುನ್ನತ ಮೌಲ್ಯಗಳ ಸಾಂಗತ್ಯದಲ್ಲಿ ಇಬ್ಬರೂ ಶಿವಮೊಗ್ಗವನ್ನು ‘ನಮ್ಮದರಂತೆಯೇ ತಿಳಿಯುವುದು’ ಬಿಟ್ಟು ತಮ್ಮದನ್ನೇ ಆಗಿಸಿಕೊಳ್ಳುವುದರಲ್ಲಿ ಅರೆದು ಚೂರ್ಣ ಮಾಡಿದ್ದಾರೆ. ಬಸ್ ನಿಲ್ದಾಣವೆಂಬ ಕೊಳಚೆ ಕೇಂದ್ರದ ಹೊರ ಅಂಚಿನಲ್ಲೇ ಇದ್ದ ನಮ್ಮ ಬಸ್ಸ್ ಏರಬೇಕಾದರೆ ನಾವು ವಿಭಿನ್ನ ಬಣ್ಣ ಮತ್ತು ವಾಸನೆಗಳ ಕೆರೆ ತೊರೆಗಳನ್ನು ಉತ್ತರಿಸಬೇಕಾಯ್ತು.

ಸ್ವಾತಂತ್ರ್ಯಪೂರ್ವದಲ್ಲಿ ಜನರನ್ನು ಒಗ್ಗೂಡಿಸಲು ನಾಯಕ ಶಿಖಾಮಣಿಗಳು ವಿನಾಯಕನ ಉತ್ಸವವನ್ನು ನೆಪ ಮಾಡಿಕೊಂಡರೆಂದು ಕೇಳಿದ್ದೇವೆ. ಆದರಿಂದು ಅದೇ ಉತ್ಸವ ಬಿರಡೆ ಕಳಚಿದ ಬಾಟಲಿ ಭೂತದಂತೆ ಊರೂರಿನಲ್ಲಿ ನಮ್ಮೊಳಗಿನ ಅಪನಂಬಿಕೆಯನ್ನು ಬೆಳೆಸುತ್ತಿರುವುದನ್ನು ನಾನೇನು ಹೊಸದಾಗಿ ಹೇಳಬೇಕಾಗಿಲ್ಲ. ನಮ್ಮ ಗ್ರಹಾಚಾರಕ್ಕೆ ಅಂದು ಸಂಜೆ ಶಿವಮೊಗ್ಗದಲ್ಲಿ ಎಲ್ಲೋ ವಿನಾಯಕ ವಿಸರ್ಜನೆ ನಡೆಯುವುದಿತ್ತು. ನಾವು ಆತಂಕದಲ್ಲೇ ಹೊಟೆಲಿನಲ್ಲೂ (ಚರವಾಣಿ ಸಂಪರ್ಕದಿಂದ ದಿಬ್ಬಣದ ಬರವನ್ನು ತಿಳಿದು ಶಿವಮೊಗ್ಗದಲ್ಲಿ ಎದುರುಗೊಂಡ) ನಿನ್ನ ಆತ್ಮೀಯರಲ್ಲೂ ವಿಚಾರಿಸಿಕೊಂಡೇ ಮುಂದುವರಿದೆವು. ಆದರೂ ಪೊಲಿಸ್ ಬಂದೋಬಸ್ತು, ಮಾರ್ಗ ತಡೆಗಳು ಮತ್ತು ನಿರ್ಬಂಧಗಳನ್ನೆಲ್ಲ ಕಳಚಿಕೊಂಡು ಊರ ಹೊರಬಿದ್ದಾಗ ತಪ್ಪುದಾರಿಯಲ್ಲಿ ನಾಲ್ಕೈದು ಕಿಮೀ ಓಡಿಯಾಗಿತ್ತು! ಹೊನ್ನಾಳಿಗೆ ಸುಮಾರು ನಲ್ವತ್ತು ಕಿಮೀ ಅಂತರದ ಸರ್ಕಾರೀ (ಬಸ್ಸಿನ) ಒಳ್ಳೆಯ ದಾರಿ ಬಿಟ್ಟು ನಾವು ಸುಮಾರು ಐವತ್ತು ಕಿಮೀ ಬಳಸಿನ ಜಲ್ಲಿಕಿತ್ತು, ದೂಳಿ ಸ್ನಾನ ಮಾಡಿಸುವ ಸಾವ್ಕಾರೀ ಬಸ್ಸಿನ ದಾರಿ ಹಿಡಿದಿದ್ದೆವು. ಹಿಂದೋಡಿ, ಹೊಸದಾರಿಗೆ ಪರಡುವ ಯೋಚನೆ ಬಿಟ್ಟು ಹಾಗೇ ಮುಂದುವರಿದೆವು. ಆದರೆ ಪುರಂದರ ದಾಸರೇ, ಆದದ್ದೆಲ್ಲಾ ಒಳಿತೇ ಆಗಲಿಲ್ಲ!

ಹಾರನಹಳ್ಳಿ ಹಾರಿ, ಸವಳಂಗ ಕಳಚಿಕೊಂಡ ಮೇಲೆ ಕಾರಿನ ಅಡಿಯಲ್ಲೇನೋ ಕಳಚಿಕೊಂಡದ್ದು ರಾಮೂಗೆ ಅರಿವಾಯ್ತು. ಹಣಿಕಿ, ತಗ್ಗಿ ನೋಡುವಾಗ ಸಾಧಾರಣ ತಗಡೊಂದು ಅರ್ಧ ಕಳಚಿಕೊಂಡು, ದಾರಿಗುಜ್ಜುತ್ತಿರುವುದು ಕಾಣಿಸಿತು. ನನ್ನ ಆರೋಹಣದ ಸಾಹಸಯಾತ್ರೆಗಳಲ್ಲಿ ಇಂಥ ಪ್ರಸಂಗಗಳು ಬಂದಾಗೆಲ್ಲ ಮೊದಲು ನಾವೇನು ಮಾಡಬಹುದು ಎಂಬುದನ್ನೇ ಯೋಚಿಸುತ್ತೇವೆ, ಕಾರ್ಯಗತಗೊಳಿಸುತ್ತಿದ್ದೆವು. ತೋಟ ಮತ್ತು ಗೃಹಕೃತ್ಯದ ಯಾವುದೇ ದೈಹಿಕ ಕೆಲಸವನ್ನು ಮಾಡದೇ ಬಿಟ್ಟವನು ನೀನಲ್ಲ. ನನ್ನ ಪರಿಚಿತ ಮರಿಕೆ ವಲಯದಲ್ಲಿ ಸರ್ವಶಕ್ತ ಅಣ್ಣನಿದ್ದಂತೇ (ನನ್ನ ಹಿರಿಯ ಸೋದರಮಾವ – ಎ.ಪಿ.ತಿಮ್ಮಪ್ಪಯ್ಯ) ಮಡಿಕೇರಿ ವಲಯದಲ್ಲಿ ನೀನೇ ಘಟ್ಟಿಗ! ಆ ಮನೋ-ದೈಹಿಕ ಸ್ಥಿತಿಯಲ್ಲಿ, ಎಂದಿನಂತಾಗಿದ್ದರೆ (ಅಂದರೆ ಈಚಿನ ನಿನ್ನ ಹೃದಯ ಚಿಕಿತ್ಸೆಯಲ್ಲದಿದ್ದರೆ), ದಿಬ್ಬಣದ ಹಿರಿಯ ಎಂಬ ಆರೋಪಿತ ಗೌರವವನ್ನು ಬದಿಗೆ ನೂಕಿ ನೀನೇ ಜ್ಯಾಕ್ ಇಟ್ಟು, ಸ್ಪ್ಯಾನರ್ ತಿರುವಿದ್ದರೆ ಯಾರೂ ಆಶ್ಚರ್ಯಪಡುತ್ತಿರಲಿಲ್ಲ. ಇನ್ನು ಸ್ವತಃ ರಾಮುವೋ ಶ್ರೀಹರಿಯೋ ಕಾರಡಿಗೆ ನುಸುಳಬೇಕಿತ್ತು ಎಂದು ನನ್ನ ಯೋಚನೆಯಲ್ಲ. ನಮ್ಮ ಬಸ್ಸಿನ ಹುಡುಗನನ್ನೋ ಚಾಲಾಕಿಯ ಚಾಲಕನನ್ನೋ ಕೇಳಬಹುದಿತ್ತು. ಆದರೆ ಕರದೊಳಗಿನ ಅದ್ಭುತ (ಚರವಾಣಿ) ಮತ್ತು ‘ಇಪ್ಪತ್ತ್ನಾಲ್ಕು ಗಂಟೆ, ಹನ್ನೆರಡು ತಿಂಗಳು, ಕರೆದಲ್ಲಿ ಸೇವೆಗೆ ಸಿದ್ಧ’ ಎಂಬ ಕಾರಿನ ತಯಾರಕರ ಹೇಳಿಕೆಯನ್ನು ಒರೆಗೆ ಹಚ್ಚುವ ಹೊಸ ತಲೆಮಾರಿನವರ ಉತ್ಸಾಹದೆದುರು ಅಯಾಚಿತ ಟಿಪ್ಪಣಿ ಹಾಕುವುದು ನನ್ನಿಂದಾಗಲಿಲ್ಲ! Toll free ಕರೆಗೆ ಕಂಪೆನಿ ಸರಿಯಾಗಿಯೇ ಸ್ಪಂದಿಸಿ, ಪರಿಣತರಿಬ್ಬರು ದಾವಣಗೆರೆಯ ದೂರದಿಂದ (ಸುಮಾರು ಐವತ್ತು ಕಿಮೀ) ಕಾರಿನಲ್ಲಿ ಧಾವಿಸಿ ಬಂದರು, ಪರಿಹಾರ ಕೊಟ್ಟರು. (ಆ ತಗಡನ್ನು ಕಳಚಿಕೊಟ್ಟು, “ವಿರಾಮದಲ್ಲಿ ನಿಮ್ಮೂರಿನಲ್ಲಿ ಬದಲಿ ಹಾಕಿಸಿಕೊಳ್ಳಿ. ಪ್ರಯಾಣಕ್ಕೇನೂ ಆತಂಕವಿಲ್ಲ” ಎಂಬ ಭರವಸೆ) ಆದರೆ ನಮ್ಮ ಅಮೂಲ್ಯ ಎರಡೂವರೆ ಗಂಟೆ ವ್ಯರ್ಥ ಕಳೆದೇ ಹೋಯ್ತು!

ದ್ವಾರಕದ ರವಿ, ಕರಿಕೋಟು ಕೊಡಹಿ, ಬಿಳಿ ಕಾಲರ್ ನೇವರಿಸಿ, ದಿಢೀರನೆದ್ದು “I object, your honour” ಎಂದು ಹೇಳಿದರೂ ಹೇಳಿದನೇ. ಮತ್ತೆ ಪ್ರಧಾನ ಸಾಕ್ಷಿಗೆ ಪೆಲತಡ್ಕದ ರವಿಯನ್ನೇ ಮುಂದೂಡುವುದರಲ್ಲೂ ಸಂಶಯವಿಲ್ಲ. ಅವರ ಲೆಕ್ಕಕ್ಕೆ ಆ ಎರಡೂವರೆ ಗಂಟೆ ಹೊಸ ಅನುಭವ ಗಳಿಕೆಗೆ ಅಯಾಚಿತ ಅವಕಾಶವೇ ಆಯ್ತು. ಬಯಲು ಸೀಮೆಯ ಆ ಕಚ್ಚಾ ಮಾರ್ಗದ ಎರಡೂ ಬದಿಯಲ್ಲಿ ಕಣ್ಣೆಟಕುವವರೆಗೂ ಜೋಳದ ಹೊಲಗಳು ಹಾಸಿದ್ದವು. ನಮ್ಮ ಸಮೀಪದಲ್ಲೇ ಸಿದ್ಧೇಶನೆಂಬ ತರುಣ (ಹೊಲದೊಡೆಯ) ಒಂದಷ್ಟು ಖಾಲೀ ನೆಲವನ್ನು ಹುರುಳಿ ಬಿತ್ತನೆಗೆ ಉತ್ತು, ಹಸನು ಮಾಡುತ್ತಿದ್ದ. ಆತನೊಡನೆ ಶಿವ, ರವಿಯರು ಶುರುಮಾಡಿದ ಉಭಯ ಕುಶಲೋಪರಿ ಬೆಳೆ, ಜಾನುವಾರು, ಮಾರ್ಕೇಟೂ, ರಾಜಕಾರಣ ಎಂದಿತ್ಯಾದಿ ಲಂಬಿಸುತ್ತಲೇ ಹೋಯ್ತು. ಆತ ಪಕ್ಕದ ಮಡಿಯಿಂದ ಹಾಲುಗಟ್ಟಿದ ಮುಸುಕಿನ ಜೋಳ ಧಾರಾಳ ಮುರಿದು ಕೊಟ್ಟು ನಮ್ಮನ್ನು ಉಪಚರಿಸಿದ. ಮತ್ತಾತ ಉಳುಮೆ ಮುಗಿಸಿ, ಎತ್ತುಗಳನ್ನು ಗಾಡಿಗೆ ಕಟ್ಟಿ ಹಳ್ಳಿಗೆ ಹೊರಟಾಗ ಅಕ್ಷರಶಃ ಶಿವ ಮತ್ತು ರವಿ ಅವನ ಗಾಡಿಯೇರಿ ಹೊರಟೇ ಬಿಟ್ಟಿದ್ದರು. ಆಗ ಸಂಜೆಯಾಗಿತ್ತು ಮತ್ತು ಕಾರು ರಿಪೇರಿಯಾಗುವುದರಲ್ಲಿದ್ದುದರಿಂದ ಸಿದ್ಧೇಶನ ಮನೆಯ ಜ್ವಾಳದ್ರೊಟ್ಟಿ ಉಚ್ಚೆಳ್ ಚಟ್ನಿ ಅತಿಥಿ ಸತ್ಕಾರಕ್ಕೆ ವಿನಿಯೋಗವಾಗುವುದು ಉಳಿಯಿತು. ಉಳಿದ ನಾವೆಲ್ಲ ಯಥಾನುಶಕ್ತಿ ಡಿಕ್ಕಿ-ಕ್ಯಾಂಟೀನಿನ ಸ್ಟಾಕ್ ಕ್ಲಿಯರೆನ್ಸ್ ಮಾಡುವುದರಲ್ಲೂ (ಅಂಥದ್ದರಲ್ಲೂ ಮಾರಣೇದಿನ ಬೆಳಿಗ್ಗೆ ಚೆಲ್ಲಲು ಕೆಲವು ತಿನಿಸು ಉಳಿದಿತ್ತು ಎನ್ನುವಾಗ ಶ್ರೀದೇವಿಯ ಧಾರಾಳತನವನ್ನು ಹೊಗಳಲೇಬೇಕು) ಪ್ರಯಾಣದ ದಡಬಡದಲ್ಲಿ ಅಸ್ಪಷ್ಟವಾಗಿಯೇ ಬಾಕಿಯಾಗಿದ್ದ ‘ಪರನಿಂದೆ, ಆತ್ಮಶ್ಲಾಘನೆ’ಗಳನ್ನು ಪೂರೈಸಿಕೊಳ್ಳುವುದರಲ್ಲಿ ತೀವ್ರವಾಗಿ ತೊಡಗಿಕೊಂಡಿದ್ದೆವು!

ಮುಂದೆ ಪೂರ್ಣ ಕತ್ತಲಾವರಿಸುತ್ತಿದ್ದಂತೆ ನಾವು ಬೆಂಗಳೂರು-ಹುಬ್ಬಳ್ಳಿ ಹೆದ್ದಾರಿಯನ್ನು ಸೇರಿಕೊಂಡೆವು. ಅದುವರೆಗಿದ್ದ ಊರು ನೋಡುವ ಅವಕಾಶ ತಪ್ಪಿತ್ತು. ಅಲ್ಲದೆ ನಮ್ಮೊಳಗಿನ ಮಾತು, ಹಾಡು, ಹುಡಿ ಎಲ್ಲಾ ಲವಲವಿಕೆ ಕಳೆದುಕೊಂಡದ್ದಕ್ಕೋ ಏನೋ ಶ್ರೀಹರಿ ಬಸ್ಸಿನೊಳಗಿನ ವಿಡಿಯೋಕ್ಕೆ ಎರಡು ಸಿನಿಮಾ – ಜುರಾಸಿಕ್ ಪಾರ್ಕ್ ಮತ್ತು ಲಾಸ್ಟ್ ವರ್ಲ್ಡ್, ಹಾಕಿದ. ಭೋರಿಡುವ ಜಲಪಾತ, ಹೆಗ್ಗೌಳಿಗಳ ದಾಪುಗಾಲು, ವಿಭಿನ್ನ ಯುಗಗಳೆರಡರ ಸಿನಿಮೀಯ ಮುಖಾಮುಖಿ ಅನಾವರಣಗೊಳ್ಳುತ್ತಿದ್ದಂತೆ ನಮ್ಮ ವಾಹನಗಳು ರಾಣೆಬೆನ್ನೂರಿನಿಂದ ತೊಡಗಿ ಹಾವೇರಿ, ಹುಬ್ಳಿಗಾಗಿ ಬೆಳಗಾವಿಯತ್ತ ಏಕ ಓಟವನ್ನು ನಡೆಸಿದ್ದವು. ಎರಡೋ ಮೂರೋ ಸುಂಕದ ಕಟ್ಟೆಗಳಲ್ಲಿ ಮತ್ತು ಚಾಲಕದ್ವಯರಿಗೆ ಏಕತಾನತೆ ಕಡಿಯುವ ನೆಪದಲ್ಲಿ ಎಲ್ಲೂ ಅಲ್ಲದಲ್ಲಿ ಒಮ್ಮೆ ನಿಂತದ್ದು ಬಿಟ್ಟರೆ ನಮ್ಮದು ಅಸಾಮಾನ್ಯ ಓಟವೇ.

ನಾನು ಮೊದಲು ಹೇಳಿದ ಅರ್ಧ ಶತಮಾನದ ಹಿಂದಿನ – ಗೋವಿಂದನ ದಿಬ್ಬಣದ ಸ್ಥಿತಿ ಇನ್ನಷ್ಟು ಹೀನಾಯವಿತ್ತೆಂಬುದನ್ನು ಇಲ್ಲಿ ನೆನೆಸಿಕೊಳ್ಳಲೇಬೇಕು. ಮೊದಲೇ ಮಾತಾಡಿಕೊಂಡಂತೆ ಆ ದಿಬ್ಬಣವೂ ಸಂಜೆಗೆ ಮೊದಲು ಕರ್ಕಿ ತಲಪಬೇಕಿತ್ತು. ಆದರೆ ‘ಗಂಡಿನ ಕಡೆಯವರು’ ರಾತ್ರಿ ಹತ್ತು ಗಂಟೆಯಾದರೂ ಬರಲಿಲ್ಲ ಎನ್ನುವಾಗ ಹೆಣ್ಣು ಹೆತ್ತವರ ಆತಂಕಗಳ ಕರ್ಮೋಡ ದಿಕ್ಕೆಡಿಸುವಂತೆ ದಟ್ಟವಾಗುತ್ತಾ ಹೋಯ್ತಂತೆ. ಪ್ರಯಾಣದ ವಿಳಂಬ, ಆಕಸ್ಮಿಕಗಳನ್ನೆಲ್ಲಾ ಅಳೆದೂ ಸುರಿದೂ ತೀರ್ಮಾನ ನಿಲ್ಲುತ್ತಿದ್ದದ್ದು, ಗಂಡಿನವರು ಅವಮಾನಕಾರಿಯಾಗಿ ಕೈಕೊಟ್ಟರು! ಅಪರಾತ್ರಿ ಎರಡು ಗಂಟೆಗೆ ದಿಬ್ಬಣ ನಿಜಕ್ಕೂ ಹಾಜರಾದಾಗ ಹುಡುಗಿಯ ತಾಯಿಗೆ ದುಃಖ ಬಿರಿದದ್ದೋ ಹರ್ಷ ಉಕ್ಕಿದ್ದೋ ಅರಿವಾಗದೇ ಕಣ್ಣು ಕತ್ತಲಾಗಿ ಬಿದ್ದೇಬಿಟ್ಟರಂತೆ!

ಆ ಲೆಕ್ಕದಲ್ಲಿ ನಮ್ಮ ಕಾಲ ಒಳ್ಳೆಯದು. ಹೆಚ್ಚುಕಡಿಮೆ ಎಲ್ಲರಲ್ಲೂ ಚರವಾಣಿಯಿತ್ತು. “ರಾಮಣ್ಣಾ ತಿರುಗಾಸಿಗೆ ಮೊದಲು ನಿಲ್ಲೋಂದ್ರೆ, ಮಂಗ, ಮುಂದೋಗಿದಿಯಾ” ಅಂತ ಶ್ರೀಹರಿ ಭಾತೃ ವಾತ್ಸಲ್ಯದಿಂದ ಕುಟುಕುವವರೆಗೆ ನಮ್ಮೆರಡು ವಾಹನಗಳ ನಡುವೆ ಸಂವಹನ ನಿರಂತರವಿತ್ತು. ಮತ್ತೆ ಹಿಂದಿನಿಂದ ನಮ್ಮನ್ನು ಕಳಿಸಿಕೊಟ್ಟವರಿಗೆ ಸುದ್ದಿಯನ್ನೂ ಮುಂದಿನೂರಿನ ಆತಿಥೇಯರಿಗೆ ಪ್ರಯಾಣದ ಪ್ರಗತಿಯನ್ನೂ ಕಾಲಕಾಲಕ್ಕೆ ಕೊಡುತ್ತಲೇ ಇದ್ದುದರಿಂದ ಯಾರೂ ಆತಂಕಗೊಳ್ಳುವ ಪ್ರಮೇಯ ಬರಲೇ ಇಲ್ಲ. ರಾಮು ಬಸ್ಸಿನಲ್ಲಿ ವಿರಾಮದಲ್ಲಿದ್ದಾಗ ಎಲ್ಲ ಒತ್ತಾಯಿಸಿ ‘ಉಡ್ಬೀ ವೈಫಿಗೆ’ ಕರೆ ಮಾಡಿಸಿದ ತಮಾಷೆ ಎಲ್ಲಿವರೆಗೆ ಬೇಳೀತಂದ್ರೆ, ಅತ್ತ ನಮಿತಾ (ವಧುವಾಗಲಿದ್ದವಳ ಹೆಸರು) “ರಾಮಯ್ಯಾ ವಸ್ತಾವಯ್ಯಾ, ಮೈನೇ ದಿಲ್ ತುಜ್ಕೊ ದಿಯಾ” ಎಂದು ಹಾಡಿರಬಹುದೇ ಎನ್ನುವವರಿಗೆ ಕೊರತೆಯಿರಲಿಲ್ಲ! ಆದರೆ ಆತಿಥೇಯ ಗಣೇಶಭಟ್ಟರು ನಮ್ಮ ನೆಪದಲ್ಲಿಟ್ಟುಕೊಂಡ ಪೂಜೆಯ ಸಮಾಪನ, ಪ್ರಸಾದ ಭೋಜನ ಎಲ್ಲವನ್ನೂ ಕಾದು ಕಾದು, ತಡವಾಗಿಯೇ ಅವರ ಮನೆಯವರ ಲೆಕ್ಕದಲ್ಲೇ ಪೂರೈಸಬೇಕಾಗಿ ಬಂದದ್ದು ಅನುಕಂಪನೀಯ. ಸಾಲದ್ದಕ್ಕೆ ಅವೇಳೆಯಲ್ಲಿ (ನಾವು ಬೆಳಗಾವಿ ಹೊರವಲಯ ತಲಪುವಾಗ ನಡುರಾತ್ರಿ ಹನ್ನೆರಡೂವರೆ ಗಂಟೆ) ಸ್ವತಃ ಗಣೇಶ ಭಟ್ಟರು ಹೆದ್ದಾರಿ ಪಕ್ಕಕ್ಕೆ ಬಂದು ನಮಗೆ ಮಾರ್ಗದರ್ಶನ ಮಾಡಬೇಕಾಯ್ತು. ಅವರ ಮನೆ ತಲಪಿದ್ದೇ ಮೊದಲು ಪೂಜೆಯ ತೀರ್ಥ ಪ್ರಸಾದ. ಅನಂತರ ಊಟ, ಕೊನೆಯಲ್ಲಿ ಪ್ರಯಾಣದ ಕೊಳೆ ನಿರ್ನಾಮ. ಈ ಹಿಂದೆ ಮುಂದಾದ ಕ್ರಿಯೆಗಳಿಗೆ ಸರಿಯಾಗಿ ಮಲಗುವಾಗ ಗಂಟೆ ಒಂದೂವರೆ; ಇದು ಕಳೆದ ರಾತ್ರಿಯೋ ಹೊಸಹಗಲೋ? ಖ್ಯಾತ ನಾಟಕಕಾರನೊಬ್ಬನ ಪಾತ್ರ ಹೇಳುತ್ತದೆ “ತಡವಾಗಿ ಮಲಗುವುದೆಂದರೆ ಬೇಗ ಮಲಗುವುದೆಂದೇ ಅರ್ಥ!

ನನ್ನನ್ನು ದಿಬ್ಬಣದುದ್ದಕ್ಕೆ ಸಹಿಸಿದ್ದಲ್ಲದೇ ಪತ್ರದುದ್ದಕ್ಕೂ ಅನುಸರಿಸಿದ್ದಕ್ಕೆ ಕೃತಜ್ಞತೆಗಳು. ಬದ್ಧದ ಕಲಾಪ, ಮರುಪಯಣದ ಸ್ವಾರಸ್ಯ, ಮತ್ತೂ ಮುಂದೆ ಬರಲಿರುವ (ಡಿಸೆಂಬರ್ ಒಂದು ಪುತ್ತೂರಿನಲ್ಲಿ ಮದುವೆ, ಎರಡರಂದು ಮಡಿಕೇರಿಯಲ್ಲಿ ವಧೂ ಗೃಹಪ್ರವೇಶ) ಸಕಲ ಮಂಗಳ ಕಾರ್ಯಗಳ ನಿರೂಪಣೆಗೆ ಅನ್ಯರಿಗೆ ಅವಕಾಶ ಬಿಟ್ಟುಕೊಡುತ್ತಾ (ಕತ್ತೆ ಮೇಯ್ದಲ್ಲಿ ಇನ್ನು ಮೇವಿಲ್ಲ ಎಂದು ಯಾರೂ ಹೊಗಳಬೇಡಿ) ವಿರಮಿಸುತ್ತೇನೆ.

ಇಂತು ವಿಶ್ವಾಸಿ

ಅಶೋಕ

ರಾಮೂಗೆ ಮದ್ವೆಯಂತೆ – ದಿಬ್ಬಣದ ಮೊದಲ ಹೆಜ್ಜೆ
ಪ್ರಿಯ ನಾರಾಯಣ (-ರಾವ್, ನನ್ನ ಓರ್ವ ಚಿಕ್ಕಪ್ಪ)

`ರಾಮುಗೆ (ನಾರಾಯಣನ ಹಿರಿಯ ಮಗ – ರಾಮಚಂದ್ರ ರಾವ್ ದ ಸೆಕೆಂಡ್!) ಹುಡುಗಿ ನಿಶ್ಚಯವಾಯ್ತಂತೆ, ಸದ್ಯದಲ್ಲೇ ಬದ್ಧವಂತೆ, ಅಜ್ಜಿಯ ವರ್ಷಾಂತಿಕವಾಗದೇ ಮದುವೆ ಇಲ್ಲ್ವಂತೆ…’ ಹೀಗೇ ಯೋಚನೆಗಳು ರೂಪುಗೊಳ್ಳುವ ಹಂತದಲ್ಲೇ (ಸೂಕ್ಷ್ಮ ಸಂದೇಶ, ಚರವಾಣಿ, ಮುಖವಾಣಿಗಳ ಹಾವಳಿಯಲ್ಲಿ) ಟಾಂಟಾಂ ದಟ್ಟವಾಗಿರುವಾಗ ನಿನ್ನ ದೂರವಾಣಿ ಕರೆ ಬಂತು. ಅನಧಿಕೃತ ತಿಳಿಸುವವರ ಉತ್ಸಾಹದಷ್ಟೇ ಅವಸರದಲ್ಲಿ ನಾನೂ ನಿನ್ನ ಮಾತಿಗು ಮುನ್ನ “ಗೊತ್ತು ಗೊತ್ತು, ಶುಭವಾಗಲಿ” ಎಂದು ಹೇಳಿ ಉದ್ದೇಶಪಡದೇ ಸ್ಮಾರ್ಟ್ ಆದದ್ದೂ ಆಯ್ತು! ಮತ್ತೆ ನೀನೇ “ಔಪಚಾರಿಕವಾಗಿಯಾದರೂ ನಾನು ಹೇಳಲೇಬೇಕು” ಎಂದು ನಯವಾಗಿ ಎಚ್ಚರಿಸಿ ಹೇಳಿದ ಮೇಲೂ ನನ್ನಪ್ಪ ಹೇಳಿದ ಮಾತನ್ನು ಮತ್ತೆ ಅವಸರದಲ್ಲೇ ನಾನು ಅನುಸರಿಸಿದ್ದಿರಬೇಕು. “ಸೆಪ್ಟೆಂಬರ್ ಹನ್ನೆರಡು, ಸೋಮವಾರಾ! ನನಗೆ ಕೆಲಸದ ದಿನವಲ್ವಾ. ನನ್ನ ಶುಭಾಶಯಗಳು ನಿಮ್ಮೊಡನುಂಟು” ಎಂದೇ ಮುಗಿಸಿಬಿಟ್ಟೆ.

ತಲೆಯೊಳಗೆ ಯೋಚನಾ ವಲ್ಲರಿ ಹೊಸದಾಗಿ ದಾಂಗುಡಿಸಿತು. ಕೌಟುಂಬಿಕವಾಗಿ ನನ್ನ ತೀರಾ ಸಣ್ಣ ಆತ್ಮೀಯ ವಲಯದೊಳಗೆ ಬರುವವರಲ್ಲಿ ನಿಮ್ಮನೆಯ ಮಂದಿ ಬಿಟ್ಟಿಲ್ಲ. ನನಗೆ ಸಮಯಾನುಕೂಲ ಮಾಡಿಕೊಳ್ಳುವುದು ಸಾಧ್ಯವಾದರೆ, ಭಾಗಿಯಾಗುವುದು ಪ್ರೀತಿಯ ಕರ್ತವ್ಯ ಎಂದು ಕಾಣಿಸಿತು. ಸಾಲದ್ದಕ್ಕೆ ಪ್ರವಾಸ, ಹೊಸ ಸ್ಥಳ ನೋಡುವುದು ನನ್ನ ಪ್ರಿಯ ಹವ್ಯಾಸವೂ ಹೌದು. ಅಂಗಡಿ ವ್ಯವಸ್ಥೆಗೆ ದೇವಕಿಯನ್ನು ಸಜ್ಜುಗೊಳಿಸಿ, ನಿನ್ನನ್ನು ಮರುಸಂಪರ್ಕಿಸಿದೆ. ಮಂಗಳವಾರ ಬೆಳಗ್ಗಿನವರೆಗೆ ಅಂಗಡಿ ಬಂಧನದಿಂದ ಜಾಮೀನು ಸಿಕ್ಕ ಅಪರಾಧಿಯಂತೆ (ರೆಡ್ಡಿ ಯೆಡ್ದಿ ಕುಮ್ಮಿಯಂತೆ ನಾನು ಬರಿಯ ಆರೋಪಿಯಲ್ಲ, ಸ್ವಯಂ ಘೋಷಿತ ಅಪರಾಧಿಯಾಗಿ ಪುಸ್ತಕ ಮಳಿಗೆಯಲ್ಲಿ ಜೀವಾವಧಿ ಬಂಧಿ!), ಶನಿವಾರ ಇಳಿಸಂಜೆ, ಬೆನ್ನಿಗೆ ಚೀಲ ಏರಿಸಿ, ಪಿರಿಪಿರಿ ಮಳೆಗೆ ಕೊಡೆ ಅರಳಿಸಿ, ಮನೆಬಿಟ್ಟೆ. ‘ಮಳೆಗಾಲಕ್ಕೆ ಸಜ್ಜುಗೊಂಡ ಮಂಗಳೂರ’ ಚರಂಡಿ ಮತ್ತು ಮಾರ್ಗಗಳ ಬೇಧ ಅಳಿಸಿದ ಕೊಚ್ಚೆ ಹರಿವಿನ ಎಡೆಯ ದಿಬ್ಬದಿಂ ದಿಬ್ಬಕ್ಕೆ ಧೀಂಕಿಟ ಹಾಕುತ್ತಾ ಬಿಜಯಂಗೈದೆ. (ಕೆಸರಟ್ಟಿಸಿ ನಿಲ್ದಾಣವಿರುವುದು ಬಿಜೈಯಲ್ಲಿ.)

ಬಸ್ ನಿಲ್ದಾಣವನ್ನು ವಿನಾಯಕ ಲಾಟರಿ ಸಂಸ್ಥೆಗೆ ಒಳಗುತ್ತಿಗೆ ಕೊಟ್ಟಿದ್ದರು. ಮುಖ್ಯ ಮಂತ್ರಿಯ ಕುರ್ಚಿಯಿಂದ ಹಿಡಿದು ಚಪ್ರಾಸಿಯ ಕಸಬುಟ್ಟಿಯವರೆಗೆ ವೇದೋಕ್ತವಾದ ಪೂಜೆ ಸಲ್ಲುವ ಪುಣ್ಯಭೂಮಿ ನಮ್ಮದು. ಮಾಮೂಲೀ ದಿನಗಳಲ್ಲೇ ಸಾರ್ವಜನಿಕ ವಾಹನ ನಿಲುಗಡೆಗೆ ಜಾಗವಿಲ್ಲದ ಸ್ಥಿತಿಯಿದ್ದರೂ ಚೌತಿ ಬಂದಾಗ ಇಲ್ಲಿ ಚಪ್ಪರ ಬರುವುದು ಖಾತ್ರಿ. ಹೊರಗಿನ ಕಿಷ್ಕಿಂಧಾ ಮಾರ್ಗದಲ್ಲಿ ಗುಂಡ್ಯಾಡುತ್ತಾ ಕರ್ಣಕಠಾರಿಗಳನ್ನು ಮೊಳಗಿಸುತ್ತಾ ದೂಳುಧೂಮಗಳನ್ನೆಬ್ಬಿಸುತ್ತಾ ಸಾಗುವ ನಾಗರಿಕತೆಯನ್ನು ಮೀರುವಂತೆ ಇಲ್ಲಿ ಜನರೇಟರು, ಚಕುಪುಕು ದೀಪಮಾಲೆ, ಭಕ್ತಿ ಸಂಘಾತ ಕೊಟ್ಟು, ಭರ್ಜರಿ ವಿನಾಯಕನನ್ನು ಕೂರಿಸುವುದನ್ನು ನಾನು ನಿನಗೆ ಹೊಸದಾಗಿ ಏನೂ ಹೇಳಬೇಕಿಲ್ಲ. ಇಲ್ಲೂ ಅದೆಷ್ಟೋ ದಿನ ನಿಯಮಿತವಾಗಿ ಸಾಂಸ್ಕೃತಿಕ ಭಯೋತ್ಪಾದಕರನ್ನು ಕರೆಸಿ, ಕಲಗಚ್ಚು ಕರಡಿದ ಕೊನೆಯಲ್ಲಿ ಪ್ರಧಾನ ಸಾಕ್ಷಿಯನ್ನೇ (ವಿನಾಯಕ ಮೂರ್ತಿ) ಕೆರೆಗೋ ಬಾವಿಗೋ ತಳ್ಳಿ ಮುಗಿದಿತ್ತು. ತದಂಗವಾಗಿ ಸಮಿತಿ ಸೇವಾಕರ್ತರಿಗೆ ಕೊಟ್ಟ ನಗದು ರಸೀದಿಗಳ ಆಧಾರದ ಲಾಟರಿಯ ಡ್ರಾ ಅಂದು ನಡೆಯುತ್ತಿತ್ತು. ನನ್ನ ಕಿಸೆ ಖಾಲಿಯಾಗದ ಎಚ್ಚರವಹಿಸಿಕೊಂಡು ಜಂಗುಳಿಯನ್ನೀಸಿ ಬಸ್ಸು ಕಟ್ಟೆ ಸಾಕಷ್ಟು ಬೇಗನೇ ತಲಪಿದೆ.

ಮೂರಕ್ಕೆ ಹೊರಡುವ (ಮಡಿಕೇರಿ ಮಾರ್ಗವಾಗಿ) ಮೈಸೂರು ರಾಜಹಿಂಸೆ ಬಸ್ಸು (ರಾಜಹಂಸ) ನಿರಾಕರಿಸಿ ಕಾದೆ. ಮೂರೂವರೆಯ ಕೊಯಮತ್ತೂರು ವಾಲುವ ಬಸ್ಸನ್ನೇ (ಹೂಂ, ದಾರಿಯ ಅವ್ಯವಸ್ಥೆಯಲ್ಲಿ ಎಲ್ಲವೂ ವಾಲುವವೇ. ಆದರೆ ‘ಕುಶಾಲು ಪದಕೋಶ’ದಲ್ಲಿ ರಾಜಹಂಸ = ರಾಜಹಿಂಸೆ ಎಂದಂತೆ, ವೋಲ್ವೋ = ವಾಲುವ!) ಹಿಡಿದೆ. ಇದು ಸಮಯಕ್ಕೆ ಸರಿಯಾಗಿಯೇ ಹೊರಟರೂ ನಗರದ ಚಕ್ರವ್ಯೂಹದಿಂದ ಪಾರಾಗಬೇಕಾದರೆ ಮತ್ತೆ ಅರ್ಧ ಗಂಟೆಯೇ ಹಿಡಿದಿತ್ತು. ಆದರೂ ಜೋಡುಮಾರ್ಗದವರೆಗೆ ಒಂದೆರಡು ಎಡವಟ್ಟನ್ನುಳಿದು ಚತುಷ್ಪಥದ ಸಂಚಾರ ಪಥವಷ್ಟೂ ಚೊಕ್ಕವಾಗಿರುವುದರಿಂದ ನಾನು ಬಯಸಿದ ಭವ್ಯ ಸವಾರಿಯ ಕುಶಿ ಅನುಭವಿಸಿದೆ. ಮಾರ್ಗದ ಅಗಲೀಕರಣದಲ್ಲಿ ನೆಲದ ಹೊಸ ಕಡಿತ ಮತ್ತು ನಿಗಿತಗಳು ಕೆಲವೆಡೆ ಕುದುರದೆ ಉಂಟಾದ ಸಮಸ್ಯೆಗಳು ಅರ್ಥವಾಗುವಂತವು ಮತ್ತು ಪರಿಹಾರ್ಯವೂ ಹೌದು. ಆದರೆ…

ಬ್ರಹ್ಮರಕೂಟ್ಲು, ಜೋಡುಮಾರ್ಗಕ್ಕೂ (ಯಾನೆ ಬೀಸೀರೋಡ್) ಸ್ವಲ್ಪ ಮೊದಲು ಸಿಗುವ ಈ ಪುಟ್ಟ ದೈವಸ್ಥಾನ, ಯಾವುದೇ ಮಾರ್ಗ ಬದಿಯಲ್ಲಿ ಕಾಣ ಸಿಗುವಂಥದ್ದೇ. ಸುಮಾರು ಮೂವತ್ತು ವರ್ಷಗಳಿಗೂ ಮೊದಲು ಅಬ್ಬರದ ಮಳೆಗಾಲದಲ್ಲಿ ನೆರೆನೀರು ಮಂಗಳೂರ ಹೆದ್ದಾರಿಯನ್ನು ಮುಳುಗಿಸುತ್ತಿದ್ದ ಸ್ಥಳನಾಮವಾಗಿಯೇ ಹೆಚ್ಚು ಪ್ರಚಾರಕ್ಕೆ ಬರುತ್ತಿತ್ತು ಈ ಬ್ರಹ್ಮರಕೂಟ್ಲು. ಅಲ್ಲಿ ದಾರಿಯನ್ನು ಎತ್ತರಿಸುವುದರೊಡನೆ ಹೊಸದಾಗಿಯೇ ರೂಪಿಸುವ ಯೋಜನೆ ತೊಡಗಿದಾಗ ದೈವಸ್ಥಾನದ ಆಡಳಿತ ಮಂಡಳಿ ಸಂಕುಚಿತ ಮನೋಭಾವ ತೋರಿರಬೇಕು. ಹೊಸನೆಲೆಗೆ ಸ್ಥಳಾಂತರ ನಡೆಯಲಿಲ್ಲ. ದೈವಸ್ಥಾನದ ಎದುರಿಗಿದ್ದ ಹಳೆದಾರಿ, ಹಿತ್ತಲಿನಲ್ಲಿ ಆರಾಳೆತ್ತರದ ಕಾಂಕ್ರೀಟ್ ಗೋಡೆಯ ಮೇಲೆ ಸವಾರಿ ನಡೆಸಿತು. ಹಿನ್ನೆಲೆಗೆ ನೇತ್ರಾವತಿಯ ಹೊಳೆಪಾತ್ರೆಯೊಡನೆ ಮುಕ್ತ ಬನದಂತಿದ್ದ ವಠಾರ ಭವ್ಯತೆ ಕಳೆದುಕೊಂಡಿತು. ಈಗ ಚತುಷ್ಪಥದ ಕಾಮಗಾರಿ ಮತ್ತೆ ಈ ವಠಾರವನ್ನು ಕೇಳುತ್ತಿದೆ. ಲೋಕಹಿತಕಾರಿಯಾದ ಚತುಷ್ಪಥವನ್ನು ದೈವಸ್ಥಾನ ಧಿಕ್ಕರಿಸದೆಂಬ ವಿಶ್ವಾಸದಲ್ಲಿ ಮಾರ್ಗ ರಚನೆ ಪೂರ್ಣಗೊಂಡು ವಠಾರದ ಎರಡೂ ಪಕ್ಕದಲ್ಲಿ ಕುರುಡಾಗಿ ನಿಂತಿವೆ. ಆಡಳಿತ ಮಂಡಳಿ ಪಕ್ಷರಾಜಕೀಯದ ಬಲದಲ್ಲಿ ಹೆದ್ದಾರಿ ತಂತ್ರಜ್ಞರನ್ನು ದೇವ ತಂತ್ರಜ್ಞರ ‘ಪ್ರಶ್ನೆ’ಗೆ ಮಣಿಸಿ, ಭಾವುಕ ಒತ್ತೆಸೆರೆ ಹಿಡಿದಿದ್ದಾರೆ. ಬಹುಖ್ಯಾತಿಯ ತಿರುವನಂತಪುರದ ದೇವಪ್ರಶ್ನೆಯನ್ನು ಸ್ಪಷ್ಟ ಲೌಕಿಕ ನ್ಯಾಯದ ತಕ್ಕಡಿಯಲ್ಲಿ ತೂಗಿ ತಿರಸ್ಕರಿಸಿದ ದೇಶದ ಅತ್ಯುಚ್ಛನ್ಯಾಯಾಲಯದ ಧೀಮಂತ ನುಡಿಗಳು ಇಲ್ಲಿಗೂ ಅನ್ವಯವಾಗಲು ಇನ್ನೆಷ್ಟು ಕಾಲ ಬೇಕೋ ಏನೋ.

ಮಾಣಿ-ಪುತ್ತೂರು ಮತ್ತೆ ಪುತ್ತೂರು-ಕುಂಬ್ರದವರೆಗಿನ ದಾರಿಯ ಅಸಾಧ್ಯ ಅವ್ಯವಸ್ಥೆಗಳನ್ನು ಅನಿವಾರ್ಯ ಅಭಿವೃದ್ಧಿಯ ಸಂಕಟಗಳೆಂದು ಒಪ್ಪಿಕೊಳ್ಳಬಹುದು. ಆದರೆ ಹೊಸ ಯೋಜನೆ ತೊಡಗಲಿಲ್ಲ, ಮಾಮೂಲೀ ತೇಪೆಯೂ ನಡೆಯಲಿಲ್ಲ ಎಂದೇ ಉಳಿದಿರುವ ಕುಂಬ್ರ-ಕೊಯ್ನಾಡು ಅಂಶ ಅಕ್ಷಮ್ಯ. ಮಡಿಕೇರಿಯಿಂದ ಬೆಳಗಾವಿಗೆ ಹತ್ತಿರದ ದಾರಿಯೆಂದರೆ ಮಂಗಳೂರು ಮೂಲಕದ ಕರಾವಳಿ ಹೆದ್ದಾರಿ ಎಂದು ಭೂಪಟ ನೋಡಿದವರಿಗೆಲ್ಲಾ ತಿಳಿದೀತು. ಆದರೆ ಕುಂಬ್ರ ಕೊಯ್ನಾಡು ತುಣುಕನ್ನು (ಇದನ್ನೂ ನಾಚಿಸುವಂತಿರುವ ಉಡುಪಿ-ಕುಮಟಾದವರೆಗಿನ ಹೆದ್ದಾರಿಯನ್ನೂ ಅನುಭವಿಸಿದ ಬಲದಲ್ಲೇ) ನೀನು ಹುಣಸೂರತ್ತಣ ಹೊಸ ದಾರಿ ಹಿಡಿದದ್ದು ಎಂದು ತಿಳಿದುಕೊಂಡೆ. ಈ ಭಯಂಕರವನ್ನು ಹಗುರಗೊಳಿಸಿಕೊಳ್ಳಲೆಂದೇ ನಾನು ವಾಲ್ವೋ ಹಿಡಿದಿದ್ದೆ. ನಿರೀಕ್ಷೆಯಂತೆ ಬಸ್ಸು ತುಂಬಾ ಸಮರ್ಥವಾಗಿ ಅದನ್ನು ನಿರ್ವಹಿಸಿತು. ನಮಗೂ ಮುಕ್ಕಾಲು ಗಂಟೆ ಮೊದಲೇ ಹೊರಟಿದ್ದ ರಾಜಹಂಸವನ್ನು ಸುಳ್ಯದಲ್ಲೇ ಹಿಂದಿಕ್ಕಿದಾಗಂತೂ ನಾನು ಟಿಕೆಟ್ಟಿಗೆ ಕೊಟ್ಟ ಹೆಚ್ಚುವರಿ ಹಣ ವಾಪಾಸು ಬಂದಂತೇ ಆಯ್ತು!

ಸುಳ್ಯ ಪೇಟೆ ಕೆಲವು ಕಾಲದಿಂದ ಅತ್ತ ಪುತ್ತೂರಿನಿಂದ, ಇತ್ತ ಮಡಿಕೇರಿಯಿಂದ ಬರುವ ಚತುಷ್ಪಥವನ್ನು ಸ್ವೀಕರಿಸಲು ಸಜ್ಜುಗೊಳ್ಳುತ್ತಲೇ ಇತ್ತು. ವಾರಗಳ ಹಿಂದೆ, ಹಿಂದೆ ಸಂಪಾಜೆ ಘಾಟಿಯನ್ನು ಮಾಡಿದಂತೇ ಕೆಲವು ತಿಂಗಳ ಕಾಲ ವಾಹನ ಸಂಚಾರ ಪೂರ್ಣ ಬಂದ್ ಮಾಡಿ ರಸ್ತೆ ಅಗಲ ಮತ್ತು ಉನ್ನತೀಕರಣದ ಕೆಲಸ ನಡೆಸುವ ಘೋಷಣೆಯೂ ಕೇಳಿತ್ತು. ಆದರೆ ನಮ್ಮಲ್ಲಿ ಯಾವುದೇ ಸಾರ್ವಜನಿಕ ಕಾಮಗಾರಿ (ಗುಣಮಟ್ಟ ಸಾಯಲಿ) ಕಾಲ ಬದ್ಧವಾಗಿ ಪೂರ್ಣಗೊಂಡು, ಬಳಕೆಗೆ ಮುಕ್ತವಾದ ದಾಖಲೆ ಇಲ್ಲ. ಸಹಜವಾಗಿ ಪ್ರತಿಭಟನೆಗಳು ನಡೆದು, ರಾಜಿಯಾದ್ದರಿಂದ ಒಂದು ಬದಿಯಲ್ಲಿ ಕೆಲಸವೂ ಇನ್ನೊಂದು ಬದಿಯಲ್ಲಿ ಸರದಿಯ ಮೇಲೆ ಎದುರುಬದುರು ವಾಹನ ಸಂಚಾರಕ್ಕೂ ವ್ಯವಸ್ಥೆಯಾಗಿತ್ತು. ಆದರೆ ಇಂಥಲ್ಲೆಲ್ಲಾ ಒಳದಾರಿ ಹುಡುಕುವ ಕೆಲವು ಬುದ್ಧಿಗಳು ಒಟ್ಟು ಪರಿಸ್ಥಿತಿಯನ್ನು ಹದಗೆಡಿಸುವುದು ನಾವೂ ಅನುಭವಿಸಿದೆವು. ನಮ್ಮಿಂದ ಹತ್ತಿಪ್ಪತ್ತೇ ಅಡಿ ಮುಂದೆ ಬಲಕ್ಕೆ ಶೌಚಕೂಪಕ್ಕಾಗಿ ಹೊಂಡ ತೋಡಿದ್ದರು. ನಮ್ಮ ಬಸ್ಸು ಪೊಲಿಸ್ ಸೂಚನೆ ಮೇರೆಗೆ ಮುಂದುವರಿಯುತ್ತಿದ್ದಂತೆ ಎದುರಿನ ಓರ್ವ ಸ್ಕೂಟರ್ ಸವಾರ ಮಿಂಚಿನಂತೆ ನುಗ್ಗಿದ. ನಮ್ಮ ಚಾಲಕ ಮತ್ತು ಬಸ್ಸಿನ ಅಸಾಧಾರಣ ತಾಕತ್ತಿನಿಂದ ಆತ ಬಸ್ಸಿನಡಿಗೂ ಬೀಳಲಿಲ್ಲ, ಹೊಂಡದಾಳವನ್ನೂ ಅಳೆಯಲಿಲ್ಲ!

ಬಸ್ಸು ಮಂಗಳೂರಿನಿಂದಲೇ ಕೆಳಧ್ವನಿಯಲ್ಲಿ ಯಾವುದೋ ಎಫ್‌ಎಂ ರೇಡಿಯೋ ಗುನುಗಿಕೊಂಡಿತ್ತು. ಸುಳ್ಯದಿಂದ ಮುಂದೆ ಯಾರೋ ಪರಿಚಿತರ ಒತ್ತಾಯದ ಮೇರೆಗೆ ‘ಕೋಟೆ’ ಎಂಬ ಭೀಕರ ಸಿನಿಮಾದ ವಿಡಿಯೋ ಪ್ರದರ್ಶನ ತೊಡಗಿತು. ಹೊರಗೆ ಮೋಡ ಆವರಿಸಿ, ಪಿರಿಪಿರಿ ಮಳೆ, ಕತ್ತಲೂ ಮುತ್ತಿ ನನಗೆ ಬೇಡವೆಂದರೂ ಸಿನಿಮಾದ ಪೆಟ್ಟು, ರಕ್ತಪಾತಗಳಿಗೆಲ್ಲಾ ಸಾಕ್ಷಿಯಾಗಲೇಬೇಕಾಯ್ತು. ಅದರ ಕಥೆ ಹೇಳುವ ಅಥವಾ ವಿಮರ್ಶೆ ಮಾಡುವ ಕ್ರೌರ್ಯ ದಯವಿಟ್ಟು ಇಲ್ಲಿ ನನ್ನಿಂದ ನಿರೀಕ್ಷಿಸಬೇಡ. ನಾನೇ ಆರಿಸಿಕೊಂಡು ನೋಡಿದ ಅಸಂಖ್ಯ ವೈವಿಧ್ಯಮಯ ಸಿನಿಮಾಗಳು ಮತ್ತಿತರ ಕಲಾಪ್ರಕಾರಗಳ ಪ್ರೀತಿಗೆ, ಅದಕ್ಕೂ ಮಿಗಿಲಾಗಿ ಈಗ ವೃತ್ತಿಪರ ಸಿನಿಮಾ ನಿರ್ದೇಶಕನ ಅಪ್ಪನೂ ಆಗಿ ನಾನು ಹೇಳಬಹುದಾದ ಪುಟಗಟ್ಟಳೆ ಮಾತುಗಳನ್ನು ಇನ್ಯಾವುದಾದರೂ ಔಚಿತ್ಯಪೂರ್ಣ ಸಂದರ್ಭಕ್ಕೆ ಕಾದಿರಿಸುತ್ತೇನೆ!

ಮಳೆ ಜೋರಾಗಿಯೇ ಕುಟ್ಟುತ್ತಿದ್ದಂತೆ ಜನರಲ್ ತಿಮ್ಮಯ್ಯನವರಿಗೆ ಸಲ್ಯೂಟ್ ಹಾಕಿ ಟೋಲ್ಗೇಟಿನಲ್ಲಿ ಇಳಿದೆ. ನಾನು ಇನ್ನೂ ಕೊಡೆ ಸರಿಯಾಗಿ ಬಿಡಿಸಿರಲಿಲ್ಲ, ನಾಲ್ಕು ಹೆಜ್ಜೆ ಇಟ್ಟಿರಲಿಲ್ಲ, ಅದೃಷ್ಟ ನನ್ನೆದುರು ಕಾರ್ ಸಮೇತ ರವಿ (-ಶಂಕರ್, ನನ್ನ ಇನ್ನೊಬ್ಬ ಚಿಕ್ಕಪ್ಪ – ರಾಘವೇಂದ್ರನ ಮಗ) ರೂಪದಲ್ಲಿ ಪ್ರತ್ಯಕ್ಷವಾಯ್ತು! ಆಸ್ಪತ್ರೆಯ ಸಂದಿನ ಮೆಟ್ಟಿಲದಾರಿ ಇಳಿಯಲೋ ಜ್ಯೋತಿ ಹೊಮಿಯೋ ಕ್ಲಿನಿಕ್ಕಿನೆದುರಿನ ನೆನಪಿನ ಓಣಿ ನಡೆಯಲೋ ಯೋಚಿಸಲು ಅವಕಾಶವೇ ಒದಗಲಿಲ್ಲ. ಮೊದಲು ಉಪಚಾರಕ್ಕೇನೂ ಕೊರತೆಯಾಗದಂತೆ ರವಿ ಅವನ ಮನೆಗೇ (ದ್ವಾರಕ) ನನ್ನನ್ನು ಕರೆದೊಯ್ಯಲು ಸಿದ್ಧನಾಗಿದ್ದ. ಆದರೆ ಪ್ರಸ್ತುತ ಸನ್ನಿವೇಶದ ಕೇಂದ್ರದಲ್ಲೇ ನಾನಿರಬೇಕೆಂದು ಬಯಸಿ ನಿಮ್ಮನೆಗೇ (ಜ್ಯೋತಿ) ಬಂದು ಸಂಭ್ರಮಿಸಿದೆ.

ದಾರಿ ಮತ್ತು ದೂರದ ಅಂದಾಜಿನಲ್ಲಿ, (ನಾನು ಹೆಚ್ಚಾಗಿ ಕೈಗೊಳ್ಳುವ ಸಾಹಸಯಾತ್ರೆಯೇನೂ ಇದಲ್ಲ) ಎಲ್ಲಾ ವಯೋಮಿತಿಯ ಆತ್ಮೀಯರನ್ನು ಆದಷ್ಟು ಕಡಿಮೆ ಶ್ರಮದಲ್ಲಿ ಬೆಳಗಾವಿ ಮುಟ್ಟಿಸಿ, ಮರಳಿಸುವ ವ್ಯವಸ್ಥೆಯಲ್ಲಿ ನಿಮ್ಮ (ಹೆಂಡತಿ – ಶ್ರೀದೇವಿ, ರಾಮು ಮತ್ತಾತನ ತಮ್ಮ – ಶ್ರೀಹರಿ) ಕಾಳಜಿ ಮತ್ತು ಶ್ರಮ ಪ್ರಶ್ನಾತೀತ. ಇಂಥ ಸಂದರ್ಭಗಳಲ್ಲಿ ಎಲ್ಲೋ ಸಮಯ ವ್ಯರ್ಥ ಕಳೆಯಿತೆಂದು ಯೋಚಿಸಬಾರದು, “ಇದು ಮುಗಿದೇ ಹೋಗುವ ಯಾವುದೇ ಸೇನಾ ಕಾರ್ಯಾಚರಣೆ ಅಲ್ಲ” ಅಂತ ನನ್ನ ಅಪ್ಪ ಹೇಳುತ್ತಿದ್ದದ್ದು ನೆನಪಿಗೆ ಬರುತ್ತದೆ. ಒಂದು ಅನುದ್ದಿಷ್ಟ ತಪ್ಪು ನಡೆಯಲ್ಲಿ ಮುಳುಗಿಯೇ ಹೋಗುವ ಆರ್ಥಿಕ ಕಲಾಪವೂ ಅಲ್ಲ. ಇದು ಅಪ್ಪಟ ಭಾವನಾತ್ಮಕ ಕೂಟ. ಸಹಜವಾಗಿ ಸುಮಾರು ಒಂದು ನೂರು ಕಿಮೀಯಷ್ಟು ಹೆಚ್ಚುವರಿ (ಬಳಸು) ದಾರಿಯನ್ನೂ ದಿನ ಮುಂಚಿತವಾಗಿಯೇ ತಲಪುವ ಸುಲಭ ಕಾಲಮಿತಿಯನ್ನೂ ಹಾಕಿಕೊಂಡಿದ್ದಿರಿ. ಹಾಗಾಗಿ ಒಟ್ಟು ಪಯಣ, ವಾಸ, ಬೆಳಗಾವಿಯ ಔಪಚಾರಿಕ ಕಲಾಪಗಳು, ಒಟ್ಟಾರೆ ಆತಿಥ್ಯಗಳು (ಕೇವಲ ಹಿತೈಷೀ ಮಧ್ಯಸ್ಥಿಕೆದಾರರಾಗಿ ಒದಗಿದ ಗಣೇಶ ಭಟ್ ಕುಟುಂಬವನ್ನು ವಿಶೇಷವಾಗಿ ಉಲ್ಲೇಖಿಸಬೇಕು) ಅಪ್ಯಾಯಮಾನವಾಗಿದ್ದವು. ಮೊತ್ತದಲ್ಲಿ ಮದುವೆ ಎನ್ನುವುದು ಕೇವಲ ವೈಭವೀಕೃತ ಸಾಮಾಜಿಕ ಒಪ್ಪಂದ ಎನ್ನುವುದಕ್ಕೆ ಸಮರ್ಥ ಮುನ್ನುಡಿಯನ್ನೇ ಬರೆಯಿತು. ಇವೆಲ್ಲವನ್ನೂ ನಾವೆಲ್ಲರು ಒಟ್ಟಿಗೇ ಅನುಭವಿಸಿದರೂ ಗ್ರಹಿಸಿ ಸಂತೋಷಿಸುವ ಸ್ತರಗಳು ವಿಭಿನ್ನ ಎನ್ನುವ ನೆಲೆಯಲ್ಲಿ, ನಿನ್ನ, ನಿನ್ನ ಮನೆಯವರ ಮತ್ತು ಹೆಚ್ಚಿನ ಎಲ್ಲ ಸಮಾನ ಮನಸ್ಕರೊಡನೆ ಹಂಚಿಕೊಳ್ಳುವ ಉತ್ಸಾಹದಲ್ಲಿ ಹೀಗೆ ಬ್ಲಾಗಿಸಿ, ದಾಖಲಿಸುತ್ತಿದ್ದೇನೆ.

ಕೊನಾರ್ಕ್ ಒದಿಶಾದ ಸುಪ್ರಸಿದ್ಧ ಸೂರ್ಯ ದೇವಾಲಯ ಸಂಕೀರ್ಣ. ಅದೇ ಹೆಸರು ಹೊತ್ತ ಮಿನಿ ಬಸ್ಸು (ಇಪ್ಪತ್ತು ಆಸನ ವ್ಯವಸ್ಥೆಯದ್ದು) ಸೂರ್ಯೋದಯದ ಹೊತ್ತಿಗೇ ಬಂತೆನ್ನಬಹುದು (ಆರು ಗಂಟೆ). ಅದು ರಾಮುವಿನ ದಾಂಪತ್ಯ ಜೀವನದ ಅರುಣೋದಯದ ಕಲಾಪಕ್ಕೆ ಸಾಕ್ಷಿಯಾಗಲು ಸಜ್ಜಾಗಿ ಬಂದದ್ದು ಅರ್ಥಪೂರ್ಣ ಆಕಸ್ಮಿಕ. ನಮ್ಮ ಹತ್ತೊಂಬತ್ತು ಮಂದಿಯ ತಂಡ – ದಿಬ್ಬಣ ಮತ್ತು ಅಗತ್ಯದ ಸರಕುಗಳೆಲ್ಲವನ್ನೂ ಕೊನಾರ್ಕ್ ಸಾಗಿಸಲು ಸಮರ್ಥವಾಗಿಯೇ ಇತ್ತು. ಆದರೆ ಐದುನೂರು ಕಿಮಿಗೂ ಮಿಕ್ಕ ಪ್ರಯಾಣದಲ್ಲಿ ವಿವಿಧ ದೇಹ ಪ್ರಕೃತಿಯವರನ್ನು ಗಿಡಿದು ತುಂಬಿಸಿದಂತಾದೀತೇ? ಕೊನೇ ಗಳಿಗೆಗೆ ಇಲ್ಲಿಂದಲೋ ಬೆಳಗಾವಿಯ ತುದಿಯಿಂದಲೋ ಸೇರಿಕೊಳ್ಳಬಯಸುವ ಮಂದಿಯಿದ್ದರೆ ಸ್ಥಳ ಸಂಕೋಚವಾದೀತೇ? ಎಲ್ಲಕ್ಕೂ ಮಿಗಿಲಾಗಿ ಆಕಸ್ಮಿಕಗಳಲ್ಲಿ ನಮ್ಮದೇ ಒಂದು ಹೊರ-ಸಹಾಯ ಇಟ್ಟುಕೊಳ್ಳಲು ಅನುಕೂಲವಿದ್ದೂ ನಿರಾಕರಿಸುವುದು ಸರಿಯಲ್ಲಾಂತ ಅಳೆದೂ ಸುರಿದೂ ರಾಮುವಿನ ಸಫಾರಿ ಕೂಡಾ ಹೊರಡಿಸಿದ್ದೂ ಆಯ್ತು. ಮತ್ತೆ ವಾಹನಗಳಿಗೆ ಸಾಮಾನು ತುಂಬುವಾಗ ನಿಮ್ಮ ನಿರ್ಧಾರ ಸಮರ್ಥನೀಯವಾಗಿಯೂ ಕಾಣಿಸಿತು.

ವಾರಾಂತ್ಯಗಳಲ್ಲಿ ನಾವು (ದೇವಕಿ, ಅಭಯ ಸೇರಿದಂತೆ) ಎಷ್ಟೋ ಸಾಹಸ ಯಾತ್ರೆ ನಡೆಸಿದವರೇ. ಮುಖಮಾರ್ಜನ, ಒಂದು ಖಾಲಿ ಕಾಫಿ ಮತ್ತೆ ಲಂಡನ್ ಯಾತ್ರೆಗಳಿಗೆ ಮುಕ್ಕಾಲು ಗಂಟೆ. ಬದಲಿ ಒಳಬಟ್ಟೆ, ಒಂದೋ ಎರಡೋ ಲೀಟರಿನ ನೀರಂಡೆ ತುರುಕಿದ ಚೀಲ ಬೆನ್ನಿಗೆಸೆದು ನಡೆದೇ ಬಿಡುವವರು. ಆದರೆ ಇಲ್ಲಿ ಅಷ್ಟೇ ಮಾಡುವುದು ಸಾಧ್ಯವಿಲ್ಲ. ಮೂರೋ ನಾಲ್ಕೋ ಗಂಟೆ ಬೆಳಿಗ್ಗೆಯೇ ಮನೆಯವರು ಜಾಗೃತರಾದರೂ ಜ್ಯೋತಿಯಲ್ಲುಳಿದ ಅಷ್ಟೂ ಮಂದಿಗೆ ಎಲ್ಲ ಮಾಮೂಲೀ ಉಪಚಾರಗಳು ನಡೆಸುವುದರೊಡನೆ, ಸ್ವಂತದ್ದೂ ಮುಗಿಸಿಕೊಂಡು, ಊರೊಳಗಿಂದಲೇ ಬರುವ ಇತರ ಆತ್ಮೀಯರನ್ನು ಒಗ್ಗೂಡಿಸಿಕೊಳ್ಳಬೇಕಿತ್ತು. ನಾವು ಅನುಸರಿಸುವ ದಾರಿಯಲ್ಲಿ ಹಸಿವು, ನೀರಡಿಕೆಗಳಿಗೆ ಬಂದೋಬಸ್ತಿನಿಂದ ತೊಡಗಿ, ಹೋದಲ್ಲಿ ಆತಿಥೇಯರಿಗೆ ಹೊರೆ ಕಡಿಮೆಯಾಗುವ ಮತ್ತು ಔಪಚಾರಿಕ ಸಮಾರಂಭದ ಅಗತ್ಯಗಳಿಗೆ ಒದಗುವ ಸಾಮಾನುಗಳೆಲ್ಲ ಸೇರಿ ಸೇರಿ ಕಾರಿನ ಬೂಟೇನು ಬಸ್ಸಿನ ಡಿಕ್ಕಿಯೂ ಭರ್ತಿಯಾಗಿತ್ತು! ಆರು ಗಂಟೆಗೆ ಊರು ಬಿಡಬೇಕೆಂದು ಹೇಳಿದರೂ ಮಡಿಕೇರಿ ಬಿಡುವಾಗ ಗಂಟೆ ಏಳು.

ದಾರಿಗಳ ಕುರಿತು ಇಂದು ಅಭಿವೃದ್ಧಿಯ ಮಹಾಪರ್ವವೇ ನಡೆಯುತ್ತಿದೆ. ಇವುಗಳ ಸುಳಿಯಲ್ಲಿ ಮೈಕೈ ಹುಡಿ ಮಾಡಿಕೊಳ್ಳುವುದನ್ನು ಕಡಿಮೆ ಮಾಡಲು ಭೂಪಟದ ಮಡಿಕೇರಿ-ಬೆಳಗಾವಿಯ ನೇರ ದಾರಿಯ ಸಾಧ್ಯತೆಯನ್ನು ನೀವು ನಿರಾಕರಿಸಿದ್ದಿರಿ. ಹೀಗೆ ಪ್ರಥಮ ಪ್ರಾಶಸ್ತ್ಯದ ಮಂಗಳೂರು ಮತ್ತು ಕರಾವಳಿಯಗುಂಟದ ದಾರಿ ಅಲ್ಲ. ಮತ್ತೆ ಸೋಮವಾರಪೇಟೆ, ಅರಕಲಗೂಡು, ಹಾಸನಕ್ಕಾಗಿ ಮುಂದುವರಿಯುವುದನ್ನೂ ನೀವು ಒಪ್ಪಿಕೊಳ್ಳಲಿಲ್ಲ. ದೂರ ಮತ್ತು ಸಮಯವನ್ನು ಅವಗಣಿಸಿ ಮೊದಲು ಮೈಸೂರ ಹೆದ್ದಾರಿ. ಹುಣಸೂರು, ಬಿಳಿಕೆರೆ ಕಳೆದ ಮೇಲೆ ಎಡಕ್ಕೆ ಕವಲು. ಕೆ.ಆರ್ ಪೇಟೆ, ಹೊಳೆನರಸೀಪುರದನಂತರ ಹಾಸನ ದೂರಮಾಡಿ ಚನ್ನರಾಯಪಟ್ಟಣ, ಗಂಡಸಿ ಮೂಲಕ ಅರಸೀಕೆರೆಯಲ್ಲಿ ಬೆಂಗಳೂರು- ಶಿವಮೊಗ್ಗ ಹೆದ್ದಾರಿ. ಮುಂದೆ ಹೊನ್ನಾಳಿ ಮೂಲಕ ಹರಿಹರದಲ್ಲಿ ಬೆಂಗಳೂರು-ಹುಬ್ಬಳ್ಳಿ ಹೆದ್ದಾರಿ ಸಂಪರ್ಕ. ಮತ್ತೆ ವಿಚಾರಣೆಯ ಅಗತ್ಯವಿಲ್ಲದಂತೆ ಹಾವೇರಿ, ಹುಬ್ಬಳ್ಳಿ-ಧಾರವಾಡ ಕಳೆದು ಬೆಳಗಾವಿ. ನಮ್ಮ ಬಸ್ಸಿನ ಮೀಟರ್ ಓದಿನ ಪ್ರಕಾರ ಒಂದೇ ದಿಕ್ಕಿನಲ್ಲಿ ಆರ್ನೂರಾ ಐವತ್ತಮೂರು ಕಿಮೀ ಉದ್ದದ ಈ ಓಟದ ವೈಭವವನ್ನು ಸ್ವಲ್ಪವಾದರೂ ವಿವರಿಸದಿದ್ದರೆ ನನ್ನ ತಿರುಗೂಳಿ ಆತ್ಮಕ್ಕೆ ಶಾಂತಿ ಸಿಗದು!

ಹೃದಯವಂತರಾದ (ನೀವಿಬ್ಬರು ಈಚೆಗೆ ಹೃದಯ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡವರು ಎಂದಷ್ಟೇ ಅರ್ಥ. ಉಳಿದ ನಾವೆಲ್ಲಾ ಕಟುಕರೇನೂ ಅಲ್ಲ) ನೀನು ಮತ್ತು ರಾಘವೇಂದ್ರ, ನಿನ್ನ ಹಿರಿಯ ಭಾವನೊಡನೆ ಕಾರಿನಲ್ಲಿ. ಚಾಲನೆಯಲ್ಲಿ ರಾಮು, ಶ್ರೀಹರಿ ಆಗಿಂದಾಗ್ಗೆ ಕೈ ಬದಲಾಯಿಸಿಕೊಳ್ಳುತ್ತಾ ವಿರಾಮವನ್ನು ನಮ್ಮೊಡನೇ ಬಸ್ಸಿನಲ್ಲಿ ಕಳೆಯುತ್ತಿದ್ದರು. ಮೊದಲು ಎದುರು ಸೀಟಿನಲ್ಲಿ ನನ್ನೊತ್ತಿಗೆ ಕುಳಿತ ಸದಾಶಿವ (ನಾರಾಯಣನ ತಮ್ಮ, ನನಗಿಂತ ಆರು ತಿಂಗಳಿಗೆ ಸಣ್ಣವನಾದರೂ ಅಧಿಕಾರದಲ್ಲಿ ಚಿಕ್ಕಪ್ಪ!) ಬ್ರಾಹ್ಮಣರ ಬೀದಿಯ ಪ್ರತಿ ಮನೆ, ಓಣಿಯ ಕಥೆಗಳಿಂದ ನನ್ನ ‘ಜನರಲ್ ನಾಲೆಜ್ ಇಂಪ್ರೂ’ ಮಾಡುವ ಹಠತೊಟ್ಟಿದ್ದ. ಅವನ ರೋಟರಿ ಕಲಾಪಗಳ ಕುರಿತು ಕೊರೆಯತೊಡಗಿದ. ನನಗೆ ಇಲ್ಲಿನ ರೋಟರಿ (ಲಯನ್ನು, ಜೇಸಿ ಮುಂತಾದ ‘ಸಮಾಜಸೇವಕರ’) ಬಗ್ಗೆ ಹೆಚ್ಚು ಪ್ರೀತಿಯಿಲ್ಲ. ಅವರು ಸದಸ್ಯೇತರರನ್ನು ವಿದೇಶೀ ಸಮಾಜ ಅಧ್ಯಯನಕ್ಕೆ ಕಳಿಸುವ ತಂಡದಲ್ಲಿ ಈಚೆಗೆ ಅಭಯನನ್ನು ಆಯ್ದು ಕಳಿಸಿದ ಮೇಲಂತೂ ಹೋಲಿಕೆಗೆ ಅಮೆರಿಕಾದ ರೋಟರಿಯ ಒಳ್ಳೆಯ ಆದರ್ಶ ಕೇಳಿ ಇಲ್ಲಿನವರ ಬಗ್ಗೆ ತಿರಸ್ಕಾರವೇ ಹೆಚ್ಚಿದ್ದಕ್ಕೆ ವಿಷಯಾಂತರಕ್ಕೆ ಚಡಪಡಿಸಿದೆ. ದಾರಿಯ ಬಲಬದಿ ಗುಡ್ಡದ ಮೇಲಿರುವ ದೇವಸ್ಥಾನಕ್ಕೆ ‘ಕಪ್ಪ’ ಕೊಡಲು ನಿಂತ ನಿಮ್ಮ ಕಾರನ್ನು ಹಿಂದಿಕ್ಕಿದೆವು. ಭಾರೀ ಮರಗಳ ಕಾಡಿನಂತೇ ಇರುವ ಕಾಫಿತೋಟಗಳ ನಡುವೆ ಮಡಿಕೇರಿಗೆ ಸಾದಾ ಕಂಬ ಸಾಲಿನಲ್ಲಿ ಬರುತ್ತಿದ್ದ ಹೈ ಟೆನ್ಷನ್ ವಯರುಗಳು ಉದುರು ಕೊಂಬೆ ಕಡ್ಡಿಗಳಿಂದ ನಿರಂತರ ಕೈಕೊಡುತ್ತಿದ್ದ ಕಥೆ ಸದಾಶಿವ ಹೇಳಿದ. ಈಗ ಅದನ್ನು ಗೋಪುರ ಸಾಲಿನ ಸ್ತರಕ್ಕೆ ಎತ್ತರಿಸಿದ್ದು, ಆದರೂ ಕೆಲವೊಮ್ಮೆ ಚಾಚುವ ಮರಗೈಗಳನ್ನು (ಜೀರ್ಣಿಸಿಕೊಳ್ಳುವ ಪ್ರಾಕೃತಿಕ ಶಕ್ತಿ?) ಕಾಣುತ್ತಾ ಮುಂದುವರಿದೆವು.

ಮೋದೂರಿನಿಂದ (ನನ್ನಜ್ಜನ ಮನೆಯಿರುವ ಹಳ್ಳಿ) ಈ ಮೈಸೂರು ದಾರಿಗೆ ಬಂದು ಸೇರುವ ಒಳದಾರಿಯನ್ನು ಹಿಂದೊಮ್ಮೆ ದಿವಾಕರ ತೋರಿಸಿಕೊಟ್ಟಿದ್ದ. ಆದರೆ ಅದನ್ನು ಈ ಬಾರಿ ಗುರುತಿಸಲು ನಾನು ಸೋತೆ. ಶುಂಠಿಕೊಪ್ಪದ ಹೊರವಲಯದ ಜಾನುವಾರು ದೊಡ್ಡಿ ಮಾತ್ರ ನಾನು ಮರೆಯೆ. ನಿನಗೆ ನೆನಪಿರಲಾರದು, ೧೯೬೦-೭೦ರ ದಶಕದಲ್ಲೆಲ್ಲೋ ಒಂದು ರಜೆಯಲ್ಲಿ ನಾನು ಜ್ಯೋತಿಯಲ್ಲಿದ್ದೆ. ನಿಮ್ಮ ಅಪ್ಪುಕಳ ತೋಟಕ್ಕೆ (ಭಾಗಮಂಡಲ ದಾರಿಯಲ್ಲಿ ಸುಮಾರು ಹತ್ತು ಕಿಮೀ ದೂರದ ಹಳ್ಳಿ) ಬೇಲಿ ಹಾರಿ ಬಂದ ತೊಂಡು ದನವೊಂದನ್ನು ನಿನ್ನ ಸೂಚನೆಯ ಮೇರೆಗೆ ಕೆಲಸದಾಳು ಹಿಡಿದು, ಹಗ್ಗ ಕಟ್ಟಿ, ಸಂಜೆ ಜ್ಯೋತಿಗೆ ಹೊಡಕೊಂಡು ಬಂದಿದ್ದ. ಹತ್ತು ಸಲ ಎಚ್ಚರಿಕೆ ಕೊಟ್ಟರೂ ಕೇಳದ ನಿನ್ನ friendly neighbourಗೆ ಈ ಬಾರಿ ಬುದ್ಧಿ ಕಲಿಸಲೇಬೇಕೆಂದು ನೀನಂದಾಜಿಸಿದ್ದೆ. ಮರುಬೆಳಿಗ್ಗೆ ನೀನು ಆ ದನವನ್ನು ನಡೆಸಿಕೊಂಡು ಹೋಗಿ ಇದೇ ಶುಂಠಿಕೊಪ್ಪದ ದೊಡ್ಡಿಗೆ ತುಂಬಿದ್ದೆ. ನಿನಗೆ ಜೊತೆಗೊಟ್ಟು ಅಷ್ಟುದ್ದಕ್ಕೆ ನಡೆದಿದ್ದ ನನಗಿದು ಮರೆಯಲಾಗದ ದೊಡ್ಡ ಸಾಹಸ!

ಶುಂಠಿಕೊಪ್ಪ ಪೇಟೆ ದಾಟುವಾಗ ಯಾವಾಗಲೂ ನನಗೆ ಕಾಲೇಜು ದಿನಗಳಲ್ಲಿ ಮೈಸೂರಿನಿಂದ ಮಿತ್ರ ಶಂಕರಲಿಂಗೇಗೌಡರ ಜೊತೆ ಸೈಕಲ್ಲೇರಿ ಕೊಡಗು ಯಾತ್ರೆಗೆ ಬಂದದ್ದೇ ನೆನಪು. ಕುಶಾಲನಗರದಲ್ಲಿ ಅಪ್ಪನ ಶಿಷ್ಯ – ಪಂಡಿತ ಶೇಷಾದ್ರಿಯವರಲ್ಲಿ ಉಳಿದಿದ್ದೆವು. ಬೆಳಿಗ್ಗೆ ಎದ್ದವರು ಅಲ್ಲೇ ಇದ್ದ, ಆ ಕಾಲದಲ್ಲಿ ಕೊಡಗಿಗೇ ಹೊಸದಾದ ಹಣ್ಣುಗಳನ್ನು ಹಲವು ಕಾಲ ಉಳಿಯುವಂತೆ ಡಬ್ಬಿಗೆ ಹಾಕುವ ಕಾರ್ಖಾನೆಗೆ ಹೋಗಿದ್ದೆವು. ಅನಂತರ ಇನ್ನೂ ನಿರ್ಮಾಣ ಹಂತದಲ್ಲಿದ್ದ ಹಾರಂಗಿ ಅಣೆಕಟ್ಟೆ. ಕೊನೆಯಲ್ಲಿ ಕೂಡಿಗೆ ಡೈರಿ ನೋಡಿ ಮಡಿಕೇರಿಯತ್ತ ಮುಂದುವರಿದವರಿಗೆ ಸಿಕ್ಕಿದ್ದು ಇಲ್ಲಿನ ಗುಂಡುಕುಟ್ಟಿ ಮಂಜುನಾಥಯ್ಯನವರ ಆತಿಥ್ಯ. (ಬಹುದೊಡ್ಡ ಸಾಹಿತ್ಯಪ್ರೇಮಿ ಜಮೀನುದಾರ, ಉದಾರಿ, ದೂರದ ಸಂಬಂಧಿ ಕೂಡಾ. ಇಂದಿಲ್ಲ.) (ಹೆಚ್ಚಿನ ವಿವರಗಳಿಗೆ ಇಲ್ಲೇ ೧೦-೧೨-೨೦೧೦ರ ‘ಏನ್ ಸೈಕಲ್ ಸಾ ಏನ್ ಸೈಕಲ್’ ನೋಡಿ)

ಘಟ್ಟ ಇಳಿದು ಮುಗಿಯುತ್ತಿದ್ದಂತೆ ಸಿಗುವ ಅರಣ್ಯ ಇಲಾಖೆ ಪ್ರಣೀತ ‘ಕಾವೇರಿ ನಿಸರ್ಗಧಾಮ’, ಅದರ ನೆರಳಿನಲ್ಲಿ ಆ ವಲಯದಲ್ಲಿ ತಲೆ ಎತ್ತಿದ ಅಸಂಖ್ಯ ಖಾಸಗಿ ವಸತಿ ಸೌಕರ್ಯಗಳು ಪ್ರವಾಸೋದ್-ಯಮನ ನಿಟ್ಟುಸಿರುಗಳೇ ಸರಿ. ‘ಹೋಂ ಎವೇ ಫ಼್ರಂ ಹೋಂ’ ಅಥವಾ ಬದಲಾವಣೆಗೆಂದೇ ನಿಸರ್ಗದ ಮಡಿಲಿಗೆ ಓಡುವವರಿಗೆ ಅಲ್ಲೂ ಮನೆಯ ಉತ್ಪ್ರೇಕ್ಷಿತ ಸೌಕರ್ಯಗಳನ್ನೇ ಬಯಸುವ ಮತ್ತು ಅವರ ಬಯಕೆಗೂ ಮಿಗಿಲಾಗಿ ಕೊಡುವವರ ಉತ್ಸಾಹ ನಿಸರ್ಗ ಕಂಟಕವೇ ಸರಿ. ವನ್ಯ ರಕ್ಷಣೆಯ ಮಹಾಹೊಣೆ ನಿರ್ವಹಿಸಬೇಕಾದ ಇಲಾಖೆ ಇಲ್ಲಿ ಹೊಟೆಲಿಗನ ಕೆಲಸ ಮಾಡಿಕೊಂಡಿದೆ. ಅದರಲ್ಲೂ ವೃತ್ತಿಪರತೆ ರೂಢಿಸಿಕೊಳ್ಳದೆ, ನಮ್ಮ ಬಹುತೇಕ ಇಲಾಖೆಗಳಂತೆ ವೆಚ್ಚಕ್ಕೆ ಅನುದಾನವನ್ನೂ ಆದಾಯದಲ್ಲಿ ಖೋತಾವನ್ನು ಸಾಧಿಸುತ್ತಲೇ ಇದೆ.

ನಾ ಕಂಡ ಹಳಗಾಲದವರ ಮಾತಿನಲ್ಲಿ ತಪ್ಪಿ ಸುಳಿಯುತ್ತಿದ್ದ ಫ್ರೇಸರ್ ಪೇಟೆ ಅರ್ಥಾತ್ ಆಗಲೇ ಹೇಳಿದ ಕುಶಾಲನಗರ ದಾಟುವಾಗ ಇನ್ನೊಂದು ಸ್ಮರಣೆ – ‘ವೆಂಕಟಸುಬ್ಬಯ್ಯ ಚಿಕ್ಕಯ್ಯ.’ (ಸಂಬಂಧದಲ್ಲಿ ನನಗೆ ಚಿಕ್ಕಜ್ಜ, ಇವರೂ ಇಲ್ಲ.) ನನ್ನ ಮಟ್ಟಿಗೆ ಅವರ ನೆನಪಿನ ಕೊಂಡಿ ಉಳಿಸುವ ಹೆದ್ದಾರಿ ಬದಿಯ ಅವರ ಪುಟ್ಟ ಸುಂದರ ಮನೆ, ಇಂದು ಹಲವು ಕೈ ಬದಲಿದರೂ ವಾಸಯೋಗ್ಯತೆ ದಕ್ಕಿಸಿಕೊಳ್ಳದೇ ಹಾಳು ಸುರಿಯುವುದನ್ನು ಕಾಣುವಾಗ ಒಮ್ಮೆ ಮನಸ್ಸು ಕುಂದುತ್ತದೆ. ಅದೇ ನೀನು ಹಳೇ ಜ್ಯೋತಿಗೇ ಹೊಸಹೊಳಪು ಕೊಟ್ಟದ್ದು, ಅತ್ತ ಮರಿಕೆಯಲ್ಲಿ (ನನ್ನಮ್ಮನ ಕಡೆಯ ಅಜ್ಜನ ಮನೆ) ಅಣ್ಣ (ಸಂಬಂಧದಲ್ಲಿ ನನಗೆ ಸೋದರಮಾವ, ಹೆಸರು ತಿಮ್ಮಪ್ಪಯ್ಯ) ಹಳೇಮುಖಕ್ಕೆ ಹೊಸ ದೇಹ ಸೇರಿಸಿದ್ದೂ (ಈಗ ಇನ್ನಷ್ಟೂ ಪರಿಷ್ಕಾರವಾಗಿದೆ ಬಿಡು) ಕಪ್ಪು ಬಿಳುಪಿನ ಚಿತ್ರಕ್ಕೆ ಹೊಸ ಬಣ್ಣ ತುಂಬಿದಂತೆ ಕುಶಿಕೊಡುತ್ತದೆ. ರಾಘವೇಂದ್ರ (ನನ್ನ ಇನ್ನೊಬ್ಬ ಚಿಕ್ಕಪ್ಪ) ಕಷ್ಟವೋ ಸುಖವೋ ಹಳಗಾಲಕ್ಕೂ ಹೆಚ್ಚು ಎನ್ನುವಷ್ಟು ಹರಡಿಬಿದ್ದ ಅವನ ಮನೆ – ದ್ವಾರಕವನ್ನು ಹೊಸಕಾಲದಲ್ಲೂ (ಆತಂಕಕಾರಿ ಸಾಮಾಜಿಕ ಬದಲಾವಣೆಗಳನ್ನು ಯೋಚಿಸಿ ಹೇಳುವ ಮಾತು) ಮುಂದುವರಿಸಿಕೊಂಡು ಬಂದಿರುವುದು ಸಣ್ಣ ಮಾತಲ್ಲ. ಮಾತಿನ ಅಲಂಕಾರಕ್ಕೆ ದಿವಾಕರ (ನನ್ನ ಮತ್ತೊಬ್ಬ ಚಿಕ್ಕಪ್ಪ) ನನ್ನಜ್ಜ ಕೈಯಾರೆ ಕಟ್ಟಿದ ಮೋದೂರು ಮನೆಯನ್ನು (ಫ್ರೆಂಚ್ ಹೆಸರನ್ನು ಅಣಕಿಸುತ್ತಾ ಸುಖವಿಲ್ಲಾಂತ) ಏನೇ ಹೇಳಲಿ ಹಾಗ್‌ಹಾಗೇ ತಿದ್ದಿಕೊಂಡು ವಾಸಯೋಗ್ಯತೆಯನ್ನು ಉಳಿಸಿಕೊಂಡೇ ಬಂದದ್ದೆಲ್ಲ ಅವರಿಗೆ ಎಷ್ಟೇ ಅನುಕೂಲವೋ ಅನಾನುಕೂಲವೋ ಗೊತ್ತಿಲ್ಲ. ಆದರೆ ನಮಗೆ, ಅಂದರೆ ಒಂದು ಕ್ಷಣಕ್ಕೋ ಒಂದು ಕಲಾಪಕ್ಕೋ ನುಗ್ಗಿ ಹೋಗುವವರಿಗಂತೂ ತುಂಬಾ ಸಂತೋಷಕೊಡುವಂತದ್ದೇ ಎನ್ನುವ ಮುನ್ನೆಲೆಯಲ್ಲಿ ವೆಂಕಟಸುಬ್ಬಯ್ಯ ಚಿಕ್ಕಯ್ಯನ ಮನೆ ನನ್ನ ಮನಮುದುಡಿಸಿದ್ದೂ ಇರಬಹುದು. ನೀನು (ಒಟ್ಟಾರೆ ಓದುಗರನ್ನೂ ಕೇಳ್ತಾ ಇದ್ದೇನೆ) ಏನು ಹೇಳ್ತೀ?

[ಹೀಗೇ ನಂಟಿನ ಅಂಟನ್ನು ಕೊಡಗಿನೊಡನೆ ಕಳೆದು ನಮ್ಮ ಬೆಳಗಾವಿ ಯಾನದ ಮತ್ತು ದಾರಿಯ ಕುರಿತೇ ಹೆಚ್ಚಿನ ಕಥನಕ್ಕೆ ಮುಂದಿನ ಕಂತು ಉಳಿಸಿಕೊಳ್ತೇನೆ]

ಪುಸ್ತಕ ನೀತಿಯಲ್ಲ, ನುಂಗಪ್ಪಗಳ ಪಾಕಪಟ್ಟಿ!
ಈಚೆಗೆ ಪ್ರಜಾವಾಣಿಯಲ್ಲಿ ಒಂದು ಸಣ್ಣ ಸುದ್ದಿ ಬಂತು – ‘ಇನ್ನೆರಡು ತಿಂಗಳಲ್ಲಿ ಪುಸ್ತಕ ನೀತಿ.’ ಪ್ರತಿಕ್ರಿಯೆಯಾಗಿ ನಾನು, ‘ಬರುತ್ತಿರುವುದು ಪುಸ್ತಕ ನೀತಿ ಅಲ್ಲ, ನುಂಗಪ್ಪಗಳ ಪಾಕಪಟ್ಟಿ’ ಎಂದೇ ವಾಚಕರ ವಾಣಿಗೆ ಬರೆದ ಪತ್ರದ ಯಥಾಪ್ರತಿ: ಯಾವುದೇ ಪುಸ್ತಕದ ಚರಮಗುರಿಯಾದ ಓದುಗ ಅಥವಾ ವಿಚಾರ ಸ್ವಾತಂತ್ರ್ಯವನ್ನು ಉಳಿಸಿಕೊಂಡು ಸಂಗ್ರಹಿಸುವ ಕೊಳ್ಳುಗನನ್ನು ಲೆಕ್ಕಕ್ಕೇ ತೆಗೆದುಕೊಳ್ಳದ ಈ ಪುಸ್ತಕ ನೀತಿ ನಿಜ ಅರ್ಥಕ್ಕೆ ದೊಡ್ಡ ಅವಹೇಳನ. ‘ಹರನ ಜಡೆಯಿಂದ, ಋಷಿಯ ಅಡಿಯಿಂದ’ ಎಂಬಂತೆ ಇಬ್ಬಿಬ್ಬರು ಅಧ್ಯಕ್ಷರ (ಪ್ರೊ| ಸಿದ್ಧರಾಮಯ್ಯ ಮತ್ತು ಡಾ| ಸಿದ್ಧಲಿಂಗಯ್ಯ) ಅವಧಿಯಲ್ಲಿ ಬಿಡದೆ ಸುದ್ದಿಮಾಡಿ ಬರಲಿರುವ ಈ ಭಾಗೀರಥಿ ಹೆಚ್ಚೆಂದರೆ ಕನ್ನಡ ಪುಸ್ತಕೋದ್ಯಮದ ತಟದಲ್ಲಿ ಉಕ್ಕುವ ಇಲಾಖೆಗಳ ಗಟಾರ, ಬಿಸಿ ಆರುವ ಮುನ್ನ ಬಯಲಿಗೆಳೆದ ಕರಡುಗಳು, ಅರೆ ಬೆಂದ ಬರಹಗಳನ್ನೆಲ್ಲ ಹೊರುವ ಪಾಪಧಾರಿಣಿಯಷ್ಟೇ ಆದಾಳು. ಪುಸ್ತಕ ನೀತಿಗೆ ಅಂಕೋಲದಲ್ಲಿ ಕಪುಪ್ರಾ ಆಯೋಜಿಸಿದ್ದ ಕಮ್ಮಟದಲ್ಲಿ ನಡೆದ ಅಂಕುರಾರ್ಪಣೆಯಿಂದ, ಈಚೆಗೆ ೨೦೧೦-೧೧ರ ಆರ್ಥಿಕ ವರ್ಷಾಂತ್ಯದಲ್ಲಿ ಹಳ್ಳಿ ಮೂಲೆಯವರೆಗೂ ಭ್ರಷ್ಟಾಚಾರದ ಶಾಖೆಗಳನ್ನು ಯಶಸ್ವಿಯಾಗಿ ಮುಟ್ಟಿಸಿದ ಪುಸ್ತಕ ಮೇಳದವರೆಗೂ ನಾನು ಪತ್ರ, ಪತ್ರಿಕೆ, ಬ್ಲಾಗ್‌ಗಳಲ್ಲಿ ಬರೆದವಕ್ಕೂ ಕೊಟ್ಟ ಸಂದರ್ಶನ, ಭಾಷಣಕ್ಕೂ ಪ್ರತಿಯಾಗಿ ಒಂದು ಸಾಲು, ಸೊಲ್ಲು ಬಂದದ್ದಿಲ್ಲ. (ಕ್ಷಮಿಸಿ, ವಿವರಗಳನ್ನು ಬರೆಯಲು ಇಲ್ಲಿ ಅವಕಾಶ ಸಾಲದು. ಆಸಕ್ತರು www.athree.wordpress.com ನೋಡಬಹುದು) ಈಗ ಬರಲಿರುವುದು ಪುಸ್ತಕ ನೀತಿ ಅಲ್ಲ, ಸಾರ್ವಜನಿಕ ಹಣದಲ್ಲಿ ‘ನಂಗಿಷ್ಟು-ನಿಂಗಿಷ್ಟು’ ಬಳಗ ನಡೆಸುವ ಅಣಕು ಸಂತರ್ಪಣೆಯ ಬಹುವರ್ಣ ರಂಜಿತ ಪಾಕ ಪಟ್ಟಿ ಮಾತ್ರ.

ಗಾತ್ರದಲ್ಲಿ ಇಷ್ಟು ಸಣ್ಣದನ್ನೂ ಪ್ರಜಾವಾಣಿ ತನ್ನ ೧೩-೭-೨೦೧೧ರ ವಾಚಕರ ವಾಣಿಯಲ್ಲಿ ಕತ್ತರಿಸಿ ಪ್ರಕಟಿಸಿತು. ಇಂದು ಬಹುತೇಕ ಪತ್ರಕರ್ತರು – ಕಟ್ ಆಂಡ್ ಪೇಸ್ಟ್ ಕಲಾವಿದರು. ಆದರೆ ಪದನಿಮಿತ್ತದಿಂದ (ಮತ್ತು ಮಾಧ್ಯಮಕ್ಕಿರುವ ಜನಸಂಪರ್ಕದ ಬಲದಲ್ಲಿ) ತಾವು ಸಕಲವಿಷಯ ಪಾರಂಗತರು ಎಂಬ ಹಮ್ಮು ಬಿಡದವರು. ದಿನಪತ್ರಿಕೆಯೊಂದರ ಓದುಗ ಓಲೆಯ ಸೀಮಿತ ಅವಕಾಶದ ಅರಿವಿದ್ದೇ ನಾನು ಬರೆದ ನಾಲ್ಕೇ ನಾಲ್ಕು ವಾಕ್ಯಗಳನ್ನೂ ವಿಕಲಾಂಗಗೊಳಿಸಿದರು. ಕನಿಷ್ಠ ಅಷ್ಟು ಸೂಕ್ಷ್ಮವಾಗಿ ಯಾಕೆ ಬರೆದೆ ಎಂಬುದಕ್ಕೆ ನಾನೇ ಕೊಟ್ಟಿದ್ದ ಪರೋಕ್ಷ ವಿವರಣೆ ಮತ್ತು ಹೆಚ್ಚಿನ ಓದಿಗೆ ಆಕರದ ಉಲ್ಲೇಖವನ್ನೂ ಪತ್ರಿಕೆ ಉಳಿಸಿಕೊಡಲಿಲ್ಲ. ಆದರೂ ನಾನು ಉಲ್ಲೇಖಿಸಿದ ವಿಷಯದ ಹಿಂದುಮುಂದಿನ ಅರಿವಿದ್ದ ಮತ್ತು ನನ್ನ ಹೋರಾಟದ ಜಾಡು ಚೆನ್ನಾಗಿ ತಿಳಿದಿದ್ದ ಪತ್ರಕರ್ತ ಗೆಳೆಯನೊಬ್ಬ ದೂರವಾಣಿಸಿ, ಪುಸ್ತಕ ನೀತಿಯ ರೂವಾರಿಗಳು ನನ್ನ ತಲೆಯ ಮೇಲೆ ಕವುಚಿಬೀಳುವ ಆತಂಕ ತೋಡಿಕೊಂಡರು. ಆದರೆ ನನಗೆ ಸ್ಪಷ್ಟವಿತ್ತು – ಬಹುಸಂಖ್ಯಾತರಾದ ಆ ರೂವಾರಿಗಳು ಎಂದೂ ನನ್ನ ತಾತ್ತ್ವಿಕ ನಿಲುವುಗಳಿಗೆ ಮುಖ ಕೊಟ್ಟದ್ದೇ ಇಲ್ಲ. ಅವರು ‘ಸಾರ್ವಜನಿಕದ ನೆನಪು ಕ್ಷಣಿಕ’ ಎಂಬ ಸ್ಪಷ್ಟ ಅರಿವಿನೊಡನೆ ನನ್ನ ಟೀಕೆಗಳನ್ನು ಸಗಟಾಗಿ ಉಪೇಕ್ಷಿಸಿಬಿಡುತ್ತಾರೆ. ಸಾಲದ್ದಕ್ಕೆ ವಿಶ್ಲೇಷಣೆ ಇಲ್ಲದೆ ಮುಖವಾಣಿಯಾಗಲು ಹೆಣಗುವ ಮಾಧ್ಯಮಗಳಲ್ಲಿ ಇನ್ನಷ್ಟು ಪ್ರಖರವಾಗಿ ಬೆಳಗುತ್ತಾ ಸಾಗುತ್ತಾರೆ.

ಪ್ರೊ| ಸಿದ್ಧರಾಮಯ್ಯನವರ ಅಧ್ಯಕ್ಷತೆಯ ಕಾಲದಲ್ಲಿ ನನಗೆ ತಿಳಿದಂತೆ ಕಪುಪ್ರಾ ‘ಪುಸ್ತಕಲೋಕ’ ಎನ್ನುವ ತನ್ನದೇ ಮುಖವಾಣಿಯನ್ನು (ನಿಯತಕಾಲಿಕ) ಪ್ರಕಟಿಸತೊಡಗಿತು. ಕಸಾಪ, ಕನ್ನಡ ವಿವಿ ಹಂಪಿ ಕೂಡಾ ಹೀಗೆ ತಮ್ಮದೇ ಬಣ್ಣದ ತಗಡಿನ ತುತ್ತೂರಿಗಳನ್ನು ಮಾಡಿಕೊಂಡಿವೆ. ಎಲ್ಲಾ ಪ್ರಾಧಿಕಾರ, ಅಕಾಡೆಮಿಗಳೂ ಈ ನಿಟ್ಟಿನಲ್ಲಿ ಅರೆಬರೆ ಪ್ರಯತ್ನ ನಡೆಸುತ್ತಲೂ ಇರುತ್ತವೆ. ಪತ್ರಿಕೋದ್ಯಮ ಸಂಶೋಧಕರು ಯಾರಾದರೂ ಇಂಥ ಪರಪುಟ್ಟಗಳನ್ನು ಸಾರ್ವಜನಿಕ ಉಪಯುಕ್ತತೆಯ ಒರೆಗಲ್ಲಿಗೆ ಹಚ್ಚಿದರೆ ರದ್ದಿ ಮೌಲ್ಯವೇ ಎದ್ದು ಕಂಡೀತು. ಅದಕ್ಕೂ ಮಿಗಿಲಾಗಿ ಅಂಥ ಪ್ರಕಟಣೆಗಳ ಖರ್ಚಿನ ಲೆಕ್ಕ ತೆಗೆದರೆ ಇನ್ನೊಂದೇ ‘ಗಣಿಹಗರಣ’ ಮೇಲೇಳುವುದು ಖಂಡಿತ! ನಿಜದಲ್ಲಿ ‘ಪುಸ್ತಕಲೋಕ’ ಎಂಬುದನ್ನು ಎಷ್ಟೋ ದಶಕಗಳ ಹಿಂದೆ ಮೈಸೂರು ಪ್ರಸಾರಾಂಗದ ಉಪ-ನಿರ್ದೇಶಕರಾಗಿದ್ದ ಪ್ರೊ| ಆರ್.ಎಲ್. ಅನಂತರಾಮಯ್ಯನವರು ಪೂರ್ತಿ ವೈಯಕ್ತಿಕ ನೆಲೆಯಲ್ಲೇ ಆದರೂ ಬಹು ವ್ಯಾಪಕವಾಗಿ ಮತ್ತು ನಿಜಪುಸ್ತಕಲೋಕಕ್ಕೆ ಉಪಯುಕ್ತವಾಗುವಂತೆ ಹಲವು ವರ್ಷಗಳ ಕಾಲ ನಡೆಸಿದ್ದರು. (ಆ ಕಾಲದಲ್ಲೇ ಸ.ರ. ಸುದರ್ಶನ ತಮ್ಮ ಚೇತನ ಕನ್ನಡ ಸಂಘದಿಂದಲೂ ಇಂಥದ್ದೇ ಒಂದು ಪ್ರಯತ್ನ ನಡೆಸಿದ್ದು ಅಷ್ಟೇ ಗಮನಾರ್ಹ) ಮುಂದೆ ಅದರ ಆಶಯವನ್ನು ಉಲ್ಲೇಖಿಸುತ್ತಾ ಎಲ್ಲ ಇಲಾಖೆಗಳೂ ಕೇವಲ ತಂತಮ್ಮ ಶಂಖ ಊದಿಕೊಳ್ಳಲು ಪುಸ್ತಕಲೋಕದ ಅಪಭ್ರಂಶಗಳನ್ನು ಪ್ರಕಟಿಸುತ್ತಲೇ ಬಂದಿವೆ. ಅದೇ ಹೆಸರಿನಲ್ಲಿ ಮತ್ತೆ ಪ್ರಕಟಣೆಗಿಳಿದ ಖ್ಯಾತಿಯನ್ನಷ್ಟು ಪ್ರೊ| ಸಿದ್ಧರಾಮಯ್ಯನವರಿಗೆ ಕೊಡಬಹುದಿತ್ತು. ಆದರೆ ಇವರು ಸಾರ್ವಜನಿಕ ಮರೆವನ್ನು ಇನ್ನಷ್ಟು ಅಲ್ಪಕಾಲೀನ ಮಾಡಿಕೊಂಡು ಪುಸ್ತಕಲೋಕ ಕನ್ನಡದಲ್ಲೇ ಪ್ರಥಮ ಪ್ರಯೋಗವೆಂದು ಅದರದೇ ಸಂಪಾದಕೀಯದಲ್ಲಿ ಸಾರಿಕೊಂಡರು. ವಾಸ್ತವದಲ್ಲಿ ಈ ‘ಪ್ರಥಮ’ ಕಪುಪ್ರಾಕ್ಕೆ ಮಾತ್ರ ಅನ್ವಯಿಸುತ್ತದೆ ಎಂಬುದು ಹೆಚ್ಚಿನವರಿಗೆ ಹೊಳೆಯಲಿಲ್ಲ. ವಿಚಾರಿಸಿದ್ದರೆ ಕೆಳಧ್ವನಿಯಲ್ಲಿ “ಹತಃ ಕುಂಜರ” ಹೇಳುತ್ತಿದ್ದರೋ ಏನೋ!

‘ಪುಸ್ತಕಲೋಕ’ ಕಪುಪ್ರಾಕ್ಕೂ ಪ್ರಥಮವಲ್ಲ ಎನ್ನುವ ಪ್ರಯತ್ನ ಈಗ ನಡೆದಿದೆ! ಇಂದು ಪುಸ್ತಕಲೋಕವನ್ನು ಮತ್ತೆ ಸುರುವಿನಿಂದ ಎಂಬಂತೆ, ಕಾಲಕ್ಕೆ ತಕ್ಕಂತೆ ಹೊರಗುತ್ತಿಗೆಯ ಬಲದಲ್ಲಿ ಬಹಳ ಅದ್ದೂರಿಯಿಂದ ಡಾ| ಸಿದ್ಧಲಿಂಗಯ್ಯವರು ತರುತ್ತಿದ್ದಾರೆ. ತಮಾಷೆ ಎಂದರೆ ಇವರು ಈ ಅವತಾರವನ್ನೇ ಅದ್ವಿತೀಯ ಎಂದು ಪ್ರಚುರಿಸಿಕೊಂಡಿದ್ದಾರೆ. ಮುಂದೆ ಬರಬಹುದಾದ ಅಧ್ಯಕ್ಷರುಗಳು ಭರತ ಚಕ್ರಿಯಂತೆ ಹಿಂದಿನೆಲ್ಲವನ್ನು ಅಳಿಸಿ, ಪ್ರಪ್ರಪ್ರಥಮ ಎಂದೇ ಸಾರಿಕೊಂಡರೆ ಆಶ್ಚರ್ಯವೂ ಇಲ್ಲ!

ಪತ್ರಿಕಾಲೋಕದವರೇ ಆಗಿದ್ದು, ಅದರೊಳಗಿನ ಹುಳುಕುಗಳ ಅರಿವಿರುವ ಮತ್ತು ಹಲವು ವರ್ಷಗಳಿಂದ ನನ್ನ ಸಾಕಷ್ಟು ಪರಿಚಯವಿರುವ ಮಿತ್ರರೊಬ್ಬರು ಪ್ರಜಾವಾಣಿಯಲ್ಲಿ ನನ್ನ ಪ್ರಕಟಿತ ಪತ್ರ ನೋಡಿ, “ಇವರು ಹೀಗ್ಯಾಕೆ ಬರೀತಾರೆ” ಎಂದು ಉದ್ಗರಿಸಿದರಂತೆ. ಅವರಿಗೆ ನೇರ ಉತ್ತರ ಅಲ್ಲ. ಆದರೆ ಅವರು ಧ್ವನಿಸಿದ ನನ್ನದೂ ಸಂಕಟಕ್ಕೆ ಇಲ್ಲಿ ಪತ್ರದ್ದೇ ವಿಚಾರದಲ್ಲಿ ಹೆಚ್ಚಿನ ವಿವರಗಳನ್ನು ಕೊಡಲು ಪ್ರಯತ್ನಿಸುತ್ತೇನೆ.

ತಾಳೆಗರಿಯ ಕಾಲದಲ್ಲಿ ಪ್ರತಿ ಮಾಡುವವರಿಂದ ತೊಡಗಿ ಮುದ್ರಣ ಯಂತ್ರದವರೆಗೆ ಬರಹಗಳು ಬಹುಸಂಖ್ಯೆಯಲ್ಲಿ ಬಂದಲ್ಲೆಲ್ಲಾ ಪುಸ್ತಕ ಹೆಚ್ಚೆಚ್ಚು ಓದುಗರನ್ನು ಮುಟ್ಟುವ ಹಂಬಲವೇ ಕೆಲಸ ಮಾಡುತ್ತಿತ್ತು. ಈ ವ್ಯವಸ್ಥೆಯ ಅನಿವಾರ್ಯ ವಾಣಿಜ್ಯ ಹೊರೆಯನ್ನು ಮನಗಂಡೇ ಐತಿಹಾಸಿಕ ಕಾಲದಲ್ಲಿ ಸ್ಥಿತಿವಂತರು ಹಣಕೊಟ್ಟು ಪ್ರತಿಕಾರರನ್ನು ಸಾಕಿದ್ದು ಓದಿದ್ದೇವೆ. ಆ ಪರಂಪರೆಯಲ್ಲೇ ಹಿಂದೆ ಮೈಸೂರಿನ ಮಹಾರಾಜರು ವೇದಪುರಾಣಗಳನ್ನೂ ಮತ್ತೆ ಪ್ರಜಾಸತ್ತಾತ್ಮಕ ಸರಕಾರ ಬಂದ ಮೇಲೆ ನನಗೆ ತಿಳಿದಂತೆ ಮೊದಲ ಬಾರಿಗೆ ಕೆಂಗಲ್ ಹನುಮಂತಯ್ಯನವರ ಕಾಲದಲ್ಲಿ ಕುಮಾರವ್ಯಾಸ ಭಾರತದಂಥ ಬಹುಜನ ಅಪೇಕ್ಷಿತ ಕೃತಿಗಳನ್ನೂ ಕಡಿಮೆ ಬೆಲೆಗೆ ಪ್ರಕಟಿಸಿದ್ದು ಕಾಣುತ್ತೇವೆ. ಇವರಿಗೆಲ್ಲ ಇದ್ದ ಏಕೈಕ ಲಕ್ಷ್ಯ ಸರಸ್ವತೀ ಪೂಜೆ ಅಂದರೆ ವಿದ್ಯಾಪ್ರಸರಣ; ಓದುಗನ ಕೈಗೆ ಮುಟ್ಟಿಸುವುದು.

[ಉಪಕಥೆಗೆ ಕ್ಷಮೆಯಿರಲಿ: ಹೆಚ್ಚಾಗಿ ತಾವೇ ಬರೆದು, ಅಲ್ಲದಿದ್ದರೂ ತಮ್ಮದೇ ಸೀಮಿತ ಆರ್ಥಿಕ ವ್ಯವಸ್ಥೆಯಲ್ಲಿ ಎಲ್ಲೋ ಮುದ್ರಿಸಿ, ಪ್ರಕಟಿಸಿ, ಪುಸ್ತಕದ ಹೊರೆ ಹೊತ್ತು ಊರೂರಿನ, ಮನೆಮನೆಯ ತಿರುಗಾಟ ನಡೆಸಿದ ಮೊದಲ ತಲೆಮಾರಿನ ‘ಪ್ರಕಾಶಕ’ರಾದ ಗಳಗನಾಥ, ಜಿಬಿ ಜೋಶಿ, ಗೋವಿಂದರಾವ್, ಡಿವಿಕೆ ಮೂರ್ತಿ, ಕೂಡಲಿ ಚಿದಂಬರರೇ ಮುಂತಾದವರು ತಮ್ಮ ಕನಿಷ್ಠ ಖರ್ಚನ್ನು ಮರಳಿ ಗಳಿಸುತ್ತಾ ಆಧುನಿಕ ಪುಸ್ತಕರಂಗದ ಅಡಿಪಾಯ ಇಟ್ಟದ್ದು ಸದಭಿರುಚಿಯ ಓದುಗರ ಮಹಾಮನೆ ಕಟ್ಟುವ ಆಶಯದಲ್ಲೇ. ಇವರು ಯಾರೂ ಬಹುಸ್ಥಿತಿವಂತರಾಗಿರಲಿಲ್ಲ. ಆದರೆ ಅನ್ಯ ಉದ್ಯಮಶೀಲತೆಗಿಳಿದಿದ್ದರೆ ಕೈ ಸೋಲಬಹುದಾಗಿದ್ದ ಹೆಡ್ಡರೂ ಅಲ್ಲ. ತೋರಗಾಣ್ಕೆಯಲ್ಲಿ ಪುಸ್ತಕರಂಗದ ಆ ಆರಂಭಿಕರಿಗೆ ಓದಿನ ಪರಿಣಾಮದ ಹೊರತು (ಭಾಷೆ, ಸಂಸ್ಕೃತಿ, ದೇಶದ ಕುರಿತು ಜಾಗೃತಿ ಇತ್ಯಾದಿ) ಅನ್ಯ ಉದ್ದೇಶಗಳೇನೂ (ಮುಖ್ಯವಾಗಿ ವಾಣಿಜ್ಯಮುಖ) ಇದ್ದಂತಿರಲಿಲ್ಲ. ಹಾಗೆಂದು ಅವರ ಆದರ್ಶಗಳನ್ನು ಮುಂದುವರಿದ ತಲೆಮಾರಿಗೆ ಅನ್ವಯಿಸಲಾಗುವುದಿಲ್ಲ ಎನ್ನುವುದನ್ನು ಸಖೇದ ಹೇಳಲೇ ಬೇಕು ಮತ್ತು ಇದನ್ನು ಒಂದು ಮಿತಿಯಲ್ಲಿ ಕಾಲಧರ್ಮ ಎನ್ನಲೂಬಹುದು. ವಿವರಗಳು ಇಲ್ಲಿ ಅಪ್ರಸ್ತುತ.]

ನನಗೆ ತಿಳಿದಂತೆ ೧೯೭೦ರ ದಶಕದವರೆಗೂ ಪ್ರಜಾಸತ್ತಾತ್ಮಕ ಸರಕಾರಕ್ಕೆ ಸಾರ್ವಜನಿಕ ವಿದ್ಯೆ ಕೊಡುವುದು ಪ್ರಥಮಾದ್ಯತೆಯಲ್ಲಿತ್ತು. ಅದಕ್ಕೆ ಪೂರಕವಾಗಿ ಒದಗುವ ಪುಸ್ತಕಗಳ ಕುರಿತಂತೆ ಗುಣ ಮತ್ತು ಧನ ಮಟ್ಟದಲ್ಲಷ್ಟೇ ಎಚ್ಚರವನ್ನು ತಾಳಿತ್ತು. ಸರಕಾರದ ಅಂಗೀಕೃತ ಪುಸ್ತಕ ಮಾರಾಟಗಾರ, ಪಠ್ಯ ಆಯ್ಕೆಗೊಂದು ಸಮಿತಿ, ಗ್ರಂಥಾಲಯಗಳ ವಿಸ್ತರಣೆ, ದೊಡ್ಡ ಖರೀದಿ ನೆಲೆಯಲ್ಲಿ ರಿಯಾಯ್ತಿ ದರಪಡೆದು ಹೆಚ್ಚಿನ ಪುಸ್ತಕ ಸಂಗ್ರಹಿಸುವ ಉದ್ದೇಶಗಳೆಲ್ಲಾ ಚೂಪು ಪಡೆಯುತ್ತಿದ್ದದ್ದು ಓದುಗನ ಉಪಯುಕ್ತತೆಗೇ. ಅಲ್ಲಿ ಭ್ರಷ್ಟತೆ ಇರಲಿಲ್ಲವೆಂದಲ್ಲ. ಆದರೆ ಪ್ರಕಾಶಕನ ನೈತಿಕತೆ ಪುಸ್ತಕದ ಚರಮ ಗುರಿಯಾದ ಓದುಗ ಅಥವಾ ವಿಚಾರ ಸ್ವಾತಂತ್ರ್ಯವನ್ನು ಉಳಿಸಿಕೊಂಡು ಪುಸ್ತಕ ಸಂಗ್ರಹಿಸುವ ಕೊಳ್ಳುಗನನ್ನೂ ಉಪೇಕ್ಷಿಸುವಷ್ಟು ಬೆಳೆದಿರಲಿಲ್ಲ. ‘ವೆಚ್ಚಕ್ಕೆ ಹೊನ್ನುಂಟು, ಚಚ್ಚಿ ಹಾಕಲು ಅಚ್ಚುಕೂಟಗಳುಂಟು, ಕಚ್ಚಿ ಹಿಡಿಯಲು ನೂರೆಂಟು ಸ್ಕೀಮುಗಳುಂಟು, ನೀನ್ಯಾರಿಗಾದೆಯೋ ಎಲೆ ಓದುಗಾ’ ಎನ್ನುವ ವರ್ತಮಾನದ ಸೂತ್ರ ರೂಪುಗೊಂಡಿರಲಿಲ್ಲ!

ಮೊನ್ನೆ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರೊಬ್ಬರು ಹೀಗೇ ನನ್ನಂಗಡಿಗೆ ಬಂದಾಗ ತೋಡಿಕೊಂಡರು, “ಏಳು ತರಗತಿಗಳಿಗೆ ಅಧಿಕೃತವಾಗಿ ನಾವು ಮೂವರು ಶಿಕ್ಷಕರಿದ್ದೆವು. ನಾನು ಊರ ದಾನಿಗಳನ್ನು ಹಿಡಿದು, ಕೈಯಿಂದಲೂ ಹಣ ಹಾಕಿ ತತ್ಕಾಲೀನ ಹೆಚ್ಚುವರಿ ಟೀಚರುಗಳನ್ನು ಗೊತ್ತುಮಾಡಿಕೊಂಡು ಸುಧಾರಿಸುತ್ತಿದ್ದೆ. ಈಗ ‘ವಿದ್ಯಾರ್ಥಿ ಸಂಖ್ಯೆಗೆ ಅನುಗುಣವಾಗಿ ಶಿಕ್ಷಕರು’ ಎಂಬ ನಿಯಮ ಜ್ಯಾರಿಗೊಳಿಸಿ, ಇಬ್ಬರನ್ನು ವರ್ಗಾಯಿಸಿದ್ದಾರೆ. ಈಗ ಏಳಕ್ಕೂ ನಾನೊಬ್ಬನೇ ಉಪಾಧ್ಯಾಯ!” ಇಂದು ನಿಸ್ಸಂದೇಹವಾಗಿ ಮೌಲ್ಯಗಳಲ್ಲಿ ಶೈಥಿಲ್ಯ ಬಂದಿದೆ. ಪ್ರಜಾಸತ್ತಾತ್ಮಕ ಸರಕಾರ ಎಂದೆನ್ನಿಸಿಕೊಂಡರೂ ಸಮಷ್ಟಿಯ ವಿದ್ಯೆಗಾಗಿ ಘನ ನಿಲುವುಗಳನ್ನು ತಳೆಯುವುದಕ್ಕಿಂತ ಜನಪ್ರಿಯ ಅದೂ ತತ್ಕಾಲೀನ ಸಲಕರಣೆಗಳಲ್ಲೇ ಕಳೆದುಹೋಗಿವೆ. ಹಾಲು, ಮೊಟ್ಟೆಯಿಂದ ತೊಡಗಿದ್ದು ಬಿಸಿಯೂಟದ ಹೊರಗುತ್ತಿಗೆವರೆಗೆ ಬೆಳೆದು ನಿಂತಿದೆ. ಬಸ್ ಪಾಸಿನಿಂದ ತೊಡಗಿದ್ದು ಸೈಕಲ್ ಕಾರ್ಖಾನೆಗಳನ್ನೇ ಖರೀದಿಸುವ ಮಟ್ಟಕ್ಕೆ ಮುಟ್ಟಿದೆ. ಸಾಕಷ್ಟು ಸಂಖ್ಯೆಯಲ್ಲಿ ಯೋಗ್ಯ ಉಪಾಧ್ಯಾಯರುಗಳು ಮತ್ತು ಕಲೆತು ಕಲಿಯಲು ಸೂಕ್ತ ಆಶ್ರಯದಂತ ಮೂಲಭೂತ ಸವಲತ್ತುಗಳನ್ನು ಒದಗಿಸುವುದಿರಲಿ, ಇದ್ದವನ್ನು ಊರ್ಜಿತದಲ್ಲಿಡಲೂ ಸರಕಾರಕ್ಕೆ ಯೋಜನೆಗಳೇ ಇಲ್ಲ. ಈ ಬೆಳಕಿನಲ್ಲಿ ಪುಸ್ತಕಲೋಕಕ್ಕೊಂದು ಇಣುಕುನೋಟ ಹಾಕಿ.

ಶಾಲೆಗಳಲ್ಲಿ ಎರಡೋ ಮೂರೋ ಭಾಷಿಕ (ಕನ್ನಡ, ಇಂಗ್ಲಿಶ್ ಮತ್ತು ಹಿಂದಿ) ಹಾಗೇ ಎರಡೋ ಮೂರೋ ವಿಷಯಕ (ಗಣಿತ, ವಿಜ್ಞಾನ ಮತ್ತು ಸಮಾಜ) ಪಠ್ಯಗಳಿಗೆ ಸೀಮಿತವಾಗಿದ್ದ ಪುಸ್ತಕರಂಗ ಅಸಾಧ್ಯ ಬೆಳವಣಿಗೆ ಕಂಡಿದೆ. ಸಕಾಲದಲ್ಲಿ ಮೂಲಭೂತ ಪಠ್ಯಗಳನ್ನು ಒದಗಿಸುವುದೊಂದು ಬಿಟ್ಟು, ಪೂರಕ ಪಠ್ಯ, ಗ್ರಂಥಾಲಯ, ಗಣಕ, ಅಂತರ್ಜಾಲ ಸಂಪರ್ಕ ಇತ್ಯಾದಿ ವಾಣಿಜ್ಯ ಆಸಕ್ತಿಗಳು ಇಲ್ಲಿ ಹೆಚ್ಚುತ್ತಲೇ ಇವೆ. ಹೀಗೆ ವಿದ್ಯಾರಂಗವೂ ಸೇರಿದಂತೆ ಪುಸ್ತಕ ಜಗತ್ತಿನ ಎಲ್ಲಾ ಅವಕಾಶಗಳ ಅರಿವಿದ್ದೂ ಅವನ್ನು ಲೆಕ್ಕಕ್ಕೇ ತೆಗೆದುಕೊಳ್ಳದ ಈ ಕಪುಪ್ರಾ ಪ್ರಣೀತ ಪುಸ್ತಕ ನೀತಿ ನಿಜ ಅರ್ಥಕ್ಕೆ ದೊಡ್ಡ ಅವಹೇಳನ.

‘ಅಸಹಾಯಕ ಲೇಖಕ-ಪ್ರಕಾಶಕ’ರಿಗೆ ಅಂದರೆ ಸೃಜನಶೀಲ ಪ್ರತಿಭೆಗಳಿಗೆ ಪ್ರೋತ್ಸಾಹ ಮತ್ತು ಸದಭಿರುಚಿಯ ಓದುಗರಿಗೆ ಮುಟ್ಟಿಸುವ ಉದಾತ್ತ ಉದ್ದೇಶಗಳೇ ಎಲ್ಲಾ ಪ್ರಸಾರಾಂಗ, ಇಲಾಖೆ, ಅಕಾಡೆಮಿ, ಪ್ರಾಧಿಕಾರ, ಪರಿಷತ್ತುಗಳ (ಹುಟ್ಟು, ಅನುದಾನ, ಪುರಸ್ಕಾರ, ಬಹುಮಾನ, ಸಗಟು ಖರೀದಿ ಮುಂತಾದ ಕಲಾಪಗಳದ್ದೂ) ಅಡಿಪಾಯ. ಅವುಗಳನ್ನು ಮೌಲಿಕ ನೆಲೆಯಲ್ಲಿ ಸಮರ್ಥಿಸಿಕೊಳ್ಳುವಂತೆ, ಪಾರದರ್ಶಕವಾಗಿಯೂ ಇರುವಂತೆ ಸಮಿತಿಗಳು ಮತ್ತವುಗಳ ನಿರ್ಧಾರಗಳು ಪ್ರಾಥಮಿಕ ಹಂತದಲ್ಲಿ ಕಂಗೊಳಿಸುವುದೂ ಉಂಟು. ಆದರೆ ಮುಂದುವರಿಕೆಯಲ್ಲಿ ಪುಢಾರೀಕರಣ ಒಂದೇ ಊರ್ಜಿತವಾಗಿ ಸಾರ್ವಜನಿಕ ವಿನಿಯೋಗಕ್ಕೆ ಈ ಎಲ್ಲಾ ಸಂಸ್ಥೆಗಳೂ ಮದ್ದಿಲ್ಲದ ಮಹಾಸೋರು ಹುಣ್ಣುಗಳಾಗಿವೆ. ಇದಕ್ಕೆರಡು ಉದಾಹರಣೆಗಳು.

ಕಪುಪ್ರಾ ರೂಪುಗೊಳ್ಳುವ ಮುನ್ನ ಮತ್ತು ಪ್ರಥಮಾಧ್ಯಕ್ಷರಾಗಿಯೂ ಕಂಗೊಳಿಸಿದವರು ಪ್ರೊ|ಎಲ್ಲೆಸ್ ಶೇಷಗಿರಿರಾವ್. ಆದರೆ ಅವರ ತಂಡ ಆಶಯಗಳಿಗೆ ಖಚಿತ ರೂಪು ಕೊಡುವ ಮುನ್ನ, ಅಂದರೆ ಅಕಾಲಿಕವಾಗಿ ರಾಜೀನಾಮೆ ಕೊಟ್ಟು ಹೊರನಡೆಯುವಲ್ಲಿಂದ ಕಪುಪ್ರಾ ಇನ್ನೊಂದೇ ರಾಜಕೀಯ ಸಂತ್ರಸ್ತರ ಗಂಜಿಕೇಂದ್ರವಾಗಿ, ಇನ್ನೂ ಸೌಮ್ಯವಾಗಿ ಹೇಳುವುದಾದರೆ ಪರೋಕ್ಷ ಓಲೈಕೆಯ ನೆಲೆಯಾಗಿ ಖಾಯಂ ಆಯಿತು! ಸಹಜವಾಗಿ ಮತ್ತೆ ಬಂದ ಐದಾರು ಅಧ್ಯಕ್ಷರು ಮತ್ತು ಅವರ ಸದಸ್ಯ ತಂಡಗಳು ವೈಯಕ್ತಿಕ ನೆಲೆಯಲ್ಲಿ ಏನಿದ್ದರೂ ಕಾರ್ಯರಂಗದಲ್ಲಿ ಯಥಾಸ್ಥಿತಿವಾದದಿಂದ ಎಂದೂ ಮೇಲೆ ಏಳಲೇ ಇಲ್ಲ! (ಇದರ ಕುರಿತು ಕೆಲವು ಉದಾಹರಣೆಗಳಿಗೆ ಇಲ್ಲೇ ನನ್ನ ಹಳೇ ಕಡತಗಳನ್ನೂ ನನ್ನದೇ ‘ಪುಸ್ತಕ ಮಾರಾಟ ಹೋರಾಟ’ ಪುಸ್ತಕವನ್ನೂ ನೋಡಬಹುದು)

ಕಪುಪ್ರಾದ ಸಗಟು ಖರೀದಿಯ ಕುರಿತಂತೆ ಅಹವಾಲುಗಳು ಹೆಚ್ಚಿದ ಕಾಲಕ್ಕೆ ಸತ್ಯನಿಷ್ಠುರಿ ಪ್ರೊ| ಜಿ.ಎಚ್ ನಾಯಕರ ಹೆಸರಿನಲ್ಲಿ ಆಯ್ಕಾಸಮಿತಿಯನ್ನು ಹೊರಡಿಸಿದರು. ಸಮಿತಿಯ ನಿರ್ಧಾರ ಪುಸ್ತಕ-ಮಾಫಿಯಾದ ಹಿತಾಸಕ್ತಿಗೆ ಸಹಜವಾಗಿ ಮಾರಕವಾದಾಗ ಅಧಿಕೃತ ಕಲಾಪಗಳಿಂದ ಹೊರಗೆ ಅಸಾಂವಿಧಾನಿಕ ಘೇರಾವೋ ಮತ್ತು ಬೊಬ್ಬೆಗಳೆದ್ದವು. ಪ್ರೊ|ನಾಯಕರ ಬೆನ್ನಿಗೆ ಕಪುಪ್ರಾ ನಿಲ್ಲಲಿಲ್ಲ. ಅವರು ಹೇಸಿಕೊಂಡು ರಾಜೀನಾಮೆ ಕೊಟ್ಟು ಹೊರ ಬಂದರು. ಕಪುಪ್ರಾ ಪಾರದರ್ಶಕತೆ, ಪ್ರಾಮಾಣಿಕತೆ ಕೇಳಿದವರ ತಾಳ್ಮೆ ಖರೀಸಿತ್ತು. ಮತ್ತೆ ‘ವ್ಯವಹಾರಜ್ಞಾನ’ ಇರುವ ಆಯ್ಕಾ ಸಮಿತಿಯೇ ರೂಪುಗೊಂಡಿರಬೇಕು. ಭಕ್ತಿ ಇಲ್ಲದ ಭಜನೆಯಂತೆ, ಗುಣವಿಲ್ಲದ ಪೋಷಣೆಯಂತೆ ಕಪುಪ್ರಾ ಸಗಟು ಖರೀದಿ ನಡೆದೇ ಇದೆ; ಸಾಮಾಜಿಕ ವೆಚ್ಚದಲ್ಲಿ!

ಪ್ರೊ| ಜಿ.ಎಸ್. ಸಿದ್ಧರಾಮಯ್ಯನವರ ಅಧ್ಯಕ್ಷತೆಯ ಕಾಲದಲ್ಲಿ, ಅಂಕೋಲದಲ್ಲಿ ಕಪುಪ್ರಾ ನಡೆಸಿದ ಒಂದು ದಿನದ ಕಮ್ಮಟಕ್ಕೆ ನನ್ನನ್ನು ಒತ್ತಾಯಪೂರ್ವಕವಾಗಿ ಕರೆಸಿಕೊಂಡಿದ್ದರು. (ನನಗೆ ಕಟುಟೀಕಾಕಾರನೆಂಬ ಹೆಸರಿತ್ತು) ನನಗೆ ತಿಳಿದ ಮಟ್ಟಿಗೆ ಅದು ‘ಪುಸ್ತಕ ನೀತಿ’ಯ ಅಂಕುರಾರ್ಪಣ ಸಭೆ. ಆದರೆ ಬಂದವರಾದರೂ ಎಂಥವರು! ಎರಡು ಕಾಲವಿಹಾರಿಗಳು – (double standard ?) ಐತಿಹಾಸಿಕ ಕಾಲದಲ್ಲಿ ರಾಜಮಹಾರಾಜರುಗಳು ಕವಿ ಕಲಾವಿದರ ಪೋಷಣೆ (ಏನು ಅನಿವಾರ್ಯತೆಯೋ ಪಾಪ!) ಮಾಡಿದಂತೇ ಸರಕಾರ ಮಾಡಬೇಕು ಎನ್ನುವುದು ಇವರ ಸ್ವಾರ್ಥದ ಸ್ತರ. ಅಕಾಲಿಕ ಮೌಲ್ಯಪೋಷಣೆಯನ್ನೇ ಒಪ್ಪಿ ವರ್ತಮಾನಕ್ಕೆ ಅಳವಡಿಸುವಾಗ ವ್ಯಕ್ತಿ ಸ್ವಾತಂತ್ರ್ಯದ (‘ನಮ್ಗೂ ಹಕ್ಕಿಲ್ವಾ’ ಎನ್ನುವ ಸ್ವಾರ್ಥಮೂಲವಾದ ಪ್ರಜ್ಞೆ) ಮಾತು ಎಸೆಯುವುದು ಅವರ ಎರಡನೇ ಮುಖ! ಭಾಗವಹಿಸಿದವರಲ್ಲಿ ಹೆಚ್ಚಿನವರು ಲೇಖಕ-ಪ್ರಕಾಶಕರು ಅಥವಾ ಸರಕಾರೀ ಪುಸ್ತಕೋದ್ಯಮದಿಂದ ಒಂದಲ್ಲ ಒಂದು ರೀತಿಯಲ್ಲಿ ಪ್ರಯೋಜನಕ್ಕೆ ಹೊಂಚುವವರೇ ಆಗಿದ್ದರು; ಸಗಟು ಖರೀದಿಗೆ ಹುಟಿದವರು! ಇವರು ಡೊಂಕುಬಾಲದ ನಾಯಕನನ್ನು ಕನಕದ ಕನಸಿನೊಡನೇ ಅನುಸರಿಸುತ್ತಾರೆ. ರಾಜಪೋಷಾಕಿನ ಮೇಲೆ ಹರಕು ಶಾಲು ಹೊದ್ದವರನ್ನು ಓಲೈಸುವಲ್ಲಿ ಇವರು ಅತ್ಯುತ್ಸಾಹಿಗಳು. ನಿತ್ಯದಲ್ಲಿ ಎಂಜಲು ಕೈಯಲ್ಲಿ ಕಾಗೆ ಓಡಿಸದಿದ್ದರೂ ಹೆಲಿಕಾಪ್ಟರಿನಲ್ಲಿ ಬಂದವರಿಗೆ ಚಾಪೆ ಹಾಸಿ, ಗಂಗಾಳದಲ್ಲಿ ರಾಗಿ ಮುದ್ದೆ ತಿನ್ನಿಸುವವರು – ಭಡವರು. ಸಹಜವಾಗಿ ಅಂಕೋಲದ ಕಮ್ಮಟದಲ್ಲಿ ಉಲ್ಲೇಖಗೊಂಡ ಮುಖ್ಯ ವಿಚಾರಗಳೆಲ್ಲಾ ಸಗಟು ಖರೀದಿಯ ಪರಿಧಿಯನ್ನು ಮೀರಿ ಬೆಳೆಯಲೇ ಇಲ್ಲ.

ಕಮ್ಮಟದ ಮೊದಲ ಗೋಷ್ಠಿಗಳು ಸರಕಾರೀ ಯಂತ್ರದ ನಟ್ಟುಬೋಲ್ಟುಗಳಾದ (ಸ್ವತಂತ್ರವಾಗಿ ಯೋಚಿಸುವುದನ್ನೂ ಮರೆತ) ಇಲಾಖಾ ವರಿಷ್ಟರ, ಪ್ರಸಾರಾಂಗದ ಮುಖ್ಯರ ‘ಪ್ರಬಂಧ’ ಮಂಡನೆಗೆ ಸೀಮಿತವಿತ್ತು. ಸವಲತ್ತುಗಳಿಗೆ ಹೊಂಚುವಲ್ಲಿ ಇವರ ಆಯಾಮ ಬೇರೆಯಾದುದರಿಂದ, ಮಂಡನೆಯ ಬಹ್ವಂಶ ಖಾಸಗಿ ಕಂಪೆನಿಗಳ ಸರ್ವಸದಸ್ಯರ ಸಭೆಯಲ್ಲಿ ವಿಸ್ತರಿಸಿಕೊಳ್ಳುವ ‘ಸಾಧನಾಪಟ್ಟಿಯೇ’ ಆಗಿರುತ್ತಿತ್ತು. ಏಕಮುಖ ಕೊರೆತಗಳ ಕೊನೆಯಲ್ಲಿ ಚರ್ಚೆಗೆ ಅವಕಾಶವೇನೋ ಕೊಡುತ್ತಿದ್ದರು. ಆದರೆ ಆ ಮಂಡನೆಗಳು ಪುಸ್ತಕೋದ್ಯಮದ ಮೂಲ ಆಶಯವಾದ ‘ಓದುಗನಿಗೆ ಪುಸ್ತಕ’ವನ್ನು ಮುಟ್ಟುತ್ತೇ ಇರಲಿಲ್ಲವಾಗಿ ನನಗೆ ಪ್ರತಿಕ್ರಿಯಿಸಲು ಅವಕಾಶವೇ ಒದಗಲಿಲ್ಲ. ಹಾಗೇ ನಾನು ಮೀಸೆ ತೂರಿದ್ದರೆ ಸಭಾ ಮರ್ಯಾದೆಯನ್ನು ಭಂಗಪಡಿಸಿದಂತೋ ದುರುದ್ದೇಶಪೂರಿತ ವಿಷಯಾಂತರವಾಗಿಯೋ ಕಾಣಿಸುವ ಅಪಾಯವಿತ್ತು. ಚೌಕಟ್ಟೇ ಡೊಂಕಾದರೆ ಚಿತ್ರ ಶೋಭಿಸುವುದುಂಟೇ!

ದಿನದ ಕೊನೆಯಲ್ಲಿ, ಮುಕ್ತ ಅಭಿಪ್ರಾಯ ಮಂಡನೆಗೊಂದು ಔಪಚಾರಿಕ ಅವಕಾಶ ಇತ್ತು. ಆದರೆ ಎಲ್ಲಾ ಪ್ರಾಯೋಜಿತ ಅಥವಾ ಅನುದಾನಿತ ಗೋಷ್ಠಿಗಳಿಗೆ ಮಂಡೆಗಿಂತ ಮುಂಡಾಸು ದೊಡ್ಡ ಎಂಬಂತೆ ಬಡಿದ ಶಾಪ – ಉದ್ಘಾಟನೆ ಮತ್ತು ಸಮಾರೋಪ ಎಂಬ ನವವೈದಿಕಗಳು. ಸಹಜವಾಗಿ ಇಲ್ಲಿ ಸಮಾರೋಪ ಸಮಾರಂಭಕ್ಕೆ ಮುಹೂರ್ತ ಮೀರುವ ಭಯ ಭಜಕರನ್ನು ಕಾಡುತ್ತಿತ್ತು! ಸಹಜವಾಗಿ ಅಭಿಪ್ರಾಯ ಮಂಡಿಸಲು ಮುಂದೆ ಬಂದವರಿಗೆ ಸೂಕ್ಷ್ಮವಾಗಿ ಮಾತಾಡುವ ಒತ್ತಡದೊಡನೆ, ಚರ್ಚೆಯ ಅವಕಾಶವನ್ನೇ ನಿರಾಕರಿಸಲಾಗಿತ್ತು! ಆಗ ನಾನು ನೇರ ಅಲ್ಲಿನ ಕಲಾಪದ ಔಚಿತ್ಯವನ್ನೇ ಪ್ರಶ್ನಿಸಿದೆ. (ವಿವರಗಳಿಗೆ ಇಲ್ಲೇ ಜೂನ್ ೧೮, ೨೦೦೮ರ ಶೀರ್ಷಿಕೆ, ‘ಅನ್ಯತ್ರ ಮೋಸಹೋಗಬೇಡಿ, ನಮ್ಮಲ್ಲಿಗೆ ಬನ್ನಿ’ ನೋಡಿ) ನನ್ನ ಮಾತುಗಳು ಒಂದೇ ವಾಕ್ಯದಲ್ಲಿ ಹೇಳುವುದಾದರೆ, ಪಕ್ಷ ರಾಜಕಾರಣದ ಫಲವಾಗಿ ರೂಪುಗೊಂಡ ಸರಕಾರದ ಅಧೀನದಲ್ಲಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೂ ಅಡಿಯಾಳಾದ ಒಂದು ಇಲಾಖೆಯಷ್ಟೇ ಆಗಿರುವ ಕಪುಪ್ರಾ ರೂಪಿಸುವ ‘ಪುಸ್ತಕ ನೀತಿ’ಗೆ ಕಚ್ಚಲು ಹಲ್ಲಿಲ್ಲ, ಒಟ್ಟಾರೆ ಕನ್ನಡ ಪ್ರಪಂಚವನ್ನು ಮುಟ್ಟುವ ವ್ಯಾಪ್ತಿ ಮೊದಲೇ ಇಲ್ಲ. (ಸಂಸ್ಕೃತಿ ಇಲಾಖೆಯ ಗುಮಾಸ್ತನೆದುರು ಹಲ್ಲುಗಿಂಜುವ ಕಪುಪ್ರಾ ಅಧ್ಯಕ್ಷರನ್ನು ಕಂಡವರಿದ್ದಾರೆ. ನನ್ನಂಗಡಿಗೆ ಬಂದಾಗ ಏನೂ ಅಲ್ಲದ ನನ್ನ ಬಳಿಯೂ “ಕ್ಯಾಬಿನೆಟ್ ದರ್ಜೆಯಿಂದ ಕಪುಪ್ರಾ ಅಧ್ಯಕ್ಷಪದವಿಯನ್ನು ಇಳಿಸಿಬಿಟ್ಟರು ಸಾರ್” ಎಂದು ಗೋಳಾಡಿದ ಅಧ್ಯಕ್ಷರನ್ನು ನಾನೇ ಕಂಡಿದ್ದೇನೆ. ಕಪುಪ್ರಾದೊಳಗೂ ಅಧ್ಯಕ್ಷನೋ ಸಮಿತಿಯೋ ಉದಾತ್ತತೆಯಲ್ಲಿ ತೆಗೆದುಕೊಂಡ ಯಾವುದೇ ನಿಲುವನ್ನು ಬಗಲಲ್ಲಿ ಕೂತ ರಿಜಿಸ್ಟ್ರಾರ್ ಎನ್ನುವ ಕುಲಪುರೋಹಿತ ‘ಆಡಿಟ್ ಆಬ್ಜೆಕ್ಷನ್’ ಎಂಬ ಮಂತ್ರದಂಡದಿಂದ ಯಾವತ್ತೂ ನಿರ್ವೀರ್ಯಗೊಳಿಸಬಲ್ಲ ಎನ್ನುವುದೂ ಮರೆಯಲಾಗದು) ‘ಮುಕ್ತ ವಿಚಾರ’ ಮಂಡನೆಯ ಮಾತುಗಳಿಗೊಂದು ತಾರ್ಕಿಕ ಕೊನೆ ಕೊಡುವ ಅಧ್ಯಕ್ಷ ಭಾಷಣವನ್ನು ಸ್ವತಃ ಕಪುಪ್ರಾದ ಅಧ್ಯಕ್ಷರೇ ಮಾಡಿದರು. ಆದರೆ ಅವರು ನಾನೆತ್ತಿದ ವಿಷಯದ ಹತ್ತಿರವೂ ಸುಳಿಯಲಿಲ್ಲ ಎನ್ನುವುದು ಅಜ್ಞಾನವೋ ಜಾಣತನವೋ ಅಂದು ನನಗೆ ತಿಳಿಯಲಿಲ್ಲ.

ಅಂಕೋಲದಲ್ಲಿ ನಾನು ಹೇಳಿದ ವಿಚಾರಗಳು ಗಾಳಿಗೆ ಸೇರಿಹೋಗದಂತೆ ಮುಂದೆ ‘ಬೆಕ್ಕಿಗೆ ಗಂಟೆ ಕಟ್ಟುವವರು ಯಾರು’ ಎಂದೇ ಹೆಸರಿಸಿ, ವಿಸ್ತಾರ ಲೇಖನವನ್ನೇ ಮಾಡಿ, ಅಧ್ಯಕ್ಷರಿಗೂ ಹಲವು ವಿಚಾರವಂತರಿಗೂ ಪತ್ರಿಕೆಗಳಿಗೂ ಕಳಿಸಿಕೊಟ್ಟೆ. ಕಪುಪ್ರಾದ ಮುಖವಾಣಿಯಾಗಿ ಹೊರಟ ಪುಸ್ತಕಲೋಕದಲ್ಲಿ ಪ್ರಕಟಿಸಿ ಚರ್ಚೆಗೆ ಒಡ್ಡಲೂ ಸೂಚಿಸಿದೆ. ಬುದ್ಧಿಪೂರ್ವಕವಾಗಿ ಪುಸ್ತಕೋದ್ಯಮವನ್ನೇ ವೃತ್ತಿಯಾಗಿ ನೆಚ್ಚಿ, ಅದನ್ನು ಮೂವತ್ತಕ್ಕೂ ಮಿಕ್ಕು ವರ್ಷ ಸಾಮಾಜಿಕ ಜವಾಬ್ದಾರಿಯೊಡನೇ ನಡೆಸಿದವನಿಗೆ ಕೇವಲ ಪದನಿಮಿತ್ತದಲ್ಲಿ ಪುಸ್ತಕೋದ್ಯಮದ ಆಗುಹೋಗುಗಳನ್ನು ನಿರ್ದೇಶಿಸುವವರಿಂದ ಎಲ್ಲಕ್ಕೂ ಜಾಣ ಮೌನವೇ ಉತ್ತರ. ಜಾಹೀರಾತುಗಳು, ವಾರಕ್ಕೊಮ್ಮೆ (ಕೆಲವರು ಪಕ್ಷಕ್ಕೊಮ್ಮೆ) ಬಲವಂತದ ಬಸಿರಿಳಿಸುವವರ ಅಂಕಣ ಮತ್ತು ಪ್ರಾಯೋಜಿತ ಸುದ್ದಿಗಳ ನಡುವೆ ಪ್ರಜಾಪ್ರಭುತ್ವದ ಕಾವಲುಗಾರರೆಂದೇ ಕರೆಸಿಕೊಳ್ಳುವ ಪತ್ರಿಕೆಗಳಿಗೆ ಈ ಲೇಖನ ಹಾಕುವುದಕ್ಕೆ ಜಾಗ ಉಳಿದಿರಲಾರದು ಅಥವಾ ಗ್ರಹಿಕೆ ಮೀರಿದ ಕಗ್ಗವಾಗಿಯೂ ಕಾಣಿಸಿ ಅವಕಾಶ ಕಳೆದುಕೊಂಡಿರಬಹುದು. (ಸಾಮಾಜಿಕ ಬದ್ಧತೆಯೆಂಬುದಿಂದು ಹಲವು ಪತ್ರಕರ್ತ ಮಿತ್ರರಲ್ಲಿದೆಯಾದರೂ ಯಾವುದೇ ಪತ್ರಿಕೆಗದು ಧೋರಣೆಯಾಗಿ ಉಳಿದಿಲ್ಲ. ಪ್ರಸಾರ ಸಂಖ್ಯೆ, ತತ್ಪರಿಣಾಮವಾಗಿ ಸಿಗುವ ಜಾಹೀರಾತುಗಳ ಮೂಲಕ ವಾಣಿಜ್ಯ ಯಶಸ್ಸನ್ನೇ ಗಮನದಲ್ಲಿಡುವ ಯಜಮಾನರುಗಳಿಂದ ಇಂದು ಪತ್ರಿಕೆಗಳು ಸಂಪಾದಕನ ಖಯಾಲಿಗನುಗುಣವಾಗಿ ‘ಬಣ್ಣ’ ಬದಲಿಸುವುದು ಎಲ್ಲರಿಗೂ ತಿಳಿದದ್ದೇ.)

‘ಹರನ ಜಡೆಯಿಂದ, ಋಷಿಯ ಅಡಿಯಿಂದ’ ಎಂಬಂತೆ ಇಬ್ಬಿಬ್ಬರು ಅಧ್ಯಕ್ಷರ (ಪ್ರೊ| ಸಿದ್ಧರಾಮಯ್ಯ ಮತ್ತು ಡಾ| ಸಿದ್ಧಲಿಂಗಯ್ಯ) ಅವಧಿಯಲ್ಲಿ ಬಿಡದೆ ಸುದ್ದಿಮಾಡಿ ಬರಲಿರುವ ಈ ಭಾಗೀರಥಿ ಹೆಚ್ಚೆಂದರೆ ಕನ್ನಡ ಪುಸ್ತಕೋದ್ಯಮದ ತಟದಲ್ಲಿ ಉಕ್ಕುವ ಇಲಾಖೆಗಳ ಗಟಾರ (ಅಕ್ರಮ ಸಕ್ರಮ?), ಬಿಸಿ ಆರುವ ಮುನ್ನ ಬಯಲಿಗೆಳೆದ ಕರಡುಗಳು ಅಥವಾ ಅರೆ ಬೆಂದ ಬರಹಗಳನ್ನು (ಪದವಿಟ್ಟಳುಪದೊಂದಗ್ಗಳಿಕೆ?) ಹೊರುವ ಪಾಪಧಾರಿಣಿಯಷ್ಟೇ ಆದಾಳು. ಪುಸ್ತಕ ನೀತಿಗೆ ಅಂಕೋಲದಲ್ಲಿ ಕಪುಪ್ರಾ ಆಯೋಜಿಸಿದ್ದ ಕಮ್ಮಟದಲ್ಲಿ ನಡೆದ ಅಂಕುರಾರ್ಪಣೆಯಿಂದ, ಈಚೆಗೆ ೨೦೧೦-೧೧ರ ಆರ್ಥಿಕ ವರ್ಷಾಂತ್ಯದಲ್ಲಿ ಹಳ್ಳಿ ಮೂಲೆಯವರೆಗೂ ಭ್ರಷ್ಟಾಚಾರದ ಶಾಖೆಗಳನ್ನು ಯಶಸ್ವಿಯಾಗಿ ಮುಟ್ಟಿಸಿದ ಪುಸ್ತಕ ಮೇಳದವರೆಗೂ ನಾನು ಪತ್ರ, ಪತ್ರಿಕೆ, ಬ್ಲಾಗ್‌ಗಳಲ್ಲಿ ಬರೆದವಕ್ಕೂ ಕೊಟ್ಟ ಸಂದರ್ಶನ, ಭಾಷಣಕ್ಕೂ ಪ್ರತಿಯಾಗಿ ಒಂದು ಸಾಲು, ಸೊಲ್ಲು ಬಂದದ್ದಿಲ್ಲ. (ಇನ್ನಷ್ಟು ವಿವರಗಳಿಗೆ ಇಲ್ಲಿನ ಆಯ್ಕಾ ಕಿಂಡಿಯಲ್ಲಿ ‘ಪುಸ್ತಕಲೋಕ’ ಕ್ಕೆ ಚಿಟಿಕೆ ಹೊಡೆದು ಹಳೆಯ ಕಡತಗಳನ್ನು ಅವಶ್ಯ ನೋಡಿ) ಈಗ ಬರಲಿರುವುದು ಪುಸ್ತಕ ನೀತಿ ಅಲ್ಲ, ಸಾರ್ವಜನಿಕ ಹಣದಲ್ಲಿ ‘ನಂಗಿಷ್ಟು-ನಿಂಗಿಷ್ಟು’ ಬಳಗ ನಡೆಸುವ ಅಣಕು ಸಂತರ್ಪಣೆಯ ಬಹುವರ್ಣ ರಂಜಿತ ಪಾಕ ಪಟ್ಟಿ ಮಾತ್ರ.

ಮರೆಯಲಾಗದ ಜಿಟಿಎನ್ – ಸಿ. ಎನ್. ರಾಮಚಂದ್ರನ್
ಜಿಟಿಎನ್ ಅವರ ಬಗ್ಗೆ ನಾನೀಗ ಏಕೆ ಬರೆಯುತ್ತಿದ್ದೇನೆ? ಗೊತ್ತಿಲ್ಲ. ಅವರ ಬಗ್ಗೆ ಇತರರೊಡನೆ ಮಾತನಾಡುವಾಗ, ಅವರ ಕೃತಿಗಳನ್ನು ಓದುವಾಗ, ನಾನು ಅವರೊಡನೆ ಕಳೆದ ಅನೇಕ ಸ್ವಾರಸ್ಯಪೂರ್ಣ ಸಂದರ್ಭಗಳು ನೆನಪಿಗೆ ನುಗ್ಗಿ ಬರುತ್ತವೆ; ಅವುಗಳಿಂದ ಬಿಡುಗಡೆ ಪಡೆಯಲು ಅವನ್ನು ಮೂರ್ತ ಲಿಖಿತ ರೂಪಕ್ಕೆ ತರುವುದೇ ಮಾರ್ಗ ಎಂದೆಣಿಸಿ, ಈ ನೆನಪುಗಳನ್ನು ಅವುಗಳು ಬಂದ ಹಾಗೆ ದಾಖಲಿಸುತ್ತಿದ್ದೇನೆ. ಓದುಗರಿಗೆ (ಯಾರಾದರೂ ಓದಿದರೆ) ಇವು ‘ಬೋರಿಂಗ್’ ಎನಿಸಿದರೆ  - ಕ್ಷಮಿಸಿ.

ನಾನು ಜಿಟಿಎನ್ ಅವರನ್ನು ಮೊದಲ ಬಾರಿಗೆ ಭೇಟಿಯಾದುದು ಕೋಣಾಜೆಯಲ್ಲಿರುವ ಮಂಗಳೂರು ವಿ.ವಿ.ಯ ಕ್ವಾರ‍್ಟರ್ಸ್‌ನಲ್ಲಿ. ೧೯೮೭-೮೮ ಇರಬಹುದು. ಒಂದು ಬೆಳಿಗ್ಗೆ, ಸುಮಾರು ೧೦ ಘಂಟೆಯ ಹೊತ್ತಿಗೆ ಅವರು, ಅಶೋಕ್ ಕುಮಾರ್ ಎನ್ನುವವರು, ಮತ್ತೊಬ್ಬರು ಅಲ್ಲಿಗೆ ಬಂದರು. ನನಗೆ ಜಿಟಿಎನ್ ಅವರ ಹೆಸರು ಗೊತ್ತಿದ್ದಿತೇ ಹೊರತು ಅವರನ್ನು ಪ್ರತ್ಯಕ್ಷವಾಗಿ ನೋಡಿರಲಿಲ್ಲ. ಉಭಯಕುಶಲೋಪರಿ ಆದ ಮೇಲೆ ತಾವು ಬಂದ ಉದ್ದೇಶವನ್ನು ತಿಳಿಸಿದರು; ಅದೆಂದರೆ ನಾನು ಎಮ್‌ಎಸ್‌ಐಎಲ್ (Mysore Sales International Limited) ಪ್ರತಿವರ್ಷ ನಡೆಸುವ ಪ್ರತಿಷ್ಠಿತ ‘ಲೇಖಕ್’ ಸ್ಪರ್ಧೆಯ ತೀರ್ಪುಗಾರರ ಸಮಿತಿಯ ಸದಸ್ಯನಾಗಬೇಕು. (ಆಗ, ತಮ್ಮ ಜೊತೆಯಲ್ಲಿ ಬಂದಿದ್ದ ಅಶೋಕ್ ಕುಮಾರ್ ಕೆ.ಎ.ಎಸ್. ಅಧಿಕಾರಿಗಳೆಂದು, ಎಮ್‌ಎಸ್‌ಐಎಲ್ ಸಂಸ್ಥೆಯ ಉನ್ನತಾಧಿಕಾರಿಗಳೆಂದು, ಕಮಿಟಿಡ್ ವರ್ಕರ್ ಎಂದೂ ತಿಳಿಸಿದರು.) ನನಗೆ ಆ ಸಂಸ್ಥೆಯ ಹೆಸರಾಗಲಿ ಲೇಖಕ್ ಸ್ಪರ್ಧೆಯ ಮಾಹಿತಿಯಾಗಲಿ ಏನೂ ಗೊತ್ತಿರದಿದ್ದ ಕಾರಣ ಸ್ವಲ್ಪ ಹಿಂದೇಟು ಹಾಕಿದಾಗ, ಅವರು ಹಿಂದಿನ ವರ್ಷಗಳ ಪ್ರಶ್ನಾಪತ್ರಿಕೆಗಳನ್ನು ನನಗೆ ತೋರಿಸಿ, ಸ್ಪರ್ಧೆ ಎರಡು ಹಂತಗಳಲ್ಲಿ ಹೇಗೆ ತುಂಬಾ ‘ವಸ್ತುನಿಷ್ಠ’ವಾಗಿ ನಡೆಯುತ್ತದೆ ಎಂಬುದನ್ನು ವಿವರಿಸಿದರು. ಹಾಗೆ ವಿವರಿಸುವಾಗ ಜಿಟಿಎನ್ ಅವರಿಗಿದ್ದ ಉತ್ಸಾಹವನ್ನು ಕಂಡು ನಾನು ಒಪ್ಪಿಕೊಂಡೆ.

ಅದಾದ ಒಂದು ತಿಂಗಳಲ್ಲಿಯೇ ನಾನು ಮೈಸೂರಿಗೆ ಹೋದಾಗ, ಅಲ್ಲಿ ದಳವಾಯ್ ಹೈಸ್ಕೂಲ್‌ನಲ್ಲಿ ಪ್ರಾಚಾರ್ಯರಾಗಿದ್ದ ನನ್ನ ದೊಡ್ಡಪ್ಪನವರ ಮಗ ರಾಮಚಂದ್ರ ಅವರ ಮನೆಗೆ ಹೋಗಿದ್ದೆ. ಅದೂ ಇದೂ ಮಾತಾಡುತ್ತಾ, ‘ಲೇಖಕ್’ ಸ್ಪರ್ಧೆಯ ಬಗ್ಗೆ ಅವರಿಗೇನಾದರೂ ಗೊತ್ತೆ ಎಂದು ಕೇಳಿದೆ. ಅವರು ಅದೊಂದು ತುಂಬಾ ಪ್ರತಿಷ್ಠಿತ ಸ್ಪರ್ಧೆಯೆಂದು, ಆ ಸ್ಪರ್ಧೆಗಾಗಿಯೇ ಅನೇಕ ವಿದ್ಯಾರ್ಥಿಗಳು ತಿಂಗಳು ಗಟ್ಟಲೆ ತಯಾರಿ ಮಾಡುತ್ತಾರೆಂದು ವಿವರಿಸಿ, ಕೊನೆಗೆ ಹೇಳಿದರು: “ ಆದರೆ, ಜಿಟಿಎನ್ ಅವರ ಜೊತೆಯಲ್ಲಿ ಯಾರೂ ಕೆಲಸ ಮಾಡಲು ಸಾಧ್ಯವಿಲ್ಲ. ಅವರು ಮಹಾ ಕೊಬ್ಬಿನ ಮನುಷ್ಯ, ತನ್ನನ್ನು ಬಿಟ್ಟು ಉಳಿದವರೆಲ್ಲಾ ಮೂರ್ಖರು ಮತ್ತು ಅಯೋಗ್ಯರು ಎಂದು ವರ್ತಿಸುತ್ತಾರೆ. ನೀನು ಆ ಮಂಡಳಿಯ ಸದಸ್ಯನಾಗಿರಲು ಒಪ್ಪಬಾರದಾಗಿತ್ತು.” ಇರಲಿ, ಆಗದಿದ್ದರೆ ಯಾವಾಗ ಬೇಕಾದರೂ ರಾಜೀನಾಮೆ ಕೊಡಬಹುದಲ್ಲ ಎಂದು ಹೇಳಿ ಹೊರಬಂದೆ.

ಆದರೆ, ಹೇಗಾದರೂ ಮಾಡಿ ಜಿಟಿಎನ್ ಅವರ ‘ಸರ್ವಾಧಿಕಾರಿ’ ವರ್ತನೆಯನ್ನು ಮುರಿಯಬೇಕು ಎಂದುನಿರ್ಧರಿಸಿದೆ. ಹಾಗೆಯೇ, ಅನಂತರ ನಡೆದ ದೀರ್ಘ ‘ಮೌಖಿಕ ಪರೀಕ್ಷೆ’ಯಲ್ಲಿ ತುಂಬಾ ಅಗ್ರೆಸಿವ್ ಆಗಿ ವರ್ತಿಸಿದೆ -ಅತಿ ಹೆಚ್ಚು ಪ್ರಶ್ನೆಗಳನ್ನು ನಾನೇ ಕೇಳುವುದು, ಇತರ ಸದಸ್ಯರಿಗೆ ಸಮಯ ಕಮ್ಮಿಯಾಗುವಂತೆ ಮಾತನಾಡುವುದು, ಇತ್ಯಾದಿ. (ಆದರೆ, ಈ ನನ್ನ ವರ್ತನೆಯಿಂದ ಆ ಸಮಿತಿಯಲ್ಲಿದ್ದ ಮತ್ತೊಬ್ಬ ಸದಸ್ಯರು, ಹಿರಿಯ ಎಚ್ಚೆಸ್ಕೆ, ಅವರಿಗೆ ಎಷ್ಟು ನೋವಾಗಬಹುದು ಎಂದು ಯೋಚಿಸಲೇ ಇಲ್ಲ.) ಆ ವರ್ಷದ ಆಯ್ಕೆ ಪ್ರಕ್ರಿಯೆ ಮುಗಿದನಂತರ, ಮುಂದಿನ ವರ್ಷ ನನ್ನನ್ನು ಕರೆಯುವುದಿಲ್ಲ, ಇವರಿಗೆ ಚೆನ್ನಾಗಿ ಪಾಠ ಕಲಿಸಿದ್ದೇನೆ, ಎಂದು ಬೀಗಿದೆ.

ಆದರೆ, ಹಾಗಾಗಲೇ ಇಲ್ಲ. ಮುಂದೆ ಅನೇಕ ಸಂದರ್ಭಗಳಲ್ಲಿ ಭೇಟಿಯಾದಾಗಲೂ ಜಿಟಿಎನ್ ನನ್ನ ವರ್ತನೆ ಕುರಿತು ತಮಗಾಗಿದ್ದ (?) ಅಸಂತೋಷವನ್ನು ತೋರಿಸಿಕೊಳ್ಳಲೇ ಇಲ್ಲ; ಹಾಗೆಯೇ, ನಾನು ಬರೆದ (ಉದ್ಧಟತನದ ಆದರೆ ಪ್ರಾಮಾಣಿಕವಾದ) ಡಿವಿಜಿ ಅವರ ಮಂಕುತಿಮ್ಮನ ಕಗ್ಗವನ್ನು ಕುರಿತ ಲೇಖನವನ್ನು ಓದಿ, ಪತ್ರ ಬರೆದರು: ‘ನಿಮ್ಮ ಧಾಟಿ ಕುರುಕ್ಷೇತ್ರದಲ್ಲಿ ಅರ್ಜುನನಂತಿದೆ; ಮೊದಲು ಭೀಷ್ಮರಿಗೆ ನಮಸ್ಕಾರಮಾಡಿ ಅನಂತರ ಅವರೊಡನೆ ಯುದ್ಧ ಮಾಡಿದಂತೆ.’ ಆಶ್ಚರ್ಯವಾಯಿತು: ಏಕೆಂದರೆ, ಜಿಟಿಎನ್ ಅವರಿಗೆ ಮಂಕುತಿಮ್ಮನ ಕಗ್ಗದ ಬಗ್ಗೆ ಅತೀವ ಅಭಿಮಾನ; ತಮ್ಮ ಪ್ರತಿಯೊಂದು ಭಾಷಣದಲ್ಲಿ, ಮಾತಿನಲ್ಲಿ ಅದರ ಯಾವುದಾದರೂ ಪದ್ಯವನ್ನು ಉದಹರಿಸದೆ ಅವರು ಇರುತ್ತಿರಲಿಲ್ಲ. (ಮುಂದೆ, ಅನೇಕ ವರ್ಷಗಳನಂತರ, ‘ಪ್ರಜಾವಾಣಿ’ಗಾಗಿ ಆ ಕೃತಿಯ ‘ಅರ್ಥ-ಸಂದೇಶ’ಗಳನ್ನು ಕುರಿತ ಒಂದು ಗ್ರಂಥವನ್ನು ವಿಮರ್ಶಿಸುವಾಗ, ಹೇಗೆ ಕಗ್ಗದ ಅದ್ಭುತ ರೂಪಕಗಳನ್ನು ಮರೆತರೆ, ಅದೊಂದು ಯಾವ ಸಂದರ್ಭದಲ್ಲಿಯೂ, ಯಾವ ಭಾವನೆಯನ್ನು ವ್ಯಕ್ತಪಡಿಸಬೇಕಾದರೂ ಉದ್ದರಿಸಬಹುದಂತಹ ‘ಬುಕ್ ಆಫ಼್ ಕೋಟ್ಸ್’ ಆಗಿದೆ ಎಂದು ಬರೆದಾಗ, ಕೂಡಲೇ ಆ ನಿಲುವನ್ನು ಮೆಚ್ಚಿ ‘ಪ್ರಜಾವಾಣಿ’ಗೆ ಒಂದು ಚಿಕ್ಕ ಪತ್ರವನ್ನೂ ಅವರು ಬರೆದಿದ್ದರು; ವಿಚಿತ್ರ ವ್ಯಕ್ತಿ.) ಮತ್ತೊಮ್ಮೆ, ಬೆಂಗಳೂರಿನಿಂದ ಮೈಸೂರಿಗೆ ಬಸ್ಸಿನಲ್ಲಿ ಬರುವಾಗ, ರಾಮಾಶ್ವಮೇಧವನ್ನು ಕುರಿತ ನನ್ನ ಲೇಖನದ ಚರ್ಚೆಯಿಂದ ಪ್ರಾರಂಭವಾಗಿ, ಅನಂತರ ಕಲೋನಿಯಲ್ ಅನುಭವ, ಕನ್ನಡ ಕಾವ್ಯ, ಇತ್ಯಾದಿಗಳನ್ನು ಕುರಿತು ನಾವು ಮಾತನಾಡುತ್ತಾ, ಅದನ್ನು ನಿಲ್ಲಿಸಿದುದು ಮೈಸೂರಿನಲ್ಲಿ ಬಸ್ ನಿಂತಾಗಲೇ. ಇವರಿಗೆ ಕೊಬ್ಬು ಇರಬಹುದು; ಆದರೆ, ಕನ್ನಡ-ಇಂಗ್ಲೀಷ್ ಸಾಹಿತ್ಯಗಳ ಆಳವಾದ ಅನುಭವವಿದೆ; ಮತ್ತು ಉತ್ತಮ ಅಭಿರುಚಿಯಿದೆ ಎಂದು ನನಗೆ ಗೊತ್ತಾಗುತ್ತಾ ಹೋದಂತೆ ಅವರ ಬಗ್ಗೆ ಇಚ್ಛೆಯಿಲ್ಲದಿದ್ದರೂ ಗೌರವಾದರಗಳು ಬೆಳೆಯಲು ಪ್ರಾರಂಭವಾಯಿತು.

ಎರಡನೆಯ ವರ್ಷದಲ್ಲಿ, ನಾನು ನನ್ನ ಆಕ್ರಾಮಕ ವರ್ತನೆಯನ್ನು ಕಮ್ಮಿ ಮಾಡಿದೆ; ಆದರೆ, ಸ್ಪರ್ಧೆ ಮುಗಿದ ನಂತರ, ನಾನೇ ಮತ್ತೊಂದು ವಿಷಯವನ್ನು ಆ ಸಮಿತಿಯ ಮುಂದೆ ಎತ್ತಿದೆ. ನಾಲ್ಕೈದು ವರ್ಷಗಳ ಪ್ರಶ್ನಾಪತ್ರಿಕೆಗಳನ್ನು ಗಂಭೀರವಾಗಿ ನೋಡಿದಾಗ ನನಗನ್ನಿಸಿದ್ದು, ‘ಈ ಸ್ಪರ್ಧೆ ವಿಜ್ಞಾನದ ವಿದ್ಯಾರ್ಥಿಗಳಿಗಾಗಿ ಮಾತ್ರ ಇದೆ; ಯಾವ ಕಲಾವಿಭಾಗದ ವಿದ್ಯಾರ್ಥಿಯೂ ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣನಾಗಲು ಸಾಧ್ಯವಿಲ್ಲ,’ ಎಂದು. ಈ ಅಂಶವನ್ನು ಸಮಿತಿಯ ಗಮನಕ್ಕೆ ತಂದೆ. ಕೂಡಲೇ, ಜಿಟಿಎನ್ ‘ಇರಬಹುದು; ಏನು ತಪ್ಪು? ವಿಜ್ಞಾನದ ವಿದ್ಯಾರ್ಥಿಗಳು ಇತರರಿಗಿಂತ ಹೆಚ್ಚು ಬುದ್ಧಿವಂತರಾಗಿರುತ್ತಾರೆ,’ ಎಂದು ಘಟ್ಟಿಯಾಗಿ ಹೇಳಿದರು. ನಾನು ಸಾಹಿತ್ಯದ ವಿದ್ಯಾರ್ಥಿಯಾದುದರಿಂದ ನನ್ನ ಮುಖ ಕೆಂಪಾಯಿತು. ‘ಇದನ್ನು ನಾನು ಒಪ್ಪುವುದಿಲ್ಲ; ದಿಸ್ ಈಸ್ ಮೀನಿಂಗ್‌ಲಿಸ್’ ಎಂದು ಕೂಗಿದೆ. ಆ ಸಂಸ್ಥೆಯ ಹಿರಿಯ ಅಧಿಕಾರಿ, ‘ಆಯಿತು; ಅದಕ್ಕೆ ಏನು ಮಾಡೋಣ ಅಂತೀರಿ?’ ಎಂದು ಕೇಳಿದರು. ‘ಲಿಖಿತ ಪರೀಕ್ಷೆಯಲ್ಲಿ ವಿಜ್ಞಾನಕ್ಕೆ ಸಂಬಂಧಪಟ್ಟ ಪ್ರಶ್ನೆಗಳಿಗೆ ಪರ್ಯಾಯವಾಗಿ ಕಲಾವಿಭಾಗಕ್ಕೆ ಸಂಬಂಧಿಸಿದ ಪ್ರಶ್ನೆಗಳೂ ಇರಬೇಕು; ಎಂದರೆ, ಪ್ರಶ್ನಾಪತ್ರಿಕೆಯಲ್ಲಿ, ಎರಡು ಭಾಗಗಳಿದ್ದು, ಎರಡನೆಯ ಭಾಗದಲ್ಲಿ ಅ ಅಥವಾ ಆ ಭಾಗವನ್ನು ಆಯ್ಕೆಮಾಡಿಕೊಳ್ಳುವ ಅವಕಾಶವಿರಬೇಕು’ ಎಂದು ನಾನು ವಾದಿಸಿದೆ. ‘ಓಹೋ! ಪ್ರಶ್ನೆಗಳಲ್ಲೂ ಮೀಸಲಾತಿ?’ ಎಂದು ಜಿಟಿಎನ್ ನನ್ನತ್ತ ನೋಡಿದರು; ನಾನು ಸುಮ್ಮನಿದ್ದೆ. ಅನಂತರ, ‘ಆಯಿತು; ನಿಮ್ಮ ವಾದವನ್ನು ಒಪ್ಪಿದರೆ, ಕಲಾವಿಭಾಗದ ಪ್ರಶ್ನೆಗಳನ್ನು ತಯಾರಿಸುವುದು ಯಾರು? ‘ಬಹು ಆಯ್ಕೆ’ಯ ಪ್ರಶ್ನೆಗಳನ್ನು ಕಲಾ ವಿಷಯಗಳಲ್ಲಿ ರೂಪಿಸಲು ಅಸಾಧ್ಯ,’ ಎಂದು ಎಲ್ಲರನ್ನೂ ನೋಡಿದರು. ‘ಯಾಕಾಗುವುದಿಲ್ಲ? ನಾನು ಮಾಡಿಕೊಡುತ್ತೇನೆ,’ ಎಂದೆ, ಇದೊಂದು ಸವಾಲಂತೆ. ‘ನೋಡೋಣ,’ ಎಂದರು.

ನಾನು ಮಂಗಳೂರಿಗೆ ಹಿಂತಿರುಗಿದನಂತರ, ಸ್ನೇಹಿತರಾದ ಸುರೇಂದ್ರ ರಾವ್ ಅವರೊಡನೆ ಈ ಸಂಗತಿಯನ್ನು ಚರ್ಚಿಸಿ, ಸಾಹಿತ್ಯ-ಭಾಷೆ-ಚರಿತ್ರೆ-ರಾಜಕೀಯ ಶಾಸ್ತ್ರಗಳನ್ನು ಕುರಿತ ‘ಬಹು ಆಯ್ಕೆ’ಯ ಪ್ರಶ್ನೆಗಳನ್ನು ತಯಾರಿಸಿ, ಅವುಗಳನ್ನು ಜಿಟಿಎನ್ ಅವರಿಗೆ ಕಳುಹಿಸಿದೆವು. ಕೂಡಲೇ ಅವರಿಂದ ಪತ್ರ ಬಂದಿತು: “ಅಭಿನಂದನೆಗಳು. ನಾನು ಅಸಾಧ್ಯವೆಂದುದನ್ನು ನೀವು ಸಾಧ್ಯಮಾಡಿ ತೋರಿಸಿದ್ದೀರಿ.” ನನಗೆ ಆಶ್ಚರ್ಯ, ಸಂತೋಷ, ಸಂಕೋಚ ಎಲ್ಲವೂ ಆದುವು.

ಆ ಮೂರನೆಯ ವರ್ಷ ಲೇಖಕ್ ಸ್ಪರ್ಧೆಯ ಮೌಖಿಕ ಪರೀಕ್ಷೆ ಪುತ್ತೂರಿನಲ್ಲಿ ನಡೆಯಿತು. ಅದೊಂದು ಮರೆಯಲಾಗದ ಅನುಭವ. ನಾನು ಸ್ವಲ್ಪ ವಿನಯದಿಂದ ನಡೆದುಕೊಂಡೆ; ಜಿಟಿಎನ್ ಅವರೂ ಮತ್ತು ಉಳಿದ ಮತ್ತೊಬ್ಬ ಪರೀಕ್ಷಕರೂ ಪರಸ್ಪರ ಗೌರವದಿಂದ ವರ್ತಿಸಿದರು. (ಆ ವರ್ಷ, ಮಂಗಳೂರಿನ ಸೇಂಟ್ ಅಲೋಶಸ್ ಕಾಲೇಜಿನ ವಿದ್ಯಾರ್ಥಿಗೆ ಮೊದಲ ಅಥವಾ ಎರಡನೆಯ ಸ್ಥಾನ ಬಂದಿತೆಂದು ನೆನಪು.) ಮೂರು ದಿನಗಳಲ್ಲಿ ಎರಡು ದಿನವೂ ಎಲ್ಲಾ ವಿದ್ಯಾರ್ಥಿಗಳೊಡನೆ ನಾನೂ ಜಿಟಿಎನ್ ಅವರೊಡನೆ ನಕ್ಷತ್ರವಿಕ್ಷಣೆಗೆ ಸಾಯಂಕಾಲ ಊರ ಹೊರಗಿನ ದಿಬ್ಬಕ್ಕೆ ಹೋಗಿದ್ದೆವು. ಸುಮಾರು ಒಂದು ತಾಸು, ನಕ್ಷತ್ರಪುಂಜಗಳು, ಅವುಗಳ ಬದುಕು, ಗ್ರೀಕರ ಕಾಲದಿಂದ ಅವುಗಳ ಬಗ್ಗೆ ಮಾಹಿತಿಯನ್ನು ಕಲೆಹಾಕಿದ ರೀತಿ ಇವುಗಳನ್ನು ರೋಚಕವಾಗಿ, ಅಧಿಕಾರಯುತವಾಗಿ, ಸಂಭ್ರಮದಿಂದ, ಜಿಟಿಎನ್ ವರ್ಣಿಸಿದರು. ವಿಶ್ವಸೃಷ್ಟಿಯ ಬಗ್ಗೆ ಹೊಸ ಒಳನೋಟಗಳನ್ನು ಕೊಟ್ಟರು. ಕುಮಾರಸಂಭವದಲ್ಲಿ ಪರಶಿವನು ಉಮೆಯ ತಪಸ್ಸಿಗೆ ಮೆಚ್ಚಿ, “ಅದ್ಯತ್ ಪ್ರಭೃತ್ಯವನತಾಂಗಿ ತವಾಸ್ಮಿ ದಾಸಃ” ಎನ್ನುತ್ತಾನೆ. ಹಾಗೆಯೇ, ನಾನೂ (ಜಿಟಿಎನ್ ‘ಅವನತಾಂಗಿ’ ಎಂದೂ ಆಗದೆ ಇದ್ದರೂ) ‘ಇಂದಿನಿಂದ ನಾನು ನಿಮ್ಮ ದಾಸ/ವಿದ್ಯಾರ್ಥಿ’ ಎಂದು ಹೇಳುತ್ತಾ ಜಿಟಿಎನ್ ಅವರಿಗೆ ಕೈಮುಗಿದೆ.

ಆ ಶಿಬಿರವಾದ ಕೆಲದಿನಗಳಲ್ಲೇ, ಏನು ಕಾರಣಕ್ಕೋ ಕಾಣೆ, ಆ ಲೇಖಕ್ ಸ್ಪರ್ಧೆಯೇ ನಿಂತು ಹೋಯಿತು. ಹೈಸ್ಕೂಲ್-ಪಿಯುಸಿ ವಿದ್ಯಾರ್ಥಿಗಳಲ್ಲಿ ಅಸಾಧಾರಣ ಸಂಚಲನ ಉಂಟುಮಾಡಿದ್ದ, ರಚನಾತ್ಮಕ ಕಾರ್ಯವಾದ ಅದು ನಿಂತುಹೋಯಿತೆಂದು ತಿಳಿದು ಸ್ವಲ್ಪ ಸಮಯ ಬೇಜಾರಾಯಿತು. ಆ ಸಂಸ್ಥೆಯ ಅಶೋಕ್ ಕುಮಾರ್ ತಮ್ಮ ವಿನಯ-ಸಜ್ಜನಿಕೆಗಳಿಂದ ಇಂದೂ ನನ್ನ ನೆನಪಿನಲ್ಲಿದ್ದಾರೆ. ಜಿಟಿಎನ್ ಅವರ ಸಖ್ಯ-ಸಹವಾಸ ಆಗ ಪ್ರಾರಂಭವಾದದ್ದು ಕೊನೆಯವರೆಗೂ ಮುಂದುವರೆಯಿತು. ಇದು ಒಂದು ಘಟ್ಟ.

ಜಿಟಿಎನ್ ಅವರು ಅದ್ಭುತ ಮಾತುಗಾರರು; ಎಂದರೆ, ರೋಚಕವಾಗಿ, ನಾಟಕೀಯವಾಗಿ, ಒಂದು ಘಟನೆಯನ್ನು ಮೊದಲಿಂದ ಕೊನೆಯವರೆಗೆ ಆಸಕ್ತಿಯಿಂದ ನಿರೂಪಿಸುವ ‘ನಟರು.’ ಪ್ರತಿ ವರ್ಷವೂ ಅವರು ಒಂದು ತಿಂಗಳ ಕಾಲ ಮಂಗಳೂರಿಗೆ ‘ಬೇಬಿ ಸಿಟಿಂಗ್’ ಕಾರ್ಯಕ್ಕೆ ಬರುತ್ತಿದ್ದರು. (ಬೇಬಿ ಸಿಟಿಂಗ್ ಅವರದೇ ಪ್ರಯೋಗ; ಈ ಸಂದರ್ಭದಲ್ಲಿ ‘ಬೇಬಿ’ ಅವರ ಮಗನ ಪುಸ್ತಕದ ಅಂಗಡಿ. ಅಶೋಕವರ್ಧನ್ ತಮ್ಮ ಪತ್ನಿಯೊಡನೆ ಪ್ರವಾಸ ಹೊರಟಾಗ ಅಂಗಡಿಯನ್ನು ನೋಡಿಕೊಳ್ಳಲು ಅವರ ತಂದೆ ಬರುತ್ತಿದ್ದರು. ಇಡೀ ಜಿಟಿಎನ್ ಕುಟುಂಬವೇ ಅಪರೂಪದ ಕುಟುಂಬ ಎಂದು ಕಾಣುತ್ತದೆ; ಸಾಧಾರಣವಾಗಿ ಗಂಡನು ಪರ್ವತಾರೋಹಣ, ಕಾಡು ಸುತ್ತುವುದು, ಇತ್ಯಾದಿ ‘ಸಾಹಸ’ಗಳಿಗೆ ಹೊರಟಾಗ ಅವನನ್ನು ತಡೆಯುವುದು ಬಿಟ್ಟು, ಅವನ ಹೆಂಡತಿಯೂ ಜೊತೆಯಲ್ಲಿ ಬೆಟ್ಟ ಹತ್ತುವುದಕ್ಕೆ ಬರುತ್ತಾಳೆಂದರೆ -ಎಕ್ಸೆಂಟ್ರಿಕ್ ಅಲ್ಲವೆ! ಅವರ ಮಗ ಇನ್ನೂ ಎಕ್ಸೆಂಟ್ರಿಕ್ –ಬುದ್ಧಿವಂತ ಹುಡುಗರೆಲ್ಲರೂ ಮೆಡಿಕಲ್-ಎಂಜಿನಿಯರಿಂಗ್ ಇತ್ಯಾದಿ ಓದಿ, ದೊಡ್ಡ ಕೆಲಸ ಹಿಡಿದು, ಹುಡುಗಿಯರ ಹಿಂದೆ ಕಾರುಗಳಲ್ಲಿ ಓಡಾಡುವ ಕನಸು ಕಂಡರೆ, ಈ ಪುಣ್ಯಾತ್ಮ ಪುಣೆಯ ಫ಼ಿಲ್ಮ್ ಇನ್ಸ್ಟಿಟ್ಯೂಟ್‌ಗೆ ಹೋಗಿ, ಅಧ್ಯಯನ ಮಾಡಿ, ಇತ್ತೀಚೆಗೆ ‘ಗುಬ್ಬಚ್ಚಿಗಳು’ ಎಂಬ ಕಿರು ಚಿತ್ರವನ್ನು ತಯಾರಿಸಿ, ರಾಷ್ಟ್ರೀಯ ಪುರಸ್ಕಾರ ಬೇರೆ ಪಡೆದಿದ್ದಾನೆ.)

ಇರಲಿ; ಮತ್ತೆ ಬೇಬಿ ಸಿಟಿಂಗ್‌ಗೆ ಬರೋಣ. ಜಿಟಿಎನ್ ಅಂಗಡಿಯಲ್ಲಿ ಇದ್ದರೆ, ಅಲ್ಲೊಂದಷ್ಟು ಜನ ಸೇರಿದ್ದಾರೆಂದೇ ಅರ್ಥ; ಯಾರಾದರೂ ಒಂದು ಪುಸ್ತಕ ಕೇಳಿದರೆ ಅದನ್ನು ಕೊಟ್ಟು ಅದೇ ವಸ್ತುವನ್ನುಳ್ಳ ಇತರ ಪುಸ್ತಕಗಳನ್ನೂ ಅವರಿಗೆ ತೋರಿಸುತ್ತಾ, ಅದರ ಬಗ್ಗೆ ಮಾತಾಡಲು ಪ್ರಾರಂಭಿಸಿದರೆ, ಗಿರಾಕಿಗೆ ತಾನು ಯಾವ ಪುಸ್ತಕ ಕೊಳ್ಳಲು ಅಂಗಡಿಗೆ ಬಂದಿದ್ದೆ ಎಂದೇ ಮರೆತು ಹೋಗಿ, ಜಿಟಿಎನ್ ಹೇಳಿದ ನಾಲ್ಕೈದು ಪುಸ್ತಕಗಳನ್ನು ಕೊಳ್ಳುವುದೇ ಪದ್ಧತಿ. ಅವರು ಬಂದಾಗ, ಸಾಧ್ಯವಾದರೆ ಮೂರು ದಿನವೂ ಸಾಯಂಕಾಲ, ಒಂದೆರಡು ತಾಸು ಅಂಗಡಿಯಲ್ಲಿ ಕುಳಿತು ಅವರ ಮಾತನ್ನು ಕೇಳುತ್ತಿದ್ದೆ –ಸಾರಿ, ಮಧ್ಯೆ ನಾನೂ ಮಾತನಾಡುತ್ತಿದ್ದೆ: ‘ಹೌದಾ? ನಿಜವಾಗಿಯೂ? ಮೈ ಮೈ!’ ಇತ್ಯಾದಿ.

ಜಿಟಿಎನ್ ಅವರ ಮಾತುಗಾರಿಕೆಗೆ ಒಂದು ಉದಾಹರಣೆ. ಅವರ ಒಂದು ಪುಸ್ತಕದಲ್ಲಿ ವಿಜ್ಞಾನಿಗಳನ್ನು ಕುರಿತ ದೀರ್ಘಲೇಖನಗಳಿವೆ (ಹೆಸರು ಮರೆತಿದ್ದೇನೆ; ‘ರಸ ಪ್ರಸಂಗಗಳು’?) ಅದರಲ್ಲಿ ಬರುವ ಸರ್ ಸಿ.ವಿ. ರಾಮನ್ ಅವರ ಸಂದರ್ಶನ ಮಾಡಲು ಜಿಟಿಎನ್ ಪಟ್ಟ ಸಾಹಸ ಹಾಗೂ ಮಾಡಿಕೊಂಡ ತಯಾರಿ, ಅಮೆರಿಕಾದಲ್ಲಿ ಪ್ರಸಿದ್ಧ ವಿಜ್ಞಾನಿ, ನೊಬೆಲ್ ಪ್ರಶಸ್ತಿ ವಿಜೇತ, ಚಂದ್ರಶೇಖರ್ ಅವರ (೧೯೩೬)ರಲ್ಲಿಯೇ ಆದ ಸಂಶೋಧನೆಯನ್ನು ಅಂದಿನ ಪ್ರತಿಷ್ಠಿತ ವಿಜ್ಞಾನಿ ಬಳಗ ಉದ್ದೇಶಪೂರ್ವಕವಾಗಿ ತಿರಸ್ಕರಿಸಿದುದು, ಇವೇ ಮುಂತಾದ ಕೆಲವು ಘಟನೆಗಳನ್ನು ಜಿಟಿಎನ್ ಎಷ್ಟು ಸ್ವಾರಸ್ಯಕರವಾಗಿ ಅರ್ಧ ಘಂಟೆ ಹೇಳಿದರೆಂದರೆ (ಕಥಿಸಿದರೆಂದರೆ), ಕೂಡಲೇ ನಾನು ಆ ಪುಸ್ತಕವನ್ನು ಕೊಂಡುಕೊಂಡು, ಮನೆಗೆ ಹೋಗಿ, ಅದನ್ನು ಓದಿ ಮುಗಿಸಿದೆ. ಅಂದೇ ನಾಲ್ಕು ಘಂಟೆಗೆ ಅವರು ಫೋನ್ ಮಾಡಿದಾಗ ಹೇಳಿದೆ: “ನಿಮ್ಮ ಪುಸ್ತಕವನ್ನು ಓದಿದೆ, ಚೆನ್ನಾಗಿದೆ; ಆದರೆ ನೀವು ಮಾತನಾಡಿದಾಗ ಬರುವ ಥ್ರಿಲ್ ಓದಿದಾಗ ಬರಲಿಲ್ಲ.” ಒಂದು ನಿಮಿಷ ಬಿಟ್ಟು ಅವರು ಹೇಳಿದರು: “ನೋಡಿ, ಮಾತನಾಡುವಾಗ, ಅರ್ಧ ವಾಕ್ಯಗಳು, ಕನ್ನಡ ಇಂಗ್ಲೀಷ್ ಪದಗಳು, ಕವನಗಳ ಉದ್ಧರಣಗಳು, ಇವೆಲ್ಲವನ್ನೂ ಸೇರಿಸಿ ನಾನು ‘ಹೊಡೆದುಕೊಂಡು ಹೋಗಿಬಿಡುತ್ತೇನೆ’ (ಇದು ಅವರದೇ ವಾಕ್ಯ); ಆದರೆ, ಬರೆಯುವಾಗ ಸ್ವಲ್ಪ ಔಪಚಾರಿಕವಾಗಿ ಇರಬೇಕಾಗುತ್ತದೆ, ಅಲ್ಲವೆ?” ಅವರು ಹೀಗೆ ವಿವರಿಸಿದಾಗ, ನನ್ನ ಪ್ರತಿಕ್ರಿಯೆಯಿಂದ ಅವರಿಗೆ ಸಂತೋಷವಾಯಿತೋ ಅಥವಾ ಬೇಜಾರಾಯಿತೋ ಗೊತ್ತಿಲ್ಲ. ಆದರೆ, ಇಷ್ಟಂತೂ ಸತ್ಯಸ್ಯ ಸತ್ಯಂ: ಅವರು ಮಾತನಾಡುವಾಗ ಇರುತ್ತಿದ್ದ ನಾಟಕೀಯತೆ, ಏರಿಳಿತ, ಮುಖಭಾವ, ಸಂಭ್ರಮ, ಇತ್ಯಾದಿ ಅವರ ಬರವಣಿಗೆಯಲ್ಲಿ ಇರಲಿ, ಯಾರ ಬರವಣಿಗೆಯಲ್ಲಿಯೂ ಸಾಧ್ಯವಿಲ್ಲ. (ಇಲ್ಲಿ ನನಗೊಂದು ಸಂದೇಹ: ಇದು ಕೇವಲ ಮೌಖಿಕ ಸಂವಹನೆಯ ಸಾಮರ್ಥ್ಯವಲ್ಲ, ಪ್ರಾಯಃ; ಬದುಕನ್ನು ಕುರಿತ ಉತ್ಸಾಹ –ಲಸ್ಟ್ ಫ಼ಾರ್ ಲೈಫ಼್ – ಇದಕ್ಕೆ ಕಾರಣ. ಕೂಡಲೇ ನನ್ನ ನೆನಪಿಗೆ ಬರುವವರು ಅಂದರೆ ನನ್ನ ತಂದೆ. ವೇದ–ಸಂಸ್ಕೃತ-ಕನ್ನಡ ಸಾಹಿತ್ಯಗಳ ಅಪಾರ ಜ್ಞಾನ-ಅಗಾಧ ನೆನಪು ಇವುಗಳಿದ್ದ ಅವರು ಮಾತನಾಡಲು ಪ್ರಾರಂಭಿಸಿದರೆಂದರೆ ಎಲ್ಲರಿಗೂ ಮೋಡಿಯಾದಂತೆಯೆ. ನನ್ನ ಮದುವೆಯ ಸಂದರ್ಭದಲ್ಲಿ, ಗಾಡಿಯಲ್ಲಿ ರಾತ್ರಿ ನಾವು ಭಾವಿ ಪತ್ನಿಯ ಮನೆಗೆ ಹೋಗುತ್ತಿದ್ದಾಗ, ನನ್ನ ತಂದೆಯವರ -ಕರ್ಣನ ಕಥೆಯನ್ನು ಕೇಳುತ್ತಾ ಗಾಡಿಯವನು ಒಂದು ಹಳ್ಳದ ಬಳಿ ಎತ್ತುಗಳು ನಿಂತಾಗ ಮಾತ್ರ ಆ ಕಡೆ ನೋಡಿದ್ದ; ಆ ಎತ್ತುಗಳಿಗೆ ಅಂತರ್ಜ್ಞಾನವಿಲ್ಲದಿದ್ದರೆ ಇಂದು ನಾನು ಈ ಬ್ಲಾಗ್ ಬರೆಯುತ್ತಿರಲಿಲ್ಲ.)

ಜಿಟಿಎನ್ ಅವರ ಬರವಣಿಗೆಯ ಮತ್ತೊಂದು ಮಿತಿಯೆಂದರೆ (ಮಿತಿ? ಲಕ್ಷಣ?) ಅವರ ಅತಿಯಾದ ಅಲಂಕಾರಪ್ರಿಯತೆ, ಗ್ರಾಂಥಿಕ ಶೈಲಿ. ಇದರ ಬಗ್ಗೆ ಅನೇಕ ಸಂದರ್ಭಗಳಲ್ಲಿ ನಮ್ಮಿಬ್ಬರ ನಡುವೆ ಚರ್ಚೆಯಾಗುತ್ತಿತ್ತು; ಆಗ, ಅವರು ಆವೇಶದಿಂದ ತಮ್ಮ ಶೈಲಿಯನ್ನು ಸಮರ್ಥಿಸಿಕೊಳ್ಳುತ್ತಿದ್ದರು; ‘ವೈಜ್ಞಾನಿಕ ವಿಷಯಗಳ ಬಗ್ಗೆ ಬರೆಯುವಾಗ ನಿಖರತೆ ಇರಬೇಕು; ಅದು ಬರುವುದು ತಕ್ಕ ಪದಗಳನ್ನು ಉಪಯೋಗಿಸಿದಾಗ ಮಾತ್ರ –ಸರಳತೆಯೊಂದೇ ನಿಕಷವಲ್ಲ’ ಎಂದು ಘೋಷಿಸುತ್ತಿದ್ದರು. ಇದಕ್ಕೆ ಕಾರಂತರು ಅಪವಾದವಲ್ಲವೆ ಎಂದರೆ, ಕಾರಂತರದು ವೈಜ್ಞಾನಿಕ ಬರಹವಲ್ಲ, ಅವರದು ಜನಪ್ರಿಯ ಬರಹ ಎಂದು ಹೇಳುತ್ತಾ, ‘ಉದಾಹರಣೆ ಕೊಡಿ’ ಎಂದಾಗ, ಕಾರಂತರು ಗ್ರಹಣಗಳ ಬಗ್ಗೆ ಬರೆದುದನ್ನು ವಿಶ್ಲೇಷಿಸುತ್ತಾ, ಅದರಲ್ಲಿ ಎಷ್ಟು ತಪ್ಪು ಗ್ರಹಿಕೆಗಳಿವೆ ಎಂಬುದನ್ನು ಖಾರವಾಗಿ ವಿವರಿಸುತ್ತಿದ್ದರು. ಕಾದಂಬರಿಕಾರ ಕಾರಂತರ ಬಗ್ಗೆ, ವೈಜ್ಞಾನಿಕ ದೃಷ್ಟಿಕೋನದ ಕಾರಂತರ ಬಗ್ಗೆ ಅವರಿಗೆ ಅಗಾಧ ಗೌರವವಿತ್ತು; ಆದರೆ, ಅವರ ವಿಜ್ಞಾನ ಪ್ರಪಂಚವನ್ನು ಸಂಪೂರ್ಣವಾಗಿ ರಿವೈಸ್ ಮಾಡಬೇಕು ಎನ್ನುತ್ತಿದ್ದರು. ನಾನೂ ವಾದ ಮಾಡುವಾಗ ಬಹು ಬೇಗ ತಾಳ್ಮೆಯನ್ನು ಕಳೆದುಕೊಳ್ಳುತ್ತೇನೆ. ಅಂತಹ ಸಂದರ್ಭಗಳಲ್ಲಿ “ ‘Black Hole ಎನ್ನುವುದನ್ನು ‘ಕೃಷ್ಣ ಕುಹರ’ ಅಥವಾ ‘ಕೃಷ್ಣ ವಿವರ’ ಎನ್ನುವುದು ನಿಮ್ಮ ಪಾಂಡಿತ್ಯ ಪ್ರದರ್ಶನವಲ್ಲವೆ? ‘ಕಪ್ಪು ರಂಧ್ರ’ಎಂದರೇನು ತಪ್ಪು?” ಎನ್ನುತ್ತಿದ್ದೆ. ಆದರೆ, ನಮ್ಮಲ್ಲಿ ಯಾರ ಮನಃಪರಿವರ್ತನೆಯೂ ಆಗುತ್ತಿರಲಿಲ್ಲ.

ಸಾರಿ. ಅದು ಸಂಪೂರ್ಣ ಸತ್ಯವಲ್ಲ. ಒಂದು ಸಂದರ್ಭದಲ್ಲಿ, ಪುತ್ತೂರಿನ ಕಾರ್ಯಕ್ರಮದಲ್ಲಿ ಇಬ್ಬರೂ ಭಾಗವಹಿಸಿದ್ದಾಗ, ಅವರು ನನ್ನನ್ನು ಕೇಳಿದರು (ಅಥವಾ ನನಗೆ ಹೇಳಿದರು): “ನನ್ನ ಕನ್ನಡದ ಕೃತಿಯೊಂದು ಇಂಗ್ಲೀಷಿಗೆ ಅನುವಾದವಾಗಿದೆ; ಅದು ಚಂದ್ರಶೇಖರ್, ರಾಮನ್, ಮುಂತಾದ ಮಹಾನ್ ಮೇಧಾವಿಗಳನ್ನು ಕುರಿತಿದೆ. ಅದಕ್ಕೆ ಈ ಹೆಸರು ಸರಿಯಾಗುತ್ತದೋ ನೋಡಿ” ಎಂದು ಹೇಳುತ್ತಾ, ‘Foot Prints on the Sands of Time’ ಎಂತಲೋ ಏನೋ ಹೇಳಿದರು. ನಾನು ಅಸಮಾಧಾನದಿಂದ “ ಅಷ್ಟೆಲ್ಲಾ ಯಾಕೆ? ಸುಮ್ಮನೆ With the Great Minds ಅನ್ನಿ,’ ಎಂದೆ. ‘ಅಯ್ಯೋ! ಅಷ್ಟೇ ಸಾಕೆ?’ ಎಂದರು. ಸಾಕು ಎಂದೆ ನಾನು. ಎರಡು ತಿಂಗಳುಗಳಾದ ಮೇಲೆ, ನನಗೊಂದು ಪುಸ್ತಕವನ್ನು ಅಶೋಕವರ್ಧನ್ ಕೊಟ್ಟರು; ನಾನು ಸೂಚಿಸಿದ ಶೀರ್ಷಿಕೆಯೇ ಇದೆ. ಆಶ್ಚರ್ಯವಾಯಿತು. (ಆದರೆ, ಈಗ, ಅಲ್ಲಿರುವ ‘ದ’ ಆರ್ಟಿಕಲ್ ಉಚಿತವೆ ಅಲ್ಲವೆ ಎಂಬ ಸಂದೇಹ ನನ್ನನ್ನು ಕಾಡುತ್ತದೆ; ಪ್ರಾಯಃ, ‘ದ’ ಬೇಕಿಲ್ಲ.) ಇದೊಂದೇ ಬಾರಿ ಅವರು ತಮ್ಮ ‘ಕೃಷ್ಣಕುಹರತ್ವ’ವನ್ನು ಬಿಟ್ಟುದು ಎಂದು ಕಾಣುತ್ತದೆ.

ಹಾಗೆಯೇ, ಜಿಟಿಎನ್ ಅವರಿಗೆ ಸಾಹಿತ್ಯವೆಂದರೆ ಕಾಳಿದಾಸ, ಡಿವಿಜಿ; ಸಂಗೀತವೆಂದರೆ ಅಭಿಜಾತ ಸಂಗೀತ; ಈ ಬಗೆಯ ಅಭಿರುಚಿ ಗಟ್ಟಿಯಾಗಿತ್ತು. ಮತ್ತು, ವಿಜ್ಞಾನಿಗಳು, ಸಾಹಿತಿಗಳು, ಸಂಗೀತಕಾರರು ಇವರನ್ನು ಹೊರತುಪಡಿಸಿದರೆ ಇತರರು ಯಾರೂ ‘ಗಣ್ಯ’ರಲ್ಲ ಎಂಬ ನಿಲುವು. ಇದರೊಡನೆ ಅವರಿಗಿದ್ದ ಅಪಾರ ಸ್ವಾಭಿಮಾನ. ಈ ನಿಲುವು ಎಫ಼್. ಆರ್. ಲೀವಿಸ್ ನಂಬಿದ್ದ ‘ಶ್ರೇಷ್ಠ ಸಂಸ್ಕೃತಿ’ ‘ಜನಪ್ರಿಯ ಸಂಸ್ಕೃತಿ’ ಈ ದ್ವಿಮಾನ ವೈರುದ್ಧ್ಯವನ್ನು ಹೋಲುತ್ತದೆ. ಈ ಘಟನೆ ಅವರೇ ನನ್ನೊಡನೆ ಒಂದು ಸಲ ಅದೊಂದು ಸಾಧನೆಯೆಂಬಂತೆ ಹೇಳಿದುದು.

ಮೈಸೂರಿನಲ್ಲಿ ಕೆಲವು ಗಣ್ಯರಿಗೆ ಒಂದು ಖಾಸಗಿ ಸಂಸ್ಥೆ ಸನ್ಮಾನವನ್ನು ಏರ್ಪಡಿಸಿತ್ತು (ಇದು ಜಿಟಿಎನ್ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಬರುವುದಕ್ಕೆ ಮುಂಚೆ); ಅದರಲ್ಲಿ, ಜಿಟಿಎನ್, ಜೆ. ಆರ್. ಲಕ್ಷ್ಮಣರಾವ್, ಇವರೇ ಮುಂತಾದ ಐದಾರು ಜನರಿದ್ದರಂತೆ. ಹಾಗೆಯೇ ಜನಪ್ರಿಯ ನಟನೊಬ್ಬನೂ ಇದ್ದನಂತೆ. (ರಾಜ್ ಕುಮಾರ್ ಅಲ್ಲ.) ಸಮಯಕ್ಕೆ ಸರಿಯಾಗಿ ಎಲ್ಲ ಗಣ್ಯರೂ ಸೇರಿದರು – ಆ ನಟನೊಬ್ಬನನ್ನು ಹೊರತುಪಡಿಸಿ; ಅವರು ಬಂದುದು ಅರ್ಧ ಘಂಟೆ ತಡವಾಗಿ. ಅನಂತರ ಆ ನಟ ಬಂದಾಗ ‘ನಾವು ಯಾರೂ ಏಳತಕ್ಕದ್ದಲ್ಲ’ ಎಂದು ಎಲ್ಲರಿಗೂ ಜಿಟಿಎನ್ ತಾಕೀತು ಮಾಡಿದ್ದರಂತೆ. ಹಾಗೆಯೇ, ಆ ನಟನ ಭವ್ಯ ಪ್ರವೇಶವಾದಾಗ ಎಲ್ಲರೂ ಎದ್ದು ನಿಂತರೂ ಈ ಗಣ್ಯರು ಕುಳಿತೇ ಇದ್ದರಂತೆ. ಕಿಕ್ಕಿರಿದಿದ್ದ (ನಟನನ್ನು ನೋಡುವುದಕ್ಕಾಗಿ ಬಂದಿದ್ದ) ಸಭೆಯಲ್ಲಿ ಒಂದಿಬ್ಬರು ‘ಎದ್ದು ನಿಂತುಕೊಳ್ರೀ –ನೀವೇನು ಬೇರೇನಾ?” ಎಂದು ಕಿರುಚಿದರಂತೆ. ಆದರೆ ಜಿಟಿಎನ್ ಇತ್ಯಾದಿ ಆ ಕೂಗು ಕೇಳದವರಂತೆ ಸುಮ್ಮನೇ ಇದ್ದರಂತೆ. (ನಾನಿಲ್ಲಿ ಜಿಟಿಎನ್ ಹೇಳಿದ್ದ ಕಥೆಯ ಸಮ್ಮರಿ ಕೊಡುತ್ತಿದ್ದೇನೆ, ಅಷ್ಟೆ.) ಅನಂತರ, ಕಾರ್ಯಕ್ರಮ ಹೇಗೋ ಮುಗಿಯಿತಂತೆ.

ಈ ಕಥನ ಮುಗಿದನಂತರ ನಾನು ಕೇಳಿದೆ: “ಎದ್ದು ಗೌರವ ಸೂಚಿಸಿದ್ದರೆ ನಿಮಗೇನು ನಷ್ಟವಾಗುತ್ತಿತ್ತು? ಯಾಕೆ ಹಾಗೆ ಮಾಡಿದಿರಿ?” ಅವರು ಒಂದು ವೈಜ್ಞಾನಿಕ ವಿಷಯವನ್ನು ನಿರೂಪಿಸುವಂತೆ ವಿವರಿಸಿದರು: “ ಅವನೇನೂ ವರದಾಚಾರ್ ಅಲ್ಲ; ಅವನಿಗೆ ಸಾಹಿತ್ಯ, ಸಂಗೀತ ಇವುಗಳ ಗಂಧವೂ ಗೊತ್ತಿಲ್ಲ. ಅವನಿಗೆ ನಾವು ಯಾಕೆ ಗೌರವ ಕೊಡಬೇಕು? ವಿದ್ವತ್ತಿಗೆ ಏನೂ ಬೆಲೆಯಿಲ್ಲವೆ?” ನನಗೆ ಏನು ಹೇಳಬೇಕೋ ಗೊತ್ತಾಗಲಿಲ್ಲ. (ಈಗಲೂ ನನಗೆ ಅವರು ಮಾಡಿದ್ದುದು ಸರಿಯೋ ತಪ್ಪೋ ಗೊತ್ತಾಗುತ್ತಿಲ್ಲ.) ಇಂತಹುದೇ ಮತ್ತೊಂದು ಸಂದರ್ಭ ಅವರು ‘ಸ್ಟಾರ್ ಆಫ಼್ ಮೈಸೂರ್’ ಪತ್ರಿಕೆಗೆ ಸಂಗೀತ ಕಾರ್ಯಕ್ರಮಗಳನ್ನು ಕುರಿತ ತಮ್ಮ ವಿಮರ್ಶೆಯನ್ನು ಬರೆಯುತ್ತಿದ್ದಾಗ ಬಂದಿತಂತೆ. ಚೆನ್ನೈಯಿಂದ ಯುವ ಪ್ರತಿಭೆಯೊಬ್ಬ (ಪ್ರಾಯಃ, ಕೊಳಲು ವಿದ್ವಾಂಸ) ಮೈಸೂರಿಗೆ ಬಂದು, ತನ್ನ ಪ್ರೌಢಿಮೆಯನ್ನು ಪ್ರದರ್ಶಿಸಲು ಬಗೆಬಗೆಯ ಸ್ವರ-ಪ್ರಸ್ತಾರಗಳನ್ನು ನುಡಿಸಿದಾಗ, ಆ ಪ್ರದರ್ಶನವನ್ನು ಕುರಿತು ‘ಅದರಲ್ಲಿ ಗ್ರೇಸ್ ಇರಲಿಲ್ಲ; ಬರೀ ಒಣ ಪಾಂಡಿತ್ಯ, ತಾಳ-ಚಮತ್ಕಾರ’ ಇತ್ಯಾದಿ ಖಾರವಾಗಿ ಬರೆದು, ಅದು ಅನೇಕ ಚೆನ್ನೈ ಮೂಲದ ವಿದ್ವಾಂಸರನ್ನು ರೇಗಿಸಿತ್ತಂತೆ.

ಜಿಟಿಎನ್ ಅವರ ಕೃತಿಗಳ ಪ್ರಸಾರ-ವಿಮರ್ಶೆ ಇನ್ನೂ ಆಗಿಲ್ಲ; ಆದರೆ ಆಗಬೇಕಾಗಿದೆ. ಅವರ ಚಂದ್ರಶೇಖರ್ ಅವರ ಜೀವನ ಚರಿತ್ರೆ ಸುಬ್ರಹ್ಮಣ್ಯನ್ ಚಂದ್ರಶೇಖರ್ ಕನ್ನಡದಲ್ಲಿ ಬಂದಿರುವ ಅತ್ಯುತ್ತಮ ಜೀವನಚರಿತ್ರೆಗಳಲ್ಲಿ ಒಂದು; ಅದಕ್ಕೆ ಆ ವರ್ಷ (೨೦೦೩?) ಕ. ಸಾ. ಅಕಾಡೆಮಿಯ ಪುಸ್ತಕ ಬಹುಮಾನ ಬಂದಿತೋ ಇಲ್ಲವೋ ಗೊತ್ತಿಲ್ಲ; ಆದರೆ ಬರಬೇಕಾದ ಕೃತಿ ಅದು. ಅಸಾಧಾರಣ ವಿದ್ವತ್ತು, ತಮ್ಮ ನಾಯಕನ ಬಗ್ಗೆ ಇರುವ ಅನನ್ಯ ಪ್ರೀತಿ-ಗೌರವಗಳು, ಮತ್ತು ಸಂಶೋಧನೆಯಿಂದ ದೊರಕಿದ ಖಚಿತ ವಿವರಗಳು ಇವುಗಳಿಂದ ಕೂಡಿದ ಆ ಜೀವನಚರಿತ್ರೆಯನ್ನು ಓದುವುದೇ ಒಂದು ಅಪೂರ್ವ ಅನುಭವ.

ಜಿಟಿಎನ್ ಅವರ ವ್ಯಕ್ತಿತ್ವಕ್ಕೆ ಎಷ್ಟು ಮುಖಗಳು! ಪವಾಡಗಳನ್ನು ಬಯಲು ಮಾಡಲು ಡಾ. ನರೇಂದ್ರ ನಾಯಕ್ ಅವರೊಡನೆ ಕಾರ್ಯಕ್ರಮಗಳು-ಲೇಖನಗಳು, ವಿಜ್ಞಾನಿಗಳ ಜೀವನಚರಿತ್ರೆಗಳು-ಅನುವಾದಗಳು (ಐನ್‌ಸ್ಟೈನ್ ಜೀವನಚರಿತ್ರೆಯ ಅನುವಾದ), ಅಭಿಜಾತ ಸಂಗೀತದ ಬಗ್ಗೆ ಲೇಖನಗಳು ಮತ್ತು ಮಹಾಲಿಂಗಮ್ ಇತ್ಯಾದಿ ಮಹಾನ್ ಸಂಗೀತಗಾರರ ಸಂದರ್ಶನಗಳು, ಅಂಕಣ ಬರಹಗಳು . . . ಕೊನೆಗೂ ಅವರಿಗೆ ೨೦೦೭ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ದೊರಕಿದುದು (ಮತ್ತು ಅವರೊಡನೆಯೇ ನನಗೂ ಆ ಪ್ರಶಸ್ತಿ ದೊರಕಿದುದು) ನಮಗೆಲ್ಲರಿಗೂ ತುಂಬಾ ಸಂತೋ ದ ಸಂಗತಿ.

ತಾವು ನಂಬಿದ ತತ್ವ-ಆದರ್ಶಗಳಿಗೆ ಒಂದು ಚೂರೂ ಧಕ್ಕೆ ಬರದಂತೆ, ಅದಕ್ಕಾಗಿ ಎಷ್ಟು ಬೆಲೆ ತೆತ್ತಾದರೂ ಸರಿಯೆ, ಹಾಗೇ ಜಿಟಿಎನ್ ಬದುಕಿನುದ್ದಕ್ಕೂ ನಡೆದುಕೊಂಡರು. ಅನೇಕರು ಅವರ ಸ್ನೇಹ-ಪ್ರಾಮಾಣಿಕತೆ-ವಿದ್ವತ್ತಿಗೆ ಮಾರು ಹೋದರೆ ಮತ್ತೆ ಅನೇಕರು ಅವರದು ‘ಗರ್ವ, ತಾನು ಸರಿ-ಮಿಕ್ಕವರೆಲ್ಲರೂ ತಪ್ಪು ಎಂಬಂತಹ ಅತಿಯಾದ ಆತ್ಮಪ್ರತ್ಯಯ’ ಎಂದು ಅವರಿಂದ ದೂರವಿದ್ದರು. ಜಿಟಿಎನ್ ಮಾತ್ರ ಸಂತೋಷದಿಂದ, ತೃಪ್ತಿಯಿಂದ ತಮ್ಮ ದಾರಿಯಲ್ಲಿ ತಾವು ನಡೆದರು; ಅವರ ‘ಮುಗಿಯದ ಪಯಣ’ ಒಂದು ಘಟ್ಟದಲ್ಲಿ ಮುಗಿದಾಗಲೂ ತಮ್ಮ ದೇಹವನ್ನು ಆಸ್ಪತ್ರೆಯೊಂದಕ್ಕೆ ದಾನ ಮಾಡಿ ತಮ್ಮ ‘ಸಾಮಾಜಿಕ ಋಣ’ವನ್ನು ತೀರಿಸಿದರು. ಅವರು ಬರೆದ ಕೊನೆಯ ಕೃತಿ ಮುಗಿಯದ ಪಯಣವನ್ನು ನಾನು ಓದಿ, ಅದರ ಬಗ್ಗೆ ಅವರಿಗೆ ಬರೆದ ಒಂದು ಸಣ್ಣ ಪತ್ರದೊಡನೆ ಈ ಕಿರು ಲೇಖನವನ್ನು ಮುಗಿಸಬಹುದು:

“ಮಾನ್ಯ ಪ್ರೊ. ಜಿ. ಟಿ. ಎನ್. ಅವರಿಗೆ:

ನಮಸ್ಕಾರ. ಮೊನ್ನೆ ಕಾರ್ಯಕ್ರಮದಲ್ಲಿ ಅನಾರೋಗ್ಯದ ಕಾರಣದಿಂದ ನೀವು ಭಾಗವಹಿಸಲಿಲ್ಲವೆಂದು ತಿಳಿದು ತುಂಬಾ ಆತಂಕವಾಯಿತು. ಈ ಕಾಗದ ನಿಮ್ಮನ್ನು ತಲಪುವ ಹೊತ್ತಿಗೆ ನೀವು ಸಂಪೂರ್ಣ ಗುಣಮುಖರಾಗಿರುತ್ತೀರೆಂದು ನಂಬಿದ್ದೇನೆ.

ಈ ಕಾಗದವನ್ನು ಬರೆಯುತ್ತಿರುವುದರ ಮುಖ್ಯ ಕಾರಣ ನಿಮ್ಮ ಮುಗಿಯದ ಪಯಣವನ್ನು ಓದಿ ನನಗೆ ಆದ ಸಂತೋಷವನ್ನು ನಿಮ್ಮೊಡನೆ ಹಂಚಿಕೊಳ್ಳುವ ತವಕ. ನಿಜ ಹೇಳಬೇಕೆಂದರೆ, ಇಡಿಯಾಗಿ ನಿಮ್ಮ ಕೃತಿಯನ್ನು ನಾನು ಓದಲಿಲ್ಲ; ಈ ಮೊದಲೇ ನಿಮ್ಮ ನನ್ನ ಎನ್‌ಸಿಸಿ ದಿನಗಳು ಓದಿದ್ದೆನಾದ ಕಾರಣ ’ಪಯಣ’ದ ಮಧ್ಯದಿಂದ (ಎಂದರೆ, ನೀವು ಮಾಸ್ತಿಯವರ ಭಾವಕ್ಕೆ ಲಿಪಿಕಾರನಾಗಿ ತೊಡಗಿದಂದಿನಿಂದ ಪ್ರಾರಂಭಿಸಿ), ಕೃತಿಯನ್ನು ಪೂರ್ಣ ಓದಿ ಮುಗಿಸಿದೆ. ಇದು ’ಆತ್ಮಕಥನ’ವಾದರೂ ಒಂದು ರೋಚಕ ಕಾದಂಬರಿಯಂತೆ ಓದಿಸಿಕೊಳ್ಳುತ್ತದೆ ಮತ್ತು ಉದ್ದಕ್ಕೂ ನಿಮ್ಮ ನೇರ ಮಾತು-ಕೃತಿ ಮತ್ತು ಅಸೀಮ ಆತ್ಮಪ್ರತ್ಯಯ ಇವುಗಳು ಎದ್ದು ಕಾಣುತ್ತವೆ. ಮಾಸ್ತಿಯವರ ಸುಸಂಸ್ಕೃತ ನಡೆ-ನುಡಿ –ಸಿ. ವಿ. ರಾಮನ್ನರೊಡನೆ ನೀವು ಕಟ್ಟಿಕೊಂಡ ಸಾಹಸಮಯ ಸಾಹಚರ್ಯ (ಈ ಭಾಗವನ್ನು ಇಂಗ್ಲೀಷ್‌ನಲ್ಲಿ ಓದಿಯೂ ಕನ್ನಡದಲ್ಲಿ ಮತ್ತೆ ಓದುವುದು ಬೇಸರವಾಗಲಿಲ್ಲ) — ಬೆಂಗಳೂರು-ಮೈಸೂರು ವಿ. ವಿ.ಗಳಂತಹ ಸಂಸ್ಥೆಗಳೊಡನೆ ನೀವು ನಡೆಸಿದ ಹೋರಾಟ — . . . ವರಂತಹ ಕುಲಪತಿ(?)ಗಳನ್ನು “cheap thirdrate administrator” ಎಂದು ಸಂಬೋಧಿಸುವ ನಿಮ್ಮ ನೈತಿಕ ಸ್ಥೈರ್ಯ — ಅನುವಾದದಲ್ಲಿ ಚರ್ಚು ’Mr. Church’ ಆದದ್ದು — ನೀವು ಮಾಡಿಸಿದ ಮತ್ತು ಮಾಡಿಸದ ಮದುವೆಗಳು — ಇತ್ಯಾದಿಗಳನ್ನು ಓದುತ್ತಿರುವಾಗ, ನಿಜವಾಗಿಯೂ ಇದು ಕೇವಲ ಒಬ್ಬ ವ್ಯಕ್ತಿಯ ಆತ್ಮಕಥೆಯಲ್ಲ; ಒಂದು ಕಾಲಘಟ್ಟದ, ಕರ್ನಾಟಕದ, ಶೈಕ್ಷಣಿಕ-ಸಾಹಿತ್ಯಕ ಆಯಾಮದ ಚರಿತ್ರೆ ಎಂದು ಭಾಸವಾಗುತ್ತದೆ. ಇದಕ್ಕೆ ಕಾರಣ ಪ್ರತಿಯೊಂದು ಘಟನೆಯನ್ನೂ ಆಸಕ್ತಿಯಿಂದ ನೀವು ನಿರೂಪಿಸುವುದು ಮತ್ತು ಅಂತಹ ನಿರೂಪಣೆಯ ಹಿನ್ನೆಲೆಯಲ್ಲಿರುವ ನಿಮ್ಮ ಜೀವನೋತ್ಸಾಹ (ಇನ್ನೊಬ್ಬರ ಮಾತನ್ನು ಕದಿಯುವುದಾದರೆ ’Lust for life’ ಎಂದರೆ ಸರಿಯಾದೀತೆ?). ಒಟ್ಟಿನಲ್ಲಿ, ನಿಜವಾಗಿಯೂ ನಿಮ್ಮ ಕೃತಿಯ ಓದಿನಿಂದ ನನಗೆ ಸಂತೋಷವಾಯಿತು ಮತ್ತು ನನ್ನ ಅನುಭವಲೋಕ ವಿಸ್ತರಿಸಿತು. ಕೃತಿಯನ್ನು ನನಗೆ ಕಳಿಸಿಕೊಟ್ಟ ನಿಮ್ಮ ಪ್ರೀತಿಗೆ ಕೃತಜ್ಞನಾಗಿದ್ದೇನೆ.

ಇನ್ನು, ದೂರವಾಣಿಯಲ್ಲಿ ಮಾತನಾಡುವಾಗ ನೀವು ಪ್ರಸ್ತಾಪಿಸಿದ ನನ್ನ ಭಾಷಣದ ಬಗ್ಗೆ. ನಾನು ಮೊದಲಿಗೆ ’ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಬೇಕೆಂದು ಹೋರಾಡುವುದು ಹೇಗೆ ಅರ್ಥಹೀನ; ಹೇಗೆ ಎಲ್ಲಾ ಭಾಷೆಗಳೂ ಶಾಸ್ತ್ರಬದ್ಧವಾಗಿಯೇ ಇರುತ್ತವೆ’ ಎಂಬುದನ್ನು ಹೇಳಿ, ಅನಂತರ ’ಯಾವುದೇ ಸಾಹಿತ್ಯಕ್ಕೆ ಎರಡು ಆಯಾಮಗಳಿರುತ್ತವೆ; ಇವನ್ನು ಒಳಮೈ ಮತ್ತು ಹೊರಮೈ ಎಂದು ಕರೆಯಬಹುದು. ಇಂದು (ಎಂದರೆ ಕಳೆದೆರಡು ದಶಕಗಳಿಂದ) ಯಾವ ಚಳುವಳಿಯ ಅಬ್ಬರವೂ ಇಲ್ಲದಿರುವುದರಿಂದ ಕನ್ನಡದ ಒಳಮೈ ಬಹುಧ್ವನಿಯುಕ್ತವಾಗಿ ವಿವಿಧ ಕ್ಷೇತ್ರಗಳಲ್ಲಿ ವಿಶಿಷ್ಟ ಕೃತಿಗಳು ಹೊರಬರುತ್ತಿವೆ. ಆದರೆ, ಅದರ ’ಹೊರಮೈ’ ಚಿಂತನೆಗೆ ಕಾರಣವಾಗಿದೆ; ಏಕೆಂದರೆ, ಸರಕಾರದ ಸಗಟು ಖರೀದಿಯಿಂದಾಗಿ ಪುಸ್ತಕಗಳು ಸರಕಾರದ / ಗ್ರಂಥಾಲಯಗಳ ಉಗ್ರಾಣಗಳಲ್ಲಿ ಕೊಳೆಯುತ್ತವೆ; ಮತ್ತು ಸಗಟು ಖರೀದಿಗಾಗಿಯೇ ಇಂದು ಖಾಸಗಿ ಪ್ರಕಾಶಕರು ಕೇವಲ ೫೦೦ ಪ್ರತಿಗಳನ್ನು ಮುದ್ರಿಸಿ, ತೃಪ್ತರಾಗುತ್ತಾರೆ; ಪುಸ್ತಕವ್ಯಾಪಾರಿಗಳಿಗೆ ಹಾಗೂ ಓದುಗರಿಗೆ ಪುಸ್ತಕಗಳು ದೊರಕುವುದೇ ಇಲ್ಲ. ಇದು ವಿತರಣೆಯ ಸಮಸ್ಯೆಯಾದರೆ, ಇನ್ನು ಎಲ್ಲಾ ವಿವಿಗಳ/ಅಕಾಡೆಮಿಗಳ ’೫೦%’ ರಿಯಾಯಿತಿ ಮಾರಾಟದಿಂದ ಪುಸ್ತಕ ವ್ಯಾಪಾರಿಗಳು ಸೋಲುತ್ತಿದ್ದಾರೆ. ಅತಿ ಮುಖ್ಯವಾಗಿ, ಇಂದು ತೀವ್ರ ಅಸಹನೆಯ ವಾತಾವರಣ ಸಾಹಿತ್ಯ ಲೋಕವನ್ನು ಆವರಿಸಿದೆ; ಇತ್ಯಾದಿ.

ಆದರೆ ಇಷ್ಟು ಸ್ಪಷ್ಟವಾಗಿ ಈ ಅಂಶಗಳನ್ನು ಅಂದು ನಾನು ನಿರೂಪಿಸಿದೆನೋ ಇಲ್ಲವೋ ಗೊತ್ತಿಲ್ಲ. ಸಭೆಯಲ್ಲಿ ನೀವಿದ್ದರೆ ಚೆನಾಗಿರುತ್ತಿತ್ತು. ಇರಲಿ; ಪತ್ರವು ದೀರ್ಘವಾಯಿತು. ತಲಪಿದುದಕ್ಕೆ ದೂರವಾಣಿಯ ಮೂಲಕ ದಯವಿಟ್ಟು ತಿಳಿಸಿ. ವಂದನೆಗಳೊಡನೆ,

ನಿಮ್ಮ,

ರಾಮಚಂದ್ರನ್

ಟಿಪ್ಪಣಿ: ನಾನು ಪತ್ರದಲ್ಲಿ ಉಲ್ಲೇಖಿಸಿರುವ ಕಾರ್ಯಕ್ರಮ, ಪ್ರಾಯಃ, (೨೦೦೭/೦೮?) ರಲ್ಲಿ ನಡೆದ ‘ಮೈಸೂರು ಜಿಲ್ಲಾ ಸಾಹಿತ್ಯ ಸಮ್ಮೇಳನದ ‘ಸಮಾರೋಪ ಭಾಷಣ.’

- ಸಿ. ಎನ್. ರಾಮಚಂದ್ರನ್

ವಿದ್ವತ್ತು, ಪ್ರೀತಿ, ಶ್ರದ್ಧೆ ಮುಪ್ಪುರಿಗೊಂಡ ಆಜನ್ಮ ಸಾಹಿತ್ಯ ಪ್ರಸಾರದ ಕಿಂಕರ…
ಪ್ರೊ| ಸಿ.ಎನ್. ರಾಮಚಂದ್ರನ್! ಆತ್ಮೀಯ ವಲಯಗಳಲ್ಲಿ ಸಿಎನ್ನಾರ್ ಎಂದೇ ಖ್ಯಾತರಾದ ಇವರ ಕಿರು ಕಾದಂಬರಿ – ಶೋಧವನ್ನು ನಾನು ಮಾರಿದವನೇ ಆದರೂ ಕನ್ನಡದ ವಿಮರ್ಶಕರಲ್ಲಿ ಇವರು ಗಣ್ಯರೆಂದು ತಿಳಿದವನೇ ಆದರೂ ಅವರು ಮಂಗಳೂರು ವಿವಿನಿಲಯಕ್ಕೆ (ಸ್ನಾತಕೋತ್ತರ ಕೇಂದ್ರದ) ಇಂಗ್ಲಿಶ್ ಪ್ರಾಧ್ಯಾಪಕ ಹಾಗೂ ವಿಭಾಗ ಮುಖ್ಯಸ್ಥರಾಗಿ ಬರುವವರೆಗೆ ನನಗೆ ವೈಯಕ್ತಿಕ ಪರಿಚಯಕ್ಕೆ ದಕ್ಕಿರಲಿಲ್ಲ. ಅವರು ಮಂಗಳೂರಿಗೆ ಬಂದ ಹೊಸತರಲ್ಲೇ ಒಮ್ಮೆ ನನ್ನಲ್ಲಿಗೆ ಬಂದಾಗ ಮನವಿ ಮಾಡಿಕೊಂಡರು, “ದಯವಿಟ್ಟು ಇಂಗ್ಲಿಶ್ ಸಾಹಿತ್ಯಕ್ಕೆ ಸಂಬಂಧಿಸಿದಂತೆ ಬಝಾರ್ ಗೈಡ್‌ಗಳನ್ನು ತರಿಸಬೇಡಿ.” ಗಮನಿಸಿ – ಇದು ಇಂಗ್ಲಿಶ್ ವಿಭಾಗ ಮುಖ್ಯಸ್ಥನ ಆಜ್ಞೆ ಅಲ್ಲ. ವ್ಯಾಪಾರಿಯೊಬ್ಬನ ಬೇಕು ಬೇಡಗಳನ್ನು ನಿರ್ದೇಶಿಸುವ, ಸ್ವಯಂ ಆರೋಪಿತ ಧರ್ಮದರ್ಶಿತ್ವದ ಗರ್ವವೂ ಅಲ್ಲ. ‘ಮಾಸ್ಟರ್’ಗಳಾಗಬೇಕಾದ ಅವರ ವಿದ್ಯಾರ್ಥಿಗಳು ಮೂಲ ಪಠ್ಯಗಳನ್ನು ಅರ್ಥೈಸಿಕೊಳ್ಳಲು ಒಳದಾರಿ ಹಿಡಿಯಬಾರದೆಂಬ ಕಾಳಜಿ. ನನ್ನಲ್ಲಿ ‘ಇಂಗ್ಲಿಶ್ ಎಮ್ಮೆ’ (ಗೊಡ್ಡು) ಗುರುತಿಸಿದ್ದರು ಮತ್ತು ತಮ್ಮ ಆಜನ್ಮ ಸಾಹಿತ್ಯ ಪ್ರಸಾರದ ಕೈಂಕರ್ಯದಲ್ಲಿ ನನಗೂ ಒಂದು ಗೌರವದ ಸ್ಥಾನ ಕಲ್ಪಿಸಿದ್ದರು, ಕಿರಿಯ ಗೆಳೆಯನಾಗಿ ವಿಶ್ವಾಸಕ್ಕೂ ತೆಗೆದುಕೊಂಡಿದ್ದರು! (ನಾನು ಮತ್ತೆ ಗೈಡ್‌ಗಳನ್ನು ತರಿಸಲಿಲ್ಲ ಎಂದು ಬೇರೆ ಹೇಳಬೇಕೇ?)

ಸಿಎನ್ನಾರ್ ತಮ್ಮ ವೈಯಕ್ತಿಕ ಪುಸ್ತಕ ಖರೀದಿಗೂ ಸಾಂಸ್ಥಿಕ ಪುಸ್ತಕ ಶಿಫಾರಸಿಗೂ ಸ್ವತಃ ಅಂಗಡಿಯ ಕಪಾಟುಗಳನ್ನು ನೋಡಿಯೇ ಮುಂದುವರಿಯುತ್ತಿದ್ದರು. ನಾನವರಿಗೆ ಭಾರೀ ಪುಸ್ತಕಗಳೇನೂ ಕೊಟ್ಟವನಲ್ಲ. ಆದರೆ ಇಂದು ಯೋಚಿಸುವಾಗ ಆ ಭೇಟಿಗಳು ಅವರಿಗೆ ಒಟ್ಟಾರೆ ಪುಸ್ತಕ ಮಾರುಕಟ್ಟೆಯ ಮನಸ್ಸನ್ನು ತಿಳಿದುಕೊಳ್ಳುವುದಕ್ಕೂ ಅನುಕೂಲವಾಗುತ್ತಿದ್ದಿರಬೇಕು ಅನಿಸುತ್ತದೆ. ಅದಕ್ಕೂ ಮಿಗಿಲಾಗಿ ಅವರು ಹಾಗೆ ಬಂದಾಗೆಲ್ಲಾ ನನ್ನ ಪುಸ್ತಕ ಮಾರಾಟದ್ದೂ ಇತರತ್ರವೂ (ಪರಿಸರ, ಬಳಕೆದಾರ, ಯಕ್ಷಗಾನ ಇತ್ಯಾದಿ) ಒದಗಿದ ಹೋರಾಟದ ಕಡತಗಳ (‘ಜಗಳಗಂಟ’ ಫೈಲ್ ಎಂದೇ ತಮಾಷೆಗೆ ಹೆಸರಿಸಿದ್ದೆ) ಎಷ್ಟು ಚಿಲ್ಲರೆ ಪ್ರಸಂಗವಾದರೂ ಕೇಳಿ ಪಡೆದು, ವಿವರವಾಗಿ ಓದಿ, ಚರ್ಚಿಸುತ್ತಿದ್ದರು. ಇದು ನನಗೂ ಹೆಚ್ಚಿನ ನೈತಿಕ ಬಲ ಕೊಡುತ್ತಿತ್ತು. ಅದಕ್ಕೂ ಮಿಗಿಲಾಗಿ ಈ ಮಥನದ ಒಳ್ಳೆಯ ಅಂಶಗಳನ್ನು ಸಿಎನ್ನಾರ್ ತಮ್ಮ ವ್ಯಾಪ್ತಿಯ ಕಾರ್ಯರಂಗದಲ್ಲಿ ಅಳವಡಿಸಿಕೊಂಡು, ಪುಸ್ತಕೋದ್ಯಮವನ್ನು ಹೆಚ್ಚು ಹಸನಾಗುವಂತೆ ಮಾಡಿದ್ದಕ್ಕೆ ನಾನೆರಡು ಉದಾಹರಣೆಗಳನ್ನು ಇಲ್ಲಿ ಹೇಳಲೇ ಬೇಕು.

ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ತನ್ನ ವರ್ಷಾವಧಿ ಪುರಸ್ಕಾರಕ್ಕೆ ಲೇಖಕ, ಪ್ರಕಾಶಕರಿಂದ ಅರ್ಜಿ ಕರೆಯುತ್ತಿದ್ದದ್ದನ್ನು (ಜೊತೆಗೆ ಆರೇಳು ಪ್ರತಿ ಪುಸ್ತಕ ಉಚಿತವಾಗಿ ಹೋಗಲೇಬೇಕಿತ್ತು) ಒಂದೋ ಎರಡೋ ವರ್ಷದ ಮಟ್ಟಿಗೆ ಪರಿಷ್ಕರಿಸಿಕೊಂಡದ್ದು ಸೀಯೆನ್ನಾರ್ ಪ್ರವೇಶದಿಂದಲೇ ಎಂದು ನಾನು ತಿಳಿದಿದ್ದೇನೆ. ಆಗ ಅಕಾಡೆಮಿಯ ಆಯ್ಕಾ ಸದಸ್ಯರಾದವರು ಪರಿಚಿತ ವಲಯಗಳಲ್ಲೂ ಸಮೀಪದ ಪುಸ್ತಕ ಮಳಿಗೆಗಳಲ್ಲೂ ಖುದ್ದು ಪುಸ್ತಕಗಳನ್ನು ನೋಡಿ, ಕೊಂಡು, ಶಿಫಾರಸು ಮಾಡಿದ್ದರು.

ನೇರ ನಾನನುಭವಿಸಿದ ಇನ್ನೊಂದು ಪರಿಣಾಮ – ಮಂ.ವಿ.ವಿ ನಿಲಯದ ಗ್ರಂಥಾಲಯಕ್ಕೆ ಸಂಬಂಧ ಪಟ್ಟದ್ದು, ನಭೂತೋ ಎನ್ನುವಂತದ್ದು! ಗ್ರಂಥಾಲಯಕ್ಕೆ (ಸಾಮಾನ್ಯವಾಗಿ ಎಲ್ಲಾ ಸರಕಾರೀ ಅನುದಾನಿತ ಸಂಸ್ಥೆಗಳಿಗೂ ಇದು ಬಿಟ್ಟದ್ದಲ್ಲ!) ಸದಾ ದಾನಿ-ನಾನುತನದ ಶ್ರೇಷ್ಠಸ್ತಿಕೆ (superiority complex), ಪುಸ್ತಕ ಒದಗಣೆದಾರರಿಗೆ ದೀನ-ನಾನುತನವೇ (inferiority complex) ರೂಢಿಸಿಹೋಗಿದೆ! ಆದರೆ ನನ್ನ ಧೋರಣೆ – ಸ್ಪಷ್ಟ ಸೂಚನೆಯಿಲ್ಲದೆ ಎಂದೂ ಯಾವುದೇ ಸಂಸ್ಥೆಯನ್ನು, ಇಲಾಖಾ ಅಧ್ಯಾಪಕ ಅಥವಾ ಅಧಿಕಾರಿಯನ್ನು ನನ್ನಿಂದ ಪುಸ್ತಕ ಕೊಳ್ಳಲು ಕೇಳಿಕೊಂಡದ್ದಿಲ್ಲ, ವ್ಯಾಪಾರಕ್ಕಾಗಿ ಸ್ನೇಹ ಬೆಳೆಸಿದ್ದೂ ಇಲ್ಲ. ಆದರೂ ನನ್ನ ಪುಸ್ತಕ ವ್ಯಾಪಾರೀತನದ ಮೊದಲ ದಿನಗಳಲ್ಲಿ, ಯಾವುದೇ ಗುಣಪಕ್ಷಪಾತಿಯಾದ ವಿವಿ ಅಧ್ಯಾಪಕನೊಬ್ಬ ತಾನಾಗಿಯೇ ಒಂದಷ್ಟು ಪುಸ್ತಕಗಳು ಬೇಕೆಂದು ಆರಿಸಿದರೆ ನಾನು ಸಹಕರಿಸುತ್ತಿದ್ದೆ. ವಿವಿನಿಲಯದ ನಿಯಮಾನುಸಾರ ಅದನ್ನು ದ್ವಿಪ್ರತಿಗಳಲ್ಲಿ ‘ಆಯ್ಕಾಪಟ್ಟಿ’ (Approval Note) ಮಾಡಿ ನನ್ನ ಪ್ರತಿನಿಧಿಯ ಮೂಲಕ ಕೊಣಾಜೆಗೆ ಕಳಿಸಿಕೊಡುತ್ತಿದ್ದೆ. ನನ್ನ ಪ್ರತಿನಿಧಿ ಗ್ರಂಥಾಲಯದ ರಿಜಿಸ್ಟರಿನಲ್ಲಿ ಒಪ್ಪಿಸಲು ಒಯ್ದ ಅಷ್ಟೂ ಪುಸ್ತಕಗಳನ್ನು ನಮೂದಿಸಿ, ನಮ್ಮ ಪಟ್ಟಿಯೊಂದರ ಮೇಲೆ ‘ಆಯ್ಕೆಗೆ ಬಂದಿದೆ’ ಮುದ್ರೆ ಒತ್ತಿಸಿಕೊಂಡು ಬರಬೇಕು. ಅನಂತರ ಅವರ ಅನುಕೂಲದಲ್ಲಿ ಗ್ರಂಥಾಲಯ ‘ಇದು ಇಲ್ಲ’ ಎಂದೋ ಅಕಸ್ಮಾತ್ ಇದ್ದರೆ ‘ಹೆಚ್ಚುವರಿ ಪ್ರತಿ ಬೇಕೋ’ ಎಂದು ಷರಾ ಹಾಕಿ ವಿಷಯಕ್ಕೆ ಸಂಬಂಧಿಸಿದ ಇಲಾಖೆಗೆ ಕಳಿಸುತ್ತಿತ್ತು. ಅಲ್ಲಿನ ‘ಬೇಕು/ಬೇಡ’ಗಳನ್ನು ತರಿಸಿಕೊಂಡು ನನಗೆ ಬಿಲ್ ಮಾಡಲು ಆದೇಶ ಹೊರಡುತ್ತಿತ್ತು. ಬಿಲ್ ತ್ರಿಪ್ರತಿಗಳಲ್ಲಿ ಕೊಟ್ಟು, ಹೆಚ್ಚುವರಿ ಪ್ರತಿಗಳನ್ನು ಕೊಡುವುದೋ ತಿರಸ್ಕೃತ ಪುಸ್ತಕಗಳನ್ನು ವಾಪಾಸು ತರುವುದೋ ಮತ್ತೆ ನನ್ನ ಪ್ರತಿನಿಧಿಯೇ ಕೊಣಾಜೆಗೆ ಹೋಗಿ ಮಾಡಬೇಕಾಗುತ್ತಿತ್ತು. ಗಮನಿಸಿ, ಪ್ರತಿ ಓಡಾಟಕ್ಕೂ (ಖರ್ಚಂತೂ ಉಂಟೇ) ನಾನು ಪ್ರತಿನಿಧಿಯನ್ನು ಅರ್ಧ ದಿನದ ಮಟ್ಟಿಗೆ ನಿತ್ಯದ ಕೆಲಸದಿಂದ ಕಳೆದುಕೊಳ್ಳಬೇಕಾಗುತ್ತಿತ್ತು. ಇಷ್ಟೆಲ್ಲಾ ಆದ ಮೇಲೂ ಬಿಲ್ಲು ಅಲ್ಲೇ ಸುಮಾರು ಅವಸ್ಥಾಂತರಗಳನ್ನು ದಾಟಿ ನನಗೆ ಪಾವತಿ ಬರುವಾಗ ತಿಂಗಳು ಎರಡು ಮೂರು ಬಿಡಿ, ಎಷ್ಟೋ ಬಾರಿ ಆರ್ಥಿಕ ವರ್ಷವೇ ಕಳೆದು ಹೋದದ್ದೂ ಇತ್ತು. ವಿವಿನಿಲಯದೊಡನೆ ಅಂಥಾ ಅನುಭವಗಳು ಹೆಚ್ಚಿದ ಮೇಲೆ, ಅಂದರೆ ಸಿಎನ್ನಾರ್ ಬರುವ ಕಾಲಕ್ಕೆ, ನಾನು ‘ವಿವಿನಿಲಯಕ್ಕೆ ಪುಸ್ತಕ ಮುಟ್ಟಿಸಲು ಅನುಕೂಲವಿಲ್ಲ’ ಎಂದು ಹೇಳಲು ಕಲಿತಿದ್ದೆ. ಆಯ್ಕಾಪಟ್ಟಿಯ ಅವಕಾಶ ಹಾಗಿರಲಿ, ಪಾವತಿ ಕೊಡದೇ ಪುಸ್ತಕವನ್ನೇ ಕೊಡುವುದಿಲ್ಲ ಎನ್ನುವ ‘ದೊಡ್ಡಸ್ತಿಕೆ’ ಬೆಳೆಸಿಕೊಂಡಿದ್ದೆ! ಸಿಎನ್ನಾರ್ ವಸ್ತುಸ್ಥಿತಿಯನ್ನು ಚೆನ್ನಾಗಿ ಅರ್ಥ ಮಾಡಿಕೊಂಡರು. ದಿನಕ್ಕೆ ಹತ್ತೆಂಟು ಸಲ ಯಾವ್ಯಾವುದೋ ಕೆಲಸಕ್ಕೆ ಮಂಗಳೂರಿಗೆ ಓಡಾಡುವ ವಿವಿನಿಲಯದ ವ್ಯಾನ್ ಮೂಲಕ ಪುಸ್ತಕದ ಕಟ್ಟು ತರಿಸಿಕೊಳ್ಳುತ್ತಿದ್ದರು. ಎಷ್ಟೋ ಬಾರಿ ಪೂರ್ಣ ಮುಂಪಾವತಿ ಕೊಟ್ಟು, ಇಲ್ಲವಾದರೆ ವೈಯಕ್ತಿಕ ಜವಾಬ್ದಾರಿಯ ಮೇಲೆ (ನನ್ನ ಒಪ್ಪಿಗೆಯೊಡನೆ) ಹದಿನೈದೇ ದಿನಗಳಲ್ಲಿ ಪಾವತಿ ಒದಗಿಸುವ ವ್ಯವಸ್ಥೆಯನ್ನು ಯಾವುದೇ ಪಕ್ಷಪಾತದ ಸೋಂಕಿಲ್ಲದಂತೆ ನಡೆಸಿಕೊಟ್ಟಿದ್ದರು. (ಈ ವಿಚಾರದಲ್ಲಿ ವಿವಿನಿಲಯದ ಕನ್ನಡ ವಿಭಾಗದ ಹಲವು ಅಧ್ಯಾಪಕ ಗೆಳೆಯರೂ ಸ್ಮರಣಾರ್ಹರೇ) ಅಂಥಲ್ಲೂ ಒಮ್ಮೆ ಯಾವುದೋ ಪ್ರಾಮಾಣಿಕ ಕಾರಣಕ್ಕೆ ವಿವಿನಿಲಯ ಪಾವತಿ ವಿಳಂಬಿಸಿದಾಗ ಸಿಎನ್ನಾರ್ ನನಗೆ ವೈಯಕ್ತಿಕ ಚೆಕ್ ಕೊಟ್ಟು “ವಿವಿನಿಲಯದಿಂದ ನಿಮಗೆ ಚೆಕ್ ಬಂದಾಗ ನನ್ನ ಹಣ ಮರಳಿಸಿದರೆ ಸಾಕು” ಎಂದದ್ದು ನನ್ನ ಲೆಕ್ಕಕ್ಕೆ ನಭೂತೋ ಎನ್ನುವ ನೆನಪು!

ಕುಂದಾಪುರದ ಭಂಡಾರ್ಕರ್ಸ್ ಕಾಲೇಜಿನಲ್ಲಿ ಕನ್ನಡ ಕಾದಂಬರಿಯ ನೂರು ವರ್ಷದ ಕುರಿತೊಂದು ವಿಶೇಷ ಗೋಷ್ಠಿ ನಡೆಸಿದಾಗ ಸಿಎನ್ನಾರ್ ಒಂದು ಅವಧಿಯ ಅಧ್ಯಕ್ಷ, ನಾನು ಓರ್ವ ಪ್ರಬಂಧ(ಕೋ)ಕಾರ. ಬಸ್ಸಿನಲ್ಲಿ ಹೋಗಿ ಬರುವ ದಾರಿಯುದ್ದಕ್ಕೂ ಪುಸ್ತಕೋದ್ಯಮದ ಕುರಿತು ಅವರು ನನ್ನೊಡನೆ ನಡೆಸಿದ ವೈಚಾರಿಕ ಚರ್ಚೆ ತುಂಬಾ ಅರ್ಥಪೂರ್ಣವಾಗಿತ್ತು ಎಂದಷ್ಟೇ ಇಂದು ನೆನಪಿಸಿಕೊಳ್ಳಬಲ್ಲೆ. ನನ್ನ ಐತಿಹಾಸಿಕ ಪ್ರಜ್ಞೆಯ ಕೊರತೆಯಿಂದ ಅದನ್ನಂದು ದಾಖಲಿಸಿಕೊಳ್ಳಲಿಲ್ಲ ಮತ್ತು ಇಂದು ನೆನಪಿಸಿಕೊಳ್ಳಲಾರೆ ಎನ್ನುವುದಕ್ಕೆ ವಿಷಾದವಿದೆ.

ಸಿಎನ್ನಾರ್ ತನ್ನನುಭವಕ್ಕೆ ಹೊರಗಿನದ್ದೇ ಆದರೂ ತಾತ್ವಿಕ ಚರ್ಚೆಗಳಿಗೆ ಅವಕಾಶ ಸಿಕ್ಕಲ್ಲೆಲ್ಲಾ ಭಾಗಿಯಾಗುವ ಉತ್ಸಾಹ ಉಳಿಸಿಕೊಂಡಿದ್ದಾರೆ. ಮಂಟಪ ಪ್ರಭಾಕರ ಉಪಾಧ್ಯರ ಏಕವ್ಯಕ್ತಿ ಪ್ರಯೋಗದ ಕುರಿತು ತೀವ್ರ ಚರ್ಚೆ ನಡೆಯುತ್ತಿದ್ದ ದಿನಗಳಲ್ಲಿ ನಾನೊಂದು ಅನೌಪಚಾರಿಕ ಚರ್ಚಾಕೂಟ (ಸಾರ್ವಜನಿಕಕ್ಕೆ ತಿಳಿಸಿ ಅಲ್ಲ) ನನ್ನ ಮನೆಯಲ್ಲೇ ನಡೆಸಿದ್ದೆ. ಒಟ್ಟಾರೆ ಪರಿಕಲ್ಪನೆಯ ಮಿದುಳು – ಶತಾವಧಾನಿ ಗಣೇಶ್ ಮತ್ತು ಪ್ರಯೋಗ ಪಟು ಉಪಾಧ್ಯ ಅವರ ಹಿಮ್ಮೇಳದ ಕಲಾವಿದರೂ ಅಂದು ಬಂದಿದ್ದರು. ಆ ಪ್ರಯೋಗಗಳ ಬಗ್ಗೆ ದೊಡ್ಡ ಅಪಸ್ವರ ತೆಗೆದ ದೇವು ಹನೆಹಳ್ಳಿಯೂ ಇದ್ದರು. ನನ್ನ ಒತ್ತಾಯಕ್ಕೆ ಪ್ರಭಾಕರ ಜೋಶಿ ಮತ್ತು ಸ್ಥಳೀಯರೇ ಆದ ಕುಂಬಳೆ ಸುಂದರರಾವ್, ಮುರಳೀಧರ ಪ್ರಭು, ಮನೋಹರ ಉಪಾಧ್ಯ ಮುಂತಾದವರೂ ಉಡುಪಿಯಿಂದ ಮುರಳಿ ಕಡೆಕಾರ್ ವಿಶೇಷ ಕಾರು ಮಾಡಿ ಸೇರಿಸಿಕೊಂಡು ಬಂದಿದ್ದ ರಾಘವ ನಂಬಿಯಾರ್, ಬನ್ನಂಜೆ ಸಂಜೀವ ಸುವರ್ಣ, ಉದ್ಯಾವರ ಮಾಧವಾಚಾರ್ ಕೂಡಾ ಭಾಗವಹಿಸಿದ್ದರು. ಮುಂದಾಗಿಯೇ ಈ ಕಲಾಪದ ಸುಳಿವು ಸಿಕ್ಕಿದ ಸಿಎನ್ನಾರ್, ತನಗೆ ಭಾರೀ ಯಕ್ಷಗಾನವಾಗಲೀ ಸದ್ಯ ಚರ್ಚೆಯಲ್ಲಿರುವ ಏಕವ್ಯಕ್ತಿ ಪ್ರಯೋಗದ್ದೇ ಆದರೂ ವೀಕ್ಷಣಾನುಭವ ಇಲ್ಲ. ಆದರೆ ನಡೆಯುವ ಚರ್ಚೆಯನ್ನು ಮುಖ್ಯವಾಗಿ ಕೇಳುವ ಕುತೂಹಲವಿದೆ. ಭಾಗವಹಿಸಬಹುದೇ ಎಂದು ಕೇಳಿ, ಬಂದು ತೊಡಗಿಕೊಂಡಿದ್ದರು. ಅದಕ್ಕೆ ಅವರ ಮೌಲಿಕ ಅಭಿಪ್ರಾಯಗಳನ್ನೂ ಕೊಟ್ಟದ್ದನ್ನು ಇಲ್ಲೇ ಹಿಂದಿನ ನನ್ನ ಲೇಖನಗಳಲ್ಲಿ ನೀವು ಗಮನಿಸಬಹುದು.

ಸಿಎನ್ನಾರ್ ನನ್ನದೇ ವ್ಯವಸ್ಥೆಯ ಮೂರು ಔಪಚಾರಿಕ ಕಾರ್ಯಕ್ರಮಗಳಲ್ಲಿ ತುಂಬಾ ಪ್ರೀತಿಯಿಂದ, ಶ್ರದ್ಧೆಯಿಂದ (ಇವೆರಡೂ ಅವರು ವಹಿಸಿಕೊಂಡ ಯಾವುದೇ ಹೊಣೆಯಲ್ಲೂ ಎದ್ದು ಕಾಣುವ ಗುಣಗಳೇ ಆಗಿವೆ) ಮುಖ್ಯ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಅಭಯಾರಣ್ಯದಲ್ಲಿ ನಡೆದ ಶಿಬಿರದಲ್ಲಿ ಅವರ ಪಾತ್ರ ನೀವೀಗಾಗಲೇ ಓದಿದ್ದೀರಿ, ನಾನು ಮರುಜಪಿಸುವುದಿಲ್ಲ. ಮತ್ತೊಂದು ಕನ್ನಡದ ಖ್ಯಾತ ಕತೆಗಾರ ಬಾಗಲೋಡಿ ದೇವರಾಯರ (೧೯೨೭-೮೫) ಕುರಿತು ನಾನು ಪ್ರಕಟಿಸಿದ ಸಂಸ್ಮರಣ ಗ್ರಂಥ – ‘ದೇವಸ್ಮರಣೆ’ಯ (೨೦೦೩, ಸಂಪಾದಕ: ಜಿ.ಟಿ. ನಾರಾಯಣ ರಾವ್, ಸದ್ಯ ಪ್ರತಿಗಳು ಮುಗಿದಿವೆ) ಲೋಕಾರ್ಪಣೆ. ಅದರ ಕುರಿತ ವಿವರಗಳನ್ನು ಮುಂದೆಂದಾದರೂ ನಾನು ವಿಸ್ತರಿಸುತ್ತೇನೆ.

ಮೂರನೆಯದೂ ಹೀಗೇ ನನ್ನ ಇನ್ನೊಂದು ಪ್ರಕಟಣೆ – ದುಃಖಾರ್ತರು (೨೦೦೨, ವಿಕ್ಟರ್ ಹ್ಯೂಗೋನ ಕಾದಂಬರಿಯ ಕನ್ನಡ ಅವತರಣಿಗೆ – ಎ.ಪಿ.ಸುಬ್ಬಯ್ಯ. ಪರಿಷ್ಕೃತ ಎರಡನೇ ಮುದ್ರಣ ಬೆಲೆ ರೂ ಎಪ್ಪತ್ತು ಮಾತ್ರ) ಲೋಕಾರ್ಪಣದ್ದೇ ವೃತ್ತಾಂತ. ಆದರೆ ಇಲ್ಲಿನೊಂದು ಸಿಎನ್ನಾರ್ ವೈಶಿಷ್ಟ್ಯವನ್ನು ನಾನು ಎತ್ತಿ ಆಡಲೇಬೇಕು.

ದುಃಖಾರ್ತರು ಅನುವಾದಕ ಎ.ಪಿ.ಸುಬ್ಬಯ್ಯನವರ (೧೯೦೧-೭೭, ನನ್ನ ಅಜ್ಜ) ಕಾರ್ಯಕ್ಷೇತ್ರ ಪುತ್ತೂರು. ಸಹಜವಾಗಿ ನಾನು ಲೋಕಾರ್ಪಣ ಸಮಾರಂಭವನ್ನು ಪುತ್ತೂರಿನ ಸಭಾಭವನವೊಂದರಲ್ಲಿ, ಅದೊಂದು ಆದಿತ್ಯವಾರ ಸಂಜೆ, ಸುಪ್ರಸಿದ್ಧ ಸಾಹಿತ್ಯ ಪರಿಚಾರಕ ಬೋಳಂತಕೋಡಿ ಈಶ್ವರ ಭಟ್ಟರ ಸಹಯೋಗದಲ್ಲಿ ಆಯೋಜಿಸಿದ್ದೆ. ಅದರ ಖಾಸಾ ಸಂಭ್ರಮವನ್ನು ನನ್ನೆಲ್ಲಾ ಸೋದರ ಮಾವಂದಿರು, ಚಿಕ್ಕಮ್ಮಂದಿರೂ ಬೆಳಿಗ್ಗೆಯೇ ಒಟ್ಟಾಗಿ ಮೂಲ ಮನೆಯಲ್ಲಿ ನಡೆಸಲಿದ್ದರು. ಅದರಲ್ಲೂ ಭಾಗವಹಿಸಲು ನನ್ನೆಲ್ಲಾ ಒತ್ತಾಯವನ್ನು ಸಿಎನ್ನಾರ್ ಸವಿನಯ ನಿರಾಕರಿಸಿದರು. ಮತ್ತು ತಾನು ಸ್ವತಂತ್ರವಾಗಿ ಸಭಾಭವನಕ್ಕೆ ಸಕಾಲದಲ್ಲಿ ಬರುವ ಭರವಸೆಯನ್ನೂ ಕೊಟ್ಟುಬಿಟ್ಟರು. ಹೇಳಿದಂತೆ ಅರ್ಧ ಗಂಟೆ ಮುಂಚಿತವಾಗಿಯೇ ಬಂದರು, ಆದರೆ ಒಳಗೆ ಬರಲಿಲ್ಲ. ಎದುರುಗೊಂಡ ಈಶ್ವರ ಭಟ್ಟರು ಅವರಿಗೆ ಆತ್ಮೀಯರೇ ಇದ್ದರು. ಆದರೂ ಸಿಎನ್ನಾರ್, “ಮೊದಲು ಅಶೋಕವರ್ಧನ್ ಅವರನ್ನು ಕರೀರಿ. ಆಮೇಲೆ ನಾನು ಒಳಗ್ ಬರ್ತೀನಿ” ಎಂದರು. ಭವನದೊಳಗೇನೋ ವ್ಯವಸ್ಥೆಯಲ್ಲಿದ್ದ ನಾನು ಸ್ವಲ್ಪ ಆತಂಕದಲ್ಲೇ ದೌಡಾಯಿಸಿದೆ. ಇಲ್ಲ, ಅವರ ಮುಖಭಾವದಲ್ಲಿ ಏನೂ ಅಸಮಾಧಾನ ಕಾಣಲಿಲ್ಲ. ಆತ್ಮೀಯತೆಯಲ್ಲೇ ನನ್ನ ಭುಜಕ್ಕೆ ಕೈಹಾಕಿ ಪಕ್ಕಕ್ಕೆ ಕರೆದೊಯ್ದು ಮೆಲು ಧ್ವನಿಯಲ್ಲಿ ಹೇಳಿದರು, “ನೋಡಿ, ಮೊದಲೇ ಹೇಳಿದಂತೆ ನನ್ನದೇ ವ್ಯವಸ್ಥೆಯಲ್ಲಿ ಬಾಡಿಗೆ ಕಾರು ಮಾಡಿಕೊಂಡು ಬಂದಿದ್ದೀನಿ. ನೀವೇನಾದರೂ ಬಾಡ್ಗೇ ಗೀಡ್ಗೇ ಕೊಡೋದಿದ್ರೆ ಈಗ್ಲೇ ಹೇಳಿ. ನಾನು ಕಲಾಪ ನಿರಾಕರಿಸಿ ವಾಪಾಸ್ ಹೋಗ್ತೀನಿ.” ಮೊದಲು ತಮ್ಮನ್ನು ಹೇರಿಕೊಳ್ಳುವ, ಮತ್ತೆ ಕೊಡಲಿಲ್ಲ ಅಥವಾ ಕೊಟ್ಟದ್ದು ಕಡಿಮೆಯಾಯ್ತು ಅಥವಾ ಕಂಡುಕೊಂಡದ್ದು ಸಾಕಾಗಲಿಲ್ಲ ಎಂದು ಗೊಣಗುವ ಅಥವಾ ಆಟೋಪವನ್ನು ಪ್ರದರ್ಶಿಸುವ, ಮತ್ತೇನಲ್ಲದಿದ್ದರೂ ಕಲಾಪದಲ್ಲಿ ಔದಾಸೀನ್ಯ ತೋರುವ ಅಸಂಖ್ಯ ‘ಮುಖ್ಯ ಅತಿಥಿ’ಗಳ ಕಥೆ ಕೇಳಿದ್ದ ನನಗೆ ಇದು ಪೂರ್ತಿ ಹೊಸಪರಿ. ಸ್ಮರಿಸಿಕೊಂಡಾಗ ಇಂದಿಗೂ ಹೃದಯ ತುಂಬಿದ ಭಾವ ಉಕ್ಕಿಸುವ ಸಿಎನ್ನಾರ್ ವೈಖರಿ!

೧೭-೭-೨೦೧೧ರಂದು ನನ್ನ ಮಿಂಚಂಚೆ ಡಬ್ಬಿಯಲ್ಲಿ ಒಂದು ಪತ್ರ:

“ನಿಮ್ಮ ವಿಶಿಷ್ಟ ಶಿಬಿರವನ್ನು ಕುರಿತ ಐದನೆಯ ಕಂತನ್ನು ಓದಿ, ಮತ್ತೆ ಮೊದಲಿನಿಂದ ಇಡೀ ಲೇಖನಮಾಲೆಯ ಮೇಲೆ ಕಣ್ಣಾಡಿಸಿ… ನಿಮ್ಮ ತಂದೆಯವರ ಬಗ್ಗೆ ಬರೆದದ್ದು ಓದಿ, ಜಿಟಿಎನ್ ಅವರನ್ನು ಕುರಿತ ನನ್ನ ನೆನಪು-ಅನುಭವಗಳನ್ನು ದಾಖಲಿಸಬೇಕೆಂದು ಒಂದು ಬಗೆಯ ತೀವ್ರ ಕಾಂಕ್ಷೆಯಾಗುತ್ತಿದೆ. ದಾಖಲೆಯೇಕೆ? ಗೊತ್ತಿಲ್ಲ. ಹಾಗೆಯೇ, ಒಬ್ಬರ ಬ್ಲಾಗ್‌ನಲ್ಲಿ ಮತ್ತೊಬ್ಬರು ಬರೆಯಬಹುದೋ ಇಲ್ಲವೋ ಗೊತ್ತಿಲ್ಲ. ನನ್ನದು ಇಂಗ್ಲೀಷ್ ಬ್ಲಾಗ್ ಆದುದರಿಂದ ಅದರಲ್ಲಿ ಈ ಲೇಖನವನ್ನು ಸೇರಿಸಲಾಗುವುದಿಲ್ಲ. ಆದುದರಿಂದ – ಜಿಟಿಎನ್ ಕುರಿತು ನನ್ನ ಅನುಭವಗಳನ್ನು ಕಥನದ ರೂಪದಲ್ಲಿ ಬರೆದರೆ, ನಿಮ್ಮ ಬ್ಲಾಗ್‌ನಲ್ಲಿ ಸೇರಿಸಲು ಸಾಧ್ಯವೆ? ಸಾಧುವೆ? ಇವೆರಡು ಪ್ರಶ್ನೆಗಳಿಗೂ ನೀವು ‘ಅಹುದು’ ಎಂದು ಹೇಳಿದರೆ, ಇನ್ನೊಂದು ೮-೧೦ದಿನಗಳಲ್ಲಿ ಒಂದು ಲೇಖನವನ್ನು ಬರೆದು ಕಳಿಸುತ್ತೇನೆ – ಎಷ್ಟು ದೀರ್ಘವಾಗುತ್ತದೋ ಗೊತ್ತಿಲ್ಲ. ನೀವು ‘ಇದು ಬೇಡ’ ಎಂದು ಹೇಳಿದರೂ ನನಗೇನೂ ಬೇಜಾರಾಗುವುದಿಲ್ಲ. ನಿಮ್ಮ ನಿರ್ಧಾರವನ್ನು ತಿಳಿಸಿ. ನಿಮ್ಮ ರಾಮಚಂದ್ರನ್”

ಇದನ್ನೋದಿದ ಮರುಕ್ಷಣದಲ್ಲಿ ಬರೆದೆ, “ನೀವಾಗಿಯೇ ಬರೆಯುತ್ತೇನೆಂದದ್ದು ನನ್ನ ಮತ್ತು ಬ್ಲಾಗ್ ಓದುಗರ ಭಾಗ್ಯ. ಶಬ್ದ, ಕಾಲಮಿತಿಗಳಿಲ್ಲದೆ ಧಾರಾಳ ಬರೆದು ಕಳಿಸಿ – ಮೊದಲ ಓದುಗ ನಾನೇ ಆಗಿ ಪ್ರಕಟಿಸುತ್ತೇನೆ. ನಾನು ಈ ಬ್ಲಾಗನ್ನು ಸದಾ ಅರೆ -ಖಾಸಗಿ ಸಾರ್ವಜನಿಕ ಮಾಧ್ಯಮ ಎಂದೇ ಗ್ರಹಿಸಿಕೊಂಡು ನಡೆಸಿಕೊಂಡು ಬಂದವನು. ಹಲವು ಹಿರಿಯರ, ಮಿತ್ರರ ಉದ್ದುದ್ದ ಲೇಖನಗಳನ್ನು ನಾನು ಈಗಾಗಲೇ ಹಾಕಿದ್ದೇನೆ. ಮತ್ತೆ ನನ್ನ ಓದುಗರಲ್ಲಿ ಸದಾ ನನ್ನ ಮನವಿಯೂ ಒಂದೇ – ಬರಿದೇ ಔಪಚಾರಿಕ ಮಾತುಗಳನ್ನು ಪ್ರತಿಕ್ರಿಯೆ ರೂಪದಲ್ಲಿ ತುಂಬಬೇಡಿ. ನಿಮ್ಮ ಸಮ-ಅನುಭವಗಳನ್ನು ವಿಷಯಾಂತರದ ಭಯ ಮತ್ತು ಸ್ಥಳಾವಕಾಶದ ಸಂಕೋಚ ಇಟ್ಟುಕೊಳ್ಳದೆ ಬರೆದು ಬ್ಲಾಗ್ ಒಂದು ಸಾರ್ವಜನಿಕ ಉಪಯುಕ್ತ ವೇದಿಕೆಯಾಗುವಂತೆ ಸಹಕರಿಸಿ.”

ಮುಂದಿನವಾರ ಪ್ರೊ| ಸಿ.ಎನ್. ರಾಮಚಂದ್ರನ್ ಅವರ ಭಾವಲಹರಿ

ಮಾತಾಡು ಇಂಡಿಯಾ ಮಾತಾಡು
ದೃಶ್ಯ ಒಂದು:

[ತೆರೆ ಸರಿಯುತ್ತಿರುವಂತೆ ಖಾಲೀ ಮುಖ ಹೊತ್ತ ತರುಣನೊಬ್ಬ ಪುಸ್ತಕ ವ್ಯಾಪಾರಿಯೊಬ್ಬನ ಗಲ್ಲಾದ ಎದುರು ಬಂದು ನಿಲ್ಲುತ್ತಾನೆ. ವ್ಯಾಪಾರಿ ‘ಏನ್ ಕೊಡ್ಲೀ’ ಎನ್ನುವಂತೆ ಹುಬ್ಬು ಹಾರಿಸುತ್ತಾನೆ. ತರುಣ ಏನೋ ಹುಡುಕುವವನಂತೆ ಆ ಈ ಕಿಸೆ ತಡಕಾಡುತ್ತಾ]

ತರುಣ: ಅತ್ರಿ ಬುಕ್ ಹೌಸ್!

ವ್ಯಾಪಾರಿ: ಹೂಂ, ಹೌಸ್ ಅಲ್ಲ ಸೆಂಟರ್. ಬಂದಾಯಿತಲ್ಲ, ಏನೀಗ?

ತ: ನಂಗೊಂದು ಪುಸ್ತಕದ ಬಗ್ಗೆ ಕೇಳಬೇಕಿತ್ತು

ವ್ಯಾ: ಕೇಳಿ.

ತ: ಅಯ್ಯೋ ಸಾರಿ, ಸಾರಿ [ಚರವಾಣಿ ತೆಗೆದು ಕಿರು ಸಂದೇಶದ ಗುಂಡಿ ಅದುಮಿ] ಪುಸ್ತ್ಕಾ (ಓದಲು ತಿಣುಕುತ್ತಾ) ‘ಮೇಣ, ಸೂಜೀ. . .’ ಅಲ್ಲಲ್ಲಾ ‘ಮೆಣಸೂ ಜೀರಿಗೆ. . .’

ವ್ಯಾ: ಅದೇನು ಜೀನಸು ಪಟ್ಟಿ? ಇಲ್ಲಿಲ್ಲ. ಇದು ಪುಸ್ತಕದಂಗಡಿ.

[ತರುಣ ಗಾಬರಿಯಲ್ಲಿ ಚರವಾಣಿ ಸಂದೇಶವನ್ನೇ ವ್ಯಾಪಾರಿಗೆ ತೋರಿಸಿದ - karbh kthmajri - kvp]

ವ್ಯಾ: [ಅರ್ಥವಾಗದೇ ತಲೆ ಕೊಡಹುತ್ತಾ] ಸರಿಯಾಗಿ ಒಂದು ಚೀಟಿಯಲ್ಲಿ ಬರೆದುಕೊಂಡು ಬರಬಾರ್ದಾ. ಹೋಗಲಿ, ಒಮ್ಮೆ ಸರಿಯಾಗಿ ಕೇಳಿಕೊಂಡಾದರೂ..

ತ: ಸಾರಿ ಸಾರಿ, ನಿಲ್ಲೀ [ವ್ಯಾಪಾರೀ ಕೂತೇ ಇದ್ದಂತೆ, ಆತ ಸಂದೇಶ ಕಳಿಸಿದ ಗೆಳೆಯ - ಬೃಹಸ್ಪತಿಗೇ ಕರೆ ಮಾಡಿ] ಎಂಥ ಮಾರಾಯಾ ಮೆಸೇಜ್ ಸರೀ ಕಳುಸುದಲ್ವಾ. ಹೋಗಲಿ, ಅದೆಂಥ ಪುಸ್ತಕ? ಆಂ.. ಕರ್ನಾಟ್ಕಾ ಭಾರತಾ..

ವ್ಯಾ: ಹಾಂ, ಕರ್ಣಾಟ ಭಾರತ ಕಥಾಮಂಜರಿ. ಅದೇ ಕುಮಾರ ವ್ಯಾಸನ ಭಾರತ, ಇದೆ. ಬೆಲೆ ಮೂವತ್ತು ಮಾತ್ರ.

ತ: [ಚರವಾಣಿಗದನ್ನು ಮರುಪಠಿಸಿ ಮತ್ತೆ ಬಂದ ಬೃಹಸ್ಪತಿವಾಣಿಗೆ ಈತ ಧ್ವನಿಯಾಗುತ್ತಾ] ಇಲ್ಲಾ ಕುಮಾರ ವ್ಯಾಸ ಅಲ್ಲ, ಕುವೆಂಪು ಬರ್ದಿದ್ದೇ ಕರ್ನಾಟ್ಕಾ ಭಾರತಾ ಮಂಜ್ರೀ ಬೇಕು.

ವ್ಯಾ: ಕುವೆಂಪು ಬರೆದದ್ದಲ್ಲ. ಅವರು ಮಾಸ್ತಿಯವರೊಡನೆ ಸೇರಿ ಸಂಪಾದಿಸಿದ ಕೃತಿ ಕರ್ಣಾಟ ಭಾರತ..

ತ: [ಚರವಾಣಿಗದನ್ನು ಮರುಪ್ರಸಾರ ಮಾಡುತ್ತಾ ಮಂಡೆಬೆಚ್ಚವಾಗಿ] ಛೆ, ಇವನೆಂಥ ಹೇಳ್ತಾನೆ. ಏ ಅವರಿಗೇ ಕೊಡ್ತೇನೆ. ಪ್ಲೀಸ್ ನೀವೇ ಮಾತಾಡಿ [ತನ್ನ ಬೆವರು ಹಿಡಿದ ಶರಟಿಗೆ ಚರವಾಣಿಯನ್ನು ಉಜ್ಜಿ, ವ್ಯಾಪಾರೀ ಕಿವಿಗೊಡ್ಡಲು ಮುಂದಾಗುತ್ತಾನೆ]

ವ್ಯಾ: ಇಲ್ಲ, ನಾ ಚರವಾಣಿಗೆ ಕಿವಿ ಹಚ್ಚುವುದಿಲ್ಲ, ನೀವೇ ಕೇಳಿ, ಹೇಳಿ

ತ: ಆಂ! ನಿಮ್ಮ ಹತ್ರಾ ಮೊಬೈಲ್ ಇಲ್ವಾ?

ವ್ಯಾ: ಇಲ್ಲ.

ತ: ಮತ್ತೆ ಬಿಜಿನೆಸ್ಸು?

ವ್ಯಾ: ಇಲ್ಲೇ ಇದೆಯಲ್ಲ – ಸ್ಥಿರವಾಣಿ, ಲ್ಯಾಂಡ್ ಲೈನು.

ತ: ನೀವು ಹೊರಗೆ ಹೋದಾಗ?

ವ್ಯಾ: ಯಾವುದೇ ಕಾರಣಕ್ಕೆ ನನ್ನ ಸಂಪರ್ಕ ಬೇಕಾದವರಿಗೆ ಹೆಚ್ಚು ಕಡಿಮೆ ದಿನದ ಇಪ್ಪತ್ಮೂರು ಗಂಟೆ ನಾನು ಇಲ್ಲಿ ಅಥವಾ ಮನೆಯಲ್ಲಿ ಲ್ಯಾಂಡ್ ಲೈನಿಗೆ ಸಿಕ್ಕೇ ಸಿಗ್ತೇನೆ.

ತ: ವ್ಯಾಪಾರ ಬೇಡಾಂತಿರಲಿ, ನಿಮ್ಮ ಫ್ರೆಂಡ್ಸೂ ರಿಲೇಟಿವ್ಸೂ?

ವ್ಯಾ: ನನ್ನ ಪ್ರಯಾಣದಲ್ಲಿ, ರಜಾ ದಿನಗಳಲ್ಲಿ ನಾನು ಮುಖತಃ ಸಿಗಬೇಕಾದವರಿಗೆ ಸಿಕ್ಕರೆ ಸಾಕು. ಒಂದೋ ಅವರ ಜೊತೆಗೇ ಇರ್ತೇನೆ. ಇಲ್ಲವೇ ನನ್ನ ಕಾರ್ಯಕ್ರಮ ಅಂದಾಜಿಸಿಕೊಂಡು ಮತ್ತೆ ನಾನು ಅಂಗಡಿಗೋ ಮನೆಗೋ ಬರುವವರೆಗೆ ಕಾದಿರ್ತಾರೆ. ನನ್ನತ್ರ ಕ್ಷಣ ಮಾತ್ರದಲ್ಲಿ ನಿರ್ಧಾರ ತೆಗೆದುಕೊಳ್ಳಬೇಕಾದ ಯಾವ ವಹಿವಾಟೂ ಇಲ್ಲ.

ತ: [ಪೆಚ್ಚಾಗಿ, ಚರವಾಣಿಗೆ] ಇಲ್ಲಾ ಅವರು ಮೊಬೈಲ್ ತಗಳಲ್ಲಾಂತೆ. ನೀ ಹೇಳು [ಇನ್ನೆಲ್ಲ ಬೃಹಸ್ಪತಿಗೂ ವ್ಯಾಪಾರಿಗೂ ನಡುವೆ ಸಾಕಷ್ಟು ‘ಆಂ, ಹಾಂ’ ಸಹಿತ ತರುಣ ಮತ್ತು ಚರವಾಣಿ ಕಲ್ಪಿಸಿಕೊಳ್ಳಿ]

ಬೃಹಸ್ಪತಿ: ಸಾರ್, ಅದು ಕುವೆಂಪೂನೇ ಬರ್ದಿದ್ದಾಗಬೇಕು, ನನ್ನಪ್ಪಂಗೆ. ಕುಮಾರವ್ಯಾಸ, ಮಾಸ್ತಿ ಎಲ್ಲಾ ಅವರು ಹೇಳಿಲ್ಲಾ.

ವ್ಯಾ: ಸ್ವಾಮೀ ಕರ್ಣಾಟ ಭಾರತ ಕಥಾಮಂಜರಿ ಅಥವಾ ಗದುಗಿನ ಭಾರತ ಅಥವಾ ಕುಮಾರವ್ಯಾಸ ಭಾರತ ಎಂದೇ ಪ್ರಚಾರದಲ್ಲಿರುವುದೆಲ್ಲಾ ಒಂದೇ. ಮತ್ತದನ್ನು ನಾಲ್ಕೈದು ಶತಮಾನದ ಹಿಂದೆಯೇ ಕುಮಾರವ್ಯಾಸನೇ ಬರೆದದ್ದೆಂದು ನಿರ್ಧಾರವಾಗಿ ಮುಗಿದಿದೆ. ಅದು ಸದ್ಯ ಮೈವಿವಿ ನಿಲಯ ಮಾತ್ರ ಕಡಿಮೆ ಬೆಲೆಯಲ್ಲಿ ಪ್ರಕಟಿಸಿದ್ದು ಲಭ್ಯ. ಅದರಲ್ಲಿ ಕುವೆಂಪು ಮತ್ತು ಮಾಸ್ತಿ ಜಂಟಿಯಾಗಿ ಸಂಪಾದಕರ ಕೆಲಸ ಮಾಡಿದ್ದಾರೆ. ಮತ್ತೆ ಕುವೆಂಪೂನೇ ಸ್ವತಂತ್ರವಾಗಿ ಬರೆದದ್ದಾಗಬೇಕೂಂದ್ರೆ ಜನಪ್ರಿಯ ವಾಲ್ಮೀಕಿ ರಾಮಾಯಣ ಅಥವಾ ರಾಮಾಯಣ ದರ್ಶನಂ ಸಿಗುತ್ತೆ. ಇನ್ನೂ ಹೆಚ್ಚು ಹೇಳಬೇಕಾದರೆ, ನಿಮ್ಮಪ್ಪನೋ ಯಾರೋ ಹೇಳಿದರೂಂತ ಕುವೆಂಪು ಹೊಸದಾಗಿ ಬರೆಯುವ ಹಾಗಿಲ್ಲ – ಪಾಪ, ತೀರಿಹೋಗಿದ್ದಾರೆ.

ಬೃ: ಹಂಗಾದ್ರೆ ಒಂದು ಕೆಲ್ಸಾ ಮಾಡಾಣಾ. ಪೀಸ್‌ಗೆ ಅದೇನೋ ಥರ್ಟಿ ರುಪೀಸ್ ಅಂದ್ರಲ್ಲಾ ಕೊಟ್ಟಿರಿ. ಅಲ್ಲಾಂತಾದ್ರೆ ರಿಟರ್ನ್ ಮಾಡ್ಲಾ?

ವ್ಯಾ: [‘ತೊಟ್ಟ ಬಾಣವನ್ನು ಮರಳಿ ತೊಡೆನು’ ಎಂಬ ಧೀರೋದಾತ್ತ ಭಾವದಲ್ಲಿ] ಒಮ್ಮೆ ಮಾರಿದವನ್ನು ನಾವು ಹಿಂತೆಗೆಯುವುದಿಲ್ಲ.

ಬೃ: ಆಯ್ತು, ಹಣ ಬೇಡಾ, ಬೇರೇನಾದರೂ ಎಕ್ಷ್‌ಚೇಂಜೂ..

ವ್ಯಾ: [ಹತಾಶೆಯ ಶಿಖರದಲ್ಲಿ] ಎಕ್ಸ್ಚೇಂಜಿನಲ್ಲಿ ರಿಟರ್ನ್ ಸೇರಿಕೊಂಡಿಲ್ವಾ? ಇಲ್ಲ, ಬೇಕಾದರೆ ನಿಮ್ಮಪ್ಪನ್ನೇ ಇಲ್ಲಿಗೆ ಕರ್ಕೊಂಡು ಬಂದು ತೋರಿಸಿ.

ಬೃ: ಬಿಜಿನೆಸ್‌ನವ್ರು ಹೀಗೆ ಹೇಳಿದರೆ ಹೇಗೆ! ನಾವೂ ಎಜುಕೇಟೆಡ್ ಸಾರ್. ನಾವೂ ತುಂಬಾ ಬುಕ್ಸ್ ಕಲೆಕ್ಟ್ ಮಾಡಿದ್ದೀವಿ. ನಂ ಮನೇನಲ್ಲೂ..

ವ್ಯಾ: [ನೋಡಿ ಸ್ವಾಮೀ ನಾವಿರೋದು ಹೀಗೆ]

ತ: ಹೋಗ್ಲಿ ಬಿಡಿ, ಅಪ್ಪಂಗೇ ಕಾಲ್ ಮಾಡಕ್ಕೆ ಹೇಳ್ತೇನೆ.

[ಮಿನಿಟು ಬಿಟ್ಟು, ಅಲ್ಲೇ ಠಳಾಯಿಸಿಕೊಂಡಿದ್ದ ತರುಣನದ್ದೇ ಚರವಾಣಿ ಮೂಲಕ ಬೃಹಸ್ಪತಿಯ ಅಪ್ಪನ ಪ್ರವೇಶ]

ಅಪ್ಪ: ಸ್ವಾಮೀ ಗುರ್ತು ಸಿಕ್ತಾ? ಹೋದವರ್ಷಾ ಕೋಳಿಕ್ಕೆಮಲೆಯಿಂದ ಬಂದಿದ್ದೆ. ಗೋಥಾ ಪ್ರೆಸ್, ಗೀರಕ್ ಪುರದ್ದು ದೊಡ್ಡ ಭಗವದ್ಗೀತೇ, ಎರಡು ಸಂಪುಟದ್ದು ಕೊಂಡ್ಕೊಂಡಿದ್ದೆ, ನೆನಪಾಯ್ತಾ? ಈ ಸಲಾ ದೊಡ್ಡ ಕಥೆಯನ್ನೇ ಕೊಳ್ಳಣಾಂತ. ಅದ್ಕೇ ಕುವೆಂಪೂನೇ ಬರೆದ ಕರ್ನಾಟ್ಕಾ ಭಾರತಾ..

ವ್ಯಾ: [ಯಥಾವಕಾಶ ‘ಅಂದಾಜಾಗುತ್ತೆ, ಹೂಂ, ಹೇಳೀ’ ಸೇರಿಸಿಕೊಳ್ಳುತ್ತಾ ಬಂದು, ಕೊನೆಯಲ್ಲಿ ಹಿಂದೆ ಬೃಹಸ್ಪತಿಗೆ ಮಾಡಿದ ‘ಪಾಠ’ವನ್ನೇ ಸ್ವಲ್ಪ ಎತ್ತರಿಸಿದ ಧ್ವನಿಯಲ್ಲಿ - ‘..ಕರ್ನಾಟ ಭಾರತ ಕಥಾಮಂಜರಿ ಅಥವಾ ಗದುಗಿನ ಭಾರತ ಅಥ..,’ ಮುಂದುವರಿಯುತ್ತಾ] ಸ್ವಾಮೀ ಹಿಂದಿನವರು ತಾಳೆಗರಿಯ ಮೇಲೆ ಬರೆದದ್ದನ್ನು ಕಾಲಾನುಕ್ರಮದಲ್ಲಿ ಹಲವರು ಪ್ರತಿ ಮಾಡಿಕೊಳ್ಳುತ್ತಾ ಬಂದರು. ಅವುಗಳಲ್ಲಿ ಕೆಲವು ಈ ಮುದ್ರಣದ ಕಾಲದವರೆಗೂ ಉಳಿದು ಬಂದಿವೆ. ಪ್ರತಿಕಾರರ ಓದಿನ ದೋಷ, ಬರವಣಿಗೆಯ ತಪ್ಪು ಮತ್ತು ಸ್ವಂತ ಪ್ರತಿಭೆಯ ಸೇರ್ಪಡೆಗಳು ಈ ಪ್ರತಿಗಳಲ್ಲಿ ಧಾರಾಳವಿರುತ್ತವೆ. ಸಂಪಾದಕರಾದವರು ಲಭ್ಯ ಪ್ರತಿಗಳೆಲ್ಲವನ್ನು ಒಟ್ಟು ಮಾಡಿ, ಪದಪದವನ್ನು ವೈಜ್ಞಾನಿಕವಾಗಿ ಹಿಂಜಿ, ಮೂಲಕ್ಕೆ ಅತ್ಯಂತ ಹತ್ತಿರದ ಪ್ರತಿಯೊಂದನ್ನು ನಿಷ್ಕರ್ಷಿಸಿ, ಮುದ್ರಣಕ್ಕೆ ಶಿಫಾರಸು ಮಾಡುತ್ತಾರೆ. ಹೀಗೆ ಕುಮಾರವ್ಯಾಸನನ್ನು ಈ ಕಾಲಕ್ಕೆ ಶುದ್ಧಮಾಡಿದವರು ಕುವೆಂಪು ಮತ್ತು ಮಾಸ್ತಿ. ಅವರು ಬೇರೆ ಸುಮಾರು ಬರೆದವರೇ ಆದರೂ ಕರ್ಣಾಟ ಭಾರತ ಕಥಾಮಂಜರಿ ಬರೆದವರಲ್ಲ.

ಅ: ಅಯ್ಯೋ ಅಯ್ಯೋ ಕ್ಷಮಿಸಿ, ಇದೆಲ್ಲಾ ನನಗ್ಯಾಕೆ ಹೇಳ್ತೀರಾ! ನಿಜಾ ಹೇಳಬೇಕಂದ್ರೇ ಹೋದವರ್ಷ ಭಗವದ್ಗೀತೇನೂ ಈ ಸಲ ಈ ಕರ್ನಾಟ್ಕಾ ಭಾರತಾ ಅಲ್ಲಲ್ಲ ಕರ್ಣಾಟ ಭಾರತಾನೂ ನಂಗಲ್ಲಾ. ಇವೆಲ್ಲಾ ನನಗೆಲ್ಲಿ ಅರ್ಥಾ ಆಗುತ್ತೆ ಬಿಡಿ. ನನ್ನಪ್ಪನ ತಿಥಿಗೆ ಭಟ್ಟ್ರಿಗೆ ದಾನ ಕೊಡಬೇಕಲ್ಲಾ ಅದ್ಕೆ. ಈಗ ಒಂದು ಕೆಲ್ಸಾ ಮಾಡಾಣಾ. ನಿಮ್ಮ ಮೊಬೈಲ್ ನಂಬರ್ ಕೊಟ್ಟಿರಿ..

ವ್ಯಾಪಾರಿ: ನನ್ನತ್ರ ಚರವಾಣಿ ಇಲ್ಲ. [ಮುಂದೆ, ಮೊದಲು ಬೃಹಸ್ಪತಿಯ ಪ್ರಶ್ನೆ ‘ನಿಮ್ಮತ್ರ ಮೊಬೈಲ್ ಇಲ್ವಾ’ಗೆ ಹೇಳಿದ್ದನ್ನೇ ಹೇಳಿ....] ಈಗ ನಾನು ಒಂದು ಕೆಲ್ಸಾ ಹೇಳ್ತೀನಿ, ಮಾಡಿ. ನನ್ನಲ್ಲಿ ‘ಗಿಫ್ಟ್ ಕೂಪನ್’ ಅಂದರೆ ಪುಸ್ತಕ ಉಡುಗೊರೆ ಚೀಟಿ ಇದೆ. ನೀವು ದಾನ ಕೊಡಲು ಸಿದ್ಧವಿರುವಷ್ಟು ಹಣ ಕೊಟ್ಟು ಅದನ್ನು ಖರೀದಿಸಿ ಭಟ್ಟರಿಗೆ ಕೊಟ್ಟುಬಿಡಿ. ಮತ್ತವರು ಇತ್ತ ಬಂದಾಗ ಎಲ್ಲಾ ಪುಸ್ತಕ ನೋಡಿ ಬೇಕಾದ್ದನ್ನೇ ಚೀಟಿ ವಿನಿಮಯಕ್ಕೆ ಪಡೆದುಕೊಳ್ಳಬಹುದು. ಅವರು ಬೇಕಾದರೆ ಹೆಚ್ಚಿನ ಮೌಲ್ಯದ ಪುಸ್ತಕವನ್ನು ಕೇವಲ ವ್ಯತ್ಯಾಸ ಮಾತ್ರ ಕೊಟ್ಟೂ ಕೊಳ್ಳಬಹುದು. ಈ ಚೀಟಿಗೆ ಕಾಲದ ನಿರ್ಬಂಧವೇನೂ ಇಲ್ಲ. ಅಂಗಡಿ ಇರುವವರೆಗೆ ಯಾವತ್ತೂ ಪುಸ್ತಕಕ್ಕೆ ವಿನಿಮಯಿಸಿಕೊಳ್ಳಬಹುದು. ಹಣ ಮಾತ್ರ ವಾಪಾಸು ಕೊಡೋದಿಲ್ಲ.

ಅಪ್ಪ: ಏ ಅದೆಲ್ಲಿ ಆಗ್ತದೆ. ದಾನ ಕೊಡುವಾಗ ಬರೀ ಚೀಟಿ ಕೊಡುವುದು ಸರಿಯಾಗುದಿಲ್ಲ. ಮತ್ತದನ್ನವರು ಕಳಕೊಂಡ್ರೆ?

ವ್ಯಾಪಾರಿ: ಈ ಕಾಲದಲ್ಲಿ ಸಾಮಾನ್ಯವಾಗಿ ಎಲ್ಲೂ ಚಿನ್ನ, ಬೆಳ್ಳಿ ಚಲಾವಣೆಯಲ್ಲಿ ಇಲ್ಲ. ಆದ್ರೂ ಒಂದು ಮೊಳೆ, ಒಂದು ಬ್ಲೇಡಿನ ಉಪಯೋಗಕ್ಕೂ ಬಾರದ ಲೋಹದ ತುಂಡು ನಾಣ್ಯಾಂತ, ಮತ್ತೆ ನಾಲ್ಕು ಅಕ್ಷರ ಬರೆಯುವುದಕ್ಕೂ ದಕ್ಕದ ಕಾಗದ ಹರಕು ನೋಟೂಂತ ‘ಸುವರ್ಣ ದಾನಂ’ ಹೆಸರಿನಲ್ಲಿ ಮಾನ್ಯವಾಗುತ್ತಿಲ್ಲವಾ? ನಮ್ಮ ಚೀಟಿಯೂ ನೀವು ಕೊಟ್ಟ ಮೌಲ್ಯದ ಒಂದು ನೋಟಿದ್ದ ಹಾಗೇ – ಅದನ್ಯಾಕೆ ಕಳೆದುಕೊಳ್ಳಬೇಕು?!

ಅಪ್ಪ: ದಕ್ಷಿಣೆ ಬೇರೆ, ದಾನ ಬೇರೆ. ದಾನ ಕೊಡುವಾಗ ಎಲ್ಲರೂ ಗಾತ್ರ ನೋಡ್ತಾರೆ. ಬರೀ ಚೀಟಿ ಕೊಡುವುದು ಹ್ಯಾಗೆ?

ವ್ಯಾಪಾರಿ: ಬೇಡ, ಚೀಟಿಯನ್ನೇ ದೊಡ್ಡ ಡಬ್ಬಿಯೊಳಗೆ ಪ್ಯಾಕ್ ಮಾಡಿ ಕೊಡಿ. ಬೇಕಾದ್ರೆ ಭಟ್ಟರ ಕಿವಿಯಲ್ಲಿ ಒಂದು ಮಾತು ಹೇಳಿಯೇ ಕೊಡಿ.

ಅಪ್ಪ: ಛೆ, ನಿಮ್ಮತ್ರ ಮಾತು ಭಾಳ ಕಷ್ಟ. [ಮುಂದೆ ತರುಣನಿಗೆ ಸೂಚನೆ ಕೊಟ್ಟಿರಬೇಕು]

ತ: ನಿಮ್ಮ ವಿಸಿಟಿಂಗ್ ಕಾರ್ಡ್ ಕೊಟ್ಟಿರಿ. ಅವರು ಭಟ್ಟ್ರಿಗೇ ಫೋನ್ ಮಾಡಕ್ಕೆ ಹೇಳ್ತಾರಂತೆ.

ವ್ಯಾ: ನಂದು ಕಾರ್ಡಿಲ್ಲ. ಫೋನ್ ನಂಬರ್ ಬೇಕಾದರೆ ಬರೆದುಕೊಳ್ಳಿ.

ತ: ಅರೆ, ಮತ್ತೆ ಯಾರಿಗಾದರೂ ಇಲ್ಲಿನ ಅಡ್ರೆಸ್, ಫೋನೂ ತಿಳೀ ಬೇಕಾದ್ರೇ..

ವ್ಯಾ: ಪುಸ್ತಕ ಕೊಂಡವರಿಗೆ ಹೇಗೂ ಬಿಲ್ ಕೊಡ್ತೇನೆ, ಅದರಲ್ಲಿ ಎಲ್ಲಾ ಇದೆ. ಮತ್ತೆ ಹೆಚ್ಚಾಗಿ ಪ್ರತೀ ಪುಸ್ತಕಕ್ಕೆ ನಮ್ಮ ಸೀಲ್ ಹಾಕ್ತೇವೆ – ಅದರಲ್ಲೂ ಹೆಸರು, ದೂರ್ವಾಣಿ ಇದೆ. ಏನೂ ಇಲ್ದೇ ಬೇಕೆಂದವರಿಗೆ ಚೀಟಿಯಲ್ಲಿ ಬರೆದು ಕೊಡಬಲ್ಲೆ.

ತರುಣ: [ಆತ ಚರವಾಣಿಗೆ ಸಂಖ್ಯೆ ತುಂಬಿಕೊಳ್ಳಲು ಸಜ್ಜುಗೊಳಿಸುತ್ತಾ] ಆಯ್ತಾಯ್ತು. ಚೀಟಿ ಬೇಡ, ನಂಬರ್ ಹೇಳಿ.

ವ್ಯಾಪಾರಿ: ೨೪೨೫೧೬೧

ತರುಣ: ಟೂ ಫ಼ೋರ್ ಟೂ?

ವ್ಯಾ: ಫ಼ೈವ್ ಒನ್ ಸಿಕ್ಸ್ ಒನ್.

ತ: ಫೈವ್ ಒನ್ನ್?

ವ್ಯಾ: ಸಿಕ್ಸ್ ಒನ್.

ತ: ಕೋಡೂ?

ವ್ಯಾಪಾರಿ: ೦೮೨೪

ತರುಣ: ವರ್ಕಿಂಗ್ ಅವರ್ಸೂ?

ವ್ಯಾಪಾರಿ: ಎಂಟೂವರೆಯಿಂದ ಒಂದು. ಎರಡೂವರೆಯಿಂದ ಎಂಟು.

ತ: ಸಂಡೇ?

ವ್ಯಾ: ಪೂರ್ತಿ ರಜೆ.

ತರುಣ: ಹೂಂ, ಒನ್ ತರ್ಟೀ ಟು ಟೂ ಲಂಚ್ ಬ್ರೇಕ್, ಸಂಡೇ ಹಾಲಿಡೇ..

ವ್ಯಾಪಾರಿ: ಅಲ್ಲ, ಮಧ್ಯಾಹ್ನ ಬಿಡುವು ಒಂದರಿಂದ ಎರಡೂವರೆ

ತರುಣ: ಹಾಂ, ಸರಿಸರಿ ಒನ್ ಟು ಟೂ ತರ್ಟೀ.

[ಎಗ್ಸಿಟ್, ದಿ ಎಂಡ್. ಅಲ್ಲಲ್ಲ ನಿರ್ಗಮಿಸುತ್ತಾನೆ, ಮುಗಿಯಿತು!]

ದೃಶ್ಯ ಎರಡು:

ಮೈಸೂರಿಗೆ ಹೋಗುತ್ತಿದ್ದ ನಿಶಾಚರಿ ಬಸ್ಸಿನಲ್ಲಿ ಎಲ್ಲರೂ ಗಾಢ ಮಂಪರೋ ಅರೆಬರೆ ನಿದ್ರೆಯಲ್ಲೋ ಇದ್ದಂತೆ ಒಂದು ಸಣ್ಣ ಕಿಣಿಕಿಣಿ. ಹಿಂಬಾಲಿಸಿದಂತೆ, ಮೆಲುದನಿಯಲ್ಲೇ ಆದರೂ ಆಚೀಚಿನ ನಾಲ್ಕು ಮಂದಿಗೆ ಕೇಳದಿರಲು ಸಾಧ್ಯವಿಲ್ಲದಂತೆ..

“ಹಲೋ ಹಲೋ. ಯಾರು, ರಾಜೂನಾ. ಹಾಂ ಬರ್ತಾ ಇದ್ದೀನೀ. ಇದು ಎಲ್ಲಪ್ಪಾ, ತಡೀ ಹೊರ್ಗೆಲ್ಲಾ ಬಾರೀ ಕತ್ಲೇ ಕಣೋ. ಇಲ್ಲಾ ಹುಣ್ಸೂರು ಕಳೆದು ತುಂಬಾ ಹೊತ್ತಾಯ್ತು. ದೂರದೂರದಲ್ಲಿ ಮಿಣುಕು ದೀಪಾನೇನೋ ಕಾಣ್ಸುತ್ತೆ ಆದ್ರೆ ಹತ್ತಿರದ ದೀಪ, ಬೋರ್ಡೂ ದಾಟೋವಾಗ ಓದಕ್ಕಾಗ್ತಾ ಇಲ್ಲ. ಅದಿರ್ಲೀ ಏನಾರಾ ಕಂಡ್ರೆ ತಿಳಿಸ್ತೀನಿ. ಇನ್ನೇನ್ ಸಮಾಚಾರ? ಏ ಈ ಸತ್ಯಾ ಏನ್ಮಾಡ್ತಾ ಇದ್ದಾನೀಗ? ಇಲ್ಲ, ಅವನಲ್ಲ, ಒಂಟಿಕೊಪ್ಪಲ್ ಕಡೇಂದ ಬರ್ತಾ ಇದ್ದ ನೋಡು, ಕುಳ್ಳಕ್ಕೆ, ಲ್ಯಾಂಗ್ವೇಜ್ ಕ್ಲಾಸಲ್ಲಿ ಸುಳ್ಳು ಹೇಳಿ ಜೀಎಸ್ಸೆಮ್ ಕೈಲೀ ‘ಸತ್ಯಾ ಈಸ್ ಶಾರ್ಟ್ ಬಟ್ ನಾಟ್ ಟ್ರೂ’ ಅಂತಾ ಉಗುಸ್ಕೊಂಡಿದ್ದಾ ನೋಡು. ಹೂಂ ಅವ್ನೇ. ಓ ಪರ್ವಾಗಿಲ್ಲ್ವೇ. ಅವನ ಬಕ್ರೀ ಏನಾದ್ಲೂ. ಹೂಂ ಇವನ್ ಒನ್ವೇ ಲವ್ವೂ ಅವಳ್ಗೇನ್ ಗೊತ್ತಾಗ್ಬೇಕು. ಅರೆ ಇದೇನಪ್ಪಾ ಇಲ್ವಲಾಂತ ಬೋರ್ಡ್ ಓದ್ದಂಗಾಯ್ತು. ನಾನೆಲ್ಲೋ ಮೈಸೂರೇ ಬಂತೇನೋಂತ ಗಾಬ್ರಿಪಟ್ನೋ. ಸಿಟಿ ಇಷ್ಟೊಂದು ಬೆಳೆದ್ಬಿಟ್ಟಿದ್ಯೇನೋ..”

ಬಸ್ಸಿಗೆ ಸೈಡ್ ಕೊಡ್ದೇ ಎದುರು ಗುರಗುಡುತ್ತಿದ್ದ ಅಜ್ಜಲಾರಿಯನ್ನು ಕಿವಿ ಕತ್ತರಿಸುವ ಹಾರನ್ನ್ ಬಲದಲ್ಲೇ ಕರೆಗೊತ್ತಿ ಸಾಗುವಾಗ ಒಂದು ಹಂಪ್ ಬೇರೇ ಸಿಕ್ಕಿ, ಸಣ್ಣ ದಢಲ್. ಮುಂದುವರಿಯಿತು ಅಜ್ಞಾತವಾಣಿಯಿಂದ ಅಶರೀರವಾಣಿಗೆ ವಾಕ್ಸರಣಿ “ಥೂ! ಈ ಡ್ರೈವರ್ಸ್ಗ್ಯಾಕಿಷ್ಟು ಆತ್ರಾ. ನೋಡು, ಹೊರಡೋ ಹೊತ್ಗೇ ಕಾಲರ್ಧ ಗಂಟೆ ಲೇಟು. ಮಡ್ಕೇರಿ ಘಾಟಿ ಹತ್ಬೇಕಾದ್ರೇ ಅದ್ಯಾರೋ ಪ್ರಾಯಸ್ಥರು ಮೂತ್ರಾ ಮಾಡ್ಬೇಕು ಸ್ವಲ್ಪ ನಿಲ್ಸಪ್ಪಾಂದ್ರೆ ಇವನಪ್ಪನ್ ಗಂಟು ಹೋದಾಗ್ ಮಾಡ್ದಾ. ಹೂಂ, ನಿಲ್ಲ್ಸಿದ್ದಾ ಏನೋ ದುರ್ದಾನಾ ತೊಗೊಂಡೋನ್ ಹಾಗೆ. ಆದ್ರೆ ಕುಶಾಲ್ನಗರದ ಪೇಟೆ ಮಧ್ಯದಲ್ಲಿ ಅದೇನೋ ಡಬ್ಬಾ ಹೋಟ್ಲೆದ್ರು ಅವಂದೇ ಆಯ್ಕೇಲಿ ಅರ್ಧ ಗಂಟೆ ನಿಲ್ಸಿದ್ದ. ಡ್ರೈವರ್ಗೆ ಫ್ರೆಶ್ ಆಗ್ಬೇಕಂತೇ. ಹೂಂ, ಇವರುಗಳೆಲ್ಲಾ ನೈಟ್ ಡ್ಯೂಟೀ ಇದ್ರೂನೂ ಡೇ ಟೈಮೆಲ್ಲಾ ಏನೇನೋ ಕಾಸ್ಮಾಡ್ಕೊಂಡೂ ಇಲ್ಲ್ ಹಾಬೀ ಹಾಗೆ ಬಂದು ನಿದ್ರೇಂತಾರೆ. ಏನಂದೀ? ಹೌದಾ? ಖಾಲಿ ಕಂಡಕ್ಟರ್ ಒಬ್ನೇ ಅಷ್ಟೊಂದು ಮಾಡ್ಕೊಂಡಿದ್ನಾ? ಲೋಕಾಯುಕ್ತ ಇರೋ ಹೊತ್ಗೆ ಅಷ್ಟಾದ್ರೂ ತಿಳೀತು ಬಿಡು. ಆ ಕುಶಾಲ್ನಗ್ರದಲ್ಲಿ ರೀಸೆಸ್ಗೆ ಹೋಗೋಣಾಂದ್ರೂ ಸೈಡ್ಗೆಲ್ಲೂ ಕಾಲಿಡಂಗಿಲ್ಲ, ಥೂ ಅಸಯ್ಯಾ! ಹೂಂ ಗೊತ್ತಲ್ಲಾ ಬಸ್ನೋರೆಲ್ಲಾ ಅಲ್ಲಿನ ಪ್ರೇತ ಸಂಗೀತಾ ಕೇಳಸ್ಕೊಂಡು ಅದೇನ್ ಚಾನೋ ಸಕ್ರೇ ನೀರೋ ವ್ಯಾಪಾರಾ ಮಾಡ್ದ್ರೆ, ಡ್ರೈವರ್ ಕಂಡಕ್ಟರ್ ಸಾಲಿಡ್ಡಾಗಿ ಇಡ್ಲಿ ಸಾಂಬಾರ್ ಕತ್ತರ್ಸ್ತಾ ಇದ್ರು. ಹೂಂ ಎಲ್ಲಾ ಓಸೀನೇ ಮತ್ತೆ, ಡ್ರೈವರೂ ಕಟ್ಟಿಸ್ಬೇಡ್ವಾ ಕೋಟ್ಯಂತರ್ ರೂಪಾಯಿ ಬಂಗ್ಲೆ..”

ಕತ್ತಲ ಮುಸುಕಿನಲ್ಲಿದ್ದ ಬಸ್ಸು ಒಮ್ಮೆಲೆ ಬೆಳಗಿತು. ಕಂಡಕ್ಟರ್ “ಯಾರ್ರೀ ಬಸಪ್ಪಾ, ಬೀಎಮ್ಮೆಚ್ಚ್ ಇಳ್ಕೊಳ್ರೀ. . . . . ಹೂಂ, ಬಸಪ್ಪಾ ಮೆಮೊರಿಯಲ್ ಆಸ್ಪಿಟಲ್ಲೇ. ಪ್ರೀಮಿಯರ್ ಸ್ಟುಡಿಯೋನಾ? ಆಗ್ಲೇ ಹೇಳ್ಬೇಡ್ವೇನ್ರೀ? ನೀವಾಗ್ಲೇ ಮೊಬಾಯಿಲ್ಲಲ್ಲಿ ಯಾವ್ನೋ ಕಂಡಕ್ಟರ್ ಬಂಗ್ಲೆ ಕಟ್ಟಿಸಿದ್ ಊರು ಸುದ್ದೀನೆಲ್ಲಾ ಮಾತಾಡ್ತಾ ಇದ್ರೀ – ಗೊತ್ತಿರತ್ತೇಂತ ನಾನು ಸುಮ್ನಾದೆ. ಗಂಗೋತ್ರಿ ಯೂನ್ವರ್ಸಿಟೀಗಾದ್ರೆ ಮುಂದೇನೂ ಇಳೀಬೌದು ಬನ್ನಿ. ಇಲ್ಲಾ ಇಲ್ಲೇ ಇಳ್ಕಳೀ ರಿಕ್ಷಾ ಸಿಗತ್ತೆ.” ಅಜ್ಞಾತವಾಣಿ ದಡಬಡ ಚೀಲ, ಶಾಲೂ ಎಳ್ಕೊಂಡು, ತಲೆ ತಗ್ಗಿಸಿಕೊಂಡು ಇಳಿದುಹೋಯ್ತು.

[ಸಶರೀರಿಗಳೆಲ್ಲಾ ನಿಟ್ಟುಸಿರು ಬಿಟ್ಟು, ಸೀಟ್ ನೆಟ್ಟಗೆ ಮಾಡಿ ‘ಮೆಟ್ರೋಪೋಲ್, ರಾಮ್ಸಾಮೀ..’ ಕಾಯ್ತಾ ಕೂತರು. ಮುಗೀತು]

ನಿಮಗೆ ಗೊತ್ತಿರುವ ಕಥೆ:

ಹೊಳೆ ಬದಿಯ ನೇರಳೆ ಮರದ ಮೇಲೆ ಮಂಗ, ನದಿಯಲ್ಲಿ ಮೊಸಳೆ. ಮಂಗ ರುಚಿರುಚಿಯಾದ ಹಣ್ಣುಗಳನ್ನು ತಾನು ತಿನ್ನುವುದಲ್ಲದೇ ಮೊಸಳೆಗೂ ಉದುರಿಸುತ್ತಾ ಗೆಳೆತನ ಬೆಳೆಸಿತ್ತು. ಮೊಸಳೆ ಕೆಲವೊಂದು ಹಣ್ಣನ್ನು ತನ್ನ ಮನೆಗೂ ಮನದನ್ನೆಗೂ ಮುಟ್ಟಿಸಿತ್ತು. ಇಷ್ಟು ರುಚಿಯನ್ನು ಸದಾ ಸವಿಯುವ ಮಂಗನ ಹೃದಯ ಇನ್ನೆಷ್ಟು ರುಚಿಯಿರಲಾರದೆಂದು ಹೆಂಡತಿ ಮೊಸಳೆಯ ತರ್ಕಲಹರಿ ಬೆಳೆಯಿತು. ಆಕೆ ಗಂಡನಿಗೆ ದುಂಬಾಲು ಬಿದ್ದು, ಮೋಸದಲ್ಲಿ ಮಂಗನನ್ನು ಮನೆಗೆ ತರಲು ಒಲಿಸಿದಳು. ಫಿತೂರಿಯ ವಾಸನೆ ತಿಳಿಯದೇ ಮಂಗ ಗೆಳೆಯನ ಬೆನ್ನೇರಿ ಮೊಸಳೆಯಮ್ಮನ ಆತಿಥ್ಯ ಸವಿಯಲು ಹೊರಟದ್ದೂ ಆಯ್ತು. ಆದರೆ ಹೊಳೆ ಮಧ್ಯದಲ್ಲಿ ಬೋದಾಳ ಗಂಡು ತನ್ನ ಹೆಣ್ಣಿನ ನಿಜಬಯಕೆಯನ್ನು ತಿಳಿಸಿಬಿಟ್ಟಿತು. ತಲೆ ಚುರುಕಿನ ಮಂಗ ಕೂಡಲೇ ತೀವ್ರ ವಿಷಾದದ ಠಕ್ಕು ಮಾಡಿ “ಛೆ, ನೀನು ಮೊದಲೇ ಹೇಳಬಾರದಾ ಮೊಸಳೆಯಣ್ಣ? ನಾನು ಹೃದಯವನ್ನು ಅಲ್ಲೇ ನೇರಳೆ ಮರದ ಮೇಲೆ ಬಿಟ್ಟು ಬಂದುಬಿಟ್ಟೆ. ನನ್ನ ಏಕಮಾತ್ರ ಗೆಳೆಯನ ಹೆಂಡತಿಯ ಬಯಕೆಗೆ ನಾನು ಅಷ್ಟೂ ಕೊಡದಿರುವುದು ಹೇಗೆ? ನಡಿ, ವಾಪಾಸು ಹೋಗಿ ತಂದುಬಿಡೋಣ” ಎಂದಿತಂತೆ. ಮೊಸಳೆ ಇದಪ್ಪಾ “ಸಚ್ಚೀಪ್ರೇಮ್” ಎಂದು ಕನವರಿಸುತ್ತಾ ಮತ್ತೆ ದಂಡೆ ಸಮೀಪಿಸಿದಾಗ ಮಂಗ ಠಣ್ಣೆಂದು ಮರಕ್ಕೆ ಹಾರಿ ಬಚಾವಾಯ್ತು.

ವ್ಯತಿರಿಕ್ತ ನೀತಿ: ಇಂದು ಮನುಷ್ಯಲೋಕದಲ್ಲಿ ಬಹುತೇಕ ಮಂದಿಗೆ ಸ್ವಂತ ಮಿದುಳೇ ಅಂಗೈಯಲ್ಲಿ ಮೂರ್ತೀಭವಿಸಿದಂತೆ ಚರವಾಣಿ ಕಂಗೊಳಿಸುತ್ತದೆ. ಮೊಸಳೆಗಳ ಜಾಲದಿಂದ ಬಚಾವಾಗಲು ಕಳಚಿಕೊಳ್ಳಲು ಗೊತ್ತಾಗದೇ ಸಂದುಹೋಗುವ ಭಯ ಹೆಚ್ಚಿದೆ!

‘ಮಾತಾಡು ಇಂಡಿಯಾ ಮಾತಾಡು’ ಶೀರ್ಷಿಕೆಯ ಈ ಮಾತು ಇಂದು ಬರಿಯ ಜಂಗಮವಾಣೀ ಸಂಸ್ಥೆಯೊಂದರ ಜಾಹೀರಾತು ಕರೆಯಾಗಿ ಉಳಿದಿಲ್ಲ. ನಮ್ಮ ನಿತ್ಯ ಬಳಕೆಯ ದಾರಿ ಮತ್ತು ಪುಟ್ಟಪಥಗಳು ಅಗಲೀಕರಣ, ಕಾಂಕ್ರಿಟೀಕರಣ ಹಾಗೂ ಅಂತರ್ಲಾಕೀಕೃತಗೊಳ್ಳುವ ಹಿಂಸೆಗಳನ್ನೆಲ್ಲ ವರ್ಷಾನುಗಟ್ಟಳೆ ಕೊಡುತ್ತಾ ಏನೋ ಒಂದು ನ್ಯಾಯ ದಕ್ಕಿತು ಎನ್ನುವಾಗ ‘ಪುನರಪಿ ಅಗೆತಂ ಪುನರಪಿ ಹುಗಿತಂ’ ಜಪಿಸುತ್ತ ಇನ್ನಷ್ಟು ಮತ್ತಷ್ಟು ಕೇಬಲ್ಲುಗಳು ಭೂಗತವಾಗುತ್ತಿರುವುದು, ಕಗ್ಗಾಡ ಮೂಲೆಯ ದಿಣ್ಣೆ ನೆತ್ತಿಯಲ್ಲೂ ಬೋಗುಣಿ ಎತ್ತಿ ಹಿಡಿಯುವ ಸ್ತಂಭಗಳು ಮೊಳೆಯುತ್ತಿರುವುದು ಈ ಕರ್ಣಪಿಶಾಚಿಗೇ. ಅಭಿವೃದ್ಧಿಯ ಚಿರಂತನತೆ ಎಂದರೆ ಸದಾ ಹಾಳು ಸುರಿಯುವುದೇ ಇರಬೇಕು ಎಂಬ ಸಂಶಯ ಕಾಡುತ್ತಿದೆ. ಆದರೆ ಮೇಲಿನ ನಿದರ್ಶನಗಳ ಬೆಳಕಿನಲ್ಲಿ ನೋಡುವಾಗ ಮನಸ್ಸು ಹಾಳು ಸುರಿಯುವ ಅಪಾಯ ಇನ್ನೂ ಢಾಳಾಗಿ ಕಾಣುತ್ತಿದೆ.

ಜಂಗಮವಾಣಿ, ಚರವಾಣಿ, ಸಂಚಾರವಾಣಿ, ಮೊಬೈಲ್ ಎಂದಿತ್ಯಾದಿ ಹೆಸರಾಂತ, ವರ್ತಮಾನ ಕಾಲದ ಮಾನಸಿಕ ಸಂಪರ್ಕದ ಹೆದ್ದಾರಿಯನ್ನು ಪ್ರತಿ ವ್ಯಕ್ತಿಗೆ ‘ಕರಾಗ್ರೇ ವಸತೇ’ ಮಾಡಿಸಲು ಸಾಂಪ್ರದಾಯಿಕ ಭಾರತೀಯ ಸಂಚಾರ ನಿಗಮದಿಂದ (ಬೀಎಸ್ಸೆನ್ನೆಲ್) ತೊಡಗಿ ಎಷ್ಟೊಂದು ಸಂಸ್ಥೆಗಳು! ಅವುಗಳ ಮೇಲಾಟದಲ್ಲಿ ಎಷ್ಟೊಂದು ಸೌಲಭ್ಯಗಳು – ಆಯ್ದ ಸಂಖ್ಯೆಗಳೊಳಗೆ ಅನಿಯಮಿತ ಮಾತು, ಅಂತಾರಾಜ್ಯ ಗಡಿಮುಕ್ತಿ, ಮಾತಾಡಿದಷ್ಟೇ ಬಿಲ್ಲು, ಮುಂಪಾವತಿ, ಜೀವಾವಧಿ, ಸಂದೇಶ ಉಚಿತ ಇತ್ಯಾದಿ. ಇನ್ನು ಕರಸ್ತಲ ಯಂತ್ರ ಮಹಿಮೆಯೋ ಅಕ್ಷರಶಃ ಬಣ್ಣಿಸಲಸದಳ! ಆದರೆ ಇವೆಲ್ಲಾ ಇನ್ನೂ ಹೆಚ್ಚಿನದೆಲ್ಲಾ ಸೇರಿ, ಸೇರಿ ಮನುಷ್ಯ ಬೌದ್ಧಿಕ ವಿಕಾಸವನ್ನೇ ಸಪುರಗೊಳ್ಳುತ್ತಿರುವ ಕುರುಡುಗಲ್ಲಿಗೆ ಕೊಂಡೊಯ್ಯುತ್ತಿರುವುದಂತೂ ನಿಶ್ಚಯ. ಅವುಗಳ ಕಾರ್ಯ ವೈವಿಧ್ಯತೆ ಏರಿದಷ್ಟೂ ಅದರ ಬಳಕೆದಾರರ ಅವಲಂಬನ ಶೃಂಗಾರ ಏರುತ್ತಿದೆ, ನೈಸರ್ಗಿಕ ಶಕ್ತಿ ತೀವ್ರವಾಗಿ ಅವಗಣನೆಗೆ ಈಡಾಗುತ್ತಿದೆ. ನೆನಪು (ಹಾಗೇ ಮರೆವೂ), ಮುಂದಾಲೋಚನೆ (ಸೋಂಭೇರಿತನವೂ), ಲೆಕ್ಕಾಚಾರ (ಉಡಾಫೆಯೂ), ನೋಡುವ – ಹುಡುಕುವ ಸಂತೋಷಗಳು (ಕಳೆದು ಹೋಗುವ ರೋಮಾಂಚನ), ಬರವಣಿಗೆಯ ನವಿರು (ಅನಕ್ಷರತೆಯ ಮುಕ್ತತೆ), ಮುಖತಃ ಹೇಳಲು ನಾಲ್ಕು ಮಾತಿನಷ್ಟು ಗುಟ್ಟು (ಸಣ್ಣ ಸ್ವಾರ್ಥಗಳೂ), ಓಡಾಟ (ಮೈಗಳ್ಳತನ) ಹೀಗೆ ನೂರೆಂಟು ಏರುಮಗ್ಗುಲ ಸಂಭ್ರಮವೂ ಇಳಿದಾರಿಯ ಅನುಭವವೂ ಅರಿವಿಲ್ಲದೇ ಕಳೆದುಕೊಳ್ಳುತ್ತಿದ್ದೇವೆ.

ಪಕ್ಕದಲ್ಲೇ ಹೆಜ್ಜೆ ಹಾಕುವ ಮಿತ್ರ ಊರಾಚಿನ ಇನ್ನೊಬ್ಬನ ಬಳಿ ಹರಟುತ್ತಿರುತ್ತಾನೆ. ಕತ್ತೆತ್ತಿ ನೋಡಿದರೆ ದಾರಿ ಎದುರು ಬದಿಯಲ್ಲೇ ಬಸ್ಸಿನಿಂದ ಕೈ ಬೀಸುತ್ತಿರುವ ಹೆಂಡತಿಯನ್ನು “ಎಲ್ಲಿ ಹಾಳಾಗಿಹೋಗಿದ್ದೀಯಾ”ಅಂತ ಪುರುಷಪುಂಗವ ಮೇಘ ಸಂದೇಶ ಕಳಿಸಿ ಬಸ್ ತಪ್ಪಿಸ್ಕೊಳ್ತಾನೆ. ಪ್ರವಾಸದಲ್ಲಿ ಕಿಟಕಿಯಾಚೆ ಅದ್ಭುತ ದೃಶ್ಯಗಳು ಮಿಂಚಿ ಮರೆಯಾಗುತ್ತಿರುವಾಗ ಅಂಗೈ ಬ್ರಹ್ಮಾಂಡದಲ್ಲಿ ಫಾರ್ವರ್ಡೆಡ್ ಜೋಕ್‌ಗೆ ಮುಸಿ ನಗೆಯಲ್ಲಿ ಮುಳುಗಿರುತ್ತಾರೆ. ಹಿರಿಮರುದುಪ್ಪೆ (ಕುದುರೆಮುಖ ಶ್ರೇಣಿಯ ಒಂದು ಪ್ರಧಾನ ಶಿಖರ) ಕಣ್ಣು ತಿವಿಯುತ್ತಿರಬೇಕಾದರೆ “ಧರ್ಮಸ್ಥಳಾ ರೇಂಜ್ ಇಲ್ಲಿದೆ” ಎಂಬ ಬೆರಗಿನಲ್ಲಿರುತ್ತಾರೆ! ಅಭಯ ಹೊಸ ತಲೆಮಾರಿನ ‘ಕರ ಕರೆ’ಯನ್ನು ನನಗಾಗಿ ಎರಡೂ ಕೈ ಎತ್ತಿ ಕೊಡಬಂದಾಗ (ಮೇನಕೆಯ ಎದುರು) ವಿಶ್ವಾಮಿತ್ರ ಪೋಜ್ ಕೊಟ್ಟು, “ರಶ್ಮಿ ಬೆಂಗಳೂರು ತಲ್ಪಿದ್ಳಾಂತ ದೇವಕಿಗೆ ಮೆಸೇಜ್ ನೋಡಲು ಕರ್ಕರೆ ಮಾಡುವವನೇ ನಾನು! ರಂಗಾಯಣದ ಹ್ಯಾಂಲೆಟ್ ಟು ಬೀ ಆರ್ ನಾಟ್ ಟು ಬೀ ಬಿಕ್ಕಳಿಸುತ್ತಿರುವಾಗ ಅಂಡ್ರಾಯಿಡ್ ಮೂಲಕ ಮೇಲ್ ಬಾಕ್ಸಿನಲ್ಲಿ ಬಿದ್ದು ಕಾಣುತ್ತಿರುವ ‘ಮಾತಾಡು ಇಂಡಿಯಾ ಮಾತಾಡು’ ಉಳುಸ್ಕೊಳ್ಳೋದೇ ಕಿತ್ ಬಿಸಾಡೋದೇ ಯೋಚ್ನೇ ಮಾಡ್ತಾ ಇರ್ಲಿಲ್ವಲ್ಲಾ ನೀವು?

ಭಾವನಾತ್ಮಕ ಸಂಬಂಧಗಳ ಜಿಡುಕು
[ರಕ್ತ ಸಂಬಂಧ ಅಥವಾ ಇನ್ನೂ ನಿಖರವಾಗಿ ಹೇಳುವುದಾದರೆ ಜೀನುಗಳ ಬಂಧ ಹೇಳುವ ಸತ್ಯ ಏನೇ ಇದ್ದರೂ ಸಾಮಾಜಿಕ ಮನ್ನಣೆ ಇರುವುದು ನಾವು ವಿಭಿನ್ನ ಕಾರಣಗಳಿಗಾಗಿ ಬೆಳೆಸಿಕೊಂಡ ಕೆಲವು ಶಾಸನಾತ್ಮಕ (ತಂದೆ, ತಾಯಿ, ಮಗ ಇತ್ಯಾದಿ) ಮತ್ತು ವಿಸ್ತೃತವಾಗಿ ಭಾವನಾತ್ಮಕ (ಕುಟುಂಬ, ಜಾತಿ, ಧರ್ಮ ಇತ್ಯಾದಿ) ಸಂಬಂಧಗಳಿಗೆ ಮಾತ್ರ. ಇವುಗಳ ಮೂಲ ರಕ್ತ ಸಂಬಂಧದಲ್ಲೇ ಇರಬಹುದಾದರೂ ಬಹುತೇಕ ಬಳಕೆಯಾಗುವುದು ಸಾಮಾಜಿಕ ಅನಿವಾರ್ಯತೆಗಾಗಿ. ಈ ಗೊಂಡಾರಣ್ಯದಲ್ಲಿ ಹೆದ್ದಾರಿ ಕಡಿಯುವವರಿರಬಹುದು. ನನ್ನದೇನಿದ್ದರೂ ಪರಂಪರೆಯ ಬೆಳಕಿನಲ್ಲಿ ಅಂದಂದಿನ ಅನುಸರಣೆಗೆ ಬೇಕಾದಷ್ಟೇ ದಾರಿ ಬಿಡಿಸಿಕೊಂಡ ಅನುಭವ. ಜೀ-ವನದೊಳಗಿನ ಅದ್ಭುತ ಯಾನದಲ್ಲಿ ಹಿಂದೆ ತಿರುಗಿ ನೋಡಬಹುದು, ಮರುಪಯಣ ಅಸಾಧ್ಯ. ಪ್ರಾಯದ ಶಿಖರ ಸಮೀಪಿಸುತ್ತಿದ್ದಂತೆ ದಿಗಂತ ವಿಸ್ತರಿಸಿದೆ. ನಾನು ಉದ್ದೇಶಪಡದೆಯೂ ಜವಾಬ್ದಾರಿಗಳು - ಮಗ, ಗಂಡ, ಅಪ್ಪ, ಮಾವ ಎಂದಿತ್ಯಾದಿ ಪೇರಿಕೊಳ್ಳುತ್ತಿವೆ. ಅದರಲ್ಲಿ ಕಾಲಮಾನಕ್ಕೆ ತಕ್ಕಂತೆ ಕ್ರಿಯಾತ್ಮಕ ಅರ್ಥ ಕಳೆದುಕೊಂಡವು, ಕಳಚಿಯೇ ಹೋದವುಗಳ ಲೆಕ್ಕ ಬಿಡಿಸಿಡುವುದು ಸುಲಭವಲ್ಲ. ಆದರೂ ಈ ಕಗ್ಗಂಟಿನಲ್ಲಿ ನನ್ನ ಜೀವನಾನುಭವಕ್ಕೆ ದಕ್ಕಿದ ಒಂದು ಎಳೆಯನ್ನಷ್ಟೇ ಬಿಡಿಸಿಡಲು ಪ್ರಯತ್ನಿಸಿದ್ದೇನೆ.]

ಸಾಗರದಿಂದ ಕೊಡಗಿನ ಅರಸರಿಗೆ ರಾಜಪುರೋಹಿತರಾಗಿ ನೂರಿನ್ನೂರು ವರ್ಷಗಳ ಹಿಂದೆ ಬಂದದ್ದಂತೆ ನಮ್ಮ ಕುಟುಂಬ – ಗುಡ್ಡೇಹಿತ್ಲು. ಭಾರತದ ಸ್ವಾತಂತ್ರ್ಯ ಸಂಗ್ರಾಮ ಬಲಗೊಳ್ಳುತ್ತಿದ್ದಂತೆ, ಹುಟ್ಟಿನ ಆಕಸ್ಮಿಕಗಳು ಕುಲಕಸುಬಿಗೇ ಜೋತು ಬೀಳಿಸುವ ಅಂಶಗಳು ಆಗಬೇಕಿಲ್ಲದ (ವೃತ್ತಿ ನಿರ್ಧಾರಕವಾಗಬೇಕಿಲ್ಲದ ಅಥವಾ ವರ್ಣ ವಿವರ್ಣವಾಗುವ) ಕಾಲಕ್ಕೆ, ಅವಿಭಕ್ತ ಕುಟುಂಬಗಳು ಅರ್ಥ ಕಳೆದುಕೊಳ್ಳುತ್ತಿದ್ದ ಕಾಲಕ್ಕೆ, ನನ್ನಜ್ಜ (ಪಿತ್ರಾರ್ಜಿತ ಎನ್ನುವ ನೆಲೆಯಲ್ಲಿ ಇಲ್ಲಿ ಅಪ್ಪನಪ್ಪನನ್ನು ಮಾತ್ರ ನಾನುದ್ದೇಶಿಸಿದ್ದೇನೆ) ಕೃಷಿಭೂಮಿಯಲ್ಲಿ ಪಾಲುಪಡೆದು ಸ್ವತಂತ್ರರಾದರು. ತನ್ನ ಸಂಸಾರವನ್ನು ಕಟ್ಟುವ ಕಷ್ಟಕ್ಕೆ ಅವರು ಜೊತೆಗೆ ಅನ್ಯವೃತ್ತಿಯನ್ನೂ (ಸಹಕಾರೀ ಬ್ಯಾಂಕಿನಲ್ಲಿ ತನಿಖಾಧಿಕಾರಿ) ನಡೆಸಬೇಕಾಯ್ತು. ಅದೇ ನಮ್ಮ ತಂದೆ ಹೆಚ್ಚು ವೈಚಾರಿಕರಾಗಿ, ಪಾಲಿನ ಹಂಗೂ ತೊರೆದು, ಕುಟುಂಬದಿಂದ ಒಂದು ತರದಲ್ಲಿ ಸಿಡಿದೇ ಸ್ವತಂತ್ರ ಮನೆ ಮತ್ತು ಇಷ್ಟಪಟ್ಟ ಅಧ್ಯಾಪನದ ವೃತ್ತಿಜೀವನ ಅನುಸರಿಸಿದರು. ಹಾಗೆಂದ ಮಾತ್ರಕ್ಕೆ ಮೂಲ ಕುಟುಂಬದ ಕುರಿತು ಮಗನ ಜವಾಬ್ದಾರಿ, ಒಟ್ಟು ವ್ಯಕ್ತಿಗಳ ಒಡನಾಟಗಳ ಎಳೆಯನ್ನೇನು ಅವರು ಕಡಿದದ್ದಿಲ್ಲ. (ತಂದೆಗೆ ಸ್ವಭಾವದಲ್ಲಿ ಸರ್ವಾಧಿಕಾರಿತನ ಇದ್ದರೂ ಸಮಷ್ಟಿಯ ಎಲ್ಲ ನಿರ್ಧಾರಗಳಲ್ಲಿ ಬುದ್ಧಿಪೂರ್ವಕವಾಗಿ ತಾಯಿಯ ಭಾವ, ಅಭಿಪ್ರಾಯಗಳನ್ನು ಅಳವಡಿಸಿಕೊಂಡೇ ನಡೆದುಕೊಂಡರು) ಸಹಜವಾಗಿ ನಮ್ಮ ಚಿಕ್ಕಪ್ಪ, ಅತ್ತೆಯರಿಗೆ ಅಣ್ಣನ ಮನೆ, ನಮಗೆ ಅಜ್ಜನ ಮನೆ (ಮೋದೂರು) ಸಹಜ ಹೊಕ್ಕು ಬಳಕೆಗೆ ಒಲಿದೇ ಇತ್ತು.

ನನ್ನ ತಿಳುವಳಿಕೆಯಂತೆ ಸಮೂಹವೊಂದನ್ನು ನಡೆಸುವ ತೋರಗಾಣ್ಕೆಯ ಆಚಾರಗಳು ಸಂಪ್ರದಾಯ. ಅದರೊಳಗೆ ವ್ಯಕ್ತಿಗಳು ತರುವ ತಿದ್ದುಪಡಿಗಳು ಪರಂಪರೆ. ಸಾಂಪ್ರದಾಯಿಕವಾಗಿ ನಾನು ಬ್ರಾಹ್ಮಣ, ಇನ್ನೂ ಸಪುರದ ಗೆರೆ ಎಳೆಯುವುದಾದರೆ ಹವ್ಯಕ. ಸಾಮಾನ್ಯವಾಗಿ ಬಳಕೆಯಲ್ಲಿರುವಂತೆ ಅಪ್ಪಮ್ಮ, ಅಜ್ಜಜ್ಜಿ, ಚಿಕ್ಕಪ್ಪಮ್ಮಂದಿರು, (ಸೋದರ) ಅತ್ತೆಮಾವಂದಿರು ಎಳೆ ಹರಯದಲ್ಲಿ ನನಗೆ ಪರಂಪರೆಯ ವಕ್ತಾರರು ಅಥವಾ ಅಭಿವ್ಯಕ್ತಿಗಳು. ನಮ್ಮ ತಂದೆಗೆ ಬಾಲ್ಯದಲ್ಲೇ ಉಪನಯನ ಮಾತ್ರವಲ್ಲ ಸ್ವಲ್ಪ ವೈದಿಕ ಪಾಠಗಳೂ ನಡೆದದ್ದಿದೆ. ಮನೆ ದೇವರೂಂತ ಅಪ್ಪನಪ್ಪನ ಮನೆಯಲ್ಲಿ ಗಣಪತಿ, ಅಮ್ಮನಪ್ಪನ ಮನೆಯಲ್ಲಿ ದುರ್ಗೆ ಇಟ್ಟುಕೊಂಡು ನಿತ್ಯಪೂಜೆ, ನೈವೇದ್ಯಗಳಲ್ಲದೆ ವರ್ಷಾವಧಿ ವ್ರತ ವಿಶೇಷಾದಿಗಳು ನಡೆಯುತ್ತಲೇ ಇವೆ (ಅಲ್ಲೂ ಕಾಲಕ್ಕೆ ತಕ್ಕ ವಿಮರ್ಶೆ ಅಥವಾ ಹೊಸ ಪರಂಪರೆಯ ರೂಪಣೆ ಧಾರಾಳ ಕಾಣಬಹುದು). ಈಗಲೂ ಅವುಗಳಲ್ಲಿ ಅನೌಪಚಾರಿಕವಾಗಿ ಭಾಗಿಯಾಗುವ ಅವಕಾಶ ನನಗಿದ್ದೇ ಇದೆ ಎನ್ನುವವರೆಗೆ ನಾನು ಸಾಂಪ್ರದಾಯಿಕನೇ ಹೌದು. ಆದರೆ…

ತಂದೆ ವಿಚಾರ ಬಲಿತಂತೆ ಜನಿವಾರವನ್ನೇ ಉಳಿಸಿಕೊಳ್ಳಲಿಲ್ಲ. ತಾಯಿಯ ಸಮಾಧಾನಕ್ಕಾಗಿ ಮತ್ತು ಮುಂದುವರಿದ ಕಾಲದಲ್ಲಿ (ನಾವು ಮೂರೂ ಗಂಡು ಮಕ್ಕಳೇ ಆದ್ದರಿಂದ) ಹೆಣ್ಣು ಕೊಡುವವರ ಕಣ್ಕಟ್ಟಿಗಾಗಿ ‘ಬೆಳೆದು ಬಿತ್ತುಗಟ್ಟಿದ ಮೇಲೆ’ ಎನ್ನುತ್ತಾರಲ್ಲ ಆ ಪ್ರಾಯದಲ್ಲಿ (ನನಗೆ ಬೀಯೇ ಎರಡನೇ ವರ್ಷ ಓದುತ್ತಿದ್ದ ಕಾಲಕ್ಕೆ, ನಂಜನಗೂಡಿನ ಒಂದು ಪುರೋಹಿತರ ಮನೆಯಲ್ಲಿ ನಾಲ್ಕೇ ‘ಬ್ರಹ್ಮ ಸಾಕ್ಷಿ’ಗಳೆದುರು) ತೀರಾ ಸರಳವಾಗಿ ನಮಗೆಲ್ಲಾ ಉಪನಯನ ಮಾಡಿದ್ದರು. ನಾವಾದರೋ ಅಮ್ಮನ ತೃಪ್ತಿಗಾಗಿ ಕೆಲವು ದಿನ ಗಾಯತ್ರಿ ಗೊಣಗಿದ್ದು ಬಿಟ್ಟರೆ ಗಂಭೀರವಾಗಿ ಸಂಧ್ಯಾವಂದನೆ, ವ್ರತಪೂಜಾದಿಗಳಿಗೆ ಕುಳಿತದ್ದೇ ಇಲ್ಲ. ತಂದೆ ಕೊನೆಗಾಲದಲ್ಲಿ ಕಾನೂನಿನಂತೆ ನಮ್ಮೆಲ್ಲರ ಒಪ್ಪಿಗೆ ಪಡೆದೇ ದೇಹದಾನ ನಡೆಸಿದ್ದು ಮತ್ತು ಎಲ್ಲಾ ವೈದಿಕ ಉತ್ತರ ಕ್ರಿಯೆಗಳನ್ನು ನಿರಾಕರಿಸಿದ್ದು ನಿಮಗೆಲ್ಲಾ ತಿಳಿದೇ ಇರುವುದರಿಂದ ಇಲ್ಲಿ ವಿಸ್ತರಿಸುವುದಿಲ್ಲ. (ಆಸಕ್ತರು, ‘ದೇಹದಾನ’ – ಇಲ್ಲೇ ಹಳೆಯ ಕಡತ ತೆರೆದು ನೋಡಬಹುದು).

ಮಕ್ಕಳಾದ ನಮಗೆ ಬುದ್ಧಿ ವಿಕಸಿಸುತ್ತಿದ್ದಂತೆ ಅವಕಾಶ ಸಿಕ್ಕಲ್ಲೆಲ್ಲಾ ತಂದೆ, “ಇಪ್ಪತ್ತೊಂದರ ಪ್ರಾಯಕ್ಕೆ ಸ್ವತಂತ್ರರಾಗದಿದ್ದರೆ ಒದ್ದು ಹೊರಗೆ ಹಾಕುತ್ತೇನೆ” ಎಂಬ ಸ್ಪಷ್ಟ ವೈಚಾರಿಕ ಸಂದೇಶವನ್ನು ಕೊಡುತ್ತಲೇ ಇದ್ದರು. ಇಲ್ಲಿ ‘ಇಪ್ಪತ್ತೊಂದು’ ಮತ್ತು ‘ಒದ್ದು ಹೊರಗೆ ಹಾಕುವುದು’ ಕೇವಲ (ಕೊಡಗಿನ ಸ್ಟೈಲ್!) ಮಾತಿನ ಅಲಂಕಾರ ಎನ್ನುವುದನ್ನು ಮರೆಯಬಾರದು. ತಂದೆ ಪರಂಪರೆಯನ್ನು ಪರಿಷ್ಕರಿಸಿದರು. ವಾಸ್ತವದಲ್ಲಿ ನಾವು (ಮೂರೂ ಮಕ್ಕಳು) ಯೋಗ್ಯತೆಯೊಡನೆ ಬಯಸಿದ ಓದು ಮತ್ತು ವೃತ್ತಿರಂಗಕ್ಕೆ ಅನುಕೂಲ ಒದಗಿಸುವಲ್ಲೋ ಪರಿಚಿತ ಶಿಫಾರಸು ಕೊಡುವಲ್ಲೋ ತಂದೆ ಎಂದೂ ಹಿಂದುಳಿಯಲಿಲ್ಲ. ನನ್ನದೇ ಉದಾಹರಣೆ ಕೊಡುವುದಾದರೆ – ನಾನು ಪೀಯೂಸಿಯಲ್ಲಿ ಜೀವವಿಜ್ಞಾನದತ್ತ ಒಲವು ಮೂಡಿಸಿಕೊಂಡರೂ ಅನಿವಾರ್ಯ ರಸಾಯನಶಾಸ್ತ್ರದಲ್ಲಿ (ಸೀಬೀಝೆಡ್ ಐಚ್ಛಿಕ) ಎಡವಿದೆ. ತಂದೆಗೆ ಟ್ಯುಟೋರಿಯಲ್ಸ್ ಒಗ್ಗದಿಕೆ ಇದ್ದರೂ ನಾನು ನ್ಯಾಷನಲ್ ಕಾಲೇಜಿನ ಟ್ಯುಟೋರಿಯಲ್ಸ್ ಸೇರಬೇಕೆಂದಾಗ ಬೇಡ ಎನ್ನಲಿಲ್ಲ. ಮುಂದೆ ಬೀಯೇ ಬಯಸಿ ಹಿಡಿದೆ. ಜೊತೆಗೇ ಮೂರು ವರ್ಷದ ಬೆನ್ನಿಗೇ ಸೈನ್ಯ ಸೇರುವ ವ್ಯವಸ್ಥೆಯೊಂದಕ್ಕೆ (ಓಟೀಯೂ) ಒಡ್ಡಿಕೊಳ್ಳಲು ಹೊರಟೆ. ಮುಂದೆ ಭಾರತೀಯ ಪೋಲಿಸ್ ಸೇವೆಯ ಪ್ರವೇಶಕ್ಕೆ ಪರೀಕ್ಷೆ ಬರಿಯುವುದಕ್ಕೂ ಉತ್ಸಾಹ ತೋರಿದೆ (ಆಯ್ಕೆ ಆಗಲಿಲ್ಲ ಎನ್ನುವುದು ಪ್ರತ್ಯೇಕ). ತಂದೆ ಎನ್.ಸಿ.ಸಿ ಮೂಲಕವೇ ಆದರೂ ಒಮ್ಮೆ ಎರಡು ವರ್ಷ ಪೂರ್ಣಾವಧಿ ಭೂಸೈನ್ಯದ ಭಾಗವಾಗಿ ದುಡಿದ ಅನುಭವ ತುಂಬಾ ಕಹಿಯಾಗಿಯೇ ಇತ್ತು. (ನೋಡಿ: ಎನ್.ಸಿ.ಸಿ ದಿನಗಳು) “ನನ್ನ ಮಕ್ಕಳಿಗೆ ಈ ಕಲೆಯ/ ಕೃಷಿಯ/ ವೃತ್ತಿಯ (ಮುಂತಾದ ತಮ್ಮ ಕಷ್ಟದ ದಾರಿಯ) ಸಂಕಟ ಬೇಡ” ಎನ್ನುವ ಎಷ್ಟೂ ಪೋಷಕರನ್ನು ಕಾಣುತ್ತೇವೆ. ಇಂದು ಕುರಿತು ಯೋಚಿಸುವಾಗ ನನ್ನ ತಂದೆ ಹಾಗಿರಲಿಲ್ಲ ಎಂದು ಕಾಣುತ್ತದೆ. ನನ್ನ (ತಮ್ಮಂದಿರದ್ದೂ) ಭವಿಷ್ಯದ ಶೋಧವನ್ನು ಅವರ (ಕಹಿ) ಅನುಭವದ ಒರೆಗಲ್ಲಿಗೆ ಉಜ್ಜಿ ನಮ್ಮನ್ನು ವಂಚಿಸಲಿಲ್ಲ. ಒಳ್ಳೆಯ ಸೈನಿಕ ಅಥವಾ ಪೋಲಿಸರು ಇದ್ದಾರೆ, ಬೇಕು ಎನ್ನುವ ಔದಾರ್ಯ ತಂದೆಯ ನಡೆಯಲ್ಲಿ ನನಗಿಂದು ಕಾಣುತ್ತದೆ. ನಾನು ಅಂತಿಮವಾಗಿ ಪುಸ್ತಕ ವ್ಯಾಪಾರಿತನಕ್ಕೇ ಗಟ್ಟಿಯಾದಾಗ ತಂದೆಯ ಸಹಕಾರ ಅಲ್ಲೂ ತರತಮವಿಲ್ಲದೆ ಗಟ್ಟಿಯಾಗಿ ಬೆಂಬಲಿಸಿತು.

ತಂದೆ ಒಂದು ತಿಂಗಳು ರಜೆ ಹಾಕಿ, ಮಂಗಳೂರಿನಲ್ಲಿ ನನ್ನ ಜೊತೆಗೇ ನಿಂತು ಬುಡ ಗಟ್ಟಿ ಮಾಡಿಕೊಟ್ಟರು. ಶೂನ್ಯ ಬಂಡವಾಳದ ನನಗೆ ಅವರ ಪರಿಚಯದ ಪುಸ್ತಕೋದ್ಯಮದ ದಿಗ್ಗಜರ ಅಮಿತ ಬಲ ಕೊಟ್ಟು, ಪ್ರೊ| ಬಿವಿ ಕೆದಿಲಾಯಾದಿ ಅಸಂಖ್ಯ ಪೋಷಕ ಶಕ್ತಿಗಳನ್ನು ಧೈರ್ಯಕ್ಕೂ ಇಟ್ಟು ನಡೆಸಿದರು. ಅದರ ಮೇಲೂ ನಾನು ‘ಸೋತೆ’ನೆಂದರೆ ಯಾವುದೇ ಕಿಸರಿಲ್ಲದೆ ಅನ್ಯ ವೃತ್ತಿಮುಖಿಯಾಗಲು ತನ್ನ ನೆರವಿನ ಹಸ್ತ ಚಾಚಿಯೇ ಇಟ್ಟಿದ್ದರು. ನಡಿಗೆ ಮಾತ್ರ ನನ್ನದೇ; “ನಿನಗೆ ನೀನೇ ಗೆಳೆಯಾ ನೀನೇ” ತಂದೆಗೆ ಬಲು ಪ್ರಿಯವಾದ ಮಹಾಕವಿ ವಾಣಿ. ಇದು ಪರಂಪರೆ.

ಆನಂದ ವರ್ಧನ – ನನ್ನ ದೊಡ್ಡ ತಮ್ಮ ಇಂಜಿನಿಯರಿಂಗ್, ಅನಂತ ವರ್ಧನ – ಸಣ್ಣ ತಮ್ಮ ಚಾರ್ಟರ್ಡ್ ಅಕೌಂಟೆನ್ಸಿ ಎಂದಾಗಲೂ ತಂದೆ ಹೀಗೇ ನಡೆಸಿಕೊಟ್ಟರು. ಅವರ ಓದಿನ ಬೇರೆ ಬೇರೆ ಹಂತದಲ್ಲಿ ಗಣಿತ ಕಠಿಣವೆನಿಸಿದಾಗ ಮನೆಯಲ್ಲೇ (ಅವರವರ ಆಸಕ್ತ ಗೆಳೆಯರನ್ನೂ ಸೇರಿಸಿ) ಕರಿಹಲಗೆ ಏರಿಸಿ, ಸ್ವತಃ ಪಾಠ ಮಾಡಿದರು. ಸಣ್ಣವನಿಗೆ ಚೆನ್ನೈ ಕೋಚಿಂಗ್ ಇನ್ಸ್ಟಿಟ್ಯೂಟ್ ವ್ಯವಸ್ಥೆಯನ್ನೂ ಒದಗಿಸಿದರು. ಮುಂದೆ ಅವರ ಆಯ್ಕೆಯ ವೃತ್ತಿಜೀವನಕ್ಕೂ ಪೂರ್ಣ ಬೆಂಬಲ ಕೊಟ್ಟರು. (ಮದುವೆಯ ಹಂತದಲ್ಲಿ ‘ಹುಡುಗಿಯನ್ನು’ ನಾವು ನಾವೇ ಆರಿಸಿಕೊಳ್ಳಲಿಲ್ಲ ಮತ್ತು ತಂದೆತಾಯರ ಸಲಹೆ ಸಹಾಯವನ್ನೂ ಬಯಸಿದೆವು. ಅವರು ಕರ್ತವ್ಯವನ್ನು ಸಮರ್ಥವಾಗಿಯೇ ಪೂರೈಸಿದರು.) ದೊಡ್ಡವರಿಬ್ಬರು – ನಾನು ಮತ್ತು ಆನಂದ, ನಾವೇ ಆಯ್ದುಕೊಂಡ ವೃತ್ತಿಯ ಅನಿವಾರ್ಯತೆಯಲ್ಲಿ ದೂರದೂರುಗಳನ್ನು ಆಶ್ರಯಿಸಿದೆವು. (ಪರೋಕ್ಷವಾಗಿ ತಂದೆಯ ಮಾತಿನಂತೇ ಮನೆಯಿಂದ ಹೊರಗೆ ಬಿದ್ದೆವು!) ಸಣ್ಣವ – ಅನಂತ, ಮೈಸೂರೇ ಸರಿ ಎಂದದ್ದಕ್ಕೆ ತಂದೆ ಜೊತೆಯಲ್ಲೇ ಉಳಿಸಿಕೊಂಡರೂ ಅವನ ಬದಲಾದ ಸ್ಥಾನ, ವೃತ್ತಿ, ಹವ್ಯಾಸಗಳಿಗೆ ಸ್ವಾತಂತ್ರ್ಯ ಕೊಟ್ಟೇ ನಡೆಸಿಕೊಂಡರು. ಅದುವರೆಗೆ ತಾನು ವೃತ್ತಿಯಲ್ಲಿದ್ದು, ಗೃಹಕೃತ್ಯದ ನಿರ್ಧಾರಗಳ ನಾಯಕತ್ವ ತನ್ನದಿದ್ದದ್ದನ್ನು ಯಾವ ಗದ್ದಲವಿಲ್ಲದೆ ತಮ್ಮನ ವಶಕ್ಕೆ ದಾಟಿಸಿದ್ದರು. (ಮೊನ್ನೆ ಮೊನ್ನೆ ಲೋಕಾಭಿರಾಮವಾಗಿ ತಾಯಿ ಮಾತಾಡಿದಾಗ ತಿಳಿಯಿತು. ಅನಂತನ ಕುಟುಂಬ ಕೇಳದಿದ್ದರೂ ತಂದೆ ತನ್ನ ನಿವೃತ್ತಿ ವೇತನದಲ್ಲಿ ಒಂದು ದೊಡ್ಡ ಪಾಲನ್ನು ಗೃಹಕೃತ್ಯದ ವೆಚ್ಚಕ್ಕೆಂದು ಅನಂತನಿಗೆ ವರ್ಗಾಯಿಸುತ್ತಿದ್ದರಂತೆ!) ಅಂತರ ಮತ್ತು ಪ್ರಯಾಣ ವೆಚ್ಚದ ಹೊರೆ ಅನುಲಕ್ಷಿಸಿ, ದೂರದೂರಿನ ಮಕ್ಕಳ (ನಾನು ಮತ್ತು ಆನಂದ) ಬಯಕೆಯಂತೆ ಅವರಲ್ಲಿಗೂ ಭೇಟಿ, ಅವರ ಕಲಾಪಗಳಲ್ಲಿ ಪೂರ್ಣ ಸಂತೋಷದೊಡನೆ, ಹಿರಿಯರಾಗಿ ಅವರಿಬ್ಬರೂ ಭಾಗೀದಾರಿಕೆ ಪಡೆದದ್ದಕ್ಕೆ ಎಷ್ಟೂ ಉದಾಹರಣೆಯನ್ನು ಇಲ್ಲೇ ನನ್ನ ಹಳೆಯ ಕಡತಗಳಲ್ಲಿ ನೀವು ಪರೋಕ್ಷವಾಗಿ ಕಾಣಬಹುದು. ಇದೂ ಸತ್-ಪರಂಪರೆಯ ಭಾಗವೆಂದೇ ನಾನು ಭಾವಿಸುತ್ತೇನೆ.

ಹುಟ್ಟಿನ ಆಕಸ್ಮಿಕಕ್ಕೆ ಒದಗಿದ ಆಚಾರಗಳನ್ನು ಕಷ್ಟದಿಂದ ನಿಭಾಯಿಸಿದ್ದಕ್ಕೋ ಏನೋ ತಂದೆ ಇತರ ವ್ಯಕ್ತಿ ಅಥವಾ ಸಾಮಾಜಿಕ ಕ್ರಿಯೆಗಳ ಬಗ್ಗೆ, “ಪರಿಚಯ, ಒಡನಾಟ, ಸ್ನೇಹ, ಸಂಬಂಧ ಎಲ್ಲವೂ FUNCTIONAL ಆಗಿರಬೇಕು” ಎಂದೇ ಸಾರುತ್ತಿದ್ದದ್ದು ನನಗಿನ್ನೊಂದು ದೊಡ್ಡ ಆದರ್ಶ. ದೇಶ, ಭಾಷೆ, ಜಾತಿ, ಧರ್ಮ, ಕುಟುಂಬ, ಸಾಂಸಾರಿಕ ಸಂಬಂಧಗಳು, ವೃತ್ತಿ ಹವ್ಯಾಸಗಳ ಬಂಧಗಳು ನನ್ನನ್ನು ಬಲಿಗೊಡಲು ಯತ್ನಿಸುವಾಗೆಲ್ಲಾ ಸಮರ್ಥವಾಗಿ ಒದಗಿದ ಗುರಾಣಿ ಈ ನಿಲುವು. ತೀರಾ ಮೊದಲು ಹಿಂದೂ ಸಮಾಜೋತ್ಸವದ ಕಾರ್ಯಕರ್ತರು “ಅತ್ರಿಯಲ್ಲಿ ಭಗವಾಧ್ವಜ ಇಲ್ಲ” ಎಂದು ಆಶ್ಚರ್ಯ ವ್ಯಕ್ತಪಡಿಸಿ ಹೇರಲು ಬಂದಿರು. ತಂಡದ ನಾಯಕಮಣಿ – ಧರಣೇಂದ್ರ ಕುಮಾರ್ ಪಡಿವಾಳ್ ಎಂಬುವವರಲ್ಲಿ ‘ಹಿಂದುತ್ವ’ದ ವ್ಯಾಖ್ಯೆ ಕೇಳಿ, ಧ್ವಜ ಏರಿಸದೇ ಓಡಿಸಿದ್ದೆ. ನನ್ನಂಗಡಿಯ ಭಾರತೀಯ ಧಾರ್ಮಿಕ ಪುಸ್ತಕಗಳ ಸಂಗ್ರಹ ನೋಡಿ ಭ್ರಮಿಸಿದವರಿಗೆ ಅಲ್ಲೇ ಇನ್ನೊಂದು ಶೆಲ್ಫಿನಲ್ಲಿರುವ ಇಸ್ಲಾಂ, ಕ್ರಿಶ್ಚಿಯನ್ ಮುಂತಾದ ಸಾಹಿತ್ಯ ತೋರಿಸಿ ತಣ್ಣಗಾಗಿಸುತ್ತೇನೆ. ಮೀಸೆ ನೋಡಿ “ಆರೆಸ್ಸೆಸ್ಸಾ” ಎನ್ನುವವರೂ ಕಡಿಮೆಯಿಲ್ಲ.

ಕೆಲವು ದಶಕಗಳ ಹಿಂದೆ ನನ್ನನ್ನು ದ್ರಾವಿಡ ಬ್ರಾಹ್ಮಣ ಸಂಘದ ಸದಸ್ಯ ಮಾಡಲು ಹರಿಕೃಷ್ಣ ಪುನರೂರು ಮತ್ತು (ಹೆಸರು ಮರೆತಿದ್ದೇನೆ. ಎಂತದೋ) ಹೊಳ್ಳ ಎನ್ನುವವರು ಅಂಗಡಿಗೆ ಬಂದಿದ್ದರು. ಅವರು ನನ್ನ ಸೋದರ ಮಾವನ ಪರಿಚಯದ ಬಲದಲ್ಲಿ ನನ್ನನ್ನು ಬ್ರಾಹ್ಮಣ ಎಂದು ಗುರುತಿಸಿ, ಸದಸ್ಯತ್ವ ಬಯಸಿದರು. ಹೆಸರಿಸುವುದೇ ಆದರೆ ನಾನು ‘ಕರ್ಮ ಬಲ’ದಲ್ಲಿ ವೈಶ್ಯ, ಬ್ರಾಹ್ಮಣನಲ್ಲ ಎಂದು ಸ್ಪಷ್ಟಪಡಿಸಿದೆ. ಆದರೂ ಬಹು ಔದಾರ್ಯದಿಂದ ನನ್ನನ್ನು ಹುಟ್ಟಿನ ಬಲದಲ್ಲೇ ತಮ್ಮ ಸಂಘಟನೆಗೆ ಸೇರಿಸಿಕೊಳ್ಳಲು ಒತ್ತಾಯಿಸಿದಾಗ ಅವರ ಸಂಘಟನೆಯ ನಾಯಕಮಣಿಯೋರ್ವರು (ಹೆಸರು ಮರೆತಿದ್ದೇನೆ – ಸಣ್ಣ ಮಟ್ಟಿನ ರಾಜಕಾರಣಿ ಶಾರದಾ ಆಚಾರ್ ಅವರ ಮಗ) ಮದ್ಯಮಾರಾಟಗಾರ ಆಗಿರುವುದನ್ನು ಬೊಟ್ಟುಮಾಡಿ ತೋರಿಸಿದ್ದಕ್ಕೆ ಅವರಾಗಿಯೇ ನಿರುತ್ತರರಾಗಿ ಹಿಂಜರಿದರು.

ನನ್ನನ್ನು ಹವ್ಯಕ ಸಂಘಕ್ಕೆ ಸದಸ್ಯನನ್ನಾಗಿಸಲು ಕೆಲವರು ಪ್ರಯತ್ನಿಸಿ ಸೋತ ಕಾಲಕ್ಕೆ ಓರ್ವ ತೀರಾ ಪರಿಚಿತ ಹಿರಿಯರು ನನ್ನಲ್ಲಿಗೆ ಬಂದಿದ್ದರು. ನನ್ನ ನೇರ ನಿರಾಕರಣಕ್ಕೆ ಜಗ್ಗದ ಅವರು ‘ಹೃದಯ ಸಂವಾದ’ಕ್ಕೆ ಇಳಿದರು. ಸದಸ್ಯತ್ವದ ಕಲಮುಗಳಿಗೆ ಬೇಕಾದ ವಾಸ್ತವಿಕ ವಿವರಗಳನ್ನೆಲ್ಲ (ಜನನ, ವಿದ್ಯಾಭ್ಯಾಸ ಇತ್ಯಾದಿ) ಕೇಳಿದ್ದರು – ಯಾರಲ್ಲೂ ತಿಳಿಸಬಹುದಾದಂತೆ ಕೊಟ್ಟಿದ್ದೆ. ನಾನು ಆಸಕ್ತಿವಹಿಸದ ನನ್ನ ಗೋತ್ರ, ಪ್ರವರ ಇತ್ಯಾದಿ ಅವರಾಗಿಯೇ ನನ್ನ ಇತರ ಸಂಬಂಧಿಕರಿಂದ ಸರಿಯಾಗಿಯೇ ತುಂಬಿಕೊಂಡಿದ್ದರು. ಕೊನೆಯಲ್ಲಿ ಅವೆಲ್ಲವನ್ನು ಔಪಚಾರಿಕವಾಗಿ ಅನುಮೋದಿಸುವ ಮಟ್ಟಿಗೆ ನನ್ನ ಒಂದು ರುಜು ಮಾತ್ರ ಬೇಕು ಎಂದರು. “ನೀವು, ಸಮಾಜ ನನ್ನನ್ನು ಹಾಗೆ ಕಂಡುಕೊಂಡದ್ದು ತಪ್ಪಲ್ಲ. ಆದರೆ ಅದನ್ನು ನಿಮ್ಮ ಚೌಕಟ್ಟಿನೊಳಗೆ ಅನುಮೋದಿಸಲು, ಅಂದರೆ ಸೀಮಿತ ಹಿತಾಸಕ್ತಿಯ ಸಂಘಟನೆಯ ಸದಸ್ಯನಾಗಲು ನಾನು ಸಿದ್ಧನಿಲ್ಲ” ಎಂದು ಸ್ಪಷ್ಟಪಡಿಸಿದೆ. ಅವರು ಸುಮಾರು ವಾದಿಸಿ, ಕೊನೆಯ ಅಸ್ತ್ರ ಎನ್ನುವಂತೆ, “ನೀವು ನಿಮ್ಮ ತಂದೆಯ ಮಾತನ್ನು ಪೂರ್ಣ ಗೌರವಿಸುತ್ತೀರಲ್ಲಾ. ನಾನು ಅವರ ಬಾಯಲ್ಲಿ ಹೇಳಿಸಿದರೆ ರುಜು ಮಾಡ್ತೀರಾ?” “ನಾನು ತಂದೆಯನ್ನು ತಿಳಿದಂತೆ ಅವರು ನನ್ನಲ್ಲಿ ಹಾಗೆ ಹೇಳಲಾರರು. ಅಷ್ಟಕ್ಕೂ ನೀವು ಹೇಳಿಸಿದರೆ ನಾನು ‘ಪಿತೃವಾಕ್ಯ’ವನ್ನು ಧಿಕ್ಕರಿಸುತ್ತೇನೆ” ಎಂದದ್ದು ಅವರಿಗೆ ತ್ರೇತಾಯುಗದಿಂದ ಕಲಿಗಾಲಕ್ಕೆ ಬಿದ್ದ ಅನುಭವ ಕೊಟ್ಟಿರಬೇಕು.

ದಾಖಲೆಗಳು: ಮಂಗಳೂರಿನಲ್ಲಿ ರೂಪುಗೊಂಡ ನಮ್ಮ ಕುಟುಂಬದ ಎಲ್ಲಾ (ಸರಕಾರೀ) ದಾಖಲೆಗಳಲ್ಲೂ ನಾವು ಜಾತ್ಯಾತೀತರು. ಹೀಗೇ ಮಗ – ಅಭಯನನ್ನು ಸಂತ ಅಲೋಶಿಯಸ್ ಶಾಲೆಗೆ ಸೇರಿಸಿದ್ದೆವು. ಅವನ ಕಿರಿಯ ಪ್ರಾಥಮಿಕ ಶಾಲೆಯ ಯಾವುದೋ ಹಂತದಲ್ಲಿ (ಎರಡೋ ಮೂರನೆಯದೋ ತರಗತಿ ಇದ್ದಿರಬೇಕು) ಟೀಚರ್ ಆಗಾಗ “ನಿನ್ನ ಜಾತಿ ಯಾವ್ದಾ” ಅಂತ ಕೇಳ್ತಾ ಇದ್ದರು. ನಾವು ಶಾಲೆಗೆ ಸೇರಿಸುವಾಗ ಬರೆದುಕೊಟ್ಟಂತೆ ಅವನು ಹೇಳುತ್ತಿದ್ದ. (ವಾಸ್ತವವಾಗಿ ಅವನಿಗೆ ನಾವೆಂದೂ ‘ಜಾತಿ ಪಾಠ’ ಮಾಡಿಯೇ ಇರಲಿಲ್ಲ. ಆ ಪ್ರಾಯದಲ್ಲಿ ‘ಪರಿಸರ’ ಅವನಿಗೆ ಕಲಿಸಿದ ಪಾಠದಲ್ಲಿ, ಅವನ ಗೆಳೆಯ ಉಮ್ಮರನನ್ನು ಕೋಪದ ಭರದಲ್ಲಿ “ಬ್ಯಾರಿ” ಎಂದು ಬಿಟ್ಟಾಗ ಭಾರೀ ಬಯ್ದೆ ಎಂದು ಆತಂಕವನ್ನೂಯ್ದ ಸಂತೋಷಪಟ್ಟಿದ್ದ!) ಅವರು ಮೇಲಿನವರಿಗೆ ಸಮಜಾಯಿಷಿ ಕೊಟ್ಟು ಕೊಟ್ಟು ಕೆಲವೊಮ್ಮೆ “ಇವ್ನಿಗೊಂದು ಜಾತಿಯಿಲ್ಲ” ಎಂದು ಸಣ್ಣದಾಗಿ ಇವನನ್ನೇ ಹೀಯಾಳಿಸಿದ್ದೂ ಇತ್ತು. ಒಂದು ದಿನ ನಮಗೆ ಸ್ಪಷ್ಟ ದೂರೇ ಬಂತು – ಶಿಕ್ಷಣ ಇಲಾಖೆಗೆ ಅಭಯಸಿಂಹನ ಸ್ಪಷ್ಟ ಜಾತಿಸೂಚನೆಯ ವಿವರ ಸಲ್ಲಿಸಲೇಬೇಕು. ನಾನು ಅಷ್ಟೇ ಸ್ಪಷ್ಟವಾಗಿ ಬರೆದುಕೊಟ್ಟೆ (ಪತ್ರದ ಪ್ರತಿ ನನ್ನಲ್ಲಿಲ್ಲವಾದ್ದರಿಂದ ಸುಮಾರು ಈ ಅರ್ಥ ಅದರಲ್ಲಿತ್ತು) – ‘ನಮಗೆ ಜಾತಿಯಿಲ್ಲ. ಜಾತಿಸೂಚನೆಯಿಂದ ಬರುವ ಲಾಭಗಳು ನಮಗೆ ಬೇಕಿಲ್ಲ, ಒದಗುವ ನಷ್ಟಗಳಿಗೆ ನಾವೇ ಜವಾಬ್ದಾರರು.’

ಗುಡ್ಡೇಹಿತ್ಲು ಕುಟುಂಬದ = ಜಿ, ತಿಮ್ಮಪ್ಪಯ್ಯನ ಮಗ = ಟಿ ಸೇರಿ ತಂದೆಗೆ ಜಿ.ಟಿ ಬಂದರೆ, ಅದೇ ನಾರಾಯಣನ ಮಗನಾಗಿ ನನಗೆ ಜಿ.ಎನ್ ಒದಗಿತ್ತು. ನಾನು ಹೆಚ್ಚು ಯೋಚನೆ ಮಾಡದೆ ‘ಅಶೋಕನ ಮಗ’ ಎಂದು ಅಭಯನ ಜನನ ದಾಖಲೆಯ ಸಮಯದಲ್ಲಿ ಜಿ.ಎ ಹಾಕಿ ಸುಲಭ ಜಾಡು ಅನುಸರಿಸಿಬಿಟ್ಟೆ. ತಂದೆ, “ಅರ್ಥವಿಲ್ಲದ ಜಿ ಬಿಡಬಹುದಿತ್ತು, ಹೆಚ್ಚಿನ ಗುರುತಿನ ಸೌಕರ್ಯಕ್ಕೆ ಬೇಕಾದರೆ ಅತ್ರಿಸೂಚಕ ಎ ಸೇರಿಸಿಕೊಳ್ಳಬಹುದಿತ್ತು” ಎಂದು ಸೂಚಿಸಿದ್ದು ತಡವಾಯ್ತು. (ಎ.ಎ.ಅಭಯಸಿಂಹ, ಅತ್ರಿ ಸಿಂಹ, triple A ಸಿಂಹ ಇತ್ಯಾದಿ ಕರೆಸಿಕೊಳ್ಳುವ ಅವಕಾಶ ಅವನಿಗೆ ತಪ್ಪಿಹೋಯ್ತು!) ಜಾತಿಸೂಚಕ ಉಪಾಧಿಗಳನ್ನು (ರಾಯ/ ರಾವ್, ಭಟ್ಟ, ಶರ್ಮ ಇತ್ಯಾದಿ) ನಮ್ಮ ಮಕ್ಕಳ ನಾಮಕರಣಕ್ಕೆ ನಾವು ಮೂರೂ ಸೋದರರು ಯೋಚಿಸಲೇ ಇಲ್ಲ. ಕೇವಲ ಅರ್ಥ ಸಿರಿವಂತಿಕೆಗೆ ತಂದೆ ಬಳಸಿದ್ದ ‘ವರ್ಧನ’ sur-name ಅಲ್ಲ ಎಂದರೆ ಇಂದೂ ಎಷ್ಟೋ ಜನ ನಂಬುವುದಿಲ್ಲ. (ನಾನು ಜೈನನೆಂದು ತಪ್ಪು ತಿಳಿದವರೂ ಇದ್ದಾರೆ!)

ಅದೊಂದು ಕಾಲದಲ್ಲಿ ನನ್ನ (ಮೂರನೇ) ಚಿಕ್ಕಪ್ಪ – ರಾಘವೇಂದ್ರನಿಗೆ ‘ಗುಡ್ಡೇಹಿತ್ಲು’ ಮೂಲ ಹುಡುಕುವ ಉತ್ಸಾಹ ಬಂತು. ಶಿವಮೊಗ್ಗ ಜಿಲ್ಲೆಯ ನಗರ ಸಮೀಪದಲ್ಲಿ (ಕೊಡಚಾದ್ರಿಯ ಆಚೆ ಮಗ್ಗುಲಿನಲ್ಲಿ) ಕಂಡುಹಿಡಿದದ್ದೂ ಆಯ್ತು. ಮುಂದುವರಿದ ಆತನ ಉತ್ಸಾಹ ಕೊಡಗಿಗೆ ಇತಿಹಾಸ ಕಾಲದಲ್ಲಿ ವಲಸೆ ಬಂದ ಮೇಲೆ ಹರಡಿಕೊಂಡ ಗುಡ್ಡೇಹಿತ್ಲಿನವರನ್ನು ಗುಡ್ಡೇ ಹಾಕುವತ್ತ ಹೊರಳಿತು. ಮತ್ತೂ ಮುಂದುವರಿದು ಇದನ್ನೇ ಒಂದು ಸಾಮಾಜಿಕ ಸಂಘಟನೆಯನ್ನಾಗಿಸುವ ಪ್ರಯತ್ನದಲ್ಲಿ ರಬ್ಬರ್ ಮೊಹರು, ತಿಂಗಳಿಗೊಂದು ಕುಟುಂಬಸ್ತರ ಮನೆಯಲ್ಲಿ ಭೋಜನ ಕೂಟಕ್ಕೆ ಔಪಚಾರಿಕ ಕರೆಯೋಲೆ, ಸದಸ್ಯತ್ವದ ಅನುಮೋದನೆಗೆ ಒತ್ತಾಯ ಸೇರಿಕೊಂಡಿತು. ನಾನು ಸವಿನಯವಾಗಿ ‘ಬಳಕೆ ಬೆಳೆದಂತೆ ಸಂಬಂಧ’ ಎಂದು ಕಂಡುಕೊಂಡದ್ದನ್ನೇ ಬರೆದು ತಿಳಿಸಿ, ದೂರ ಉಳಿದೆ. ಮೂಕಿಯಲ್ಲಿ ಕುಳಿತ ರಾಘವೇಂದ್ರನೇ ಮುಂತಾದವರಿಗೆ ಕುಟುಂಬದ ಹೆಸರಿನ ಬಗ್ಗೆ ವ್ಯಾಮೋಹವೋ ಅನ್ಯ ಲಾಭಗಳ ಯೋಜನೆಯೋ ಇರಲಿಲ್ಲವಾದ್ದರಿಂದ ಪ್ರಕರಣ ಕೇವಲ ನಗೆಯಲ್ಲಿ ಮುಗಿದು ಹೋಯ್ತು.

ಗುಡ್ಡೇಹಿತ್ಲಿನೊಳಗೆ ನೇರ ನನ್ನ ಅಜ್ಜನ ಮನೆ, ಅಂದರೆ ಮೋದೂರಿನಿಂದ ಹೊರಟ ಶಾಖೆಗಳು ಮತ್ತು ಚಿಕ್ಕಜ್ಜನ ಮನೆ, ಅಂದರೆ ಜ್ಯೋತಿಯಿಂದ ಹೊರಟ ಶಾಖೆಗಳಲ್ಲಿ ನಾನು ಬಾಲ್ಯ ಕಳೆದವ. ಅಂದಿನಾ ಒಡನಾಟಗಳ ಮಾಧುರ್ಯ ಇಂದಿಗೆ ನನ್ನನ್ನು ಅವುಗಳೊಡನೆ ಭಾವನಾತ್ಮಕ ಬಂಧಕ್ಕೊಳಪಡಿಸುತ್ತದೆ. ಇದೇ ಸ್ತರ ಅಥವಾ ಒಂದು ಕೈ ಮಿಗಿಲು ಎನ್ನುವಂತೆ ತಾಯಿಯ ತವರ್ಮನೆ, ಅಂದರೆ ಪುತ್ತೂರು-ಮರಿಕೆಯ ಮನೆ, ಜನರನ್ನು ಸಂಪ್ರದಾಯ ‘ಕುಟುಂಬ’ ವರ್ಗಕ್ಕೆ ಸೇರಿಸದಿರಬಹುದು. ಆದರೆ ನನ್ನ ಲೆಕ್ಕಕ್ಕೆ ಅದೂ ಅಂದರೆ ಅಡಮನೆ ಪಡತಡ್ಕದ (ಎ.ಪಿ) ಮರಿಕೆ ಮನೆಯಿಂದ ಹೊರಟ ನೇರ ಕವಲುಗಳೂ ಅಷ್ಟೇ ‘ಕುಟುಂಬಿಕರು.’ ಇನ್ನೂ ಮುಂದುವರಿದ ಕಾಲದಲ್ಲಿ ನನ್ನ ಹೆಂಡತಿ ಮತ್ತು ಸೊಸೆಯ ತವರ್ಮನೆಗಳ ಕಲಾಪಗಳೂ ನಮ್ಮವೇ. ದೇಶ, ಕಾಲಗಳ ಅಂತರ, ಅನುಕೂಲ ಮರೆಯದೆ ಅಲ್ಲೆಲ್ಲಾ ಏನು ಕಾರ್ಯಕ್ರಮವಾದರೂ ನನಗೆ ಭಾಗವಹಿಸಲು ಉತ್ಸಾಹವಿದೆ. ಇವೆಲ್ಲಾ ರಕ್ತ ಸಂಬಂಧದ ಸ್ಪಷ್ಟ ಎಳೆ ಹಿಡಿದೇ ನಡೆಯುವಂಥವು. ಇವುಗಳೆಲ್ಲದರಿಂದಲೂ ಆಪ್ತ. . . . .

ಹುಟ್ಟಿನ ಆಕಸ್ಮಿಕದೊಡನೆ ಬರುವ ಹಿರಿತನ ಇಂದು ಹೆಚ್ಚಿನ ಎಲ್ಲಾ ಕಡೆ ವೃತ್ತಿ ಮತ್ತು ಆರ್ಥಿಕತೆಯ ಆಧಾರದಲ್ಲಿ ಕೇವಲ ಸಾಂಪ್ರದಾಯಿಕ ಔಚಿತ್ಯವನ್ನಷ್ಟೇ ಉಳಿಸಿದೆ. ನೇರ ತಂದೆ ತಾಯಿಯಂಥ ಸ್ಥಾನಗಳನ್ನುಳಿದು ಉಳಿದ ಹಿರಿತನಗಳು ನಮ್ಮ ಕುಟುಂಬದೊಳಗಂತೂ ಯಾರೂ ಅವಮಾನ ಅಥವಾ ಸಮ್ಮಾನಗೊಳ್ಳದ ಸರಸ ಸಂಬೋಧನೆಯದಾಗಿ ಉಳಿದಿವೆ (ಹೆಚ್ಚಿನೆಲ್ಲರೂ ಪರಸ್ಪರ ಹೆಸರು ಹಿಡಿದು, ಏಕವಚನದಲ್ಲೇ ಮಾತಾಡಿಸುತ್ತಾರೆ). ಯಾವುದೇ ಸಾಂಪ್ರದಾಯಿಕ ಆಚರಣೆಯ ಸಂದರ್ಭದಲ್ಲಿ ಪುರೋಹಿತರಿಂದ ‘(ಹಿರಿಯರ) ಕಾಲು ಹಿಡಿಯಬೇಕು’ ಎಂಬ ಸೂಚನೆ ಬಂದಾಗ ನನ್ನ ಚಿಕ್ಕಪ್ಪಂದಿರು ತಂತಮ್ಮ ಕಾಲು ಹಿಡಿದಂತೆ ಮಾಡುತ್ತಿದ್ದದ್ದು, “ಅಕ್ಕನ (ಅಮ್ಮ) ಕಾಲು ಹಿಡಿದರೆ ಬಿದ್ದಾಳು” ಎಂದು ಹಾಸ್ಯ ಮಾಡುತ್ತಿದ್ದದ್ದು ಮರೆಯಲಾರೆ. ನಾವು ಅತ್ರಿ ಸೋದರರು ತಂದೆತಾಯಿಯರ ಅಥವಾ ಯಾವುದೇ ಹಿರಿಯರ ಕಾಲು ಹಿಡಿಯುವ ಔಪಚಾರಿಕತೆಯನ್ನು ಎಂದೂ ಗಂಭೀರವಾಗಿ ನಡೆಸಿದ್ದಿಲ್ಲ. ಹಾಗೇ ನಮ್ಮ ತಂದೆತಾಯಿ ಸೇರಿದಂತೆ ಹತ್ತಿರದ ಯಾವ ಹಿರಿಯರೂ ಅದನ್ನು ಮಾನಾವಮಾನಗಳ ಪಟ್ಟಿಯಲ್ಲಿ ಸೇರಿಸಿದ್ದೂ ಇಲ್ಲ. ನಮ್ಮ ಹೆಂಡಂದಿರು ಅವರ ತವರಿನ ಸಂಸ್ಕಾರದ ಪ್ರಭಾವದಲ್ಲಿ ತಾವು, ಮಕ್ಕಳನ್ನೂ ಆಗೀಗ ‘ಹೊಡೆಯಾಡಿಸಿದರೆ’ (=ಹವಿಗನ್ನಡದಲ್ಲಿ ಕಾಲಿಗೆ ನಮಸ್ಕಾರ) ನಾವು “ಅಕೋ ಹೊಡೆದಾಡಲು ಹೊರಟರು” ಎಂದು ತಮಾಷೆ ಮಾಡುವುದೂ ಇದೆ. ಇದರ ಮುಂದುವರಿಕೆಯಾಗಿ ಪ್ರಾಯದ ಹಿರಿತನ ಹೆಚ್ಚುತ್ತಿದ್ದರೂ ನಾನು ಬುದ್ಧಿಪೂರ್ವಕವಾಗಿ ಯಾರಿಂದಲೂ ಪಾದವಂದನೆ ಸ್ವೀಕರಿಸಿದ್ದಿಲ್ಲ. ಇನ್ನೂ ಸ್ಪಷ್ಟಪಡಿಸುವುದಾದರೆ functionalityಯನ್ನು ಮೀರಿದ ಹಿರಿತನವನ್ನು ಒಪ್ಪಿಕೊಂಡದ್ದಿಲ್ಲ.

ಅನುಭವ ಮತ್ತು ಕೆಲಸದ ಅನುಕೂಲಕ್ಕಾಗಿ ತರತಮವನ್ನು ಗುರುತಿಸಿ ನಡೆಯುವಲ್ಲಿ ನಾನು ಪ್ರಾಯದ ಕಟ್ಟಳೆಯಿಂದ ಎಂದೂ ಸಂಕೋಚಪಟ್ಟದ್ದಿಲ್ಲ. ಇದನ್ನು ಸ್ವಲ್ಪ ವಿಸ್ತರಿಸುವುದಾದರೆ, ನನ್ನ ಅಂಗಡಿಯ ಆಡಿಟ್ ಕೆಲಸ ಸ್ವತಃ ಚಾರ್ಟರ್ಡ್ ಅಕೌಂಟೆಂಟ್ ಆಗಿರುವ ಅನಂತ ಮಾಡುತ್ತಾನೆ. ಅಲ್ಲಿ ಅವನ ಸಲಹೆ ಸೂಚನೆಗಳನ್ನು ನಾನು ಶ್ರದ್ಧೆಯಿಂದ ಅನುಸರಿಸುತ್ತೇನೆ. ನಮ್ಮ ಮೂಲ ಮನೆ ಮತ್ತು ತಂದೆ ತಾಯಿಯರನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಅನಂತನ ಕುಟುಂಬ ವಹಿಸಿಕೊಂಡಿದೆ. “ತಂದೆಗೆ ಅದು ಮಾಡಿದ್ದು ಸಾಲದು, ತಾಯಿಗೆ ಇದು ಮಾಡಿದ್ದು ಹೆಚ್ಚಾಯ್ತು, ಮನೆಗೆ ಇನ್ನೊಂದು ಮಾಡಬೇಕಿತ್ತು” ಎಂದಿತ್ಯಾದಿ ನಾನು ‘ಹಿರಿಮಗನ’ ನೆಲೆಯಲ್ಲಿ ಒಂದು ಮಾತನ್ನೂ ಯೋಚಿಸಿದ್ದೇ ಇಲ್ಲ. ಅದೇ ನನ್ನ ಆದಾಯವೋ ವೆಚ್ಚವೋ ಬರವಣಿಗೆಯೋ ಚಾರಣವೋ ವನ್ಯ ಸಂರಕ್ಷಣೆಯೋ ಯಕ್ಷ ಪ್ರಯೋಗಗಳೋ ಅನಂತ ಒಂದು ದಿನವೂ ಪ್ರಶ್ನಿಸಿದ್ದಿಲ್ಲ, ಪ್ರಶ್ನಿಸಲಾರ.

ವೃತ್ತಿ ನಿರತನಾದ ಮೇಲೆ ನನ್ನ ಮೊದಲ ತಮ್ಮ ಆನಂದ ಒಂಟಿಯಾಗಿಯೂ ಮತ್ತೆ ಕುಟುಂಬಸ್ಥನಾಗಿಯೂ ಹೆಚ್ಚು ಕಡಿಮೆ ಸದಾ ದೂರ, ಅತಿದೂರದ ಪ್ರದೇಶಗಳಲ್ಲೇ (ಅಸ್ಸಾಂ, ರಾಜಸ್ತಾನ ಮತ್ತೀಗ ಖಾಯಂ ಅಮೆರಿಕಾ) ಇದ್ದುದರಿಂದ ಅನೌಪಚಾರಿಕ ಒಡನಾಟಗಳಿಗೆ ಅವಕಾಶ ಸಿಕ್ಕಿದ್ದು ಕಡಿಮೆ. ಅವೆಲ್ಲ ಸ್ಥಳಗಳಿಗೂ ಪ್ರಯಾಣ, ಖರ್ಚು ಮತ್ತು ಸಮಯಾನುಕೂಲವನ್ನು ಮಧ್ಯಮವರ್ಗದ ಮಿತಿಯಲ್ಲಿ ಹೊಂದಿಸಿಕೊಂಡು ಒಮ್ಮೊಮ್ಮೆಯಾದರೂ ತಂದೆ ತಾಯಿ ಪ್ರೀತಿಯ ಕರ್ತವ್ಯವೆಂಬಂತೆ ನಿಭಾಯಿಸಿದ್ದಾರೆ. ಆದರೆ ಅದೇ ಉಳಿದಿಬ್ಬರು ಸೋದರರಿಗೆ ಮುಖ್ಯವಾಗಿ ವೃತ್ತಿ ಮತ್ತೆ ಆರ್ಥಿಕ ಮಿತಿಗಳಲ್ಲಿ ಆನಂದನ ಊರುಗಳಿಗೆ ಭೇಟಿ ಕೊಡುವುದು ಅಸಾಧ್ಯವಾಗಿದೆ. ಈ ಭಾವನಾತ್ಮಕ ಕೊರತೆಗಳನ್ನು ಪ್ರಾಯೋಗಿಕತೆಯ ಬೆಳಕಿನಲ್ಲಿ ನೋಡುವುದೊಂದೇ ನಮಗುಳಿದಿರುವ ದಾರಿ. ಅವನೇ ರಜಾ ದಿನಗಳನ್ನು ಹೊಂದಿಸಿಕೊಂಡು ಹುಟ್ಟೂರು, ಸಂಬಂಧಿಕರು ಎಂದು ಸುಧಾರಿಸುವುದಾಗಿದೆ.

ಕೊನೆಯದಾಗಿ ನಮ್ಮದೇ ಮಗನ ಕುರಿತೂ ನನ್ನ ಬಂಧ, ಕರ್ತವ್ಯವಾದರೂ ಇದೇ ಪ್ರೀತಿ, ವೈಚಾರಿಕತೆ ಮತ್ತು ಕಾರ್ಯಾನುಕೂಲತೆಯನ್ನೇ ಹೊಂದಿ ನಡೆದಿದೆ. ಅವನ ಹುಟ್ಟಿನ ದಿನವೇ ನಾನು ಹೆಸರು ಅಭಯಸಿಂಹನೆಂದು ಅಂದಾಜಿಸಿದೆ. ದೇವಕಿ ಅನುಮೋದಿಸಿದಳು ಮತ್ತು ಆಸ್ಪತ್ರೆಯ ದಾಖಲೆಯೊಡನೆ ಸರಕಾರೀ ಜನನ ದಾಖಲೆಯಲ್ಲೂ ನಮೂದು ಆಯ್ತು. ಹೆರಿಗೆಯ ಹಿಂದು ಮುಂದೆಲ್ಲಾ ದೇವಕಿಯ ತವರಿನಲ್ಲೇ ಆದ್ದರಿಂದ ಅಲ್ಲಿನ ನಂಬಿಕೆಗೆ ಅನುಗುಣವಾಗಿ, ಸೂಕ್ತ ಸಮಯದಲ್ಲಿ ‘ಶುದ್ಧ’ದಲ್ಲಿ ಸಹಕರಿಸಿದೆ. ಮುಂದೆ ನಮ್ಮದೇ ನಿರ್ಧಾರದ ಉದ್ದಕ್ಕೆ ಅಂದರೆ ಅವನು ವಿವಾಹಯೋಗ್ಯನಾಗುವವರೆಗೂ ಸಾರ್ವಜನಿಕದಲ್ಲಿ ಸಮರ್ಥಿಸಿಕೊಳ್ಳಲಾಗದ ಯಾವುದೇ ಸಂಸ್ಕಾರವನ್ನು (ಜಾತಕ, ನಾಮಕರಣ, ಉಪನಯನ, ಮತ್ತು ನೂರೆಂಟು ಲೌಕಿಕ ಕಾರಣಗಳಿಗೆ ಪಾರಲೌಕಿಕ ಶಾಂತಿಗಳು ಇತ್ಯಾದಿ) ಕೊಡಲಿಲ್ಲ. ಆತನಿಗೆ ಔಪಚಾರಿಕ ವಿದ್ಯಾಭ್ಯಾಸ ನಜರೆತ್ ಕಾನ್ವೆಂಟಿನಲ್ಲಿ ಅರೆ-ಕೇಜಿ (ಕ್ರೇಜಿ?), ಕೇಜಿ ಮತ್ತು ಕೇಜ್ಯೋತ್ತರ ಅನಿವಾರ್ಯವಾಗಿ ಇಂಗ್ಲಿಶ್ ಮಾಧ್ಯಮದಲ್ಲೇ ನಡೆಯಿತು. ಪ್ರಾಥಮಿಕ ಶಾಲೆಗಾಗುವಾಗ ನಮಗೆ ಆಯ್ಕೆಯ ಅವಕಾಶ ಒದಗಿದ್ದರಿಂದ ಕನ್ನಡ ಮಾಧ್ಯಮಕ್ಕೆ ಸೇರಿಸಿದೆವು. ಅದರಲ್ಲೇ ಪ್ರೌಢ ಶಾಲೆ, ಅನಂತರ ಅನಿವಾರ್ಯತೆಯಲ್ಲಿ ಇಂಗ್ಲಿಶ್ ಮಾಧ್ಯಮದ ಸ್ನಾತಕ ಪದವಿ, ಕೊನೆಯಲ್ಲಿ ಅವನದೇ ಆಯ್ಕೆಯಲ್ಲಿ ಫಿಲ್ಮ್ ಇನ್ಸ್‌ಟಿಟ್ಯೂಟ್. ಅವನಿಗೆ ದಿಕ್ಕೇ ತಿಳಿಯದ ಹಂತದಲ್ಲಿ ಹಳಿ ಹತ್ತಿಸುವಲ್ಲಿ ನಾವು ಹಿರಿಯರು. ಬೆಳವಣಿಗೆಯ ಹಂತದಲ್ಲಿ ಆವಶ್ಯಕ ಆರ್ಥಿಕ ಹಾಗೂ ಮಾನಸಿಕ ಬಲ ಕೊಡುವುದಕ್ಕಷ್ಟೇ ನಾವು ಸೀಮಿತರು.

ಅಭಯ ಸ್ನಾತಕ ಪದವಿ ಪಡೆಯುವವರೆಗೂ ನಮ್ಮೊಡನೆಯೇ ಇದ್ದವ ಮತ್ತು ಸ್ವತಂತ್ರವಾಗಿ ಒಬ್ಬನೇ ಹೊರಗಿದ್ದದ್ದು ಓಡಾಡಿದ್ದೂ ಇಲ್ಲ. ಆದರೆ ಪುಣೆಗೆ ಪ್ರವೇಶ ಪರೀಕ್ಷೆ ಬರೆಯುವ ಕಾಲಕ್ಕೆ ಅನಿವಾರ್ಯವಾಗಿ ಒಬ್ಬನೇ ಹೋದ, ಆಯ್ಕೆಯೂ ಆದ ಮತ್ತು ಅಷ್ಟೇ ಸ್ವತಂತ್ರವಾಗಿ ಅಲ್ಲಿಗೆ ಹೊಂದಿಕೊಂಡ. ಮುಂದೆ ಆತ ವೃತ್ತಿಪರವಾಗಿ ಬೆಂಗಳೂರಿನಲ್ಲಿ ನೆಲೆಸಿದಾಗ, ಮನೆ ಬಾಡಿಗೆ ಹಿಡಿದಾಗ ಮತ್ತು ಆತನ ಚಟುವಟಿಕೆಯ ವಿವಿಧ ಘಟ್ಟಗಳಲ್ಲೂ ನಮ್ಮ ಪೂರ್ಣ ಮಾನಸಿಕ ಅನುಸಂಧಾನ ಅವನೊಡನಿದ್ದರೂ ದೈಹಿಕ ಪಾಲುದಾರಿಕೆ ಸೊನ್ನೆ.

ಅಭಯನಿಗೆ ಮದುವೆ ಮಾಡಿಸುವ ಜವಾಬ್ದಾರಿ ನಮಗೆ ಬಂತು. ಇಲ್ಲಿ ಹುಡುಗ ಹುಡುಗಿಯ ಪರಸ್ಪರ ಒಪ್ಪಿಗೆಯೊಂದೇ ಮಾನಕ. ಮುಂದಿನ ವಿಧಿವಿಧಾನಗಳಲ್ಲಿ ಹುಡುಗಿಯ ಕಡೆಯವರ ಪರಂಪರೆಗೆ ನೋವಾಗದಂತೆ ನಾವು ಪ್ರೀತಿಪೂರ್ವಕವಾಗಿಯೇ ಸಹಕರಿಸಿದ್ದೇವೆ. (ಪೂರ್ತಿ ನಮಗೇ ಬಿಟ್ಟಿದ್ದರೆ ಕೂಡಲೇ ನೋಂದಣಿ ಕಛೇರಿಯಲ್ಲಷ್ಟೇ ವಿಧಿ ಪೂರೈಸಿ, ಇಷ್ಟರೊಡನೆ ಸಂತೋಷ ಕೂಟ ನಡೆಸುವುದಷ್ಟೇ ನಮ್ಮ ಪಟ್ಟಿಯಲ್ಲಿತ್ತು!) ಮುಂದವರು ಜೋಡಿಯಾಗಿ ಬೆಂಗಳೂರಿಗೆ ಮೊದಲು ಪಯಣಿಸಿದಾಗ, ಮನೆಯನ್ನು ಸಜ್ಜುಗೊಳಿಸುತ್ತಿದ್ದಾಗ ನಮ್ಮ ಸಹಕಾರವೇನಿದ್ದರೂ ಕೇಳಿದ್ದಕ್ಕೆ ದೂರವಾಣಿಯಲ್ಲಿ ಉಚಿತ ಸಲಹೆ ಮಾತ್ರ. ಈವರೆಗೆ ಅಭಯ ಕಾರಣಾಂತರಗಳಿಂದ ಮೂರು ಮನೆ ಬದಲಿಸಿದ್ದಾನೆ. ಅದರಲ್ಲಿ ನಾನು ಮೊದಲನೆಯದಕ್ಕೆ ಎರಡು ಬಾರಿ, ಎರಡನೇದಕ್ಕೆ ಒಂದೇ ಬಾರಿ, ಅದೂ ಒಂದೊಂದೇ ರಾತ್ರಿಯ ವಾಸಕ್ಕೆ ಭೇಟಿ ಕೊಟ್ಟಿದ್ದೇನೆ. ಅವರು ಮೂರನೆಯದಕ್ಕೆ ಸೇರಿ ಈಗ ತಿಂಗಳು ಆರಾದರೂ ನಮಗೆ ಒಮ್ಮೆ ಹೋಗಲೂ ‘ಮುಹೂರ್ತ’ ಒದಗಿ ಬಂದಿಲ್ಲ! ಮತ್ತವನ ವೃತ್ತಿ ಉತ್ಕರ್ಷಗಳು ಅಸಾಮಾನ್ಯವಾಗಿದ್ದಾಗಲೂ (ಜರ್ಮನಿ, ನ್ಯೂಯಾರ್ಕ್ ಪ್ರವಾಸ, ಪ್ರಥಮ ಚಿತ್ರದ ಬಿಡುಗಡೆ, ಪ್ರಥಮ ಚಿತ್ರಕ್ಕೇ ರಾಷ್ಟ್ರ ಪ್ರಶಸ್ತಿ, ರೋಟರಿ ಪ್ರವಾಸದಲ್ಲಿ ಅಮೆರಿಕಾ ಪ್ರವಾಸ ಇತ್ಯಾದಿ) ನಾವು ಅವನಿಗೆ ಜೊತೆ ಕೊಟ್ಟದ್ದಿಲ್ಲ. ಔಪಚಾರಿಕ ಜಗತ್ತಿನಲ್ಲಿ ಭಾರಿ ಕೊರತೆಗಳೇ ಎನ್ನಿಸಬಹುದಾದ ಈ ಎಲ್ಲ ವಿವರಗಳು ನಮ್ಮೊಳಗೆ ಯಾವುದೇ ಮನಃಕಷಾಯವನ್ನು ತಂದಿಲ್ಲ ಎನ್ನುವುದು ಅವಶ್ಯ ಗಮನಿಸಬೇಕಾದ ಅಂಶ.

ಸಾಂಪ್ರದಾಯಿಕ ವೃತ್ತಿ ಮತ್ತು ನೆಲೆಗಳಿಂದ ಹೊರಗೆ ಹರಡಿಕೊಂಡ ನಮಗಿಂದು ಆಯಾ ಕಾರ್ಯರಂಗದಲ್ಲಿ ಒದಗಿ, ಭಾವಕೋಶಕ್ಕೂ ವ್ಯಾಪಿಸಿದ ವ್ಯಕ್ತಿ ಅಥವಾ ಕುಟುಂಬಗಳೂ ಅಷ್ಟೇ ‘ಸಂಬಂಧಿಕರು.’ ಮಾನವೀಯ ನೆಲೆಯಲ್ಲಿ ಇಂಥವರ ನೋವು ನಲಿವಿಗೆ ಸ್ಪಂದಿಸುವುದು ನನಗೆ ಸಾಂಪ್ರದಾಯಿಕ ಆಚರಣೆಗಳಿಗಿಂತ ಮುಖ್ಯವಾಗುತ್ತದೆ. ಇತಿಹಾಸದ ಮತ್ತು ಹುಟ್ಟಿನ ಆಕಸ್ಮಿಕಗಳಿಗೇ ಮಹತ್ವ ಕೊಟ್ಟು, ನೇರಾನೇರ ವರ್ತಮಾನವನ್ನು ತಿದ್ದಲು ಹೆಣಗುವುದು ನನಗೆ ಒಪ್ಪಿಗೆಯಿಲ್ಲ. ಮಂಗಳೂರಿನಲ್ಲಿ ತಂದೆಗೆ ಕೇವಲ ವೃತ್ತಿಯ ಸಾಹಚರ್ಯದಿಂದ ತೊಡಗಿ, ಆರ್ಥಿಕ ಅನುಕೂಲಕ್ಕೆ ಬಾಡಿಗೆ ಮನೆಯನ್ನು ಹಂಚಿಕೊಂಡು ಬೆಳೆದ ಬಿ.ವಿ ಕೆದಿಲಾಯರ ಮನೆಯವರು ನನ್ನ ಲೆಕ್ಕಕ್ಕೆ ನಮ್ಮ ಕುಟುಂಬವೇ. ಮೈಸೂರಿನಲ್ಲಿ ತಂದೆಗೆ ಕೊನೆಗಾಲದಲ್ಲಿ ಸಾಹಿತ್ಯ, ಸಂಗೀತಾದಿ ಒಲವು ಓಡಾಟಗಳಿಗೆ ಕೇವಲ ಪ್ರೀತಿಯಿಂದ ಒದಗಿದ ರಾಘವೇಂದ್ರ ಭಟ್ಟರು, ಹಾಗೇ ತಾಯಿಗೆ ಈಚೆಗೆ ಊರುಗೋಲಿನಂತೇ ಒದಗುವ ಆದರೆ ಯಾವತ್ತೂ ತನ್ನನ್ನು ಹೇರಿಕೊಳ್ಳದ ಭಟ್ಟರ ಪತ್ನಿ – ಕಮಲಾಕ್ಷಿಯರನ್ನು ನಾನಂತೂ ಕುಟುಂಬದ ಪರಿಧಿಯಿಂದ ಹೊರಗೆ ಕಲ್ಪಿಸಿಕೊಳ್ಳಲಾರೆ. ಪುಸ್ತಕೋದ್ಯಮದ ಮಾತು ಬಂದಲ್ಲೆಲ್ಲಾ ನಾನು ನಿರ್ವಿವಾದವಾಗಿ ನನ್ನ ‘ಗಾಡ್ ಫಾದರ್’ ಎಂದೇ ಹೆಸರಿಸುವ ಡಿವಿಕೆ ಮೂರ್ತಿ ನನಗೆ ಸಾರ್ವಕಾಲಿಕ ಸಂಬಂಧಿ; ವೃತ್ತಿ ಸಂಬಂಧದ ಆರ್ಥಿಕ ವಹಿವಾಟು ಮೀರಿದ ಭಾವಬಂಧಿ.

ಕುಶಿ ಹರಿದಾಸ ಭಟ್ಟರು ನಾನು ಅಂಗಡಿ ತೆರೆದ ಹೊಸತರಲ್ಲಿ ಅವರ ವಿಶಾಲ ನಗುವಿನೊಡನೆ, ಲಘುವಾಗಿ ಹೇಳಿದ ಮಾತು ನನಗೆ ಸದಾ ನೆನಪಾಗುತ್ತಿರುತ್ತದೆ. “ನೀನೊಂದು ದೊಡ್ಡ ಖಾಲೀ ಹಾಳೆ ತೆರೆದಿಟ್ಟು ಕೇಂದ್ರದಲ್ಲಿ ‘ನಾನು’ ಎಂದು ಬರೆದಿಡು. ಮತ್ತೆ ಇಲ್ಲಿ ಬರುವ ಹವ್ಯಕರು ಸಹಜವಾಗಿ ಹೇಳುವ ತಮ್ಮ ನಂಟಿನ ರೇಖೆಗಳನ್ನು ಎಳೆಯುತ್ತ ಹೋದರೆ ಒಂದೇ ವರ್ಷದಲ್ಲಿ ನಿನಗೆ ವಿಶ್ವ ಬಾಂಧವ್ಯದ ನಕ್ಷೆ ಸಿಗುತ್ತದೆ.” ಆದರೆ ನನ್ನ ವೃತ್ತಿ ಮತ್ತು ಹವ್ಯಾಸದಲ್ಲಿ ನಾನಿಟ್ಟ ಮುಕ್ತ ಮನಕ್ಕೆ ಇಂದು ಹುಟ್ಟಿನ ಆಕಸ್ಮಿಕದ ಹವ್ಯಕತನ ಮಾತ್ರವಲ್ಲ, ಅದನ್ನು ಮೀರಿದ ನಿಜದ ವಿಶ್ವ ಬಾಂಧವ್ಯವೇ ಪ್ರಾಪ್ತಿಸಿದೆ ಎಂದರೆ ಅತಿಶಯೋಕ್ತಿಯಾಗದು. (ಇಲ್ಲೆಲ್ಲಾ ಸಹಜತೆಗೆ ಎರವಾಗಿ ಹೇರಿಕೊಂಡವನ್ನು ಸಮಷ್ಟಿಗಾಗಿ ನಾನು ಸಹಿಸಿಕೊಂಡದ್ದಿರಬಹುದು.) ಅವುಗಳ ಸಹಜಾನಂದದ ಎಡೆಯಲ್ಲಿ ಆಗೊಮ್ಮೆ ಈಗೊಮ್ಮೆ ಒದಗುವ ಕೌಟುಂಬಿಕ ಸಂಬಂಧಗಳ ಒಡನಾಟವನ್ನು ನಾನು ಸವಿ ಖಾದ್ಯಕ್ಕೆ ಹೆಚ್ಚಿನ ಪರಿಮಳ ಬಂದಂತೆ ಸಂತೋಷಿಸಿದ್ದೇನೆ, ಆನಂದಿಸುತ್ತಲೂ ಇರುತ್ತೇನೆ.

ಪುಣ್ಯದ ಹೊಳೆಯಲ್ಲಿ ಕೊನೆಯ ಮುಳುಗು
ವೈಜ್ಞಾನಿಕ ತಳಹದಿಯ ವ್ಯಕ್ತಿತ್ವ ವಿಕಸನ ಶಿಬಿರದ ಅಂತಿಮ ಕಂತು

(ವನ್ಯಪುನರುತ್ಥಾನದಲ್ಲೊಂದು ಸಣ್ಣ ಪ್ರಯೋಗ ಭಾಗ ೫)

ಮೂರನೇ ಬೆಳಿಗ್ಗೆಯ ಉದಯರಾಗ – ಜಲಸಂರಕ್ಷಣೆ ಮತ್ತು ಮರುಪೂರಣದ ಪ್ರಾತ್ಯಕ್ಷಿಕೆ. ಇದಕ್ಕೆ ನಾಯಕತ್ವ ಎಡೆಂಬಳೆಯ ಸತ್ಯನಾರಾಯಣನದ್ದೇ. ಎಡೆಂಬಳೆ ಕೃಷಿಕ್ಷೇತ್ರ ವ್ಯಾಪ್ತಿಯಲ್ಲಿ ಐವತ್ತು ಎಕ್ರೆಗೂ ಮಿಕ್ಕ ನೆಲವಾದರೂ ಅಂದು ಸ್ಪಷ್ಟ ಕೃಷಿಗೆ ಒಡ್ಡಿಕೊಂಡ ಜಾಗ ಎರಡು ಮೂರೆಕ್ರೆ ಮಾತ್ರ. ಉಳಿದವು ಮುರಕಲ್ಲಿನ ಹಾಸು, ಮುಳಿಗುಡ್ಡೆ (ಇಂದು ರಬ್ಬರ್ ತೋಟ ಬಂದು ಇವರಿಗೆ ಆರ್ಥಿಕ ಚೈತನ್ಯ ಊಡಿದೆ). ಮನೆ ಸಮೀಪದ ಬಾವಿ, ಕೆರೆ ಒರತೆಯಿಲ್ಲದ ಕಗ್ಗಲ್ಲ ಕೋರೆಯಂತಾಗಿ ಫೆಬ್ರವರಿ ಮಾರ್ಚಿನಲ್ಲೇ ನೀರಿಗೆ ತತ್ವಾರ. ತೋಟದ ಪಾಡು ಬಿಡಿ, ಸ್ವಂತದ ಗೃಹೋಪಯೋಗಕ್ಕೂ ತೋಟದ ಇನ್ನೊಂದೇ ತುದಿಯಲ್ಲಿರುವ ದೂರದ ತೂತುಬಾವಿ ನೆಚ್ಚುವುದು ಅನಿವಾರ್ಯವಾಗಿದೆ. ತೋಟ, ಗುಡ್ಡೆ ಪೂರ್ತಿ ಓಡಾಡಿಸಿ ಮಳೆನೀರಿಗಡ್ಡಗಟ್ಟಿದ ದಿಂಡುಗಳು, ತೋಡಿದ ಇಂಗುಗುಂಡಿಗಳು ಮತ್ತವುಗಳ ಇಳಿದಿಕ್ಕಿನ ದಂಡೆಗಳ ನೆಲಹಿಡಿದಿಡುವ ಸಸ್ಯ ವೈವಿಧ್ಯ, ಅನಿವಾರ್ಯವಾಗಿ ಒದಗಿದ ಮಾಜೀ ಕಲ್ಪಣೆಗಳು ಮತ್ತವಕ್ಕೆ ಪದವಿನ ಹರಿನೀರನ್ನು ಒಡ್ಡಿಸಿಕೊಡುವ ಚರಂಡಿಗಳು, ಗುಡ್ಡೆಯಲ್ಲಿ ನೆಟ್ಟ ಸಸಿಗಳಿಗೆ ಬೇಸಗೆಯಲ್ಲಿ ಸೀಮಿತ ನೀರೂಡುವ ವ್ಯವಸ್ಥೆಗಳು, ಗೃಹ ಬಳಕೆಯ ಕ್ರಮಗಳೊಂದೊಂದೇ ಅನಾವರಣಗೊಂಡಾಗ ನಗರದಲ್ಲಿ ನಲ್ಲಿಯ ಕೊನೆಯನ್ನಷ್ಟೇ ನೋಡುವ ಮಂದಿಗೆ ಹೊಸಬೆಳಗು ಮೂಡಿದ್ದರೆ ಆಶ್ಚರ್ಯವಿಲ್ಲ.

ಡಾ| ಪ್ರಭಾಕರ ಜೋಷಿ (“ನನಗೆ ‘ಷಿ’ ಅಲ್ಪಪ್ರಾಣ ಬಳಸಿದರೂ ನಡೀತದೆ” ಎನ್ನುತ್ತದೆ ಜೋಷಿಯವರ ವಿನಯ) – ಎರಡೇ ಮಾತಿನಲ್ಲಿ ಪರಿಚಯಿಸುವುದಾದರೆ ವೃತ್ತಿಯಲ್ಲಿ ಅರ್ಥಶಾಸ್ತ್ರಿ (ಬೆಸೆಂಟ್ ಪ.ಪೂ ಕಾಲೇಜಿನ ಅರ್ಥಶಾಸ್ತ್ರ ಅಧ್ಯಾಪಕ ಮತ್ತು ಪ್ರಾಂಶುಪಾಲನಾಗಿ ನಿವೃತ್ತ), ಪ್ರವೃತಿಯಲ್ಲಿ ಅರ್ಥದಾರಿ (ತಾಳಮದ್ದಳೆಯಲ್ಲಿ ಅತ್ಯುನ್ನುತ ಸ್ತರದ ಕಲಾವಿದ. ಅಭಯಾರಣ್ಯದ ಪ್ರಥಮ ಕಾರ್ಯಕ್ರಮದ – ಮಾರಿಷಾ ಕಲ್ಯಾಣ ತಾಳಮದ್ದಳೆಯಲ್ಲಿ ಅವರು – ಪ್ರಚೇತಸ, ಬಲು ಮುಖ್ಯ ಪಾತ್ರ). ಪ್ರಚಂಡ ವಾಗ್ಮಿ (ಎಂದೂ ವಾಚಾಳಿಯಲ್ಲ! ನೀವು ನಾಲ್ಕು ಚೀನೀ ಮಾತಾಡಿದರೆ ನಾಳೆ ಜೋಶಿ ನಿಮ್ಮೊಡನೆ ಸಹಜವೆನ್ನುವಂತೆ ಚೀನೀಯಲ್ಲೇ ಸಂಭಾಷಣೆಗಿಳಿದಾರು ಜಾಗ್ರತೆ), ಬಹು ವ್ಯಾಪೀ ಲೇಖಕ – ಕೋಶ, ಆಕರಗ್ರಂಥ, ಲೇಖನಗಳಿಂದ ತೊಡಗಿ (ಘನತೆವೆತ್ತ ಲೇಖಕರು ಸಾಮಾನ್ಯವಾಗಿ ಉಪೇಕ್ಷಿಸುವ) ವಾಚಕರ ವಾಣಿಯ ಟಿಪ್ಪಣಿಗಳವರೆಗೂ ಇವರು ತಮ್ಮ ವಸ್ತು ವೈವಿಧ್ಯ ಹಾಗೂ ಭಾಷಾ ವೈವಿಧ್ಯದಲ್ಲಿ (ಕನ್ನಡ, ಇಂಗ್ಲಿಶ್, ತುಳು, ಕೊಂಕಣಿ, ಹಿಂದಿ, ಚಿತ್ಪಾವನೀ ಇತ್ಯಾದಿ) ಮೆರೆಸಿದವರು ಮತ್ತು ಇಂದಿಗೂ ತೀವ್ರವಾಗಿಯೇ ತೊಡಗಿಸಿಕೊಂಡಿರುವವರು. ಎಲ್ಲೂ ಯಾವ ಪಾತ್ರಕ್ಕೂ ಕರೆಯಬಹುದು, ಔಚಿತ್ಯ ನೋಡಿ, ಅವರು ನಿರ್ವಿವಾದವಾಗಿ ಮತ್ತು ಅತ್ಯಂತ ಸಮರ್ಥವಾಗಿ ನಿರ್ವಹಿಸುತ್ತಾರೆ ಎಂದು ನೆಚ್ಚಬಹುದು. ಅವರು ಶಿಬಿರಾರ್ಥಿಗಳನ್ನುದ್ದೇಶಿಸಿ ಯಕ್ಷಗಾನದ ಕುರಿತು (ನಾವು ಬಯಸಿದಂತೆ) ಪರಿಚಯಾತ್ಮಕ ಮಾತುಗಳನ್ನೂ ಅರ್ಥಪೂರ್ಣ ಸಂವಾದವನ್ನೂ ನಡೆಸಿಕೊಟ್ಟರು.

ಡಾ| ರಾಘವ ನಂಬಿಯಾರ್, ಜೋಷಿಯವರ ಕಾರ್ಕಳ ಸಹಪಾಠಿ ಮತ್ತಷ್ಟೇ ತೀವ್ರ ಯಕ್ಷಗಾನ ವ್ಯವಸಾಯಿ. ಇವರ ವಿದ್ವತ್ತು, ಸಂಶೋಧನ ಬರಿಯ ತಾತ್ವಿಕ ಮಾತು, ಬರಹಗಳ ಆಚೆಗೆ ಪ್ರಾಯೋಗಿಕ ರಂಗಕ್ಕಿಳಿದು ಯಕ್ಷ-ಪುನರುತ್ಥಾನವನ್ನೇ ನಡೆಸಿದೆ. (ಅಭಯಾರಣ್ಯದಲ್ಲಿ ಅವರು ನಡೆಸಿದ ದೀವಟಿಗೆ ಪ್ರದರ್ಶನದ ಕುರಿತು ಇಲ್ಲೇ ಹಿಂದಿನ ಕಡತಗಳನ್ನು ನೋಡಬಹುದು) ಆನುವಂಶಿಕವಾಗಿ ಆಯುರ್ವೇದ ಪಂಡಿತರಾದರೂ ವೃತ್ತಿಯಾಗಿ ನೆಚ್ಚಿದ್ದು ಪತ್ರಿಕೋದ್ಯಮ. ಲಲಿತಕಲೆ, ಸಂಸ್ಕೃತ, ಸಾಹಿತ್ಯಾಸಕ್ತಿ ಇವರಲ್ಲಿ ಪ್ರ-ಮುಖಗಳೇ ಆದರೂ ಉದಯವಾಣಿಯ ತಾಪೇದಾರಿಯಲ್ಲಿ ಕ್ರೀಡೆ, ಸಾಮಾನ್ಯ ವರದಿಗಳಲ್ಲಿ ಕಳೆದುಹೋಗಿದ್ದವರು. ಇಂದು ಮನದ ಭಾವಕ್ಕಾಗಿ ಅವಧಿಪೂರ್ವ ನಿವೃತ್ತಿ ಪಡೆದು (ಗಟ್ಟಿ ಅನ್ಯ ಆದಾಯ ಇಲ್ಲದಿದ್ದರೂ), ಆಂಶಕಾಲಿಕ ಅಧ್ಯಾಪನ ಮತ್ತು ಮುಖ್ಯವಾಗಿ ಯಕ್ಷಗಾನದ ಅಧ್ಯಯನ, ಲೇಖನ ನೆಚ್ಚಿ ನಿಂತ ಧೀಮಂತ. ನಂಬಿಯಾರ್ ಯಕ್ಷಗಾನದ ವರ್ಣವಿನ್ಯಾಸವನ್ನೇ ಲಕ್ಷ್ಯವಾಗಿಟ್ಟುಕೊಂಡು ಒಂದು ಗಂಟೆ ನಡೆಸಿದ ಸಂವಾದ ಶಿಬಿರಾರ್ಥಿಗಳಿಗೆ ಹೊಸಬೆಳಕನ್ನೇ ಚೆಲ್ಲಿತು.

ಯಕ್ಷಗಾನದ ಯಾವುದೇ ಕಮ್ಮಟ, ಗೋಷ್ಠಿ, ವಿಶಿಷ್ಟ ಪ್ರದರ್ಶನ ನಡೆಯುವಲ್ಲಿ ನೀವು ಅನಿವಾರ್ಯವಾಗಿ ಕಾಣುವ ವ್ಯಕ್ತಿ ಎರ್ಮಾಳಿನ ಮನೋಹರ ಕುಂದರ್. ಇವರು ಸದಾ (ತನ್ನದೇ ಸ್ಥಿರ) ಕ್ಯಾಮರಾದ ಹಿಂದೆ ಇದ್ದರೂ ಯಾವುದೇ ಜನ ಅಥವಾ ಸನ್ನಿವೇಶಕ್ಕೆ ಒಗ್ಗಿಕೊಳ್ಳುವಂತೆ ಅಪಾರ ಹಸನ್ಮುಖಿ, ಅದಮ್ಯ ಸ್ನೇಹಜೀವಿ. ಇವರ ಮುಖ್ಯ ಹವ್ಯಾಸ (ಅಂದರೆ, ಯಾವುದೇ ಅನುದಾನ ಮತ್ತು ನಿಶ್ಚಿತ ಪ್ರತಿಫಲ ನಿರೀಕ್ಷೆಯಿಲ್ಲದೇ ಸ್ವಂತ ಖರ್ಚಿನಲ್ಲಿ) ಯಕ್ಷಗಾನವನ್ನು ಅದರೆಲ್ಲಾ ಬಣ್ಣ, ವೈಭವಗಳೊಡನೆ ಛಾಯಾಚಿತ್ರಗಳಲ್ಲಿ ದಾಖಲಿಸುವುದು. ಇದರ ‘ಅತಿರೇಕ’ ಇವರೇ ಪ್ರಕಟಿಸಿರುವ ಒಂಬೈನೂರು ರೂಪಾಯಿ ಬೆಲೆಯ ಪುಸ್ತಕ – ಬಣ್ಣಗಳಲ್ಲಿ ಯಕ್ಷಗಾನ; ಅವರೇ ತೆಗೆದ ಮತ್ತು ಅವರಿಗೆ ಸಿಕ್ಕಿದ ವಿಶಿಷ್ಟ ಯಕ್ಷ-ವೇಷಗಳ, ವ್ಯಕ್ತಿಗಳ ಛಾಯಾ ಚಿತ್ರಗಳ ಬಲುದೊಡ್ಡ ಸಂಗ್ರಹ. (ಸಣ್ಣ ಮಟ್ಟದ ಅರ್ಥದಾರಿ, ಯಕ್ಷಗಾನ ಕುರಿತಂತೆ ಒಳ್ಳೆಯ ಸಂಪನ್ಮೂಲ ವ್ಯಕ್ತಿಯೂ ಹೌದು) ಮನೋಹರ ಕುಂದರ್ ವೃತ್ತಿ ಹವ್ಯಾಸಗಳನ್ನು ಸಂತುಲಿಸುವ ತನ್ನ ಅನುಭವದ ಪಾಠವನ್ನು ಸಣ್ಣ ಅವಧಿಯಲ್ಲಿ ಹಂಚಿಕೊಂಡದ್ದು ಶಿಬಿರಾರ್ಥಿಗಳಿಗೆ ಅಯಾಚಿತ ಬೋನಸ್!

ಕಾಶೀಯಾತ್ರೆ ಎಂದರೆ ವೈಯಕ್ತಿಕ ಜೀವನದ ಕೊನೆ ಎಂಬ ಭಾವ ಇದ್ದ ಕಾಲವೊಂದಿತ್ತು ಮತ್ತು ಅದಕ್ಕೆ ತಯಾರಿಯೂ ಹಾಗೇ ಇರುತ್ತಿತ್ತು. ಅಂಥ ನೂರೆಂಟು ಅನಿವಾರ್ಯ ಅಪರಿಚಿತ ನೆಲೆಗಳಿಗೆ ಹೋಗಿಬರುವಲ್ಲಿ ಮಾರ್ಗಕ್ರಮಣ, ಊಟ, ವಾಸ, ಉಪಚಾರಗಳೆಲ್ಲ ಬಿಡಿಬೀಸಾಗಿದ್ದವು. ಅವು ಸಂಘಟನೆಗೊಂಡು ಪ್ರಯಾಸ ಎನ್ನುವುದು ಪ್ರವಾಸದ ಸುಂದರ ಮುಖ ರೂಪುಗೊಳ್ಳುತ್ತಿದ್ದಂತೆ ಅರ್ಥಾತ್ ಅದೊಂದು ಉದ್ಯಮವೇ ಆಗುತ್ತಿದ್ದಂತೆ ಅದರ ವಿಕೃತ ಇತ್ತಲೆಯೂ (ಕರಾಳ ಎರಡನೇ ಮುಖ) ಕಾಣತೊಡಗಿತು. ಪ್ರಜೆಗಳ ಮೂಲ ಸೌಕರ್ಯದ (ದಾರಿ, ಬೆಳಕು, ನೀರು, ಭದ್ರತೆ, ಆರೋಗ್ಯ ಇತ್ಯಾದಿ) ಕುರಿತು ನಿಗಾ ವಹಿಸಬೇಕಾದ ಜನಪರ ಸರಕಾರಗಳು ವಹಿವಾಟು ಮೂಲವಾದ ಉದ್ದಿಮೆಯನ್ನೇ ಬಲಪಡಿಸುವಾಗ ಮಂಗಳೂರಿನಲ್ಲಿ ನಾವು ಕೆಲವರು – ಪ್ರವಾಸವನ್ನು ಸದಾ ಬಯಸುತ್ತಲೂ ಅವಕಾಶ ಸಿಕ್ಕಾಗೆಲ್ಲಾ ನಡೆಸುತ್ತಲೂ ಇರುವವರೇ ‘ಪ್ರವಾಸೋದ್ಯಮ’ವನ್ನು ವಿರೋಧಿಸಿ ಸಣ್ಣ ಮಟ್ಟದ ಚಳವಳಿ ನಡೆಸಿದ್ದೆವು. ಘೋಷಿತ ಪ್ರವಾಸೋದ್ಯಮ ದಿನದಂದು ಅದರ ವಿಕೃತಿಯ ಕುರಿತು ಬೀದಿ ಬದಿಯಲ್ಲಿ ಚಿತ್ರ ಪ್ರದರ್ಶನ ನಡೆಸಿದೆವು. ಲೇಖನಗಳನ್ನು ಪ್ರಕಟಿಸಿದೆವು. ಬೆಂಗಳೂರು, ಗೋವಾಗಳಿಂದಲೂ ಸಂಪನ್ಮೂಲ ವ್ಯಕ್ತಿಗಳನ್ನು ಕರೆಸಿ, ಒಂದು ದಿನದ ಕಮ್ಮಟವನ್ನೇ ನಡೆಸಿ, ಜನಜಾಗೃತಿ, ಸರಕಾರಕ್ಕೆ ಎಚ್ಚರಿಕೆ ನೀಡಿದೆವು. ಇವೆಲ್ಲ ನಡೆಸಿದ ‘ಯಾನ’ ಎಂಬ ಹೆಸರಿನ ನಮ್ಮ ಔಪಚಾರಿಕ ಸಂಘಟನೆಯ ನಿಜ ನಾಯಕ ನಟೇಶ ಉಳ್ಳಾಲ್. (ಆತ ಇಂದು ವೃತ್ತಿಪರ ಸಿನಿ-ಉದ್ಯಮಿಯಾದರೂ ಸಾರ್ವಜನಿಕ ಹಿತರಕ್ಷಣೆಯ ಹೋರಾಟದ ಮುಂಚೂಣಿಯಲ್ಲೇ ಇದ್ದಾರೆ. ನಟೇಶ್, ಹೆಂಡತಿ ವಿದ್ಯಾದಿನಕರ್ ಜೊತೆಗೆ ಎಸ್.ಇ.ಜ಼ೆಡ್ ವಿರುದ್ಧ ನಡೆಸಿರುವ ಹೋರಾಟ, ಆ ಕುರಿತು ನಟೇಶರ ಒಂದು ಲೇಖನವನ್ನೂ ಇಲ್ಲೇ ನನ್ನ ಕಡತಗಳ ಹಿಂದಿನ ಪುಟಗಳಲ್ಲಿ ನೋಡಬಹುದು.) ಆಳಂಗದಲ್ಲಿ, ಸಂವಹನ ಬಲದಲ್ಲಿ ನಟೇಶ್ ಕ್ಷೀಣವಾಗಿ ಕಾಣಿಸಿದರೂ ಶಿಬಿರಾರ್ಥಿಗಳಿಗೆ ಕೊಟ್ಟ ಸ್ಫೂರ್ತಿ ಬಲು ಬಲುಹಿನದು.

ಸೊಕ್ಕಿದ ತರಕಾರಿ, ಚಂದದ ಹಣ್ಣು, ಔಷಧೀಯ ಗುಣಗಳಿಗೇ ಹೆಸರಾದ ಹಲವು ಬಗೆಯ ಸೊಪ್ಪು, ಗೆಡ್ಡೆ, ದಟ್ಟಕೆನೆಗಟ್ಟುವ ಹಾಲು, ಬಣ್ಣದಲ್ಲಿ ಸಕ್ಕರೆಗೆ ಪರ್ಯಾಯವಾಗಿ ಚಿನ್ನದ ಗಟ್ಟಿಯಂತೇ ತೋರುವ ಬೆಲ್ಲ ಮುಂತಾದವುಗಳ ಮೂಲೋತ್ಪಾಟನೆ ಮಾಡುತ್ತಾ ಪ್ರತಿ ಖಂಡನೆಗೆ (ಮಂಡನೆಯಾಗಿ) ವೃತ್ತಿಪರವಾಗಿ ಸ್ವಂತ ಜಮೀನು, ಜಾನುವಾರುಗಳ ಮೂಲಕ ಸಾಧಿಸಿ ತೋರುತ್ತಾ ಮೈಸೂರಿನ ಸಮೀಪ ನೆಲೆಸಿರುವ ಎ.ಪಿ.ಚಂದ್ರಶೇಖರ ನನ್ನ ಹಿರಿಯ ಸೋದರಮಾವನ ಮಗ. (ಕಲಿಕೆಯಲ್ಲಿ ಇಂಜಿನಿಯರ್, ಪ್ರಾಥಮಿಕ ಸಾಧನೆಯಲ್ಲಿ ಮ್ಯಾಟಡೋರ್ ವಾಹನಗಳ ಕಾರ್ಯಾಗಾರದ ಮೇಲ್ವಿಚಾರಕ. ಇಲ್ಲೆ ನನ್ನ ಕಡತಗಳಲ್ಲಿ ಕುಮಾರಪರ್ವತ ಸೇರಿದಂತೆ ಹಲವು ಓಡಾಟಗಳಲ್ಲಿ ಇವನ ಭಾಗವಹಿಸುವಿಕೆ ನೀವು ಗಮನಿಸಬಹುದು.) ಸರಕಾರ ಪುರಸ್ಕಾರ ಸಹಿತ ಕೊಟ್ಟ ಬಿರುದಿನ ಅಗತ್ಯವಿಲ್ಲದೆಯೂ ನಿಸ್ಸಂದೇಹ ಕೃಷಿಪಂಡಿತ. ಇವನ ಸುಮಾರು ಹದಿಮೂರು ಎಕ್ರೆಯ ‘ಇಂದ್ರಪ್ರಸ್ಥ ಸಸ್ಯವಾಟೀ’ ಮತ್ತು ಅದರ ಸಾವಯವ ಉತ್ಪನ್ನಗಳ ಮಾರುಮುಖವಾಗಿ ಮೈಸೂರು ಪೇಟೆಯಲ್ಲೇ ಇರುವ ‘ನೇಸರ’ ಪ್ರಕೃತಿಪಾಠದಲ್ಲಿ ಇಂದು ಬಹುದೊಡ್ಡ ಆದರ್ಶಗಳು. ಚಂದ್ರ ಶಿಬಿರಾರ್ಥಿಗಳೊಡನೆ ನಡೆಸಿದ ಸಂವಾದ ತುಂಬಾ ಉಪಯುಕ್ತವಿತ್ತು ಎಂದು ಬೇರೇ ಹೇಳಬೇಕೇ!

ಪುತ್ತೂರಿನ ಸಂತ ಫಿಲೊಮಿನಾ ಕಾಲೇಜಿನಲ್ಲಿ ಬುಡ, ವಿವೇಕಾನಂದ ಕಾಲೇಜಿನಲ್ಲೂ ಹೂ ಹಣ್ಣು (ಭೌತ ವಿಜ್ಞಾನ ಅಧ್ಯಾಪಕ), ಪಿತ್ರಾರ್ಜಿತ ಸಂಟ್ಯಾರ್ ಕೃಷಿಭೂಮಿಯ ಆಪ್ತತೆ, ಅಜ್ಜ (ಎ.ಪಿ. ಸುಬ್ಬಯ್ಯ) ಅಪ್ಪರ (ಎ.ಪಿ. ಗೋವಿಂದಯ್ಯ) ಓದಿನ ಹುಚ್ಚು, ಅಮ್ಮನ (ಎ.ಪಿ. ಮಾಲತಿ) ಅಸಾಮಾನ್ಯ ಬರವಣಿಗೆ ಛಲದ ಮುಂದುವರಿಕೆಯ ಕೆಚ್ಚು, ಮಾವ ಜಿಟಿನಾರ (ನನ್ನಪ್ಪ) ಏಕಲವ್ಯ ಶಿಷ್ಯತ್ವ, ಬಂಧುಗಳೆಲ್ಲರ ‘ರಾಧಕ್ಕ’, ಅಪಾರ ಶಿಷ್ಯ ಸಂದೋಹದ ಏಪಿಸರ್ ಉರುಫ್ ರಾಧಾರಾಮಣ್ಣ (ಭಾರತದ ಪರಮಾಣು ವಿಭಾಗದ ವಕ್ತಾರರಾಗಿದ್ದ ರಾಜಾರಾಮಣ್ಣರಿಗೆ ಸಂವಾದಿಯೆನ್ನುವಂತೆ) ಯಾನೆ ಡಾ| ಎ.ಪಿ. ರಾಧಾಕೃಷ್ಣ (ನೋಡಿ: apkrishna.wordpress.com) ಸಾಮರ್ಥ್ಯದ ನೆಲೆಯಿಂದಲೇ ಪುಸ್ತಕದ ಓದಿನ ಬಗ್ಗೆ ಶಿಬಿರಾರ್ಥಿಗಳಿಗೆ ಪ್ರೇರಣೆ ನೀಡಿದ.

ಅಪ್ಪ ಇಟ್ಟ ಹೆಸರು ಕೇಳಿದರೆ ಪುರಾಣ ಪುಣ್ಯ ಪುರುಷ ದೇವರಾತ (ಕಲ್ಕೂರ), ಮಣ್ಣಿನ ವಾಸನೆಯಲ್ಲಿ ಸ್ವಂತಕ್ಕೆ ರೂಢಿಸಿಕೊಂಡ ಹೆಸರು ದೇವು ಹನೆಹಳ್ಳಿ. ಜೀವನದ ಓಟದಲ್ಲಿ ಪೂರ್ಣ ಆಚಾರಕ್ಕೆ ತರಲಾಗದ ಹತ್ತೆಂಟು ಕಟು ಆದರ್ಶಗಳು, ನೂರೆಂಟು ಒಗ್ಗದಿಕೆಗಳ ಹೇರು ಹೊತ್ತ ದೇವು ಒಂದು ತರದಲ್ಲಿ ಮಹಾಸಿನಿಕ (ಸ್ವಲ್ಪ ನಾವೆಲ್ಲರೂ ಹಾಗೇ), ಸ್ನೇಹಕ್ಕೆ ಜೀವ ಕೊಡುವ ಜೀವ. ಈತ ಬೆನ್ನ ಚೀಲದಲ್ಲಿ ಚಾರಣ, ಸಾಹಿತ್ಯ, ಪರಿಸರ, ಯಕ್ಷಗಾನ, ಜಾನಪದ ಮುಂತಾದ ತೀವ್ರ ಆಸಕ್ತಿಗಳ ಹೊರೆ ಹೊತ್ತು ಓದಿನ ಯೋಗ್ಯತೆಯಲ್ಲಿ ಸರಕಾರೀ ಕಾಲೇಜಿನ ಆಂಗ್ಲ ಅಧ್ಯಾಪಕತನದಲ್ಲೂ ಡೆಕ್ಕನ್ ಹೆರಾಲ್ಡಿನಲ್ಲಿ ವರದಿಗಾರಿಕೆಯಲ್ಲೂ ಸ್ವಲ್ಪ ಪಾದ ಸವೆಸಿದ್ದುಂಟು. ಆದರೆ ನೆಲೆಸಿದ್ದು ಆಕಾಶವಾಣಿ, ಮಂಗಳೂರಿನಲ್ಲಿ. (ಇದೇ ಈಗ ಸುದ್ದಿ ಬಂತು ದೇವು ದೂರದೂರೊಂದಕ್ಕೆ ವರ್ಗಾಯಿಸಲ್ಪಟ್ಟಿದ್ದಾರೆ, ಇವರ ಕುರಿತ ಹೆಚ್ಚಿನ ವಿವರಗಳಿಗೆ ಇಲ್ಲೇ ನನ್ನ ರಂಗನಾಥ ವಿಜಯದ ಕಥನ ನೋಡಿ) ಸಹಜವಾಗಿ ಬಹುಮಂದಿಗೆ ಚಿತ್ರಗೀತೆಗೋ ಭಜನಾಸಾಹಿತ್ಯಕ್ಕೋ ಪರ್ಯಾಯನಾಮವಾಗುಳಿದಿರುವ (ಅಂದು ಎಫ್.ಎಂ ಹಾವಳಿ ಸುರುವಾಗಿರಲಿಲ್ಲ!) ಆಕಾಶವಾಣಿಯ ಎಲ್ಲೂ ಪ್ರಸಾರವಾಗದ ಬಹುಮುಖೀ ಉಪಯುಕ್ತತೆ ಮತ್ತು ಸಾಧನೆಯ ಗೆಲುವು ಸೋಲುಗಳನ್ನು ಕೇವಲ ಶಿಬಿರಾರ್ಥಿಗಳ ಉಪಯೋಗಕ್ಕಾಗಿ ಬಿಡಿಸಿಟ್ಟರು.

ಬಾಯಲ್ಲಿ ಚಿನ್ನದ ಚಮಚ ಇಟ್ಟುಕೊಂಡು ಹುಟ್ಟಿದ್ದು ಅಂತಾರಲ್ಲ, ಅಂಥ ಹಿನ್ನೆಲೆ ಪುತ್ತೂರಿನ ನಿರೇನ್ ಜೈನರದ್ದು. ಮತ್ತೆ ಕಲಿಕೆ, ಒಲವು ಮತ್ತು ಮಂಗಳೂರಿನಲ್ಲಿ ತೊಡಗಿಕೊಂಡ ವೃತ್ತಿ ಪಕ್ಕಾ ಇಂಜಿನಿಯರ್‌ನದ್ದೇ (ಆರ್ಕಿಟೆಕ್ಟ್ ಅಥವಾ ವಾಸ್ತುಶಿಲ್ಪಿ) ಆದರೂ ಅದೇ ಮಟ್ಟದ ಪರಿಣತಿ ಮತ್ತು ಪೂರ್ಣಾವಧಿ ತೆತ್ತುಕೊಂಡ ಹವ್ಯಾಸ ತೀರಾ ಶ್ರಮಪೂರ್ಣ ಸಾಧನೆಯಾದ ವನ್ಯಸಂರಕ್ಷಣೆ. ಉಲ್ಲಾಸ ಕಾರಂತ, ಕೆ.ಎಂ ಚಿಣ್ಣಪ್ಪರ ಪಟ್ಟ ಶಿಷ್ಯತ್ವದಲ್ಲಿ ಈತ ಪಶ್ಚಿಮ ಘಟ್ಟದ ಈ ವಲಯದಲ್ಲಿ ತೊಡಗಿಕೊಂಡ ಪರಿ ಅನನ್ಯ. (ಹಾಗೇ ಇಂದು ನಿರೇನ್ ಸಾಧಿಸಿದ ಗುರಿ ಅಸಂಖ್ಯ.) ನಮ್ಮ ಶಿಬಿರ ಅಣಕದ ಅಭಯಾರಣ್ಯದಲ್ಲೇ ನಡೆದಿದ್ದರೂ ನಿಜ ವನ್ಯ ಪ್ರೇಮದ ಪ್ರಧಾನ ಧಾರೆಗೆ ನಿರೇನ್ ಮಾತುಗಳು ಉತ್ಸಾಹದ ಉಕ್ಕು ಬರಿಸಿತು.

ಲೋಕೋಪಯೋಗೀ ನೂರೆಂಟು ಸಂಶೋಧನೆಗಳ (ಗೃಹೋಪಯೋಗೀ ಕೆಲವು ಸಾಮಾನುಗಳ ಚಿತ್ರ ನೋಡಿ) ಗೆಳೆಯ ವೆಂಕಟ್ರಮಣ ಉಪಾಧ್ಯ (ಮೂರನೇ ಕ್ಲಾಸ್ ಪಾಸ್!) ಇಲ್ಲದೇ ನನ್ನ ಯಾವ ಹವ್ಯಾಸೀ ಚಟುವಟಿಕೆಗಳೂ ಕಳೆಗಟ್ಟಿದ್ದಿಲ್ಲ. ರಂಗನಾಥ ಸ್ತಂಭ, ಅಂಡಮಾನ್, ಸೈಕಲ್ ರ‍್ಯಾಲೀ ಮುಂತಾದ ಇಲ್ಲೇ ನನ್ನ ಹಳೆಕಡತಗಳಲ್ಲಿ ನಿಮಗೆ ಸಾಕಷ್ಟು ಪರಿಚಿತರೇ ಇರುವ ಈ ಪುಣ್ಯಾತ್ಮ ಔಪಚಾರಿಕ ಭಾಷಣಕ್ಕೆ ಹೇಸುತ್ತಾರೆ (ಅಯ್ಯೋ ನನ್ನಿಂದಾತ್ತಿಲ್ಲಪ್ಪಾ!). ಆದರೂ ನನ್ನ ಸ್ನೇಹದ ಕಟ್ಟುಪಾಡಿಗೆ ಮಣಿದು ಸಾಲಿಗ್ರಾಮದಿಂದ ಶಿಬಿರಕ್ಕೆ ಒಂದು ದಿನ ಬಂದಿದ್ದರು. ಅವರನ್ನು ದೇವು ಮತ್ತಿತರ ಕೆಲವು ಗೆಳೆಯರು ಸಾರ್ವಜನಿಕವಾಗಿ ಮಾತಿಗೆ ಎಳೆದು ಒಂದು ಅವಧಿ ತುಂಬಿದ್ದು ಯಾರಿಗೂ ವ್ಯರ್ಥವೆನ್ನಿಸಲಿಲ್ಲ.

ಕಿನ್ಯದ ಸಮೀರ ರಾವ್, ಅವರಪ್ಪ ವಿಠಲ ರಾಯರ ಹಾಗೇ ಓದು, ವೃತ್ತಿ, ಹವ್ಯಾಸ, ಜೀವನವನ್ನೂ ಪ್ರಾಯೋಗಿಕ ಉಪಯುಕ್ತತೆಯ ಒರೆಗೆ ಹಚ್ಚದೇ ಮುಂದುವರಿದದ್ದೇ ಇಲ್ಲ. ಸಹಜವಾಗಿ ಔಪಚಾರಿಕ ವಿದ್ಯಾಭ್ಯಾಸ ನಿರಾಕರಿಸಿ (ದಕ್ಕದ ದಡ್ಡನೇನೂ ಅಲ್ಲ), ಪಾಲಿಟೆಕ್ನಿಕ್‌ನಲ್ಲಿ ಮೆಕ್ಯಾನಿಕಲ್ ಡಿಪ್ಲೊಮಾ ಗಳಿಸಿ ಬೆಂಗಳೂರಿನ ಕಾರ್ಖಾನೆಯೊಂದರಲ್ಲಿ ಸ್ವಲ್ಪ ಕಾಲ ತೊಡಗಿಕೊಂಡಿದ್ದರು. ಮತ್ತದರ ಅನುಭವ ಲಾಭವನ್ನೂ ಸೇರಿಸಿಕೊಂಡು ಕೃಷಿಕನಾಗಿ ಮರಳಿದ್ದರು ಮಣ್ಣಿಗೆ. ಜೊತೆಜೊತೆಗೆ ತನ್ನ ಕಲಿಕಾ ಬಲದಲ್ಲಿ ಅಸಂಖ್ಯ ಕೃಷಿ ಸಲಕರಣೆಗಳ ವಿನ್ಯಾಸದಲ್ಲೂ ತೊಡಗಿ, ಕಡಿಮೆ ಶ್ರಮ ಮತ್ತು ವೆಚ್ಚದೊಡನೆ ಪ್ರಕೃತಿಯ ಅನುಸಂಧಾನಕ್ಕಿಳಿದು ತೃಪ್ತರಾಗಿದ್ದರು (ಗಮನಿಸಿ – ಶ್ರೀಮಂತರಾದದ್ದಲ್ಲ). (ಅಭಯಾರಣ್ಯದ ನಮ್ಮ ಹೊರೆ ಸಾಗಿಸುವ ಕೆಲಸದ ಕೈಗಾಡಿ, ಅಲ್ಲೂ ಮಂಗಳೂರಿನ ಮನೆಯಲ್ಲೂ ತೆಂಗಿನ ಮರ ಹತ್ತುವ ಅಗತ್ಯಕ್ಕೆ ಒದಗುವ ಯಂತ್ರ, ವಿವಿಧ ಗಾತ್ರದ ಮರದ ಹಣ್ಣುಗಳಿಗೆ ಒದಗುವ ಬಲೆ ಸಹಿತ ಕೊಕ್ಕೆಗಳು ಸಮೀರನ ಕಮ್ಮಟದ ಕಿಡಿಗಳು) ಸಮೀರನೊಡನೆ ಪ್ರಶ್ನೋತ್ತರಗಳೂ ಶಿಬಿರಾರ್ಥಿಗಳಿಗೆ ಅಪೂರ್ವ ಅನುಭವವೇ ಸರಿ.

ಶಿಬಿರದ ತಯಾರಿಯ ಕಾಲದಲ್ಲಿ ನಾನು ಅಸಂಖ್ಯ ಸಂಪನ್ಮೂಲ ವ್ಯಕ್ತಿಗಳಿಗೆ ಪತ್ರ ರವಾನಿಸಿದ್ದಿತ್ತು. ಅದಕ್ಕೆ ಒಲಿದವರನ್ನು ದಿನ ಗಂಟೆ ಮೊದಲೇ ತಿಳಿಸಿ, ಮುಖ್ಯ ವಿಷಯಗಳಲ್ಲಿ ಕೊರತೆ ಬಾರದಂತೆ, ಸಮಯದಲ್ಲಿ ಒಂದು ಮಿನಿಟೂ ವ್ಯರ್ಥವಾಗದಂತೆ ಹೊಂದಿಸಿಕೊಂಡಿದ್ದೆ. ಆಗ ನಾನು ಸುದ್ದಿಯ ಮಟ್ಟಕ್ಕೆ ವಿರಾಜಪೇಟೆಯ ಡಾ| ನರಸಿಂಹನ್ (ಇಲ್ಲೇ ಹಳೆಕಡತ ನೋಡಿ: ಕೀಪಿಟಪ್ ನರಸಿಂಹನ್) ಅವರಿಗೂ ಪತ್ರ ಕಳಿಸಿದ್ದು ನಿಜವಾದರೂ ಆ ದೂರ ಮತ್ತು ಸೇರಿಕೊಂಡ ಜಡಿ ಮಳೆಯ ವಾತಾವರಣದಲ್ಲಿ (ಇಲ್ಲದ) ದೇವರಾಣೆಗೂ ಅವರು ಬಂದಾರೆಂದು ಊಹಿಸಿರಲಿಲ್ಲ. ಆದರೆ ಪುಣ್ಯಾತ್ಮ ಸ್ವಂತ ಕಾರಿನಲ್ಲಿ ಒಂದಷ್ಟು ಹೊರೆ ಜಮಾಯಿಸಿ, ಹೆಂಡತಿ ಮತ್ತು ಮಗಳಂದಿರಿಬ್ಬರನ್ನೂ ಸೇರಿಸಿಕೊಂಡು ಶನಿವಾರ ಸಂಜೆಗೆ ಪುತ್ತೂರಿಗೆ ಬಂದು ಗೆಳೆಯರಲ್ಲೆಲ್ಲೋ ಉಳಿದುಕೊಂಡರು. ಮರು ಬೆಳಿಗ್ಗೆ ಬಿಡದ ಬಿರುಮಳೆಯಲ್ಲೂ ಅಭಯಾರಣ್ಯದಲ್ಲಿ ನಿಜವಾದ ಅತಿಥಿಯಾಗಿ (ಹೇಳದೆ ಕೇಳದೆ ಬರುವವರು) ಕಾಣಿಸಿಕೊಂಡ ನರಸಿಂಹನ್ ತನ್ನ ಹೆಸರನ್ನು ಅನ್ವರ್ಥಗೊಳಿಸಿಕೊಂಡರೆಂದೇ ಹೇಳಬೇಕು (ಒಲಿದವನಿಗೆ ಕಂಬ ಒಡೆದು ಮೈದೋರಿದ ದೇವ ನರಸಿಂಹನಲ್ಲವೇ?). ‘ಅಭಯಾರಣ್ಯ’ಕ್ಕಾಗಿ ತಾವೇ ಬೆಳೆಸಿ, ತಂದಿದ್ದ ನಾಲ್ಕು ವಿಶಿಷ್ಟ ಸಸಿಗಳನ್ನು ಕೊಟ್ಟರು. ತಾನೇ ಕೈಯಾರ ಬಿಡಿಸಿ, ಬಣ್ಣದುಂಬಿದ್ದ, ದೊಡ್ಡ ಗಾತ್ರದ ಇಪ್ಪತ್ತು ಮೂವತ್ತಕ್ಕೂ ಮಿಕ್ಕ ವನ್ಯಜೀವಿಗಳ ಚಿತ್ರಗಳನ್ನು ಊಟದ ಬಿಡು ಸಮಯದಲ್ಲಿ ಶಿಬಿರಾರ್ಥಿಗಳು ನೋಡಲೆಂದು ಜಗುಲಿಯಲ್ಲಿ ಪ್ರದರ್ಶಿಸಿದರು. ಅಭಯಾರಣ್ಯದ ಅಕ್ಷಾಂಶ ರೇಖಾಂಶ ಗ್ರಹಿಸಿ ಆ ವಲಯ ಮತ್ತು ಆ ಕಾಲದ ರಾತ್ರಿಯಾಕಾಶದ ಖಚಿತ ನಕ್ಷೆಯನ್ನು ಅಂತರ್ಜಾಲದಿಂದ ಸಂಗ್ರಹಿಸಿ, ಎಲ್ಲಾ ಶಿಬಿರಾರ್ಥಿಗಳಿಗೆ ಒದಗುವಂತೆ ಪ್ರತಿ ಮಾಡಿಸಿಯೂ ತಂದದ್ದನ್ನು ಉಚಿತವಾಗಿ ಹಂಚಿದರು. ಪಕ್ಷಿವೀಕ್ಷಣೆಯ ಯೋಜಿತ ವ್ಯಕ್ತಿಗೆ (ಕೃಶಿ) ಅವಮಾನವಾಗದಂತೆ, ಬೇಕಿದ್ದರೆ ಪೂರಕ ಬಲವೂಡುವಂತೆ, ಎಡೆ ಸಮಯ ಬಳಸಿ ಪಕ್ಷಿವೀಕ್ಷಣೆಯ ಹಲವು ಕಿವಿಮಾತುಗಳನ್ನು ರಮ್ಯವಾಗಿ ಹೇಳಿದರು. ಊಟದ ವೇಳೆ ಕರ್ನಾಟಕ ಸಂಗೀತದಲ್ಲಿ ಸಾಕಷ್ಟು ಪರಿಶ್ರಮವಿದ್ದ ಅವರ ಮಕ್ಕಳ ಗಾನಸುಧೆ ಮಳೆರಾಯ ಹಿಡಿದ ಶ್ರುತಿಗೆ ಹೊಂದಿ ಹರಿದದ್ದಂತೂ ಎಲ್ಲರಲ್ಲೂ ಆನಂದದ ಸುಧೆಯನ್ನೇ ಹರಿಸಿತು. ಬಂದಷ್ಟೇ ಅನೌಪಚಾರಿಕವಾಗಿ, ಎಲ್ಲರ ಬಹುಕಾಲದ ಬಂಧುವಿನಂತೆ ವಿದಾಯ ಹೇಳಿದರು.

ಶಿಬಿರಾರ್ಥಿಗಳ ಸಂಬಂಧಿಕರು, ಕುತೂಹಲೀ ಮಿತ್ರ ಬಳಗದ ಭೇಟಿಯಂತೂ ಅವಿರತ ನಡೆದೇ ಇತ್ತು. ಅದು ಎಲ್ಲೂ ನಮ್ಮ ಕಲಾಪಗಳಿಗೆ, ವ್ಯವಸ್ಥೆಗಳಿಗೆ ಹೊರೆಯಾಗಲೂ ಇಲ್ಲ. ಶಿಬಿರ ಘೋಷಣೆಯ ನನ್ನ ಮೊದಲ ಪತ್ರಿಕಾ ಪ್ರಕಟಣೆ ನೋಡಿದ ಕೂಡಲೇ ನಿರ್ಮಲಾ ಟ್ರಾವೆಲ್ಸಿನ ಮಾಲಿಕ, ಅತ್ಯುತ್ಸಾಹೀ ಚೊಲ್ಪಾಡೀ ಉಪೇಂದ್ರ ಕಾಮತ್ ದೂರವಾಣಿಸಿ, “ಅಶೋಕರೇ ಶಿಬಿರಕ್ಕೆ ನಾನೇನಾದರೂ ಕೊಡಬೇಕಲ್ಲಾ” ಅಂದದ್ದನ್ನು ಸವಿನಯ ನಿರಾಕರಿಸಿದ್ದೆ. ಆದರೆ ಪುಣ್ಯಾತ್ಮ ಶನಿವಾರ ಬೆಳಿಗ್ಗೆ, ಅಷ್ಟು ದೂರ ಬಂದು, ಕಾಡ್ಮನೆಯ ಅಂಗಳದಲ್ಲೇ ನಿಂತು, ದೊಡ್ಡ ಪ್ಲ್ಯಾಸ್ಟಿಕ್ ಚೀಲ ತುಂಬಾ ಬಗೆಬಗೆಯ ತಿನಿಸುಗಳ ಹೊರೆ ಕೊಟ್ಟು “ಸಭೆ ಎದುರು ನಾನು ಬರುವುದಿಲ್ಲ. ಮತ್ತೆ ನನ್ನ/ನಮ್ಮ ಹೆಸರೂ ಹೇಳದೇ ಇಷ್ಟನ್ನು ಒಪ್ಪಿಸಿಕೊಳ್ಳಿ” ಎಂದದ್ದನ್ನು ಇಲ್ಲಾದರೂ ಹೃದಯ ತುಂಬಿ ಸ್ಮರಿಸಿಕೊಳ್ಳದಿರಲಾರೆ.

ಮಾಲೆಕಾರರು ಎಷ್ಟಿದ್ದರೇನು, ಮುಡಿದು ಸೊಗಯಿಸುವವರಿಲ್ಲದಿದ್ದರೆ! ನಾವು ಮೊದಲೇ ಹೇಳಿಕೊಂಡಂತೆ ಅಧಿಕೃತ ಕರೆಯನ್ನು ಇಪ್ಪತ್ತೈದಕ್ಕೇ ಗಟ್ಟಿ ಮಾಡಿದ್ದೆವು (ಇಬ್ಬರು ಮಾತ್ರ ಕಾರಣವನ್ನೂ ಕೊಡದೆ ಗೈರುಹಾಜರಾದರು) ಬಂದು ಒಂದು ಗೊಣಗು, ಸೋಮಾರಿತನದ ಪಿಡುಗು ಇಲ್ಲದೆ ಅನುಭವಿಸಿ, ಚಂದಗಾಣಿಸಿದ ಯುವ ಮಿತ್ರರ ವಿವರಗಳಿಗಿಳಿಯದೇ ಕೇವಲ ಹೆಸರಿಸುತ್ತೇನೆ: ೧. ಬಂಟ್ವಾಳದ ಮಹೇಶ ಮಯ್ಯ, ೨. ಮಾಧುರಿ ರಾವ್ ಮತ್ತು ೩. ನಿಶಾಂತ್, ೪. ಮಂಗಳೂರಿನ ಪರಮೇಶ್ವರ, ೫. ಅನಿಲ್ ಪಿಂಟೋ, ೬. ವಿಘ್ನೇಶ್, ೭. ಸಂತೋಷ ಕಾರಂತ ಮತ್ತು ೮. ವಸಂತ ಕುಮಾರ್, ೯. ಸುಬ್ರಹ್ಮಣ್ಯದ ಗಣೇಶಭಟ್ ಕೆ, ೧೦. ಕಾಪುವಿನ ಶ್ರುತಿ ಶೆಟ್ಟಿ, ೧೧. ನರಿಂಗಾನದ ದಿವ್ಯಾ ಡಿ, ೧೨. ಬೈಂದೂರಿನ ಬಾಲಕೃಷ್ಣ ಡಿ, ೧೩. ಮೂಲ್ಕಿಯ ಪವಿತ್ರಾ ಕೆ, ೧೪. ಬ್ರಹ್ಮಾವರದ ಮೈತ್ರೇಯಿ, ೧೬. ಪುತ್ತೂರಿನ ಮನೋಹರ ಕುಮಾರ್ ಮತ್ತು ೧೭. ರೋಹಿತ್ ಪಿ, ೧೮. ಮಂಗಲ್ಪಾಡಿಯ ಚಂದನ್ ಕೆ, ೧೯. ಕುಂದಾಪುರದ ನಾಗರಾಜ ಡಿ.ಎನ್ ಮತ್ತು ೨೦. ಗುರುರಾಜ ರಾವ್ ಜೆ, ೨೧. ಉಡುಪಿಯ ಅನುಪಮಾ ಶೆಣೈ, ೨೨. ಬೆಳ್ತಂಗಡಿಯ ಕ್ಲೋಡಿ ರಾಯನ್ ಸೆರಾವೋ, ಕೊನೆಯದಾಗಿ ೨೩. ಅಡ್ಯನಡ್ಕದ ವಿದ್ಯಾರಶ್ಮಿ.

ಕೆಲವು ಪ್ರೌಢಶಾಲಾ ಅನುತ್ತೀರ್ಣ ವಿದ್ಯಾರ್ಥಿಗಳು ಒಂದೇ ‘ಮಾದರಿ ಪತ್ರ’ದ ನಕಲು ಮಾಡಿ ಸಲ್ಲಿಸಿದ ಅರ್ಜಿಗಳು, ಪಾಲಿಟೆಕ್ನಿಕ್ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳ ಮನವಿಗಳು, ಪ್ರಾಂii ನಲ್ವತ್ತು ಮೀರಿದ ಕೃಷಿಕ, ಅನ್ಯ ವೃತ್ತಿ ನಿರತ ಸಾಹಿತಿ ಮುಂತಾದವರು ತಮ್ಮನ್ನೂ ಶಿಬಿರಕ್ಕೆ ಸೇರಿಸಿಕೊಳ್ಳಲು ಬರೆದುಕೊಂಡ ಪತ್ರಗಳನ್ನು ನಮ್ಮ ಲಕ್ಷ್ಯದ ಮಿತಿಯರಿತು ನಿರಾಕರಿಸಬೇಕಾಯ್ತು. ಮತ್ತೆ ನಾವು ಮನೆಮಂದಿ ಮತ್ತು ಆಗಿಂದಾಗ್ಗೆ ಬರುತ್ತಿದ್ದ ಕುತೂಹಲಿಗಳೂ ಸೇರಿ, ಎಲ್ಲ ಕಲಾಪಗಳೂ ‘ತುಂಬಿದ ಗೃಹ’ಗಳಲ್ಲೇ ನಡೆಯಿತೆನ್ನಬೇಕು! ಅದರ ಯಶಸ್ಸಿನ ಕುರಿತು ವಾರ ಬಿಟ್ಟು ಇ-ಟೀವಿಯ ಜಿ.ಎನ್ ಮೋಹನ್ ಬರೆದ ವಿ-ಪತ್ರ ಒಂದು ನೋಡಿ: Satya & me are overwhelmed by the enthusiastic reaction form the participants. They were so attentive and as one of the great theatre critic points out were like a beggar’s bag.

ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲು ಕೇಳಿಕೊಂಡಿದ್ದವರಲ್ಲಿ ನಿವೃತ್ತ ಹಿರಿಯ ಅರಣ್ಯಾಧಿಕಾರಿ ಅಜ್ಜಂಪುರ ಕೃಷ್ಣಸ್ವಾಮಿ, ರಾಜ್ಯ ಪೊಲಿಸ್ ವರಿಷ್ಠ ಟಿ. ಮಡಿಯಾಲ್, ಶತಾವಧಾನಿ ಗಣೇಶ್ ಮುಂತಾದವರು ಶಿಬಿರದ ಔಚಿತ್ಯವನ್ನು ಶ್ಲಾಘಿಸಿ, ಭಾಗವಹಿಸಲಾಗದ ತಮ್ಮ ಅಸಹಾಯಕತೆಗೆ ಪತ್ರ ಮುಖೇನ ವಿಷಾದಿಸಿದ್ದರು. ಶಿಬಿರದ ಮೊದಲಲ್ಲಿ ಯಾವುದೇ ಸಾರ್ವಜನಿಕ ಕಾರ್ಯಕ್ರಮಗಳಲ್ಲಿಂದು ಪಿಡುಗಾದ ಔಪಚಾರಿಕತೆಯನ್ನು ನಿರಾಕರಿಸಿದ್ದು ಹೇಳಿದ್ದೇನೆ. [ನಿರ್ವಾಹಕನೆಂಬ ‘ಸಂವಿಧಾನೇತರ ಮಹಾಶಕ್ತಿ’ ಕೆಲವರನ್ನು ಕೆಲವರ ಮೂಲಕ ವೇದಿಕೆಗೆ ಆಹ್ವಾನಿಸುವುದು (ದೇವತೆಗಳನ್ನು ಮಂತ್ರಪುರಸ್ಸರವಾಗಿ ಯಜ್ಞಮಂಟಪಕ್ಕೆ ಆವಾಹಿಸುವುದು?), ಸ್ವಾಗತ ಮತ್ತು ಹತ್ತು ಮಂದಿಯ ಮೂಲಕ ವೇದಿಕೆ ಅಲಂಕರಿಸಿದ ಎಲ್ಲರಿಗೂ ಸಂಘಟಕರ ಶಕ್ತಿಯಾನುಸಾರ ಹೂವಿನೆಸಳಿನಿಂದ ಹಿಡಿದು ಹೊರಲಾಗದ ಹಾರದವರೆಗೆ ಸಾಂಕೇತಿಕ ಗೌರವಾರ್ಪಣೆ, ದೀಪೋಜ್ವಲನ, ಪ್ರಾಸ್ತಾವಿಕ, ಉದ್ಘಾಟನೆ ಎಂಬ ಮರುದಿನದ ಪತ್ರಿಕೆಗಳಲ್ಲಷ್ಟೇ ಕಾಣಸಿಗುವ ಮಹಾಚೋದ್ಯ (ಸಭಿಕರಿಗೆ ಮಾಧ್ಯಮಿಕರ ಪೃಷ್ಟದರ್ಶನ), ಇತ್ಯಾದಿ ಒಂದೂ ನಡೆಸಲಿಲ್ಲ] ಕೊನೆಯಲ್ಲೂ ಉದ್ದೇಶಪೂರ್ವಕವಾಗಿ ಸಮಾರೋಪ ಸಭೆ ಹಾಗಿರಲಿ, ಔಪಚಾರಿಕ ವಂದನಾರ್ಪಣೆಯ ನಾಲ್ಕು ಮಾತುಗಳಿಗೂ ಅವಕಾಶ ಉಳಿಸಿರಲಿಲ್ಲ. ನಡೆಸಿದ್ದರೆ ಸನ್ನಿವೇಶದ ಒತ್ತಡದಲ್ಲಿ ಕೆಲವಾದರೂ ಶಿಬಿರಾರ್ಥಿಗಳು ಸಂಘಟಕರ ಕುರಿತು ಹೊಗಳು ಸಾಹಿತ್ಯ ರಚಿಸುವ ಅಪಾಯವಿತ್ತು. ವಾಸ್ತವದಲ್ಲಿ ಕೆಲವರು ಅದಕ್ಕೊಂದು ಅವಕಾಶ ಕಲ್ಪಿಸಬೇಕೆಂದು ಕೊಟ್ಟ ಸೂಚನೆಯನ್ನು ನಾನು ಮೊಳಕೆಯಲ್ಲೇ ಚಿವುಟಿದ್ದೆ. ಆದರೂ ಸ್ವಸ್ಥಾನಕ್ಕೆ ಮರಳಿದ ಮೇಲೆ ಕೆಲವು ಶಿಬಿರ ಭಾಗಿಗಳು ಬರೆದ ಪತ್ರಗಳು (ಮೈತ್ರೇಯಿ, ಸಂತೋಷ ಕಾರಂತ, ವಸಂತ ಕುಮಾರ್, ಬಿ. ಬಾಲಕೃಷ್ಣ, ಮಾಧುರಿ ರಾವ್, ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಸಂತೋಷಪಟ್ಟವರಲ್ಲಿ ಜಿ.ಎನ್. ಮೋಹನ್ ದಂಪತಿ, ಡಾ| ನರಸಿಂಹನ್ ಕುಟುಂಬ) ನಮಗೆ ಸಂದ ಸಮ್ಮಾನ. ಅವರು ಮುಂದೆ ಜೀವನರಂಗದಲ್ಲಿ ವಿಕಸಿಸಿ ಎಂದೆಂದೋ ಸಿಕ್ಕಾಗ ಸ್ಮರಿಸಿಕೊಳ್ಳುವ ಪರಿ ನಿಜ ಧನ್ಯತೆಯನ್ನೂ ತರುತ್ತಿದೆ.

ಶಿಬಿರಾರ್ಥಿಗಳಿಗೆ ಜಿಟಿ ನಾರಾಯಣ ರಾವ್ (ನನ್ನಪ್ಪ) ಹೆಸರು ಬಹುಪರಿಚಿತವೇನೂ ಇದ್ದಿರಲಾರದು. ಆದರೆ ಸಂಪನ್ಮೂಲ ವ್ಯಕ್ತಿಗಳಾಗಿ ಬಂದ (ಮತ್ತು ಬಾರದ) ಅಷ್ಟೂ ಮಂದಿಗೆ ಆ ಹೆಸರು ಬಹಳ ದೊಡ್ಡ ಆಕರ್ಷಣೆಯಾಗಿದ್ದದ್ದಂತೂ ಸ್ಪಷ್ಟವಿತ್ತು. ಜಿ.ಟಿ.ನಾ (೧೯೨೬-೨೦೦೮) ಜೀವಿತ ಕಾಲದಲ್ಲಿ ಮಗನಾಗಿ ನನಗೆ ಹೇಳಲು ಸಂಕೋಚವೂ ಮತ್ತೆ ಅವರಿಂದ ಸ್ಪಷ್ಟ ನಿರುತ್ತೇಜನವೂ ಬರಬಹುದಾಗಿದ್ದ ಕೆಲವು ಮಾತುಗಳನ್ನು, ಯಾವುದೇ ಅತಿಶಯೋಕ್ತಿ ಇಲ್ಲದೆ ಈಗ ಇಲ್ಲಿ ದಾಖಲಿಸುವುದು ಅವಶ್ಯ ಎಂದು ಭಾವಿಸುತ್ತೇನೆ. ತಂದೆಗೆ ಅಷ್ಟೂ ಜನರೊಡನೆ ಮತ್ತಷ್ಟೂ ವಿಷಯಗಳೊಡನೆ ಸಹಜವಾಗಿ ಮತ್ತು ಅರ್ಥಪೂರ್ಣವಾಗಿ ಸಂವಾದಿಸಬಲ್ಲ (ಗಮನಿಸಿ, ಎಲ್ಲದರಲ್ಲು ಪರಿಣತಿ ಎಂದಲ್ಲ) ಸ್ನೇಹಾಚಾರ, ಜ್ಞಾನ ಮತ್ತು ಅನುಭವ ಇತ್ತು. ಹಾಗಾಗಿ ಸಂಘಟನಾ ವಿಚಾರಗಳಲ್ಲಷ್ಟೇ ನಾವು (ಮನೆಯವರು) ತೊಡಗಿಕೊಂಡು ಕಲಾಪಗಳನ್ನು ನಿರ್ವಹಣೆಯನ್ನು ಪೂರ್ತಿ ಅವರಿಗೆ ಬಿಟ್ಟು ನಿಶ್ಚಿಂತೆಯಿಂದಿದ್ದೆವು. ಅವರು (ತಾಯಿಯೊಡನೆ) ಹಳೇ ಶಿಸ್ತಿನಂತೆ ತಮ್ಮೆಲ್ಲಾ ಪ್ರಾತಃ ವಿಧಿಗಳನ್ನು ಎಡೆಂಬಳೆ ಮನೆಯಲ್ಲೇ ಮುಗಿಸಿ, ಒಳಾಂಗಣದ ನಮ್ಮ ಪ್ರಥಮ ಕಲಾಪಕ್ಕೆ ಮುಂಚಿತವಾಗಿ ಕಾಡ್ಮನೆಯಲ್ಲಿ ಹಾಜರಿರುತ್ತಿದ್ದರು. ಮತ್ತೆ ದಿನದ ಕೊನೆಯ ಕಲಾಪದವರೆಗೂ (ನಕ್ಷತ್ರವೀಕ್ಷಣೆಯಂದು ರಾತ್ರಿ ಹನ್ನೊಂದು ಗಂಟೆ) ತರುಣರೊಡನೆ ನೆಲದಲ್ಲೇ ಬೈಠಕ್ ಹಾಕಿ, ಮಾತು, ಊಟ, ವಿಶ್ರಾಂತಿಗಳನ್ನು ಸಮಾನವಾಗಿ ಅನುಭವಿಸಿದರು. ತರುಣರಿಗೆ ‘ಚಳಿ’ ಕಾಡದಂತೆ ಚುರುಕಾಯಿಸುತ್ತಿದ್ದರು, ಹೋಮರ್ ತೂಕಡಿಸಿದಲ್ಲಿ (even Homer nods!) ಎಚ್ಚರಿಸುತ್ತಿದ್ದರು. ಅರೆಕೊರೆಗಳನ್ನು ತುಂಬಿಕೊಡುವಲ್ಲಿ ಇವರ ಸವಿನಯ ಪ್ರಶ್ನೆಗಳು ನುರಿತ ಕರಣೆಯಾದರೆ, ರಸಸ್ಯಂದಿಸಿದಲ್ಲಿ ಇವರ ಮುಕ್ತ ಉದ್ಗಾರಗಳು ಕಲಾಪ ನಡೆಸುವವರಿಗೆ ಮತ್ತೆ ಮೈಲಿನ ಓಟಕ್ಕೆ ಕುಮ್ಮಕ್ಕು. ಅಧ್ಯಾಪಕ, ಎನ್ಸಿಸಿ ಅಧಿಕಾರಿ, ನಕ್ಷತ್ರ ವೀಕ್ಷಕ, (ಸಹಕಾರಿ ಸಂಘದ ಅನುಭವದಲ್ಲಿ) ನುರಿತ ವ್ಯಾಪಾರಿ, ಬರಹಗಾರ, ವಿಜ್ಞಾನ ಮತ್ತು ವೈಜ್ಞಾನಿಕ ಮನೋಭಾವದ ಬಹುದೊಡ್ಡ ವಕ್ತಾರ, ಆಡಿದಂತೇ ನಡೆಯಲ್ಲೂ ಆದರ್ಶಗಳ ಪ್ರತಿಪಾದಕ, ಸಂಪಾದಕ, ಪತ್ರಕರ್ತ, ಸಮಾಜಸೇವಕ, ಸಂಗೀತಲೋಲ, ಕಲಾರಸಿಕ, ಸರಸ ಸಂಭಾಷಣಾಪಟು ಎಂಬಿತ್ಯಾದಿ ಇವರ ಯೋಗ್ಯತೆಗಳು ತೀರಾ ಅಗತ್ಯ ಬಂದಲ್ಲದೆ ಯಾವುದೇ ಕಲಾಪದ ಮೇಲೂ ಮಿನಿಟೊಂದೋ ಎರಡಕ್ಕಿಂತ ಹೆಚ್ಚು ಸಮಯ ತಿಂದದ್ದಿಲ್ಲ. (ಮುದಿಭ್ರಮೆ ಅಥವಾ ಮಾತಿನ ಚಪಲದಲ್ಲಿ ‘ತನ್ನ ಬಣ್ಣಿಸಲಿಲ್ಲ, ಇತರರ ಸಣ್ಣ ಮಾಡಲಿಲ್ಲ.’ ಜೀವನರಂಗದಲ್ಲೂ ತಂದೆ ಎಂದೂ ಹಣಕ್ಕಾಗಿ, ಪರೋಕ್ಷ ಲಾಭಕ್ಕಾಗಿ, ಪ್ರಚಾರ, ಪ್ರಶಸ್ತಿ, ಪದವಿ ಇತ್ಯಾದಿಗಳಿಗಾಗಿ ಮೂಗು ತೂರಿದ್ದೇ ಇಲ್ಲ.)

ತಂದೆಯ ವಿಷಯ ಸಂಪತ್ತಿನಲ್ಲಿ ಕೆಲವನ್ನಾದರೂ ಎಡೆ ಸಮಯಗಳಲ್ಲಿ ಶಿಬಿರಾರ್ಥಿಗಳಿಗೆ ಚೂರೂಪಾರು ದಕ್ಕಿಸಬೇಕೆಂದು ನಾನೇನೋ ಅಂದಾಜಿಸಿದ್ದೆ. ಆದರೆ ನಾನು ಬಯಸಿ ಹೊರಗಿನಿಂದ ಬಂದವರಿಗೇ ಸಮಯ ಹೊಂದಿಸುವಲ್ಲಿ ಸೋತು, ಎಚ್ಚರದ ಹದಿನೆಂಟು ಗಂಟೆಗಳು ಮಿನಿಟುಗಳಂತೆ ಕಳೆದುಹೋಗಿದ್ದವು. ಕನಿಷ್ಠ ಎರಡು ರಾತ್ರಿಗಳ ನಕ್ಷತ್ರ ವೀಕ್ಷಣೆಯಾದರೂ ತಂದೆಯ ಮೂಲಕ ಶಿಬಿರಾರ್ಥಿಗಳಿಗೆ ದಕ್ಕೀತು ಎಂದಾಶಿಸಿದ್ದೆ, ಮಳೆ ಬಿಡಲಿಲ್ಲ. ಮಳೆ ಬಿಟ್ಟ ಒಂದು ರಾತ್ರಿ ಸಮೀಪದ ಪದವಿನ ತೆರೆಮೈಗೆ ಎಲ್ಲರ ಸವಾರಿ ಹೋಗಿತ್ತು. ಹಾಗೆ ಹೊರಡುವ ಮೊದಲೇ “ಗುಡ್ಡೆಯ ಹುಲ್ಲು, ಕಲ್ಲುಗಳ ಅಸಮ ನೆಲದಲ್ಲಿ ಕತ್ತೆತ್ತಿ ಆಕಾಶ ನೋಡುತ್ತ ಅತ್ತಿತ್ತ ಓಡಾಡುವ ಪ್ರಾಯ ನನ್ನದಲ್ಲ” ಎಂದು ತಂದೆ ಸೂಚನೆ ಕೊಟ್ಟಿದ್ದರು. ನಮ್ಮ ಟಾರ್ಚ್‌ಲೈಟ್ ಪೆರೇಡಿನಲ್ಲಿ ನಡೆದೇ ಬಂದ ಅವರಿಗೆ ಕುಳಿತು ವಿವರಿಸಲು ಒಂದು ಕುರ್ಚಿಯನ್ನೂ ಹೊತ್ತೊಯ್ದಿದ್ದೆವು. ಆದರೆ ಮೋಡದ ಮುಸುಕು ಹರಿಯದೇ ದಿನದ ಬಿಡು ಸಮಯಗಳಲ್ಲಿ ನಡೆಯುತ್ತಿದ್ದ ವೈಚಾರಿಕ ಮಾತುಗಳ ಮುಂದುವರಿಕೆಯಷ್ಟೇ ಸಾಧ್ಯವಾದದ್ದು ಸಣ್ಣ ಬೇಸರದ ಸಂಗತಿಯಾಗಿ ಉಳಿಯಿತು. ಏನಿಲ್ಲದಿದ್ದರೂ ಅವರ ಉತ್ಸಾಹ ಪ್ರಚಂಡ ಸಾಂಕ್ರಾಮಿಕವಾಗಿ ಶಿಬಿರದ ಮೂರೂ ದಿನ ಎಲ್ಲರನ್ನೂ ಆವರಿಸಿತ್ತು. ಅಭಯನ ನೆಪದಲ್ಲಿ ಶಿಬಿರಾರ್ಥಿಗಳಿಗೆಲ್ಲಾ ‘ಅಜ್ಜ’ನಾದ ನನ್ನಪ್ಪನ ನೆನಪು ನನಗೂ ನಮಗೂ (ನನ್ನ ತಾಯಿ – ಲಕ್ಷ್ಮಿ ದೇವಿ, ಹೆಂಡತಿ – ದೇವಕಿ ಮತ್ತು ಮಗ – ಅಭಯಸಿಂಹ) ಶಿಬಿರದ ಅನುಭವದೊಡನೆ ಅವಿಭಾಜ್ಯವಾಗಿ ಸದಾ ಹಸಿರು.

[ನಾನು ಮೊದಲಲ್ಲಿ ಶಿಬಿರಾರ್ಥಿಗಳನ್ನು ಆಕರ್ಷಿಸಲು ಪತ್ರಿಕೆಗಳ ಓದುಗರ ಅಂಕಣವನ್ನು ಬಳಸಿಕೊಂಡದ್ದು ಬಿಟ್ಟು ಹೆಚ್ಚಿಗೆ ಏನನ್ನೂ ‘ಸುದ್ದಿ’ ಮಾಡಿರಲಿಲ್ಲ. (ಪತ್ರಕರ್ತರನ್ನು ಔಪಚಾರಿಕವಾಗಿ ಕರೆಯುವುದು, ಕಂಡುಕೊಳ್ಳುವುದು ನಾವು ಅವರ ವೃತ್ತಿಧರ್ಮಕ್ಕೆ ಮಾಡುವ ಅವಮಾನ ಎಂದೇ ನಾನಿನ್ನೂ ನಂಬಿದ್ದೇನೆ.). ಆದರೆ ಯಾವುದೇ ಗೋಪ್ಯವಿಲ್ಲದೆ ನಡೆದ ಮೂರು ದಿನದ ಈ ಶಿಬಿರ ಯಾವುದೇ ಮಾಧ್ಯಮದ ಮಿತ್ರರನ್ನು ಸಹಜವಾಗಿ ಆಕರ್ಷಿಸಲಿಲ್ಲ ಎನ್ನುವುದು ಬಲು ಬೇಸರದ ಸಂಗತಿ. ಕೊನೆಯಲ್ಲಿ ಇತರರಿಗೆ ಪ್ರೇರಣೆ ಕೊಡುವ ಉದ್ದೇಶದಿಂದ, ಸ್ವಪ್ರಚಾರವನ್ನು ದೂರವಿಟ್ಟು ಶಿಬಿರದ ಕುರಿತೊಂದು ಪತ್ರಿಕಾ ಪ್ರಕಟಣೆಯನ್ನಾದರೂ (ಗಮನಿಸಿ: ಜಾಹೀರಾತಲ್ಲ!) ಕೊಡುವುದೆಂದು ನಿಶ್ಚಯಿಸಿ ನಾನು ತಂದೆಯನ್ನು ಕೇಳಿಕೊಂಡೆ. ತಂದೆ ಕೇವಲ ನೆನಪಿನ ಬಲದಲ್ಲಿ ಇಂಗ್ಲಿಷಿನಲ್ಲಿ ಬರೆದು ಕೊಟ್ಟ ಪಕ್ಕಾ ಸಂಕ್ಷಿಪ್ತ ಪತ್ರಿಕಾ ಪ್ರಕಟಣೆಯನ್ನು ಎಲ್ಲಾ ಮಾಧ್ಯಮ ಕಛೇರಿಗಳಿಗೆ ರವಾನಿಸಿ ಬಿಟ್ಟೆ. ಅದರಲ್ಲೂ ಕಲಾಪಗಳ ಪಟ್ಟಿಯನ್ನು ಬಿಟ್ಟು ಉಳಿದದ್ದನ್ನು ಇಲ್ಲಿ ಲಗತ್ತಿಸಿದ್ದೇನೆ]

Three memorable days in Abhayaranya

- GT Narayana Rao

Montepadavu is some 20 km away from Mangalore. There is an apology for a bus road connecting the two: high tech culture at on end and back to nature at the destination. There lies a rugged terrain off Montepadavu. Time, human ravage and cattle damage have rendered it a waste land where rain water doesnot seep into the laterite stone surface and aquifers have naturally dried up.

About 1998 Ashoka Vardhana got an idea: why not purchase an acre of this rugged terrain, fence it with stone walls and just allow nature to rejuvenate it? As a book trader well established in Mangalore (Athree Book Centre, 1975) he had developed the hobby of trekking and hill climbing during week ends. Fairly well he had understood the language of nature: uninterrupted nature recreates itself. That was the beginning of Abhayaranya.

The first rainy season over – it rains heavily in these areas – he was pleasantly surprised to notice greenery gradually covering up the barren slopes, a feeble trickle of spring making its presence felt at the bottom of a long-back-dried-up muddy well and the birds greeting the `intruders’ with their eternal songs! The well was cleaned and deepened and its bund strengthened. For a frugal weekend stay Ashok, his wife Devaki and son Abhaya, built a typical cottage and named it significantly Kaadmane (forest home). No electricity intrusion, no phone nuisance, nor city noise, pollution etc here – yes, in every sense it is a hermitage, “far from the madding crowds.”

This family organized a natural camp here where selected youngsters were exposed to nature’s powers of silent regeneration and resurgence. The entire cost is born by Ashok. The very call from Abhayaranya for the new-short term camp evoked great interest in the city-sick cliché-ridden youth. The three day camp – ‘Personality development camp for youth,’ had more than 70 volunteers for just 25 vacancies. Selection was based on strictly well defined physical criteria.

On the first night Kaadmane buzzed with 24 live wires. Kerosene lamps couldnot drive away the pitch darkness. (ಈ ಎರಡು ವಾಕ್ಯಗಳನ್ನು ತಮ್ಮ ಪತ್ರಿಕಾ ಶೈಲಿಗೆ ಅಳವಡಿಸಿಕೊಂಡ ಒಂದು ಖ್ಯಾತ ಇಂಗ್ಲಿಶ್ ಪತ್ರಿಕೆಯ ವರದಿಯ ಒಂದು ವಾಕ್ಯ ನಿಮ್ಮ ಮನರಂಜನೆಗಾಗಿ ಲಗತ್ತು: However temporarily power lines were drawn for benefit of the camp as the kerosene lamps couldnot drive away the pitch darkness.) Outside heavy downpour added to the mysterious assembly. Actual training began on Oct. 13… Departure time dusk of Oct. 15 the new awareness under natural conditions combined with intimate interaction with experts in different areas of nature study made the trainees remark, “we were taken on a brief pilgrimage of nature in all its resplendent beauty. The mantra that made it possible was total sublimation of the organizers, experts and participants into the unity of life.”

ಈ ಲೇಖನ ಸರಣಿ ಸದ್ಯಕ್ಕೆ ಮುಗಿದುದು.

ಪವಾಡ ಸುಳ್ಳು, ಇರುವುದೆಲ್ಲ ಯಕ್ಷಿಣಿ!
ವೈಜ್ಞಾನಿಕ ತಳಹದಿಯ ವ್ಯಕ್ತಿತ್ವ ವಿಕಸನ ಶಿಬಿರದ ಎರಡನೇ ಕಂತು

[ವರ್ತಮಾನಕ್ಕೆ ಪ್ರಸ್ತುತವಾದ ಸಾಂವಿಧಾನಿಕ ಪ್ರಮಾಣವನ್ನು ಅಣಕಿಸುವಂತೆ ಯಃಕಶ್ಚಿತ್ ‘ಭಕ್ತಿ-ಉದ್ಯಮದ’ ಕೇಂದ್ರಗಳು (ತಿರುಪತಿ, ಶಿರ್ಡಿ, ಧರ್ಮಸ್ಥಳ, ಪುಟ್ಟಪರ್ತಿ ಇತ್ಯಾದಿ), ವ್ಯಕ್ತಿಗಳು (ರಾಮದೇವ್, ರವಿಶಂಕರ್, ಪೇಜಾವರ ಮುಂತಾದವರು) ಮೆರೆಯುತ್ತಿರುವ ಕಾಲದಲ್ಲಿ ನಮ್ಮ ಕಾಡ್ಮನೆಯ ವೈಜ್ಞಾನಿಕ ತಳಹದಿಯ ವ್ಯಕ್ತಿತ್ವ ವಿಕಸನ ಶಿಬಿರದ ಕಲಾಪಗಳ ವ್ಯಾಪ್ತಿ ಅದೆಷ್ಟು ಕ್ಷೀಣ ಎಂದನ್ನಿಸಿದರೂ ಒಂದು ಬೆಳಕಿನ ಕುಡಿ ಹೊಳೆಯಿಸಿದ, ವಿಚಾರದ ಕಿಡಿ ರಟ್ಟಿಸಿದ ಹೆಮ್ಮೆಯಲ್ಲಿ ಎರಡನೇ ಕಂತಿನಲ್ಲಿ ಮುಂದುವರಿಯುತ್ತೇನೆ]

ಮೂರು ದಿನಗಳಲ್ಲಿ ಕಾಡ್ಮನೆಯ ಒಳಗೇ ನಡೆದ ಕಲಾಪಗಳನ್ನು ಮುಖ್ಯವಾಗಿ ಗಮನದಲ್ಲಿಟ್ಟುಕೊಂಡು ಮೊದಲಿಗೆ ಕೆಲವು ಸಾಮಾನ್ಯೀಕರಣಗಳು. ನಾವು ಉದ್ದೇಶಿಸಿದ ಇಪ್ಪತ್ನಾಲ್ಕು ವಿದ್ಯಾರ್ಥಿಗಳಲ್ಲದೆ ಶಿಬಿರಾವಧಿಯ ಮೂರೂ ದಿನ ಹಿಂದು ಮುಂದಿನ ಕಲಾಪ ನಡೆಸುವ ಸಂಪನ್ಮೂಲ ವ್ಯಕ್ತಿಗಳು, ಕೆಲವು ಪೋಷಕರು, ಮಿತ್ರರು ಅನೌಪಚಾರಿಕವಾಗಿ ಕಲಾಪಗಳಲ್ಲಿ, ಚರ್ಚೆಗಳಲ್ಲಿ ಸೇರಿಕೊಳ್ಳುವುದು ನಡೆದೇ ಇತ್ತು. ಬಂದ ಸಂಪನ್ಮೂಲ ವ್ಯಕ್ತಿ ಮತ್ತು ಕಲಾಪ ಏನಿದ್ದರೂ ಮೊದಲಲ್ಲಿ ನಾನು ಒಂದು ಎಂದರೆ ಒಂದೇ ವಾಕ್ಯದಲ್ಲಿ ಅತಿಥಿಯ ಹೆಸರು ಮತ್ತು ಅವರು ಪರಿಚಯಿಸಲಿರುವ ವಿಷಯವನ್ನಷ್ಟೇ ಉಲ್ಲೇಖಿಸಿಬಿಡುತ್ತಿದ್ದೆ. ಮತ್ತವರು ಸ್ವಪರಿಚಯದಿಂದ ತೊಡಗಿ, ಹೆಚ್ಚುಕಡಿಮೆ ಸರಸ ಸಂವಾದದಲ್ಲೇ ತಮ್ಮ ಪರಿಣತಿಯನ್ನು ಸಭಿಕರೊಡನೆ ಹಂಚಿಕೊಳ್ಳುತ್ತಿದ್ದರು. (ನಿರ್ವಾಹಕತನವೆಂಬ ಅಧಿಕಪ್ರಸಂಘವನ್ನು ನಾನು ಯಾವುದೇ ಸಭೆಯಲ್ಲಿ ಮೆಚ್ಚಿಕೊಂಡದ್ದಿಲ್ಲ ಹಾಗಾಗಿ ನನ್ನ ಸಭೆಗಳಲ್ಲಿ ನೆಚ್ಚಿಕೊಂಡದ್ದೂ ಇಲ್ಲ!) ಅವರು ಕೋಣೆಯ ಒಂದು ಭಾಗದಲ್ಲಿ ನಿಂತೋ (ಕಾಡ್ಮನೆಯಲ್ಲಿ ಕುರ್ಚಿ ಮೇಜುಗಳಿಲ್ಲ!) ನೆಲದಲ್ಲೇ ಕುಳಿತೋ ಕಲಾಪ ನಡೆಸುತ್ತಿದ್ದರೆ ಇತರರು ಹೆಚ್ಚಿನವರು ಕೋಣೆಯೊಳಗೇ ಹರಡಿಕೊಂಡು ಕುಳಿತು ಅನುಭವಿಸುತ್ತಿದ್ದರು. ಮುಂಚೂಣಿಯಲ್ಲಿ (ಗೋಡೆಯಾಧಾರವೂ ಇಲ್ಲದೆ ನೆಟ್ಟಗೆ) ಕುಳಿತು ಎಲ್ಲ ತಿಳಿಯುವ ಮತ್ತು ಅಗತ್ಯ ಬಿದ್ದರೆ ಮಾತ್ರ ಸಮನ್ವಯಿಸುವ ಕೆಲಸವನ್ನು ಜಿಟಿನಾ ತುಂಬು ಉತ್ಸಾಹದಿಂದ ನಡೆಸುತ್ತಿದ್ದರು. ಅಡಿಗೆ ಮನೆಯಲ್ಲಿ ಕೆಲಸಗಳನ್ನು ನಡೆಸುತ್ತಿದ್ದೂ ಆಗೀಗ ಒಳಹೊರಗೆ ಹೋಗುವ ಅನಿವಾರ್ಯತೆಯಲ್ಲಿ ಕಲಾಪಗಳಿಗೆ ಕಣ್ಣು ಕಿವಿಯಾಗಿದ್ದರು ನನ್ನಮ್ಮ, ಮಡದಿ ಮತ್ತು ಅಡುಗೆಯವ. ಮತ್ತೂ ಹೆಚ್ಚಾದ ಕುತೂಹಲಿಗಳು ವಿಸ್ತಾರ ಕಿಟಕಿಗಳ ಹೊರಗೆ ನಿಂತು ಪಾಲುಗೊಳ್ಳುತ್ತಿದ್ದದ್ದು ತುಂಬಾ ಅಪ್ಯಾಯಮಾನವಾಗಿರುತ್ತಿತ್ತು. ಮಳೆಯ ನಿರಂತರ ಚಡಪಡಿಕೆ ಮತ್ತು ಕಲಾಪದ ವಠಾರ ತುಂಬಾ ಅಳ್ಳಕವಾದ್ದರಿಂದ (ಬಹುತೇಕ ಔಪಚಾರಿಕ ಕಮ್ಮಟ, ಗೋಷ್ಠಿಗಳ ಭವನಗಳ ಆಚೆ ನಡೆಯುವಂತೆ) ಇವುಗಳಿಗೆ ನಾವು ಅತೀತರು ಎನ್ನುವ ಮೆರೆತದ ಮಂದಿ, ಸೋಮಾರಿ ಕಟ್ಟೆಯ ಮಾತುಗಳು ನಡೆಯಲೇ ಇಲ್ಲ! ನಿಗದಿತ ಸ್ಪಷ್ಟ ಊಟ ತಿಂಡಿಯ ಅವಧಿ ಕಾಯದೇ ಅಯಾಚಿತವಾಗಿ ಬಂದ ಕೆಲವು ಎಡೆ ತಿನಿಸು, ಪಾನಕಗಳೂ ಹರಿದಾಡುತ್ತಲೇ ಇದ್ದುದರಿಂದ ಯಾರಲ್ಲೂ ಔಪಚಾರಿಕ ಬಿಗಿತವಾಗಲೀ ಏಕತಾನತೆಯ ಹಿಂಸೆಯಾಗಲೀ ಪಡಿಮೂಡಲಿಲ್ಲ. ಸಂಘಟಕರಾಗಿ ನಮಗೆ career building ಚಪಲಗಳೇನೂ ಇಲ್ಲದ್ದರಿಂದ ಅಧಿಕೃತವಾಗಿ ಕಲಾಪಗಳ ಟಿಪ್ಪಣಿಯನ್ನಾಗಲೀ ಪ್ರತ್ಯೇಕ ದಾಖಲೀಕರಣದ ವ್ಯವಸ್ಥೆಯನ್ನಾಗಲೀ ಮಾಡಲೇ ಇಲ್ಲ (ಒಂದೇ ಒಂದು ಫೊಟೋವೂ ಇಲ್ಲ!). ಹಾಗಾಗಿ ಮುಂದಿನ ವಿವರಣೆಗಳಲ್ಲಿ ತಪ್ಪುಗಳು, ಕೊರತೆಗಳು ಕಾಣಿಸಿದರೆ ನನ್ನನ್ನು ಪೂರ್ಣ ಜವಾಬ್ದಾರನನ್ನಾಗಿಸಿ, ಸರಿಯನ್ನು ಪೂರಕವಾದ್ದನ್ನು ನೀವು ತುಂಬಿಕೊಡಬೇಕಾಗಿ ಮನವಿಯನ್ನೂ ಇಲ್ಲೇ ಮಾಡಿಬಿಡುತ್ತೇನೆ.

ಮೊದಲ ದಿನದ ನಾಲ್ಕು ಗೋಡೆಗಳ ನಡುವಣ ಮೊದಲ ಕಲಾಪ ಜಿ.ಎನ್. ಮೋಹನ್ ಮತ್ತು ಸತ್ಯ ದಂಪತಿಯದ್ದಿತ್ತು. ಮೋಹನ್ ಆಗ ಇ-ಟೀವಿಯ ಮಂಗಳೂರು ಮುಖ್ಯಸ್ಥ. ಘಟ್ಟದ ಮೇಲಿನೂರಿನ ಮೋಹನ್ ಮೊದಲು ಮಂಗಳೂರು ನೋಡಿದ್ದು ಪ್ರಜಾವಾಣಿಯ ಮಂಗಳೂರು ಪ್ರತಿನಿಧಿಯಾಗಿ. ಅವರಿಗೆ ಪತ್ರಿಕೋದ್ಯಮ ಬರಿಯ ಹೊಟ್ಟೆಪಾಡಿನದಾಗಿರಲಿಲ್ಲ. ಸಹಜವಾಗಿ ಅವರ ಅಭಿವ್ಯಕ್ತಿ ಸಂಯೋಜನೆಯಲ್ಲಿ ಅನುಭವಗಳು ಕವನವಾದ್ದುಂಟು, ಪ್ರವಾಸ ಕಥನವಾಗಿ ಕ್ರಾಂತಿಮುಖ ತೋರಿದ್ದುಂಟು, ಸಂಘಟನೆ ಸಂಪಾದಕತ್ವಗಳಿಗೂ ಒಲಿದದ್ದುಂಟು. ಇವುಗಳ ಸಂಯುಕ್ತ ಹೊಯ್ಲಿನಲ್ಲಿ ಅವರು ಮುದ್ರಣ ಮಾಧ್ಯಮ ಕಳಚಿಕೊಂಡು ವಿದ್ಯುನ್ಮಾನ ಮಾಧ್ಯಮಕ್ಕೆ ಸರಳವಾಗಿ ಹೇಳುವುದಾದರೆ ದೃಶ್ಯ ಮಾಧ್ಯಮಕ್ಕೆ ಇ-ಟೀವಿ ಮೂಲಕ ಪ್ರವೇಶಿಸಿದರು. ಅದರಲ್ಲವರ ಪ್ರಥಮ ಕಾರ್ಯಕ್ಷೇತ್ರವೂ ಮಂಗಳೂರೇ ಆಗಿದ್ದದ್ದು ನಮ್ಮ ಶಿಬಿರಕ್ಕೆ ಅನುಕೂಲವಾಯ್ತು. (ಮೋಹನ್ ಮುಂದೆ ಇ-ಟೀವಿಯಲ್ಲೇ ರಾಮೋಜಿ ನಗರದವರೆಗೂ ಏರಿದರು. ಮತ್ತೆ ಅದನ್ನೂ ಕಳಚಿಕೊಂಡು, ಇಂದು ಬೆಂಗಳೂರಿನಲ್ಲಿ ಸ್ವಂತದ ಮೇಫ್ಲವರ್ ಮೀಡಿಯಾ ಹೌಸ್ ಕಟ್ಟಿ, ಬಹುಮಾಧ್ಯಮ ಕಾರ್ಯಗಳನ್ನು ನಡೆಸುವುದರೊಡನೆ ಅಂತರ್ಜಾಲದಲ್ಲಿ ಅವಧಿ ಹೆಸರಿನಲ್ಲಿ ಇ-ಪತ್ರಿಕೆ ನಡೆಸುತ್ತಿರುವುದು ಜಾಲಿಗರಿಗೆಲ್ಲಾ ತಿಳಿದೇ ಇದೆ ಎಂದು ಭಾವಿಸುತ್ತೇನೆ.) ಮೋಹನ್ ಒಂದು ಗಂಟೆಯ ಅವಧಿಯಲ್ಲಿ ಒಟ್ಟಾರೆ ದೃಶ್ಯ ಮಾಧ್ಯಮದ ಪರಿಚಯ ಮತ್ತು ಸಾಧ್ಯತೆಗಳ ಕುರಿತು ತನ್ನನುಭವವನ್ನು ಶಿಬಿರಾರ್ಥಿಗಳಲ್ಲಿ ಹಂಚಿಕೊಂಡರು.

ಮೋಹನ್ ಹೆಂಡತಿ – ಸತ್ಯ, ಉದ್ದಕ್ಕೂ ಮೋಹನ್ ಅನುಸಾರಿಯೇ ಆದರೂ ಸ್ವತಂತ್ರೆ. ಅಂದು ಇಂಡಿಯನ್ ಎಕ್ಸ್‌ಪ್ರೆಸ್ಸಿನ ಅಂಶಕಾಲಿಕ ವರದಿಗಾರ್ತಿಯಾಗಿದ್ದರು ಎಂದು ನನ್ನ ನೆನಪು. (ಈಚೆಗೆ ಮಹಿಳಾ ಸಂಘಟನೆಗಳಲ್ಲಿ ತೀವ್ರವಾಗಿ ತೊಡಗಿಕೊಂಡಿದ್ದಾರೆ) ಮುಂದಿನ ಒಂದು ತಾಸು, ಸತ್ಯ ಮುದ್ರಣ ಮಾಧ್ಯಮದ ಕುರಿತು ಶಿಬಿರಾರ್ಥಿಗಳ ಕುತೂಹಲ ತಣಿಸಿದರು.

ಊಟದ ಬಿಡುವು ಲೆಕ್ಕಕ್ಕೆ ಒಂದರಿಂದ ಎರಡೂವರೆ ಗಂಟೆಯವರೆಗೆ ಎಂದು ನಾವು ಅಂದಾಜಿಸಿದ್ದರೂ ನಮ್ಮೆಲ್ಲ ಕಲಾಪಗಳು ಊಟ, ತಿಂಡಿಗಳೊಡನೆಯೂ ಮುಂದುವರಿಯುತ್ತಿದ್ದದ್ದು ಅರ್ಥಪೂರ್ಣವಾಗಿತ್ತು. ಹಾಗೇ ಅಂದು ಅಪರಾಹ್ನದ ಕಲಾಪಕರ್ತರಾದ ಎನ್.ಟಿ. ಭಟ್ ಮತ್ತು ಎ.ಪಿ. ಗೌರೀಶಂಕರ್ ನನ್ನ ಬೇಡಿಕೆ ಮನ್ನಿಸಿ ನಮ್ಮೊಡನೆ ಊಟಕ್ಕೇ ಸೇರಿಕೊಂಡದ್ದರಿಂದ ಮುಂದಿನ ‘ಅಧ್ಯಾಯಕ್ಕೆ’ ಮನೋಭೂಮಿಕೆ ಸಜ್ಜುಗೊಳಿಸುವ ಅವಶ್ಯಕತೆಯೂ ಬರಲಿಲ್ಲ.

ಪ್ರೊ| ಎನ್. ತಿರುಮಲೇಶ್ವರ ಭಟ್ಟರು ಉಡುಪಿಯ ಮಹಾತ್ಮಗಾಂಧಿ ಮೆಮೊರಿಯಲ್ ಕಾಲೇಜಿನ ನಿವೃತ್ತ ಇಂಗ್ಲಿಷ್ ಪ್ರಾಧ್ಯಾಪಕ (ಅಂಶಕಾಲಿಕ ಜರ್ಮನ್ ಭಾಷಾ ಅಧ್ಯಾಪಕ ಕೂಡಾ). ಜೊತೆಗೆ ಕಾಲೇಜಿನ ಆಶ್ರಯದಲ್ಲೇ ನೂರೊಂದು ಪಠ್ಯೇತರ ಕಲಾಪಗಳ ಕೇಂದ್ರವಾದ ರಾಷ್ಟ್ರಕವಿ ಗೋವಿಂದ ಪೈ ಕೇಂದ್ರದ ಅಂಗ ಸಂಸ್ಥೆಯೇ ಆದ ‘ಪ್ರಾದೇಶಿಕ ರಂಗ ಕಲೆಗಳ ಕೇಂದ್ರ’ದ ನಿರ್ದೇಶಕ. ಕುಶಿ ಹರಿದಾಸ ಭಟ್ಟರ ಗರಡಿಯಲ್ಲಿ ರೂಪುಗೊಂಡ ಯಾವುದೇ ವ್ಯಕ್ತಿ ಯಾವುದೇ ಹುದ್ದೆಯನ್ನು ಕೇವಲ ಅಲಂಕಾರಕ್ಕೆ ವಹಿಸಿಕೊಳ್ಳುವ ಕ್ರಮವೇ ಇಲ್ಲವೆಂಬಂತೆ ಎನ್.ಟಿ ಭಟ್ಟರು ಮಾಡದ ಕೆಲಸಗಳಿಲ್ಲ. ಅವರು ಈ ವಲಯದ ಜನಪದ ಆಚರಣೆಗಳಲ್ಲಿ ದಾಖಲಿಸಿಕೊಂಡಿದ್ದ ಕೆಲವು ಪಾಡ್ದನಗಳ ಟೇಪುಗಳನ್ನೂ ಪ್ಲೇಯರ್ ಜೊತೆಯಲ್ಲಿ ಹೊತ್ತು ತಂದು ಶಿಬಿರಾರ್ಥಿಗಳ ಒಂದು ಗಂಟೆಯನ್ನು ವಿವರಣೆ ಸಹಿತ ರಸಮಯ ಮಾಡಿದರು.

ಕಾನೂನು ಹೇಳುತ್ತದೆ – ನಿಯಮಗಳ ಅಜ್ಞಾನಕ್ಕೆ ಕ್ಷಮೆಯಿಲ್ಲ. ಎ.ಪಿ. ಗೌರೀಶಂಕರ್ ಮಂಗಳೂರಿನಲ್ಲೇ ವೃತ್ತಿನಿರತರಾದ ಹಿರಿಯ ವಕೀಲ, ನನಗೆ ಸಂಬಂಧದಲ್ಲಿ (ಮೂರನೇ) ಸೋದರ ಮಾವ ಮತ್ತು ಮಂಗಳೂರಿನ ನೆರೆಮನೆಯ ನೆಂಟ. ಇವರ ಸಾಹಿತ್ಯ ಮತ್ತು ಸಾಮಾಜಿಕ ಕಾಳಜಿಯ ವಿಸ್ತೃತ ಓದು ಹಾಗೂ ಚಿಂತನೆ ಇವರನ್ನು ಕಕ್ಷಿದಾರ ಮತ್ತು ನ್ಯಾಯಾಲಯ ಕಕ್ಷೆಯಿಂದ ಹೊರಗೂ (ಆರ್ಥಿಕ ಲಾಭವಿಲ್ಲದ) ಹಲವು ಚಟುವಟಿಕೆಗಳಲ್ಲಿ ತೊಡಗಿಸುತ್ತವೆ. (ಭರ್ಜರಿ ರುಸುಮಿನ ಖಟ್ಲೆಯಾಗಬಹುದಾದ ಎಷ್ಟೋ ವ್ಯಾಜ್ಯಗಳನ್ನು ರಾಜೀ ಮಾಡಿ ಇವರು ಖಾಲೀ ಕಿಸೆಯಲ್ಲಿ ಉಳಿದದ್ದು ನಮಗೆಷ್ಟೋ ಸಲ ಪರೋಕ್ಷಮಾರ್ಗಗಳಲ್ಲಿ ತಿಳಿಯುತ್ತಿತ್ತು! ದೊಡ್ಡ ನೋಟು ಕಿತ್ತುಕೊಂಡು ಒಣಡಂಭದಲ್ಲಿ ದಿನನೂಕುವ ಮಂದೆಯಲ್ಲಿ, ಶ್ರದ್ಧೆಯಿಂದ ಕೆಲಸ ಮಾಡಿಯೂ ಕೆಲವೊಮ್ಮೆ ಬಡ ಕಕ್ಷಿದಾರ ಮನೆಯಿಂದ ಹೊತ್ತು ತಂದು ಭಕ್ತಿಯಿಂದ ಕೊಟ್ಟ ತರಕಾರಿಯನ್ನಷ್ಟೇ ಒಪ್ಪಿಸಿಕೊಂಡು ತೃಪ್ತರಾಗುಳಿದದ್ದಿದೆ ಈ ವಕೀಲರು!) ಇವರ ಅಸಂಖ್ಯ ಪತ್ರಿಕಾ ಲೇಖನಗಳು (ಈಚೆಗೆ ಮೂಲಗೇಣಿ ರದ್ಧತಿ ಬಗ್ಗೆ ಎಲ್ಲಂದರಲ್ಲಿ – ಬೆಂಗಳೂರಿನಿಂದ ದಿಲ್ಲಿವರೆಗೆ, ಓಡಾಡಿ ನಡೆಸಿಕೊಡುತ್ತಿರುವ ಭೈಠಕ್ಕುಗಳೂ) ನಿಸ್ವಾರ್ಥ ಸೇವೆಯ ಸಣ್ಣ ಮುಖಗಳು. ಸಾಮಾಜಿಕ ಚಟುವಟಿಕೆಗಳಲ್ಲಿ ನಾವು ತಿಳಿದುಕೊಳ್ಳಲೇ ಬೇಕಾದ ಹಲವು ಕಾನೂನಿನ ಅಂಶಗಳ ಮೇಲೆ ಇವರು ನಮ್ಮ ಶಿಬಿರದಲ್ಲಿ ಚೆಲ್ಲಿದ ಬೆಳಕು ಕೇವಲ ಪ್ರಾಮಾಣಿಕ ಭಾವಾವೇಶದಿಂದ ನುಗ್ಗುವ ಮನಸ್ಸುಗಳಿಗೆ (ಹುಡುಗ ಪ್ರಾಯ ಅಂತದ್ದಲ್ಲವೇ!) ಒಳ್ಳೆಯ ಕಡಿವಾಣ ತೊಡಿಸಿತೆಂದೇ ಹೇಳಬೇಕು.

ಚಾ ವಿರಾಮದ ಬೆನ್ನಿಗೆ ನಮ್ಮೊಡನೆ ಪಟ್ಟಾಂಗಕ್ಕೆ ಕುಳಿತವರು ಮಣಿಪಾಲದಿಂದ ಬಂದ ಔಷಧ ಶಾಸ್ತ್ರದ ಪ್ರೊಫೆಸರ್. ಆದರೆ ಇವರು ಶಿಬಿರಾರ್ಥಿಗಳಿಗೆ ಕೊಟ್ಟ ಜೀವಪುಷ್ಠಿ ರಸಾಯನದಲ್ಲಿ ಜಾಗೃತ ನಾಗರಿಕನ ಹಕ್ಕು ಬಾಧ್ಯತೆಗಳ ಪೂರ್ಣ ಎಚ್ಚರ ಮೂಲಧಾತು. ಜೊತೆಗೆ ಪ್ರತಿಕ್ಷಣವೂ ರುಚಿ ಹೆಚ್ಚಿಸುವ ಪ್ರತ್ಯಕ್ಷ ಸ್ವಂತ ಹೋರಾಟದ ನೂರಾರು ಆಖ್ಯಾಯಿಕೆಗಳು. ಪ್ರಜಾಸತ್ತೆಯಲ್ಲಿ ಪ್ರತಿನಿಧಿಗಳು ಮತ್ತು ನೌಕರಶಾಹೀ ‘ಒಡೆಯರಲ್ಲ, ಸೇವಕರು’ ಎನ್ನುವುದನ್ನು ಅಸಂಖ್ಯ ಪತ್ರಿಕಾ ಬರಹಗಳಲ್ಲಿ (ಈಗ ಕೆಲವು ಪುಸ್ತಕಗಳ ರೂಪದಲ್ಲೂ ಲಭ್ಯ) ಸಾರ್ವಜನಿಕರರಿವಿಗೆ ಮತ್ತೆ ನೌಕರಶಾಹಿಯ ಕಾರ್ಯಶೈಲಿಗೆ ರೂಢಿಸಿದವರು ಇವರು. ಯಾವುದೇ ಧರಣಿ, ಘೆರಾವೋ, ದೊಂಬಿಗಳ ಆರ್ಭಟವಿಲ್ಲದೆ ತಣ್ಣಗೆ ಪತ್ರಗಳನ್ನಷ್ಟೇ ಬರೆದು ಸಾರ್ವಜನಿಕ ಸಮಸ್ಯೆಗಳನ್ನು ಇನ್ನಿಲ್ಲದ ಲೆಕ್ಕದಲ್ಲಿ ಪರಿಹರಿಸಿದ ಆ ವ್ಯಕ್ತಿ ರವೀಂದ್ರನಾಥ ಶ್ಯಾನುಭಾಗ. ನಿರ್ಮಲ, ನಿರರ್ಗಳ ಮಾತುಗಾರಿಕೆಯೂ ಸಿದ್ಧಿಸಿರುವ ಶ್ಯಾನುಭಾಗರ ಒಂದೊಂದು ಆಖ್ಯಾಯಿಕೆಯೂ ರೋಮಾಂಚಕ ಪತ್ತೇದಾರಿ ಕಥನಗಳಂತೆಯೇ ರಂಜಿಸಿದವು. ಇವರ ಕಲಾಪ ನಿಗದಿತ ಅವಧಿಯ ಕಟ್ಟು ಹರಿದುಕೊಂಡು ನಮ್ಮ ರಾತ್ರಿಯ ಊಟದವರೆಗೂ ವಿಸ್ತರಿಸಿದ್ದು ಆಶ್ಚರ್ಯವಲ್ಲ. ಮತ್ತೂ ಯಾಕೆ ಮುಂದುವರಿಯಬಾರದು ಎನ್ನುವುದೇ ಎಲ್ಲರ ಆಶಯವಾಗಿಬಿಟ್ಟಿತ್ತು! (ಬಳಕೆದಾರ ಜಾಗೃತಿಯನ್ನು ಈ ವಲಯದಲ್ಲಿ ಅಸಾಮಾನ್ಯ ಎತ್ತರಕ್ಕೆ ಮುಟ್ಟಿಸಿ, ಪರೋಕ್ಷ ನಿವೃತ್ತಿಯ ನೆಪದಲ್ಲಿ ಶ್ಯಾನುಭಾಗ್ ಮಣಿಪಾಲ ಬಿಟ್ಟು ನೇಪಾಳದ ದೂರಕ್ಕೆ ಹೋಗಿದ್ದರು. ಆದರೆ ಒಳಗಿನ ತುಡಿತಕ್ಕೆ ಸ್ಪಂದಿಸಿ ಈಗ ಊರಿಗೆ ಮರಳಿ, ಎಂಡೋಸಲ್ಫಾನ್ ವಿರುದ್ಧದ ಹೋರಾಟದಲ್ಲಿ ಪೂರ್ಣ ಮಗ್ನರಾಗಿದ್ದಾರೆ ಈ ಔಷಧ ಶಾಸ್ತ್ರಿ. ಹೆಚ್ಚಿನ ವಿವರಗಳಿಗೆ ಇಲ್ಲೇ ಪಕ್ಕಕ್ಕೆ ಕೊಟ್ಟಿರುವ ‘Sundara ವಸುಂಧರ’ ಬ್ಲಾಗ್ ಸೇತು ಬಳಸಿ)

ದಿನದ ಉದ್ದಕ್ಕೂ ಅತಿಥಿಗಳೆಲ್ಲಾ ಬಂದಷ್ಟೇ ಸಹಜವಾಗಿ, ಸರಳವಾಗಿ ಆದರೆ ನಮ್ಮ ಅಕ್ಷಯ ಸಂತೋಷದಲ್ಲಿ ಒಂದಷ್ಟನ್ನು ಮೊಗೆದುಕೊಂಡೇ ಮರಳಿದರು. ತೆರೆ, ಅಂಕಗಳ ಪ್ರತ್ಯೇಕತೆಯನ್ನು ನಿರಾಕರಿಸುವ, ಬೆಳಕಿನ ಏರುಪೇರುಗಳಲ್ಲಷ್ಟೇ ಮುಂದುವರಿಯುವ ಆಧುನಿಕ ರಂಗಪ್ರಯೋಗಗಳಂತೆ ಲಾಂದ್ರದ ತಂಪು ಬೆಳಕಿನಲ್ಲಿ ಕಾಡ್ಮನೆಯ ಎದುರಿನ ಕೋಣೆ ಹತ್ತೂವರೆ ಗಂಟೆಯ ಸುಮಾರಿಗೆ ಕೊನೆಯ ದೀರ್ಘ ದೆಖಾವೆಗೆ ಸಜ್ಜಾಯಿತು; ಶಯನೋತ್ಸವ. ಶಿಬಿರದ ಪಾಲ್ಗಾರಿಕೆಯನ್ನು ಹಗಲೆಲ್ಲಾ ಪಡೆದ ಮಳೆರಾಯರೂ ಅದೇ ಉತ್ಸಾಹದಲ್ಲಿ ನಮ್ಮೊಡನೆ ರಾತ್ರಿಯೂ ಮುಂದುವರಿದರು!

ಸೋಮವಾರ ಬೆಳಿಗ್ಗೆ ಮಳೆ ಸ್ವಲ್ಪ ವಿರಾಮ ಕೊಟ್ಟಂತಿತ್ತು. ಆದರೆ ಬಾವಿ ನೀರು ತರಲು ಹೊರಟವರಿಗೆ ಅಶ್ಚರ್ಯ ಕಾದಿತ್ತು – ಬಾವಿ ಮುಳುಗಿತ್ತು! ಮಳೆನೀರ ಧಾರಾಳದಲ್ಲಿ ಹಿಂದಿನ ದಿನವೇ ಬಾವಿಗೆ ಹೋದವರು “ಹಗ್ಗ ಬೇಡಾ ಸಾರ್! ನಲವತ್ತಡಿ ಆಳವೂ ನೀರು ತುಂಬಿದೆ” ಎಂದಿದ್ದರು. ಮೊದಲೇ ಹೇಳಿದಂತೆ ‘ಮೃಗಜಲ’ – ಅಭಯಾರಣ್ಯದ ಬಾವಿ, ಹಾಳುಬಿದ್ದ ಕಲ್ಪಣೆಯೊಳಗಿತ್ತು. ಬೆಳಿಗ್ಗೆ ಬಾವಿಯೇನು ಕಲ್ಪಣೆಯೂ ತುಂಬಿ, ಕಟ್ಟೆಯಂಚಿಗೆ ಹೋಗಬೇಕಾದರೂ ಮೂರಡಿ ನೀರಿನಲ್ಲಿ ನಡೆಯಬೇಕಾಗುತ್ತಿತ್ತು.

ಇಷ್ಟಾದರೂ ಚಾಲನ ಚಾ (ಹಾಸಿಗೆ ಚಾ ಅಲ್ಲ) ಸಮಯಕ್ಕೆ ಸರಿಯಾಗಿ ದೂರದ ಮೂಡಬಿದ್ರೆಯಿಂದ ಗೆಳೆಯ, ವೈದ್ಯ (ಎಲ್ಲೆಲ್ಲೂ ನೀರೇ ಇದ್ದಾಗ ಒಂದಾಲದ ಎಲೆಯ ಮೇಲೊಂದು ಶಿಶು ತೇಲಿಬಂದಂತೆ) ಕೃಷ್ಣಮೋಹನ್ (ನಮ್ಮ ಪ್ರಿಯ ಭಾಷೆಯಲ್ಲಿ ‘ಕೃಶಿ’) ಮುಂದಿನ ತನ್ನ ಕಾರ್ಯಕ್ಕೆ ಸಜ್ಜಾಗಿ ಹಾಜರಾಗಿದ್ದರು. ಶಸ್ತ್ರ ವೈದ್ಯ, ವೈದ್ಯಪತ್ನಿ ಸಹಿತ ಸ್ವಂತ ಆಸ್ಪತ್ರೆ ನಿರ್ವಾಹಕ ಎನ್ನುವುದು ಇವರ ವೃತ್ತಿಮುಖ. ಹವ್ಯಾಸಿ ಮುಖದಲ್ಲಿ, ನಾನು ವಾರ ಕಾಲ ನಾಗರಹೊಳೆಯಲ್ಲಿ ‘ಹುಲಿ ಗಣತಿ’ಯಲ್ಲಿ ಭಾಗಿಯಾಗಿ ಪ್ರಥಮ ಬಾರಿಗೆ ವನ್ಯ ಚಟುವಟಿಕೆಗೆ ಅಧಿಕೃತ ಪ್ರವೇಶಪಡೆದಾಗ, ಅಂತಾರಾಷ್ಟ್ರೀಯ ಹುಲಿ ಬಿಕ್ಕಟ್ಟಿನ ವೇಳೆ ನಮ್ಮ ಜಿಲ್ಲೆಯ ನಾಗರಿಕ ವಲಯಗಳಲ್ಲಿ ಪ್ರಚಾರಸತ್ರ ನಡೆಸಿದಾಗ, ಕೊನೆಗೆ ಬಿಸಿಲೆ ಘಾಟಿಯಲ್ಲಿ ಸಂರಕ್ಷಣೆಗಾಗಿ ವನ ಖರೀದಿಸಿದಾಗ ನನಗೆ ಸಿಕ್ಕ ಏಕೈಕ ಪಾಲುದಾರ ಇದೇ ಕೃಶಿ. ಇವರ ಬಹುಮುಖೀ ಆಸಕ್ತಿಗಳ ಬಗ್ಗೆ ನಾನು ಹೀಗೇ ವಾಕ್ಯ ಹೊಸೆಯುವುದಕ್ಕಿಂತ ನೀವೇ ಅನುಭವಿಸಿ www.drkrishi.com

ಶಿಬಿರದ ಎರಡನೇ ದಿನದ ಮೊದಲ ಕಲಾಪ ಕೃಶಿ ನೇತೃತ್ವದಲ್ಲಿ ಪಕ್ಷಿವೀಕ್ಷಣೆ. ನಿಮಗೆಲ್ಲ ತಿಳಿದಿರುವಂತೆ ಎಡೆಂಬಳೆ ಕೃಷಿಕ್ಷೇತ್ರದ ಸುಮಾರು ಐವತ್ತು ಎಕ್ರೆ ಹರಹಿನ ಒಂದು ಮೂಲೆಯ ಕೇವಲ ಒಂದು ಎಕ್ರೆ ಮಾತ್ರ ಅಭಯಾರಣ್ಯ. ಆದರೆ ನಮ್ಮೆಲ್ಲಾ ಕಲಾಪಗಳಿಗೆ ಯಾವತ್ತೂ ಮುಕ್ತವಾಗಿ ಎಡೆಂಬಳೆಯೂ ಒದಗುತ್ತಿತ್ತು. ಅಲ್ಲಿ ತೋಟ ಸಣ್ಣದು. ಗುಡ್ಡೆ, ರಬ್ಬರ್ ತೋಟ, ಬಿದಿರ ಬನ, ಗೇರುತೋಟ ಮತ್ತು ಕುರುಚಲು ಕಾಡು ಮುಖ್ಯವಾದದ್ದು. ಕೃಶಿ ಮೊದಲಲ್ಲಿ ಎಲ್ಲರನ್ನೂ ಕಾಡ್ಮನೆಯ ಅಂಗಳದಲ್ಲೇ ನಿಲ್ಲಿಸಿ, ಸಣ್ಣದಾಗಿ ‘ಮಾಡು, ಮಾಡದಿರು’ ಪಾಠ ಮಾಡಿದರು. ಅನಂತರ ಒಂದೂವರೆ ಗಂಟೆ ಎಡೆಂಬಳೆಯ ತೋಟ, ಗುಡ್ಡೆ ಸುತ್ತಿಸಿ ಕೆಲವು ಪಕ್ಷಿಗಳನ್ನು ತೋರಿಸಿ, (ಮೋಡ ಮತ್ತು ಮಳೆಯ ವಾತಾವರಣವಿದ್ದುದರಿಂದ) ಕೆಲವನ್ನೇ ಕೇಳಿಸಿ, ಹಲವನ್ನು ಮಾತಿನಲ್ಲೇ ಪರಿಚಯಿಸಿ, ಕೊನೆಯದಾಗಿ ಕೊನೆಯಿಲ್ಲದ ಸಂಶಯಗಳಿಗೆ ಸಮರ್ಪಕ ಉತ್ತರಗಳನ್ನು ಕೊಟ್ಟರು.

ಪೈಪ್‌ನ ಹಳೆಯ ಬೂದಿ (ಮಾಯೆ?) ಕೊಡಹಿ, ಹೊಸ ತಂಬಾಕು (ಮಾನವೀಯ ಮೌಲ್ಯ?) ತುಂಬಿ, ನಸುಹೊಗೆಯಲ್ಲೂ ಸಮಚಿತ್ತದಿಂದ ಮಿಲಿಟರಿ ನ್ಯಾಯ ತೀರ್ಮಾನಿಸಿದ (ನಾಟಕ ‘ಕೋರ್ಟ್ ಮಾರ್ಶಲ್,’ ನಿ: ಸದಾನಂದ ಸುವರ್ಣ) ಕರ್ನಲ್ – ಚಂದ್ರಹಾಸ ಉಳ್ಳಾಲ. (ಇಂದು ಇವರು ಮೂಲವೃತ್ತಿರಂಗವನ್ನು ಬಿಡದೇ ಅಸಂಖ್ಯ ನಾಟಕಗಳು ಸಾಲದೆಂಬಂತೆ ಟೀವಿವಾಹಿನಿಗಳಲ್ಲೂ ಸಿನಿಮಾಗಳಲ್ಲೂ ವ್ಯಾಪಿಸಿಕೊಂಡಿದ್ದಾರೆ. ಗಿರೀಶ್ ಕಾಸರವಳ್ಳಿಯವರ ‘ಹಸೀನಾ’ದಲ್ಲಿ ಇವರೇ ಕಥಾನಾಯಕ. ಸದ್ಯ ಬಿಡುಗಡೆಯಾಗಲಿರುವ ಅಭಯನ ‘ಶಿಕಾರಿ’ಯಲ್ಲೂ ಇವರು ಕಾಣಿಸಿಕೊಳ್ಳಲಿದ್ದಾರೆ) ನಮ್ಮ ಶಿಬಿರದ ಎರಡನೇ ದಿನದ ಉಪಾಹಾರದನಂತರದ ಮೊದಲ ಅವಧಿಯಲ್ಲಿ ಇವರ ನಟನೆಯ ಪಾಠ ಸುರುವಾದದ್ದೂ ಅದೇ ಕರ್ನಲ್ ಗತ್ತಿನಲ್ಲಿ. ವೃತ್ತಿಯಲ್ಲಿ ಬಿಎಸೆನ್ನೆಲ್ ಅಧಿಕಾರಿಯಾದರೂ ಬಾಲ್ಯದ ಆರ್ಥಿಕ ಸಂಕಷ್ಟಗಳ ನಡುವೆಯೂ ಅರಳಿದ ಇವರ ಅಭಿನಯ ಕಲೆ ನಾಟಕ ಸಿನಿಮಾಗಳಿಗೆ ವ್ಯಾಪಿಸಿದ್ದರೂ ಸ್ಟಾರ‍್ಡಂ ಗೊಂದಲವಿಲ್ಲದೆ ನಮ್ಮ ಶಿಬಿರಾರ್ಥಿಗಳ ಮನದುಂಬಿತು.

‘ಕಾವ್ಯ ಎಂದರೇನು’ ಸಂಭಾಷಣೆ ಸುರು ಮಾಡಿದವರು ಕಾಡ್ಮನೆಯ ನೆಲದಲ್ಲಿ ಚಕ್ಕಳಬಕ್ಕಳ ಹಾಕಿ ಕುಳಿತ ಪ್ರೊ| ಬಿ.ಎ ವಿವೇಕ ರೈ. ಪುಸ್ತಕ ವ್ಯಾಪಾರಿಯಾಗಿ ನಾನು ಮಂಗಳೂರಿನಲ್ಲಿ ತೊಡಗಿದಂದೇ ಪೂರ್ವಪರಿಚಯವಿಲ್ಲದ ನನ್ನನ್ನು ವೈಯಕ್ತಿಕ ಗೆಳೆಯನಂತೆ ಆದರಿಸಿದ್ದರು (ಮನೆಗೆ ಕರೆದು ಸ್ನೇಹಭೋಜನವೂ ಕೊಟ್ಟಿದ್ದರು!). ನಮ್ಮ ಶಿಬಿರಕಾಲದಲ್ಲಿ ವಿವೇಕರೈ ಮಂಗಳೂರು ವಿವಿನಿಲಯದ ಕನ್ನಡ ವಿಭಾಗ ಮುಖ್ಯಸ್ಥರಾಗಿದ್ದರೂ, ಅಸಂಖ್ಯ ಲೇಖನ, ಪುಸ್ತಕ, ವಿದ್ವದ್ಗೋಷ್ಠಿಗಳನ್ನು ರಾಷ್ಟ್ರ-ಅಂತಾರಾಷ್ಟ್ರ ಮಟ್ಟಗಳಲ್ಲೂ ನಡೆಸಿದವರಾಗಿದ್ದರೂ (ಅನಂತರದ ದಿನಗಳಲ್ಲಿ ಎರಡೆರಡು ವಿವಿನಿಲಯಗಳ ಕುಲಪತಿಗಳಾಗಿ, ಸದ್ಯ ಜರ್ಮನಿಯಲ್ಲಿ ‘ಕನ್ನಡಕ್ಕೆ ಯಾರೆಂದು ಕೇಳಿದ್ದೀರಿ’ ಎಂದು ಸಂದರ್ಶಕ ಪ್ರಾಧ್ಯಾಪಕರಾಗಿರುವ) ತೀರಾ ಪ್ರಾಥಮಿಕ ಮಟ್ಟದ ಕಲಾಪವನ್ನು ಚೂರೂ ಉಪೇಕ್ಷಿಸದೆ ಆದರೆ ಒಂಟಿ ಎತ್ತಿನ ಗಾಡಿಯನ್ನು ಸಲಗ ಎಳೆದಷ್ಟು ಹಗುರಕ್ಕೆ ಆದರೆ ಶಕ್ತವಾಗಿ ನಿರ್ವಹಿಸಿದರು.

“ಸಂಶೋಧನಾ ಪದವಿಯನ್ನೂ ಗಳಿಸಿರುವ ನೀವು ಹೆಸರಿನ ಮುಂದೆ ‘ಡಾ| . . .’ ಬಳಸುವುದಿಲ್ಲ, ಯಾಕೆ?” ನಾನು ಹೀಗೊಮ್ಮೆ ಅಧಿಕಪ್ರಸಂಗದ ಪ್ರಶ್ನೆ ಕೇಳಿದ್ದೆ. ಪ್ರೊ| ಸಿ.ಎನ್. ರಾಮಚಂದ್ರನ್ ನಸು ನಕ್ಕರು. ಸಾಂಸ್ಥಿಕ ಆಡಳಿತದ ಉನ್ನತ ಸೋಪಾನಗಳನ್ನೇರಿಸುವಲ್ಲಷ್ಟೇ ಒದಗುವ ಬಿರುದುಗಳಿಗಿಂತ ಅಂತಃಸ್ಥವನ್ನು ಪ್ರತಿನಿಧಿಸುವ ಪ್ರೊಫೆಸರ್‌ಗಿರಿಯನ್ನೇ ಇಷ್ಟಪಟ್ಟದ್ದನ್ನು ಹೇಳಿಕೊಂಡಿದ್ದರು. ಇವರು ವೃತ್ತಿಯಲ್ಲಿ ಇಂಗ್ಲಿಷ್‌ಗೆ (ಅಂದು ಮಂವಿವಿನಿಲಯದ ಇಂಗ್ಲಿಷ್ ವಿಭಾಗ ಮುಖ್ಯಸ್ಥ. ಇಂದು ವೃತ್ತಿಪರ ಅಧ್ಯಾಪನದಿಂದ ನಿವೃತ್ತರಾಗಿ ಬೆಂಗಳೂರಿನಲ್ಲಿ ನೆಲೆಸಿದ್ದರೂ ಯಾವುದೇ ಸಾಹಿತ್ಯಿಕ ಕಾರ್ಯಕ್ರಮಕ್ಕೆ ಘನತೆ ಬರುವುದಿದ್ದರೆ ಸೀಎನ್ನಾರ್ ಇರಲೇಬೇಕು ಎನ್ನುವಷ್ಟು ಕ್ರಿಯಾಶೀಲರಾಗಿಯೇ ಮುಂದುವರಿದಿದ್ದಾರೆ.) ತೆತ್ತುಕೊಂಡರೂ ‘ಕನ್ನಡ ಭವನ’ದ ಬಲು ದೊಡ್ಡ ನಿರ್ವಾಹಕ. ಹುಟ್ಟಿನ ಆಕಸ್ಮಿಕದಲ್ಲಿ ಇವರು ಕನ್ನಡಿಗರಾದರೂ (ಮೈಸೂರು ಸಮೀಪದ ಚಿಲ್ಕುಂದದವರು. ಮನೆಮಾತು ಅ-ಕನ್ನಡ; ಸಂಕೇತಿ) ವೃತ್ತಿ ಜೀವನದ ಆರಂಭದ ದಿನಗಳನ್ನು ಮರಾಠೀ ವಲಯದಲ್ಲಿ ಕಳೆದರು. ಆದರೆ ಅಂತರಂಗದ ಒಲವು ಇವರನ್ನು ಎಳೆದಿತ್ತು ಕನ್ನಡ ಕೈಂಕರ್ಯಕ್ಕೆ. ಕತೆ, ಕಾದಂಬರಿ ಬರೆದವರೇ ಆದರೂ ಗಟ್ಟಿಯಾಗಿ ನೆಲೆಸಿದ್ದು ವಿಮರ್ಶೆ, ವೈಚಾರಿಕತೆಗಳ ಆವರಣದೊಳಗೆ. ಸಿಎನ್ನಾರ್ ನಿವೃತ್ತಿಪೂರ್ವ ಸೇವಾ ಅವಧಿ ಮಂಗಳೂರು ವಿವಿನಿಲಯದಲ್ಲೇ ನಡೆದದ್ದು ಕನ್ನಡಕ್ಕೂ ಈ ವಲಯದ ಸಾಹಿತ್ಯಿಕ ಚಟುವಟಿಕೆಗಳಿಗೂ ಬಲು ದೊಡ್ಡ ಲಾಭ. ಅದಕ್ಕೊಂದು ನಿದರ್ಶನವೆಂಬಂತೆ ಗೆಳೆಯ ವಿವೇಕ ರೈ ಅವರೊಡನೆ ಬಂದು, ಮುಂದುವರಿದ ಅವಧಿಯಲ್ಲಿ ರೈ ಅವರು ನಿಲ್ಲಿಸಿದಲ್ಲಿಂದ, ಸಾಹಿತ್ಯ ಎಂದರೇನು ಎಂಬ ವಿಷಯದ ಚುಂಗು ಹಿಡಿಸಿ ಶಿಬಿರಾರ್ಥಿಗಳನ್ನು ಚಂದಕ್ಕೆ ನಡೆಸಿದರು ಸೀಎನ್ನಾರ್.

ಸಾಹಿತ್ಯದ ರಾಗಾಭಿವ್ಯಕ್ತಿ – ಸಂಗೀತವನ್ನು ಪರಿಚಯಿಸಿ ಕೊಟ್ಟವರು ನಿತ್ಯಾನಂದರಾವ್. ವೃತ್ತಿ ಜೀವನ ನಿರ್ವಹಣೆಗೆ, ಪ್ರವೃತ್ತಿ ವ್ಯಕ್ತಿತ್ವ ನಿರ್ಮಾಣಕ್ಕೆ ಎನ್ನುವ ಮಾತಿಗೆ ಈ ತೂತು ಬಾವಿ ಅರ್ಥಾತ್ ಬೋರ್‌ವೆಲ್ ಕಂತ್ರಾಟುದಾರ ನಿತ್ಯಾನಂದ ರಾವ್ ತುಂಬಾ ಒಳ್ಳೆಯ ಉದಾಹರಣೆ. ಮಂಗಳೂರಿನಲ್ಲಿ ಕರ್ಣಾಟಕ ಸಂಗೀತಕ್ಕಾಗಿಯೇ ಇವರು ಕಟ್ಟಿ ಬೆಳೆಸಿದ ಸಂಗೀತ ಪರಿಷತ್ (ಮುಂದುವರಿದ ದಿನಗಳಲ್ಲಿ ‘ಮಣಿಕೃಷ್ಣ ಅಕಾಡೆಮಿ’) ಮತ್ತದರ ಕಾರ್ಯಕ್ರಮ ವೈವಿಧ್ಯದ ರುಚಿ ಮತ್ತು ಶುಚಿ ನಾನಿವರನ್ನು ಶಿಬಿರಕ್ಕೂ ಬಯಸುವಂತೆ ಮಾಡಿತ್ತು (ಸ್ವತಃ ಇವರು ಸಂಗೀತಗಾರರಲ್ಲ). ಆಗಿನ್ನೂ ಸಂಗೀತ ಕಲಿಕೆಯ ಮೊದಲ ಹಂತಗಳಲ್ಲಷ್ಟೇ ಇದ್ದ ಅವರ ಮಗಳಂದಿರಿಬ್ಬರ (ದೊಡ್ಡವಳು – ಪ್ರಾರ್ಥನ, ಇಂದು ದೊಡ್ಡ ಕಲಾವಿದೆ, ವಿದ್ವಾಂಸೆ. ಮತ್ತಿನವಳು ಕೀರ್ತನ ಪ್ರಾಯದಲ್ಲಷ್ಟೇ ಕಿರಿಯಳು, ಹಾಡಿಕೆಯಲ್ಲಲ್ಲ) ಹಾಡಿಕೆಯ ಪ್ರಾತ್ಯಕ್ಷಿಕೆಯ ಬಲದಲ್ಲಿ ಕರ್ನಾಟಕ ಸಂಗೀತ ಪರಿಚಯದ ಒಂದು ಅವಧಿಯನ್ನು ರಸಮಯಗೊಳಿಸಿದರು.

ಮಳೆ ಪೂರ್ತಿ ಬಿಟ್ಟಿತ್ತು. ಇಳೆಯ ಸಂಭ್ರಮದಲ್ಲಿ ಪಾಲ್ಗೊಳ್ಳುವಂತೆ ಎಲ್ಲರನ್ನು ಮತ್ತೆ ಹೊರಾಂಗಣಕ್ಕೆ ಇಳಿಸಿದವರು ಪಾಣಾಜೆಯ ಪಂಡಿತ ವೆಂಕಟ್ರಾಮ್ ದೈತೋಟ. ಶೈಕ್ಷಣಿಕ ಅಧ್ಯಯನ ನೋಡಿದರೆ ಇಂಜಿನಿಯರ್, ವೃತ್ತಿ ನೋಡಿದರೆ ಕೃಷಿಕ, ಪ್ರವೃತ್ತಿಯಲ್ಲಿ ವಂಶಪಾರಂಪರ್ಯದಲ್ಲಿ ಸ್ವಲ್ಪ ಬಂದ ಆಯುರ್ವೇದವನ್ನು ಬಗಲಲ್ಲಿಟ್ಟುಕೊಂಡು ಸ್ವಂತ ಆಸಕ್ತಿ, ಅಧ್ಯಯನ ಮತ್ತು ಅಸಾಧಾರಣ ಕ್ಷೇತ್ರಪರ್ಯಟ ಮುಪ್ಪುರಿಗೊಳಿಸುತ್ತ ಸಸ್ಯ ಜಗತ್ತಿನ ಆದ್ಯಂತ ಅಳೆಯುವ ಸಾಹಸಿ. ಇವರ ಕೃಷಿ, ಬರವಣಿಗೆಗಳ ಬಿಡುವನ್ನು ಪೂರ್ಣ ಆಪೋಷನ ತೆಗೆಯುವ ಇವರ ಬಲು ಜನಪ್ರಿಯ ಮತ್ತು ಪರಿಣಾಮಕಾರೀ ಆಯುರ್ವೇದೀಯ ಚಿಕಿತ್ಸಾ ಸೇವೆ ಇಂದಿಗೂ ಪೂರ್ಣ ಉಚಿತ! ವೆಂಕಟ್ರಾಮರ ಪ್ರಾತ್ಯಕ್ಷಿಕೆಗೆ ಪೂರ್ಣ ಎಡೆಂಬಳೆಯ ಗುಡ್ಡೆ ತೋಟಗಳ ವ್ಯಾಪ್ತಿ ತೆರೆದಿತ್ತು. ಮತ್ತಾ ಕಲಾಪಕ್ಕೆ ನಿಗದಿತ ಅವಧಿಯ ಮೇಲೆ ಮತ್ತಷ್ಟೇ ಸಮಯ ವಿಸ್ತರಿದ್ದೂ ಆಯ್ತು. ಆದರೇನು ಮಾಡೋಣ – ವೆಂಕಟ್ರಾಮರು ಮುಟ್ಟಿದ್ದೆಲ್ಲಾ ಮೂಲಿಕೆಗಳೇ! ನಮ್ಮ ಓಡಾಟ ನೂರಿನ್ನೂರು ಅಡಿ ಮೀರಲಾಗದಷ್ಟು ಸಸ್ಯ ವೈವಿಧ್ಯ ಅದನ್ನೂ ಮೀರಿದ ವಿಷಯ ಸಮೃದ್ಧಿ ವೆಂಕಟ್ರಾಮರಲ್ಲಿತ್ತು. ಶಿಬಿರಾರ್ಥಿಗಳ ಉತ್ಸಾಹಕ್ಕೆ ಕಟ್ಟೆ ಕಟ್ಟಲು ಊಟದ ನೆಪ ಒಡ್ಡಬೇಕಾಯ್ತು.

ಕಣ್ಣಿನ ಮಿಟುಕಿನಲ್ಲೇ ಹೃದಯಗೆಲ್ಲುವ, ಎಂದೂ ವಿಸ್ತರಿಸದ ಆದರೆ ಮಾಸದ ಮುಗುಳು ನಗೆಯ, ಸೌಮ್ಯ ವ್ಯಕ್ತಿ ಪ್ರೊ| ಪಿ.ಎಸ್. ರೈ. ಕೃಷಿ ವಿವಿನಿಲಯದ ಕೀಟ ಶಾಸ್ತ್ರಜ್ಞನಾಗಿ ನಿವೃತ್ತರಾದರೂ ಉದ್ದಕ್ಕೂ ಇವರ ಬರವಣಿಗೆ, ಮಾತುಗಳಲ್ಲಿ ಮುಖ್ಯವಾಗಿ ವಿಜ್ಞಾನವನ್ನು ಕನ್ನಡಿಗರಿಗೆ ಕೊಡಬೇಕು ಎನ್ನುವ ಪ್ರೀತಿ ಮತ್ತೆ (ಕಥೆಗಳು, ವ್ಯಕ್ತಿ ಚಿತ್ರಗಳು) ತನ್ನನುಭವ ಇತರರಿಗೆ ಪ್ರೇರಕವಾಗುವುದಿದ್ದರೆ ಯಾಕೆ ಬೇಡವೆನ್ನುವ ಕಾಳಜಿ ಮೂಲವಾಗಿಯೇ ಒಸರುತ್ತಿತ್ತು. ಅದರ ವಿಸ್ತರಣೆಯಾಗಿಯೇ ಆ ಮಳೆಯ ದಿನದಲ್ಲೂ ಆ ಹಿರಿಯ ಜೀವ ಯಾವುದೋ ಬಸ್ಸು ಹಿಡಿದು ನಮ್ಮ ಶಿಬಿರಕ್ಕೆ ಬಂದಿದ್ದರು. ಅವರು ಕೊಟ್ಟ ಅಸಂಖ್ಯ ಕೀಟ ಪರಿಚಯ ಇನ್ನೂ ನಾವು ಪೂರ್ಣ ತಿಳಿಯದೇ (ಕೀಟಗಳು ಕಳೆದೊಗೆಯಬೇಕಾದ ಉಪದ್ರಗಳು ಎಂಬ ಕಲ್ಪನೆಯೇ ತಪ್ಪು) ಹಾಗಾಗಿ ಗೌರವಿಸದೇ ಮಾಡುತ್ತಿದ್ದ ಪರಿಸರ ಅವಹೇಳನ. ಜೀವವೈವಿಧ್ಯದ ಎತ್ತರದ ಸ್ತರಗಳಲ್ಲಿ ಎದ್ದು ಕಾಣುವ ಕೆಲವೇ ಹುಲಿ, ಆನೆ, ಚಿರತೆ, ಕಾಟಿ, ಕಡವೆಗಳಿಗಿಂತ ಸಾವಿರಾರು ಪಾಲು ವೈವಿಧ್ಯದಲ್ಲೂ ಸಂಕೀರ್ಣತೆಯಲ್ಲೂ ವಿಪುಲವಾಗಿರುವ ಕೀಟಪ್ರಪಂಚವನ್ನು ತಿಳಿದು ನಡೆಯುವುದು ನಿಜ ಪರಿಸರ ಪ್ರೀತಿ ಎನ್ನುವ ಅರಿವನ್ನು ರೈಗಳು ಉಂಟು ಮಾಡಿದರು. ಇಂದು ನಮ್ಮದಲ್ಲದ ಗೇರುಬೀಜಕ್ಕಾಗಿ (ಅದಕ್ಕೂ ಮೀರಿದ ಅಜ್ಞಾನದಲ್ಲಿ ಅಸಂಖ್ಯ ತರಕಾರಿಗಳಿಗೂ) ನಾವು ಸುರಿದ ಎಂಡೋಸಲ್ಫಾನ್ ಮುಂತಾದ ವಿಷರಸಾಯನಗಳ ಪರಿಣಾಮದಲ್ಲಿ ನೇರ ಮನುಷ್ಯ ದುರಂತಗಳು ಬಿಡಿ, ಬಹುತೇಕ ಅಳಿಸಿಯೇ ಹೋದ ಜೇನು ನೊಣವೂ ಸೇರಿದಂತೆ ನೂರೆಂಟು ಮಿತ್ರ ಕೀಟಗಳ ಲೆಕ್ಕ ಹಿಡಿದವರೇ ಇಲ್ಲ. ಹಿಡಿಯಬಹುದಾಗಿದ್ದ ಪಿಎಸ್ ರೈಗಳೂ ಇಂದು ನಮ್ಮೊಡನಿಲ್ಲ.

ಸಾಮಾನ್ಯರಲ್ಲಿ ಕೆಲವೊಮ್ಮೆ ಕಮ್ಮಿನಿಷ್ಠ (ಕಮ್ಯುನಿಸ್ಟ್), ದೈವದ್ರೋಹಿ, ಜಗಳಗಂಟ ಇತ್ಯಾದಿ ಬಿರುದಾಂಕಿತರಾಗುವ ಪ್ರೊ| ನರೇಂದ್ರನಾಯಕ್ ನಿಜದಲ್ಲಿ ಮಾಡಿದ, ಮಾಡುತ್ತಿರುವ ಜನಜಾಗೃತಿ ಅಸಾಮಾನ್ಯ. ಶೈಕ್ಷಣಿಕ ಯೋಗ್ಯತೆಯಲ್ಲಿ ಸಿಕ್ಕ ಜೀವರಸಾಯನ ಶಾಸ್ತ್ರದ ಪ್ರೊಫೆಸರ‍್ಗಿರಿ ಮತ್ತು ಸ್ವಂತದ ಲ್ಯಾಬೊರೇಟರಿ ಸಮರ್ಥವಾಗಿ ಸುಧಾರಿಸಿಕೊಳ್ಳುವುದರೊಡನೆ ಬಳಕೆದಾರರ ಜಾಗೃತಿಯನ್ನು ಮಂಗಳೂರಿನಲ್ಲಿ ಬಹುಶಕ್ತವಾಗಿ ಕಟ್ಟಿ ನಡೆಸಿದ ಮುಂದಾಳು ಇವರು. ಅಲ್ಲಿ ಎದುರಾಗುವ ಜನರ ಮಾನಸಿಕ ತಡೆಗಳಿಂದ ಪ್ರೇರಿತರಾಗಿಯೋ ಏನೋ ವೈಜ್ಞಾನಿಕ ಮನೋಧರ್ಮದ ಪ್ರಚಾರವನ್ನಿವರು ಜನರ ನಡುವೆ ಚಳವಳಿಯ ಮಟ್ಟದಲ್ಲಿ ಬೆಳೆಸಿದರು. ಸಾರ್ವಜನಿಕ ಪ್ರದರ್ಶನ ಚಟಗಳಾಗಿಯೂ (ಮುಗ್ಧರೂ ಇದ್ದಾರೆ) ಬೆಳೆದ ಭಕ್ತಿ, ಭಾವುಕತೆಗಳ ಅಮಲಿನಲ್ಲಿ ಕಳೆದುಹೋದವರನ್ನು ಸೌಮ್ಯ ಹಾಗಾಗಿ ಉದ್ದದ ದಾರಿಗಳಲ್ಲಿ ವಾಸ್ತವಕ್ಕೆ ತರುವುದು ನರೇಂದ್ರ ನಾಯಕರಿಗೆ ಹಿಡಿಸುವುದಿಲ್ಲ. ಇವರ ಪ್ರದರ್ಶನ-ಪ್ರವಚನಗಳಲ್ಲಿ ಅಂಥ ನಂಬಿಕೆಗಳ ಟೊಳ್ಳನ್ನು ಆಘಾತಕರವಾಗಿ ಬಯಲಿಗೆಳೆಯುತ್ತಾರೆ. ಪವಾಡಗಳ ಖಂಡನೆ, ದೇವ ಮತ್ತು ದೇವಮಾನವರ ವಿರುದ್ಧ ನಾಯಕರ ಪ್ರಚಾರ ಗಟ್ಟಿಧ್ವನಿಯಲ್ಲಿರುತ್ತದೆ. ಅದಕ್ಕೂ ಮಿಗಿಲಾಗಿ ಅವರ ಪ್ರಾತ್ಯಕ್ಷಿಕೆಗಳು ಎಷ್ಟೂ ಅಲೌಕಿಕ ಸಂಗತಿಗಳನ್ನು ಸಂಶ್ಲೇಷಿಸಿ, ಪಕ್ಕಾ ಲೌಕಿಕ ಕಾರ್ಯಕಾರಣವನ್ನು ತೆರೆದಿಟ್ಟು ಮುಕ್ತ ಮನಸ್ಸಿನ ಯಾರೂ “ಪವಾಡ ಸುಳ್ಳು, ಇರುವುದೆಲ್ಲ ಕಣ್ಕಟ್ಟು” ಎಂದು ಘೋಷಿಸುವಂತೆ ಪ್ರಭಾವಿಸುತ್ತದೆ. ನಮ್ಮ ಶಿಬಿರದಲ್ಲೂ ನರೇಂದ್ರ ನಾಯಕ್ ಕೊಟ್ಟ ಪ್ರದರ್ಶನ, ಮಾತು ತೀವ್ರ ಸಂಚಲನವನ್ನೇ ಉಂಟು ಮಾಡಿತು. ಮುಪ್ಪಟ್ಟು ಶ್ರೀ ರವಿಶಂಕರರ ವಿಶ್ವಾಸಾರ್ಹತೆ ಬಗ್ಗೆ ಮುಗ್ಧಭಕ್ತೆಯೊಬ್ಬಳು ಪ್ರಶ್ನೆ ಹಾಕಿದ್ದು ತೀರಾ ಅನಿರೀಕ್ಷಿತವಿತ್ತು. ನಾಯಕರು ಕ್ಷಣಾರ್ಧವೂ ತಡವರಿಸದೆ “he is a big HOAX” ಎಂದಾಗ ಆಕೆ ಕಣ್ಣೀರ ಧಾರೆಯನ್ನೇ ಹರಿಸಿಬಿಟ್ಟಳು. (ಆಕೆಯನ್ನು ಸಮಾಧಾನಿಸುವವರು ಬೇರೇ ಇದ್ದರು ಬಿಡಿ.) ಆದರೆ ಅದರ ಕುರಿತೇ ಇತರರು ಬೆಳೆಸಿದ ಚರ್ಚೆಯಲ್ಲಿ ಅನೇಕ ಹುಸಿ ಮೌಲ್ಯಗಳು ಪುನರ್ಮನನಗೊಂಡದ್ದು ನಿಜ, ವೈಜ್ಞಾನಿಕ ಮನೋಧರ್ಮಕ್ಕೆ ಬಲ ಬಂದದ್ದು ನಿಜ.

(ಮುಂದುವರಿಯಲಿದೆ)

[ಅಧಿಕಾರದ ಗದ್ದುಗೆಗಾಗಿ ಜನರನ್ನು ಒಲಿಸಿಕೊಳ್ಳುವ ಏಕ ಉದ್ದೇಶದಿಂದ ಇನ್ನಿಲ್ಲದ ಕೆಲಸ, ವೆಚ್ಚ (ಮತ್ತು ವಂಚನೆಯನ್ನೂ) ಮಾಡಿ ಬರುವವರು, ಅನಂತರದ ದಿನಗಳಲ್ಲಿ ಪೂರ್ಣ ನಿಷ್ಠೆಯನ್ನು ಅಕಾರಣವಾದ ದೇವ, ದೇವಮಾನವರತ್ತ ತೋರುವುದು, ಕ್ರಿಯೆಗಳಲ್ಲಿ ಎಲ್ಲಾ ಸಾಮಾಜಿಕ ಮೌಲ್ಯ ಮತ್ತು ಜವಾಬ್ದಾರಿಗಳನ್ನು ಸ್ವಾರ್ಥಕ್ಕೇ ದುಡಿಸಿಕೊಳ್ಳುವುದು ಕಾಣುತ್ತಿದ್ದೇವೆ. ನಮ್ಮ ಶಿಬಿರದ ಕಲಾಪಗಳು ಇಂಥವಕ್ಕೇನಾದರೂ ಸಣ್ಣ ನಿರೋಧಶಕ್ತಿಯನ್ನು, ಹೋರಾಟದ ಛಲವನ್ನು ಯುವ ಮನಸ್ಸುಗಳಿಗೆ ಕೊಟ್ಟಿರಬಹುದೇ? ನಿಮ್ಮ ಸಂದೇಹ ಅಥವಾ ಸಮಾಧಾನದ ನಿರೀಕ್ಷೆಯಲ್ಲಿ ವಾರ ಕಳೆದು ಮುಂದಿನ ಕಂತಿನ ಕಥನಕ್ಕೆ ಬಲಗೊಳ್ಳುತ್ತೇನೆ]